Category: ಲೇಖನಗಳು

  • ಇರಾನ್‌ನೊಂದಿಗೆ
ಸೆಣಸಲು 
ಶಕ್ತವಾಗಿದೆಯೇ
ಇಸ್ರೇಲ್?

    ಇರಾನ್‌ನೊಂದಿಗೆ ಸೆಣಸಲು ಶಕ್ತವಾಗಿದೆಯೇ ಇಸ್ರೇಲ್?

    ಇತ್ತೀಚೆಗೆ ಇರಾನಿನ ಸೇನಾ ಅಣ್ವಸ್ತ ಕೇಂದ್ರಗಳ ಮೇಲೆ ಇರಾನಿನ ನಾಯಕರನ್ನು ಗುರಿಯಾಗಿರಿಸಿ ಬಾಂಬ್ ದಾಳಿ ಮಾಡಿತು. ಈ ದಾಳಿಗೆ ಇರಾನಿನ ಸೇನಾ ಕಮಾಂಡರ್ ಹುಸೇನ್ ಸಲಾಮೀ ಬಲಿಯಾದರು. ಈ ದಾಳಿಯಲ್ಲಿ ಇನ್ನೂರು ಯುದ್ದ ವಿಮಾನಗಳು ಭಾಗಿಯಾಗಿತ್ತು ಎಂದು ಇಸ್ರೇಲ್ ಸ್ವತಹ ಹೇಳಿಕೊಂಡಿತ್ತು. “ಓಪರೇಶನ್ ರೈಸಿಂಗ್ ಲಯನ್” ಎಂಬ ಹೆಸರಿನಲ್ಲಿ ಇರಾನಿ ನಾಯಕರನ್ನು ಗುರಿಯಾಗಿಸಿಯೇ ದಾಳಿ ಸಂಘಟಿಸಲಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪಶ್ಚಿಮೇಶಿಯಾದಲ್ಲಿ ಇಸ್ರೇಲಿನ ಸದ್ದಡಗಿಸುವ ಅಣ್ವಸ್ತç ಹೊಂದಿರುವ ರಾಷ್ಟç ಇರಾನ್ ಆಗಿದೆ. ಇರಾನ್ ವಿರುದ್ಧ ಅದು ಹಗೆ ಸಾಧಿಸುತ್ತಲೇ ಬಂದಿದೆ. ಇರಾಕ್ ಮತ್ತಿತರ ರಾಷ್ಟçಗಳ ಪ್ರವಾಸದಲ್ಲಿದ್ದ ಇರಾನಿನ ಪ್ರಮುಖ ನಾಯಕರನ್ನು ಕೂಡಾ ಅದು ಕೊಂದು ಹಾಕಿದೆ. ಯಾಕೆಂದರೆ ಇಸ್ರೇಲ್‌ಗೆ ಇರಾನ್ ಬೆದರಿಕೆಯಾಗಿ ಪರಿಣಮಿಸಿದೆ.

    ಆ ಕಾರಣಕ್ಕಾಗಿಯೇ ಇರಾನ್ ಮೇಲೆ ಅದು ದಾಳಿ ಮಾಡಿ ಕಾಲು ಕೆರೆದು ಜಗಳಕ್ಕಿಳಿದಿವೆ. ಇರಾನ್‌ನ ಪ್ರತಿ ದಾಳಿ ಇಸ್ರೇಲಿನ ಮೇಲೆ ಪ್ರತ್ಯಾಘಾತ ಬೀರಿದೆ. ಈಗಾಗಲೇ ಇಸ್ರೇಲಿನ ನಾಶಕ್ಕೆ ಅದು ಪಣ ತೊಟ್ಟಂತೆ ಕಂಡುಬರುತ್ತಿದೆ. ಇಸ್ರೇಲಿನ ನಾಶದ ವರೆಗೆ ಸುಮ್ಮನಿರುವುದಿಲ್ಲ ಎಂದು ಇರಾನ್ ಹೇಳಿಕೊಂಡಿದೆ. ಯುದ್ಧದಾಹಿ ಇಸ್ರೇಲಿನ ಕಿಡಿಗೇಡಿತನದಿಂದ ವಿಶ್ವದಲ್ಲಿ ಅಶಾಂತಿ ನೆಲೆಸುವ ಸ್ಥಿತಿ ಸನ್ನಾಹವಾಗಿದೆ. ತೈಲಬೆಲೆಗಳು ಅನಿಯಂತ್ರಿತವಾಗಿ ಗಗನಕ್ಕೇರುವ ಸೂಚನೆಗಳು ಗೋಚರವಾಗುತ್ತಿದೆ. ಒಟ್ಟಿನಲ್ಲಿ ವಿಶ್ವದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಲಿದೆ. ಜನಸಾಮಾನ್ಯರ ಬದುಕಿನ ಮೇಲೆ ಇದರ ದುಷ್ಪರಿಣಾಮ ಬೀರಲಿದೆ. ಇಸ್ರೇಲಿನ ಕಿಡಿಗೇಡಿತನದ ಬಗ್ಗೆ ಮೌನವಾಗಿ ಮತ್ತು ಬಹಿರಂಗವಾಗಿ ಸಹಮತ ವ್ಯಕ್ತಪಡಿಸುವವರು ಚಿಂತಿಸಬೇಕಾಗಿದೆ.

    ಇಷ್ಟಕ್ಕೂ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ವಾಯು ದಾಳಿಗೂ ನಮಗೂ ಯಾವುದೇ ಸಂಬAಧವಿಲ್ಲವೆAದು ಅಮೇರಿಕ ಹೇಳಿಕೊಂಡಿದೆ. ಆ ಹೆಸರಲ್ಲಿ ನಮ್ಮ ನೆಲೆಗಳ ಮೇಲೆ ಏನಾದರೂ ದಾಳಿಯಾದರೆ ನಾವು ಸುಮ್ಮನೆ ಕೂರಲಾರೆವು ಎಂದು ಅಮೇರಿಕಾ ಹೇಳಿಕೊಂಡಿದೆ. ಆದರೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ನಮಗೆ ಸಂಬAಧವಿಲ್ಲ ಎಂದು ಅಮೇರಿಕಾ ಹೇಳಿದ್ದನ್ನು ನಂಬುವAತಿಲ್ಲ. ಇಲ್ಲವೆಂದಾರೆ ಇರಾನ್ ಮೇಲಿನ ಇಸ್ರೇಲಿನ ಸೇನಾ ದಾಳಿಯನ್ನು ಅಮೇರಿಕಾ ಖಂಡಿಸದಿರುವುದೇಕೆ? ಯಾಕೆಂದರೆ ಅಮೇರಿಕ ಮತ್ತು ಇಸ್ರೇಲಿನ ನಡುವಿನ ಈ ವರೆಗಿನ ಮೈತ್ರಿಯ ಸಂಬAಧವೇ ಅದಕ್ಕೆ ಪುಷ್ಟಿ ನೀಡುತ್ತವೆ. ಇಸ್ರೇಲ್ ಈಗ ಅಮೇರಿಕಾದ ಪ್ರಭಾವದ ಮೇಲೆಯೇ ಕಿಡಿಗೇಡಿತನ ಮಾಡುತ್ತಿವೆ. ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅಮೇರಿಕಾ ಮತ್ತು ಬ್ರಿಟನ್ ಫ್ರಾನ್ಸ್ ದೇಶಗಳನ್ನು ಯುದ್ದ ರಂಗಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆ ಮೂಲಕ ಟ್ರಂಪ್ ಹತ್ಯೆಗೆ ಇರಾನ್ ಶ್ರಮಿಸುತ್ತಿದೆ ಎಂಬ ದಾಳವನ್ನು ಎಸೆದಿದ್ದಾರೆ. ನಿಜಕ್ಕೂ ಇಸ್ರೇಲ್ ಜಗತ್ತಿಗೆ ಮಾರಕವಾಗುತ್ತಿದೆ. ಜಗತ್ತಿನ ಸ್ವಾಸ್ಥö್ಯವನ್ನು ಕೆಡಿಸುತ್ತಿದೆ. ತಮ್ಮ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಫೆಲೆಸ್ತೀನಿಯರ ಮಾರಣ ಹೋಮ ನಡೆಸುತ್ತಿದೆ. ಮಹಿಳೆಯರು ಮಕ್ಕಳು ಸೇರಿ ಗಾಝಾದಲ್ಲಿ 54000 ಮಂದಿಯನ್ನು ಹತ್ಯೆಗೈದಿದ್ದಾರೆ. ಅಧಿಕೃತ ವರದಿಯನುಸಾರ 1,23,977 ಮಂದಿ ಗಾಯಾಳುಗಳಾಗಿದ್ದಾರೆ. ಗಾಝಾದ ಕೃಷಿ ಭೂಮಿಯಲ್ಲಿ ಶೇಕಡಾ 5ರಷ್ಟು ಮಾತ್ರ ಕೃಷಿ ನಡೆಸಲು ಯೋಗ್ಯವಾಗಿದೆ. ಶೇಕಡಾ 77.8 ರಷ್ಟು ಕೃಷಿ ಭೂಮಿನ್ನು ಸಂಪೂರ್ಣ ನಾಶಪಡಿಸಲಾಗಿದೆ. ಸಂತ್ರಸ್ತರಿಗೆ ಗಾಯಾಳುಗಳಿಗೆ ವಿಶ್ವಸಂಸ್ಥೆಯ ನಿಯಂತ್ರಣದಲ್ಲಿ ಔಷಧ, ಆಹಾರ ತಲುಪಿಸುವುದನ್ನು ತಡೆಯಿತು. ಮಕ್ಕಳು ಮರಿಗಳೆನ್ನದೆ, ವೃದ್ದರು ಮಹಿಳೆಯರು ಔಷಧವಿಲ್ಲದೆ, ಹೊಟ್ಟೆಗೆ ಅನ್ನ ಆಹಾರವಿಲ್ಲದೆ ಪ್ರಾಣ ಕಳಕೊಳ್ಳುವ ಸ್ಥಿತಿಯನ್ನು ಈ ಇಸ್ರೇಲ್ ಮಾಡಿದೆ. ಹೀಗೆ ಗಾಝಾದ ನೆಲದಲ್ಲಿ ಮಾರಣ ಹೋಮ ನಡೆಸಿ ನರಕ ಸದೃಶಗೊಳಿಸಿದ ಇಸ್ರೇಲ್ ಯಾವ ರೀತಿಯಲ್ಲಿಯೂ ಕ್ಷಮೆಗೆ ಅರ್ಹವಲ್ಲ. ಈ ಮಾರಣ ಹೋಮದ ಅಂತಿಮ ಹಂತಕ್ಕೆ ತಲುಪಿದಾಗ ಅಮೇರಿಕಾ ಬ್ರಿಟನ್ ಜರ್ಮನಿ, ಕೆನಡಾ ದೇಶಗಳು ಇಸ್ರೇಲ್ ಜೊತೆಗಿನ ಆರ್ಥಿಕ ವ್ಯವಹಾರಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿವೆ. ಫೆಲೆಸ್ತೀನ್ ಸದಸ್ಯತ್ವ ಹೊಂದಿರುವ ಅರಬ್ ಲೀಗ್, ಓಐಸಿ ಮುಂತಾದ ಒಕ್ಕೂಟದ ದೇಶಗಳು ಇಸ್ರೇಲ್ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಫೆಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸುವವರನ್ನು ಬೇಟೆಯಾಡುತ್ತಾ ಗಡಿಪಾರು ಮಾಡುವುದು ಜೈಲಿಗೆ ಹಾಕುವುದು ಇಂತಹಾ ಕೃತ್ಯದಲ್ಲಿ ಟ್ರಂಪ್ ನಿರತರಾಗಿದ್ದಾರೆ.

    ಈಗ ಇರಾನ್ ದೇಶವನ್ನು ಮೂಲಭೂತವಾದಿ ರಾಷ್ಟç ಎಂದು ಗೂಬೆ ಕೂರಿಸುವವರಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ಅಮೇರಿಕಾದಿಂದ ದಿಗ್ಬಂಧನ ಅನುಭವಿಸುತ್ತಿರುವ ಇರಾನಿನ ವಾಸ್ತವಿಕ ವಿಚಾರಗಳ ಕುರಿತು ಅರಿಯಬೇಕಾಗಿದೆ. ಇರಾನಿನಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿದೆ ಮತ್ತು ಅದು ಸಾರ್ವತ್ರಿಕವಾಗಿ ಉಚಿತವಾಗಿ ದೊರೆಯುತ್ತಿದೆ. ಮೆಡಿಕಲ್ ಕೇರ್ ಕೂಡಾ ಉಚಿತವಾಗಿದೆ. ಶೈಕ್ಷಣಿಕ ರಂಗಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ವೈಜ್ಞಾನಿಕ ರಂಗದಲ್ಲಿ ಶೇಕಡಾ 59 ರಷ್ಟು ಮಹಿಳೆಯರಿದ್ದಾರೆ. ಪಶ್ಚಿಮದ ದೇಶಗಳಲ್ಲಿಯೂ ಹೀಗಿಲ್ಲ. ಅಮೇರಿಕಾ ಕೂರಿಸಿದ ದೊರೆ ಶಾ ಅಲ್ಲಿ ಮಹಿಳೆಯರು ಅರೆನಗ್ನಾವಸ್ಥೆಯ ವಸ್ತç ತೊಟ್ಟಿರುವುದನ್ನು ಕಾಣಬಹುದು. 1976 ರಲ್ಲಿ ಇರಾನಿನಲ್ಲಿ ಶೇಕಡಾ 24 ರಷ್ಟು ಮಹಿಳೆಯರು ಮಾತ್ರ ಸುಶಿಕ್ಷಿತರಾಗಿದ್ದರು. ಈಗ ಅದು ಶೇಕಡಾ ನೂರಕ್ಕೆ ತಲುಪಿದೆ. ಆಗ ಉನ್ನತ ಶಿಕ್ಷಣವನ್ನು ಶೇಕಡಾ ಮೂರರಷ್ಟು ಮಂದಿ ಪಡೆಯುತ್ತಿದ್ದರೆ ಈಗ ಅದು ಶೇಕಡಾ 59 ಕ್ಕೆ ತಲುಪಿದೆ. ಯುನಿವರ್ಸಿಟಿಗಳಲ್ಲಿ 1979 ರಲ್ಲಿ ಶೇಕಡಾ 1.4 ರಷ್ಟಿದ್ದರೆ ಇರಾನಿನಲ್ಲಿ ಇಂದು ಅದು ಶೇಕಡಾ 24 ಕ್ಕೆ ತಲುಪಿದೆ. (ಅಮೇರಿಕಾಗಿಂತಲೂ ಹೆಚ್ಚು). ಇರಾನಿನಲ್ಲಿ ಇಸ್ಲಾಮೀ ಮೂಲಭೂತವಾದಿಗಳಿಂದ ಮಹಿಳೆಯರ ಸ್ವಾತಂತ್ರö್ಯ ಹರಣ ಎಂದು ಅಂದುಕೊAಡವರು ಈ ವಾಸ್ತವವನ್ನು ಅರಿಯಬೇಕಾಗಿದೆ. ಯಾಕೆಂದರೆ ನಮ್ಮಲ್ಲಿ ಇರಾನ್ ದೇಶವನ್ನು ಮೂಲಭೂತವಾದಿ ರಾಷ್ಟç ಎಂದು ಚಿಂತಿಸುವವರಿದ್ದಾರೆ. ಇಸ್ರೇಲಿನ ಕಿಡಿಗೇಡಿತನವನ್ನು ಕಂಡು ಸಂಭ್ರಮಿಸುವವರೂ ಇದ್ದಾರೆ. ಮಾನವೀಯತೆಯ ದೃಷ್ಟಿಯಿಂದ ನಾವು ಚಿಂತಿಸಬೇಕಾಗಿದೆ. ಯಾರಿಂದ ವಿಶ್ವದ ಶಾಂತಿ ಸುವ್ಯವವಸ್ಥೆಗೆ ಹಾನಿಯಾಗುತ್ತಿದೆ ಎಂಬುದನ್ನು ಚಿಂತಿಸಬೇಕು. ಈ ಯುದ್ದದಿಂದಾಗಿ ತೈಲ ಬೆಲೆಗಳು ವಿಪರೀತವಾಗಿ ಏರಿಕೆಯಾಗಿ ಎಲ್ಲ ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಲಿದೆ.

    ಸಲೀಮ್ ಬೋಳಂಗಡಿ

  • ‘ಬೂಕರ್ ಪ್ರಶಸ್ತಿ’ ಕನ್ನಡ ನಾಡಿಗೆ ತಂದ ಹೆಮ್ಮೆಯ ‘ಬಾನು ಮುಷ್ತಾಕ್’

    ‘ಬೂಕರ್ ಪ್ರಶಸ್ತಿ’ ಕನ್ನಡ ನಾಡಿಗೆ ತಂದ ಹೆಮ್ಮೆಯ ‘ಬಾನು ಮುಷ್ತಾಕ್’

    ಬಾನು ಮುಷ್ತಾಕ್‌ರ `ಹಾರ್ಟ್ಲ್ಯಾಂಪ್'(ಎದೆಯ ಹಣತೆ) ಬೂಕರ್ ಪ್ರಶಸ್ತಿಗೆ ಆಯ್ಕೆಯ ಪಟ್ಟಿಯಲ್ಲಿದೆ ಎಂಬ ಸುದ್ಧಿ ಬಂದಾಗಲೇ ಈ ಪ್ರಶಸ್ತಿ ಬಾನು ಅವರಿಗೇ ಸಿಗಲಿ ಎಂದು ಮನದಲ್ಲೇ ಪ್ರಾರ್ಥಿಸಿದ್ದೆ. ಅಂತಿಮವಾಗಿ ಬೂಕರ್’ ಬಾನು ಅವರಿಗೆ ಲಭಿಸಿದೆ ಎಂಬ ಸುದ್ಧಿ ಬಂದಾಗ ತುಂಬಾನೇ ಖುಶಿ ಆಯಿತು.

    ಲೇಖಕಿ ಬಾನು ಮುಷ್ತಾಕ್ ಮತ್ತು ಅನುಪಮದ ನಂಟು ಇಪ್ಪತ್ತು ವರ್ಷದ ಮೊದಲಿನದು. ಕನ್ನಡ ನಾಡಿನಲ್ಲಿ ಹೆಸರುವಾಸಿಯಾದ ಈ ಲೇಖಕಿಯನ್ನು ಭೇಟಿ ಮಾಡಲು ನಮ್ಮ ಬಳಗ ಹಾಸನ’ಕ್ಕೆ ಹೋದಾಗ ಅವರ ನೈಜ ವ್ಯಕ್ತಿತ್ವದ ಪರಿಚಯವಾಗಿತ್ತು. ಅವರು ನೀಡಿದ ಆತ್ಮೀಯವಾದ ಸ್ವಾಗತ, ಆತಿಥ್ಯ ಮರೆಯಲಾರದು. ಅವರ ಪತಿ ಮತ್ತು ಮಕ್ಕಳು ನಮ್ಮ ಒಟ್ಟಿಗೆ ಆತ್ಮೀಯವಾಗಿ ಕಾಲ ಕಳೆದರು. ಹಾಸನಕ್ಕೆ ಹೋಗುವ ಮೊದಲು ಈ ಲೇಖಕಿಯ ಬಗ್ಗೆ ಇದ್ದ ತಪ್ಪು ಭಾವನೆ ಎಲ್ಲವೂ ಅಳಿಸಿ ಹೋಗಿತ್ತು.

    `ಅನುಪಮ’ ಪತ್ರಿಕೆಯ ಬಳಗದ ಸಹೋದರಿಯರು ಹಿಜಾಬ್’ ಧರಿಸುವ ಸಂಪ್ರದಾಯವಾದಿಗಳಾಗಿದ್ದರಿAದ ಬಂಡಾಯ ಸಾಹಿತಿ ಎಂದು ಅಂದು ಕರೆಯಲ್ಪಡುತ್ತಿದ್ದ ಬಾನು ಅವರಿಗೆ ನಮ್ಮ ಭೇಟಿ ಹೆಚ್ಚು ಖುಶಿ ಕೊಡಲಿಕ್ಕೆ ಇಲ್ಲ ಎಂಬ ಭಾವನೆ ನನ್ನಲ್ಲಿ ಇತ್ತು. ಆದ್ರೆ… ಅವರ ಆತ್ಮೀಯತೆ, ಬಿಂಕ ಇಲ್ಲದ ಸರಳ ನಡವಳಿಕೆ, ವಿಶಾಲತೆಯು ನಮಗೆ ನಮ್ಮಲ್ಲಿದ್ದ ತಪ್ಪು ಭಾವನೆಯನ್ನು ತೊಳೆದು ಹಾಕಿತ್ತು. ಪತ್ರಿಕೆಗೆ ಅವರು ಕಥೆಯನ್ನೂ, ಲೇಖನಗಳನ್ನೂ ನೀಡುತ್ತಿದ್ದರು. ಮಂಗಳೂರಿಗೆ ಕುಟುಂಬ ಸಮೇತ ಬಂದು ನಮ್ಮ ಮನೆಯಲ್ಲಿ ಉಪಹಾರ ಸೇವಿಸಿ ಮಕ್ಕಳಿಂದ ಫೋಟೋ ತೆಗೆಸಿಕೊಂಡು ಹೋಗಿದ್ದರು. ಮೀನು ತಿನ್ನುವ ಆಶೆ ವ್ಯಕ್ತಪಡಿಸಿದಾಗ ಅವರನ್ನು ಓಶನ್ ಪರ್ಲ್ ಹೋಟೇಲಲ್ಲಿ (ಶಾಂತಿ ಪ್ರಕಾಶನ ಕಾರ್ಯಕ್ರಮಕ್ಕೆ ಬಂದಾಗ) ಅಂಜಲ್ ಫ್ರೈ ಮೀನನ್ನು ತಿನ್ನಿಸಿದ್ದೆವು. ಅಹಂಕಾರ ಇಲ್ಲದ ಅವರ ಆತ್ಮೀಯತೆಯು ನಮ್ಮನ್ನು ಸೆಳೆದಿತ್ತು.

    ಕತ್ತಿಗಿಂತಲೂ ಹರಿತವಾದದ್ದು ಲೇಖನಿ ಎಂಬುವುದು ಸತ್ಯನುಡಿ. ನಮ್ಮಲ್ಲಿ ಬಹಳಷ್ಟು ಬರಹಗಾರ್ತಿಯರಿದ್ದಾರೆ. ಕಥೆ, ಕಾದಂಬರಿಯಲ್ಲಿ ಸ್ತಿçÃಯರ ಎಲ್ಲಾ ತಲ್ಲಣಗಳನ್ನು ಸೊಗಸಾಗಿ ವಿವರಿಸುತ್ತಾರೆ. ಮಹಿಳೆಯ ಕಣ್ಣೀರಿನ ಬಗ್ಗೆ ಮರುಕ, ಅನುಕಂಪನೂ ಇರುತ್ತದೆ. ಅನ್ಯಾಯವನ್ನು ಎದುರಿಸುವ ಗಟ್ಟಿಗಿತ್ತಿ ನಾಯಕಿಯರ ಪಾತ್ರವನ್ನೂ ಬಹಳ ಸುಂದರವಾಗಿ ವರ್ಣಿಸುತ್ತಾರೆ. ಆದ್ರೆ… ವಾಸ್ತವದ ಬದುಕಿನಲ್ಲಿ ಈ ಬರಹದ ಒಂದಿಷ್ಟೂ ಧೈರ್ಯ, ಸಾಹಸ ಬರಹಗಾರ್ತಿಯರಲ್ಲಿ ಕಾಣಿಸದು. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಅನ್ಯಾಯ ನಡೆಯುವಾಗ ಇವರೆಲ್ಲಾ `ಮೂಕ’ರಾಗಿ ನಿಲ್ಲುತ್ತಾರೆ. ಕೊನೆ ಪಕ್ಷ ವಿರೋಧಿಸುವ ಒಂದು ವಾಕ್ಯದ ಬರಹವನ್ನೂ ಪತ್ರಿಕೆಗೆ ರವಾನಿಸುವುದಿಲ್ಲ. ಇಂತಹ ಲೇಖಕಿಯರ ಮಧ್ಯೆ ಬಾನು ಮುಷ್ತಾಕ್‌ರು ತುಸು ಭಿನ್ನವಾಗಿ ನಿಲ್ಲುತ್ತಾರೆ. ಬಹುಶಃ ಅವರ `ವಕೀಲ’ ವೃತ್ತಿ ಜೀವನದಲ್ಲಿ ಮಹಿಳೆಯರ ಶೋಷಣೆಯನ್ನು ಆಳವಾಗಿ ಹತ್ತಿರದಿಂದ ವೀಕ್ಷಿಸುವ ಅವಕಾಶ ಲೇಖಕಿಗೆ ಲಭಿಸಿದರಿಂದ ಬಾನು ತನ್ನ ಕತೆಯಲ್ಲಿ ಸ್ತಿçà ಸಂವೇದನೆಗೆ ಒತ್ತು ಕೊಡುತ್ತಾರೆ. ಅನ್ಯಾಯದ ವಿರುದ್ಧ ಲೇಖನಿ ಬಳಸುವುದರ ಒಟ್ಟಿಗೇ ಅವರು ಹೋರಾಟದ `ಧ್ವನಿ’ಯೂ ಆಗಿ ನಿಲ್ಲುತ್ತಾರೆ. ಮಹಿಳಾ ದೌರ್ಜನ್ಯದ ವಿರುದ್ಧದ ಹೋರಾಟಗಾರ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. `ಸತ್ಯ’ವನ್ನು ನೇರವಾಗಿ ಹೇಳಲು ಹಿಂಜರಿಯದ ಸ್ವಭಾವ ಅವರದು. ಅವರ ಕಥೆಯಲ್ಲೂ ಅದು ಕಾಣಿಸುತ್ತದೆ. ಧರ್ಮದೊಳಗೆ ಅಡಗಿರುವ ಅನಾಚಾರ, ಹಕ್ಕುಗಳ ದುರ್ಬಳಕೆ, ಪುರುಷ ಶೋಷಣೆಯ ವಿರುದ್ಧ ಅವರು ಧ್ವನಿ ಎತ್ತಿರುತ್ತಾರೆ. ಲೇಖಕಿಗಿಂತಲೂ ಅವರು ವಕೀಲೆಯಾಗಿ, ಹೋರಾಟಗಾರ್ತಿಯಾಗಿಯೇ ಹೆಚ್ಚು ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಜಾಬ್‌ನ ವಿಷಯದಲ್ಲಿ ಅವರ ದೃಷ್ಟಿಕೋನ ಬೇರೆಯೇ ಇದ್ದರೂ ಇಸ್ಲಾಮಿನ ಇತರ ಆರಾಧನಾ ಕರ್ಮಗಳ ಬಗ್ಗೆ ಅವರು ಅಪ್ಪಟ ಧರ್ಮ ಭಕ್ತೆಯಾಗಿದ್ದಾರೆ. ಬಾನು ಅವರು ಯಾವತ್ತೂ ಹಿಜಾಬ್ ಧಾರಿಗಳ ಬಗ್ಗೆ ಟೀಕಿಸಲಿಲ್ಲ. ವಸ್ತçಧಾರಣೆ ಅವರವರ ಇಷ್ಟ. ಅದು ಅವರ ವೈಯಕ್ತಿಕವಾದ ಸ್ವತಂತ್ರ ನಿಲುವು ಎನ್ನುವ ನೇರ ನುಡಿ ಅವರದು. ಇಸ್ಲಾಮ್ ಮಹಿಳೆಯರಿಗೆ ನೀಡಿದ ಅಧಿಕಾರ, ಹಕ್ಕು, ಸ್ವಾತಂತ್ರ್ಯದ ಬಗ್ಗೆ ಎಚ್ಚರಿಸುವ ಅವರು ಪುರುಷರು ಧರ್ಮ ನೀಡಿದ ಸೌಲಭ್ಯವನ್ನು ಕಸಿದು ಮಹಿಳೆಯರನ್ನು ಶೋಷಿಸುವ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸುತ್ತಾರೆ. ಸತ್ಯ ಎಂದಿಗೂ ಕಹಿ ತಾನೆ? ಮಹಿಳೆಯರು ಶಿಕ್ಷಣ ಪಡೆದಾಗ ಈ ಎಲ್ಲಾ ದಬ್ಬಾಳಿಕೆ ಕಡಿಮೆ ಆಗುತ್ತೆ ಎಂಬ ಉಪದೇಶ ಬಾನು ಅವರದು. ಆದ್ದರಿಂದಲೇ ಬರಹಗಾರ್ತಿ ಆಗಿ ಹೋರಾಟಗಾರ್ತಿಯಾಗಿ, ಪತ್ರಕರ್ತೆಯಾಗಿ ಕಥೆಯಲ್ಲಿ ತಾನು ಬರೆದಂತೇ ಸಮಾಜದಲ್ಲಿ ಗಟ್ಟಿ ಧ್ವನಿ ಎತ್ತುವ ಮೂಲಕ ಬಾನುರವರು ಗಮನ ಸೆಳೆಯುತ್ತಾರೆ.

    ಇಂದು ಬಾನು ಅವರಿಗೆ ವಿಶ್ವದ ಪ್ರತಿಷ್ಠಿತ `ಬೂಕರ್’ ಪ್ರಶಸ್ತಿ ಲಭಿಸಿದೆ. ಯಾವುದೇ ಗೌರವ, ಸ್ಥಾನಮಾನ, ಉಡುಗೊರೆ ದೇವನ `ಅನುಗ್ರಹ’ ಆಗಿರುತ್ತದೆ. ಅಹಂಕಾರ ಇಲ್ಲದ ಸರಳ ಸಜ್ಜನಿಕೆಯ ಈ ಲೇಖಕಿಗೆ ವಿಶ್ವದಲ್ಲೇ ಬೆಳಗುವ ಪ್ರಶಸ್ತಿಯೂ ಲಭಿಸಿದಾಗ ಅವರ ಮುಂದಿನ ಹೊಣೆಗಾರಿಕೆಯೂ ಅಧಿಕವಾಗುತ್ತದೆ. ಅವರ `ಹಸೀನಾ ಮತ್ತು ಇತರ ಕಥೆಗಳು’ ಕಥಾ ಸಂಕಲನ ಓದಿದವರಿಗೆ ಈ ಲೇಖಕಿಯ ಮಹಿಳಾ ಸಂವೇದನೆಯ ಆಳ ಅರ್ಥ ಆಗುತ್ತದೆ. 1990 ರಲ್ಲಿ `ಹೆಜ್ಜೆ ಮಾಡಿದ ಹಾದಿ’ 1999ರಲ್ಲಿ `ಬೆಂಕಿ ಮಳೆ’ 2004ರಲ್ಲಿ ಪ್ರಕಟವಾದ `ಎದೆಯ ಹಣತೆ’ (ಹಾರ್ಟ್ ಲ್ಯಾಂಪ್), 2007ರಲ್ಲಿ `ಸಫೀರಾ’ ಕಥಾ ಸಂಕಲನ, 2012ರಲ್ಲಿ `ಬಡವರ ಮಗಳು ಹೆಣ್ಣಲ್ಲ’, 2023ರಲ್ಲಿ ಪ್ರಕಟವಾದ `ಹೆಣ್ಣು ಹದ್ದಿನ ಸ್ವಯಂವರ’ ಮಹಿಳಾ ಬದುಕಿನ ವಿವಿಧ ತಲ್ಲಣಗಳ ಮುಖವಾಗಿ ಕಥೆಗಳು ರೂಪು ಪಡೆಯುತ್ತದೆ. ಬಾನು ಅವರ ಬರಹಗಳನ್ನು ಟೀಕಿಸುವ ವರ್ಗವೂ ಇದೆ. ಟೀಕೆಗಳನ್ನೂ ಆರೋಗ್ಯಕರವಾಗಿ ಸ್ವೀಕರಿಸಿದ ದಿಟ್ಟೆ ಅವರು.

    `ಬೂಕರ್ ಪ್ರಶಸ್ತಿ’ಯನ್ನು ಸಮಾನವಾಗಿ ಹಂಚಿಕೊAಡ ಇಬ್ಬರು ಸಹೋದರಿಯರು ಸಮಾಜಕ್ಕೆ ಸೌಹಾರ್ದತೆಯ ಜೋಡಿಯಾಗಿ ಮಿಂಚಿದ್ದಾರೆ. ಅಪ್ಪಟ ಭಾರತೀಯ ಸಂಸ್ಕೃತಿಯ ಸೀರೆಯಲ್ಲಿ ಈ ಪ್ರಶಸ್ತಿಯನ್ನು ಲಂಡನ್‌ನಲ್ಲಿ ಸ್ವೀಕರಿಸಿದ ಸೊಬಗು ಕಣ್ಣು ತುಂಬಿತು. ನಾನಂತೂ ಬಾನು ಅವರನ್ನು ಸಲ್ವಾರ್ ವಸ್ತçದಲ್ಲೇ ಹೆಚ್ಚು ನೋಡಿದ್ದು. ಪ್ರಶಸ್ತಿ ಪಡೆಯುವಾಗ ಭಾರತೀಯ ನಾರಿಯಂತೇ ಕಾಂಜೀವರA ಸೀರೆಯಲ್ಲಿ ಇಬ್ಬರನ್ನೂ ಕಂಡು ಖುಶಿ ಅನಿಸಿತು. `ಅನುಪಮ’ ಬಳಗದ ಓದುಗರ ಹಾಗೂ ಸಂಪಾದಕ ಬಳಗದಿಂದಲೂ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿಯವರಿಗೆ ಹಾರ್ಧಿಕ ಶುಭಾಶಯಗಳನ್ನು ಕೋರುತ್ತಾ `ಎದೆಯ ಹಣತೆ’ಯಾಗಿ ಮಹಿಳಾ ವರ್ಗದ ಧ್ವನಿಯಾಗಿ ತಮ್ಮ ಲೇಖನದಿಂದ, ಧ್ವನಿಯಿಂದ ಮುನ್ನಡೆ ಸಾಧಿಸುವಂತಾಗಲಿ. ಯಾವುದೇ `ಪ್ರಶಸ್ತಿ’ ಪುರಸ್ಕಾರಗಳು `ಸ್ವಂತ’ಕ್ಕಾಗಿ ಇರುವುದಕ್ಕಿಂತಲೂ ಸಮಾಜದ ಏಳಿಗೆಗಾಗಿ, ಒಳಿತಾಗಿ ಲಭಿಸುವಂತಹದಾಗಿರುತ್ತದೆ ಎಂಬ ನನ್ನ ಪತಿಯವರ ಒಂದು ಉಪದೇಶ ನಾನು ಸದಾ ಕೇಳಿದ್ದೆ. ಮಹಿಳೆಯರ ಬಗ್ಗೆ `ನ್ಯಾಯ’ ಇಡುವಂತಾಗಲಿ ಎಂಬ ಆಶಯ ನಮ್ಮದು.

    ಪ್ರಶಸ್ತಿ ಬಗ್ಗೆ ಮಾತುಗಳು

    ಬೂಕರ್ ಪ್ರಶಸ್ತಿ ಸ್ವೀಕಾರದ ವೇಳೆ ಬಾನು ಮುಷ್ತಾಕ್ ಹೇಳಿದ ಮಾತು “ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಒಬ್ಬ ವ್ಯಕ್ತಿಯಾಗಿ ಸ್ವೀಕರಿಸುತ್ತಿಲ್ಲ. ಬದಲಾಗಿ ಅನೇಕರೊಂದಿಗೆ ಸೇರಿ ಎತ್ತಿದ ಧ್ವನಿಯಾಗಿ ಸ್ವೀಕರಿಸುತ್ತಿದ್ದೇನೆ. ನಾನು ಸಂತೋಷವಾಗಿದ್ದೇನೆ. ನನಗಾಗಿ ಮತ್ತು ವೈವಿಧ್ಯತೆಯ ಹಾಗೂ ಒಳಗೊಳ್ಳುವಿಕೆಯಿಂದ ತುಂಬಿರುವ ಇಡೀ ಜಗತ್ತಿಗಾಗಿ…” ಅಂದರು. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೂಕರ್ ಪ್ರಶಸ್ತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ಸರಕಾರದ ವತಿಯಿಂದ ಅವರನ್ನೂ, ದೀಪಾ ಭಾಸ್ತಿಯವರನ್ನು ಅದ್ಧೂರಿಯಾಗಿ ಸನ್ಮಾನಿಸಿದ್ದು ಸ್ವಾಗತಾರ್ಹ. ಇದು ಕರ್ನಾಟಕಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯ. ಬಾನು ಮುಷ್ತಾಕ್ ಬಂಡಾಯ ಸಾಹಿತ್ಯ ಚಳವಳಿಯ ಮೂಲಕ ಬದ್ಧತೆಯಿಂದ ಬೆಳೆದು ಬಂದ ಲೇಖಕಿ ಎಂಬ ಹೆಮ್ಮೆ ನನಗೆ ಎಂದು. ಪ್ರೊ. ಬರಗೂರು ರಾಮಚಂದ್ರಪ್ಪ ನಾಡೋಜ ಹಿರಿಯ ಸಾಹಿತಿ ಹೇಳಿದರು. ಅರವಿಂದ ಅಡಿಗ ಬಳಿಕ ಕರ್ನಾಟಕದ ಎರಡನೇ ಸಾಹಿತಿಗೆ ಕನ್ನಡದ ಮೊತ್ತ ಮೊದಲ ಕೃತಿಗೆ ಈ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ಸಂದಿದೆ.

    ರಾಹುಲ್ ಗಾಂಧಿಯವರು ಈ ಬೂಕರ್ ಪ್ರಶಸ್ತಿಯು ಕನ್ನಡ ಸಾಹಿತ್ಯಕ್ಕೆ ಮತ್ತು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿ ಇಬ್ಬರು ಸಾಧಕಿಯರಾದ ಲೇಖಕಿಯರಿಗೆ ಅಭಿನಂದನೆ ಹೇಳಿದರು.

    ಕಥೆ ಬೂಕರ್ ಪ್ರಶಸ್ತಿ ಗೆದ್ದ ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಕಥೆಯಲ್ಲಿ ಏನಿದೆ? ಕಥೆಯ ಸಾರಾಂಶ ಇಲ್ಲಿದೆ.

    ಓರ್ವ ಹೆಣ್ಣು ಮಗಳಿಗೆ ತಾನು ಇನ್ನೂ ಓದಬೇಕು ಎಂಬ ಆಶೆ ಇರುತ್ತದೆ. ಮದುವೆಗೆ ಮೊದಲು ತನ್ನಾಸೆಯನ್ನು ಮನೆಯವರಿಗೆ ಹೇಳಿದರೂ ಪಾಲಕರು ಅವಳಿಗೆ ಮದುವೆಯ ಒತ್ತಡ ಹಾಕುತ್ತಾರೆ. ವಿವಾಹದ ನಂತರ ಅವಳಿಗೆ ಮೂರು ಮಕ್ಕಳಾಗುತ್ತದೆ. ತನ್ನ ಗಂಡ ಬೇರೊಂದು ಮಹಿಳೆಯ ಸಂಪರ್ಕದಲ್ಲಿರುವುದು ಕಥಾ ನಾಯಕಿಗೆ ದುಃಖ, ನೋವು ತರುತ್ತದೆ. ಸಹಿಸಲು ಆಗುವುದಿಲ್ಲ ಪತಿಯ ಪರಸ್ತಿçÃಯ ಸಂಬAಧ. ತನ್ನ ಮಕ್ಕಳನ್ನು ಕರೆದುಕೊಂಡು ತವರಿಗೆ ಮರಳುತ್ತಾಳೆ. ತವರಿನಲ್ಲೂ ಅವಳಿಗೆ ಸಾಂತ್ವನ ಹೇಳುವವರಿಲ್ಲ. ಸಮಸ್ಯೆಯನ್ನು ಪರಿಹರಿಸುವವರಿಲ್ಲ. ತನ್ನ ದುಃಖಿತ ಬದುಕನ್ನು ಅವಳು ಅಂತ್ಯ ಮಾಡಲು ನಿರ್ಧರಿಸುತ್ತಾಳೆ. ಅಂತಿಮವಾಗಿ ಅವಳು `ಆತ್ಮಹತ್ಯೆ’ಗೆ ಸಿದ್ಧಳಾಗುತ್ತಾಳೆ. ತನ್ನ ಮೂರು ಮಕ್ಕಳ ಕಣ್ಣು ತಪ್ಪಿಸಿ ಆಕೆ ಸಾಯಲು ಮೈಗೆ ಬೆಂಕಿ ಹಚ್ಚುವ ಪ್ರಯತ್ನದಲ್ಲಿ ಇದ್ದಾಗ “ಅಮ್ಮೀ…” ಎಂಬ ಕರೆಗೆ ಕೈಯಲ್ಲಿದ್ದ ಬೆಂಕಿ ಪೊಟ್ಟಣ ಜಾರಿ ಕೆಳಗೆ ಬೀಳುತ್ತದೆ. ಅಪ್ಪನನ್ನು ಕಳೆದುಕಂಡ ನಮ್ಮನ್ನು ಪುನಃ ಅಮ್ಮನಿಲ್ಲದ ತಬ್ಬಲಿಯನಾಗಿಸಲು ಹೊರಟಿದ್ದೀಯಾ? ಅಪ್ಪನಿಗಾಗಿ ಸಾಯಲು ಸಿದ್ಧರಾದ ನೀನು ನಮಗಾಗಿ ಬದುಕಲು ಸಾಧ್ಯವಿಲ್ಲವೇ? ನಮಗೆ ನೀನು ಬೇಕು, ನಮ್ಮನ್ನು ತಬ್ಬಲಿ ಮಾಡಬೇಡಾ ಅಮ್ಮೀ… ಮಗಳು ಸಲ್ಮಾ ಮಾತಿನಿಂದ ವಿಚಲಿತಳಾದ ತಾಯಿ ಮೆಹರೂನ್ ಹೆಪ್ಪುಗಟ್ಟಿದ ದುಃಖವು ಒಮ್ಮೆಲೇ ಮಗಳ ಮಾತಿನಿಂದ ಕೊಚ್ಚಿಕೊಂಡು ಹೋದಂತೇ ನಡುಗಿ ಹೋದಳು. ದೊಡ್ಡ ಮಗಳು ಪುಟ್ಟ ಮಗುವನ್ನು ತಾಯಿಯ ಕಾಲಡಿಯಲ್ಲಿ ಹಾಕಿದ್ದಳು. ಆಳುತ್ತಿದ್ದ ಹಸುಗೂಸನ್ನು ತಾಯಿ ಎತ್ತಿಕೊಂಡು ಎದೆಗೆ ಅವುಚಿಕೊಳ್ಳುತ್ತಾಳೆ. ಎತ್ತರಕ್ಕೆ ಬೆಳೆದಿದ್ದ ದೊಡ್ಡ ಮಗಳು ಗೆಳತಿಯಂತೇ ಅಮ್ಮನಿಗೆ ಸಾಂತ್ವನ ಹೇಳಿದಾಗ ತಾಯಿ ಮೆಹರೂನ್ `ಕ್ಷಮಿಸು ಕಂದಾ’ ಎಂದು ಮಕ್ಕಳ ಮುಂದೆ ತಲೆತಗ್ಗಿಸುತ್ತಾಳೆ. ತಾಯಿಯ ಆರಿ ಹೋದ ಎದೆಯ ಹಣತೆಯನ್ನು ಮಕ್ಕಳ ಪ್ರೀತಿ ಪುನಃ ಬೆಳಗುವಂತೇ ಮಾಡುವ ಈ `ಹಾರ್ಟ್ ಲ್ಯಾಂಪ್’ ಕಥೆಯು ಅಸಹಾಯಕ ತಾಯಿ ಓರ್ವಳ ಪಾಲಿಗೆ ಮಕ್ಕಳೇ ದೀಪವಾಗಿ ಅಮ್ಮನನ್ನು ಮರು ಬದುಕಿಗೆ ಮರಳಿ ಕರೆದೊಯ್ಯುವುದೇ ಕಥೆಯ ಸಾರಾಂಶ. ಈ ಕಥೆಯನ್ನು ಕನ್ನಡದಿಂದ ಇಂಗ್ಲೀಷ್ ಭಾಷೆಗೆ ಅನುವಾದಗೊಳಿಸಿ ಬೂಕರ್ ಪ್ರಶಸ್ತಿಯ ತನಕ ಕೊಂಡೊಯ್ಯಲು ಲೇಖಕಿ ದೀಪಾ ಭಾಸ್ತಿಯ ಸಹಕಾರ ಇಲ್ಲಿ ಹೆಚ್ಚು ಮಾನ್ಯತೆ ಪಡೆಯುತ್ತದೆ. ಬಹುಶಃ ಕನ್ನಡದ ಬರಹಗಾರರ ಕಥೆ, ಕಾದಂಬರಿಯನ್ನು ಹೀಗೆ ಇಂಗ್ಲಿಷ್‌ಗೆ ಅನುವಾದ ಮಾಡಿದರೆ ವಿಶ್ವದ ಶ್ರೇಷ್ಠವಾದ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಆಯ್ಕೆ ಆಗಲೂಬಹುದು. ಇನ್ನಾದರೂ ಬಾನು ಮುಷ್ತಾಕ್‌ರ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆ ಸಾಹಿತ್ಯ ಕ್ಷೇತ್ರದಲ್ಲಿ ಸಿಗುವಂತಾಗಲಿ.

    ಶಹನಾಝ್ ಎಂ.

  • ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

    ಶರೀಫ್ ಸಾಬ್ ಅನುಪಮ ಸ್ಥಾಪಕರಲ್ಲೊಬ್ಬರು…

    ಬದುಕಿನದ್ದಕ್ಕೂ ದೊಡ್ಡ ಕನಸುಗಳನ್ನು ಕಂಡ ಅಪಾರ ದೂರದರ್ಶಿತ್ವ ಮತ್ತು ಬದ್ಧತೆಯಿದ್ದ ಕೆಎಂ ಶರೀಫ್ ಸಾಹೇಬರು ಇತ್ತೀಚೆಗೆ ಸೃಷ್ಟಿಕರ್ತನೆಡೆಗೆ ಪ್ರಯಾಣ ಬೆಳೆಸಿದರು. ಇವರು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರಾಗಿದ್ದ ನನ್ನ ತಂದೆಯವರಾದ ಇಬ್ರಾಹಿಮ್ ಸಈದ್ ರವರ ಹಿರಿಯಣ್ಣ. ನನ್ನ ದೊಡ್ಡಪ್ಪನವರಲ್ಲಿ ನಾನು ಗುರುತಿಸಿದ ಅತಿ ವಿಶೇಷತೆ ಸಹಜವಾದ ನಾಯಕತ್ವದ ಗುಣ. ಕೆಲಸವನ್ನು ಹಂಚುವುದು, ಅದನ್ನು ಮಾಡಿಸುವುದು, ಅದರ ಮೇಲ್ನೋಟ ವಹಿಸುವುದು, ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಪ್ರೇರೇಪಿಸುವುದು ಇವರ ವಿಶೇಷತೆಯಾಗಿತ್ತು. ಎಲ್ಲ ವಿಷಯಗಳಲ್ಲಿಯೂ ಗುಣಮಟ್ಟಕ್ಕೆ ಮಹತ್ವವನ್ನು ನೀಡುವುದು. ಕೆಲಸದಲ್ಲಿ ಬದ್ಧತೆ ಮತ್ತು ಶಿಸ್ತು ಯುವಕರನ್ನು ನಾಚಿಸುವಂತಿತ್ತು.

    ತಮ್ಮ ಯುವ ಪ್ರಾಯದಲ್ಲಿಯೇ ಇಸ್ಲಾಮಿನ ಬಗ್ಗೆ ಸರಿಯಾಗಿ ಅರಿತುಕೊಂಡು ಅದೊಂದು ಜೀವನ ವ್ಯವಸ್ಥೆ ಎಂದು ಒಪ್ಪಿಕೊಂಡು ಪ್ರಾಯೋಗಿಕವಾಗಿ ಜೀವನದುದ್ದಕ್ಕೂ ನಡೆದು ತೋರಿಸಿದ ಮಹಾನುಭಾವರು. ನಮ್ಮ ಕುಟುಂಬದ ಹಿರಿಯ ಸ್ಥಾನದಲ್ಲಿದ್ದ ಅವರಿಗೆ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆಯೂ ಕಾಳಜಿ ಇತ್ತು. ಕೇವಲ ಕಣ್ಣುಗಳನ್ನು, ಮುಖಭಾವವನ್ನು ನೋಡಿ ವ್ಯಕ್ತಿಯ ಸಮಸ್ಯೆಯನ್ನು ಗುರುತಿಸುವ ಮತ್ತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಸೂಚಿಸುವ ಜೊತೆಗೆ ಕೈಲಾದ ಸಹಾಯ ಮಾಡುವ ವಿಶಾಲ ಹೃದಯಿಯಾಗಿದ್ದರು.

    ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು, ಮಕ್ಕಳ ಬೆಳವಣಿಗೆಯ ಪ್ರತಿಯೊಂದು ಹಂತವನ್ನು ಗಮನಿಸುತ್ತಿದ್ದರು. ಮಕ್ಕಳ ಸಣ್ಣ ಸಾಧನೆಯನ್ನು ಸಂಭ್ರಮಿಸುತ್ತಿದ್ದರು. ಅವರಿಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿ ನಿಲ್ಲುತ್ತಿದ್ದರು.

    ಹೆಣ್ಣು ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಅವರು ಹೆಣ್ಣು ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ದೂರದ ಕೇರಳಕ್ಕೆ ಮಂಗಳೂರಿನ ಆಸುಪಾಸಿನ ಹೆಣ್ಣು ಮಕ್ಕಳು ಹೋಗುತ್ತಿರುವುದನ್ನು ಕಂಡು ಇಲ್ಲಿಯೇ ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಿಕ್ಷಣವನ್ನು ಪೂರೈಸಲು ಸಾಧ್ಯವಾಗುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಯೋಜನೆಗೆ 25 ವರ್ಷಗಳ ಹಿಂದೆ ಅಡಿಪಾಯ ಹಾಕಿದರು.

    ಗುಡ್ಡದಂತಹ ಸ್ಥಳದಲ್ಲಿ ಹೆಚ್ಚು ಜನವಾಸವಿಲ್ಲದ ಪ್ರದೇಶದಲ್ಲಿ ಒಂದು ವಿಶಾಲ ಭೂಮಿಯನ್ನು ಸಮಾನ ಮನಸ್ಕರ ಜೊತೆಗೂಡಿ ಖರೀದಿಸಿ ಮೊದಲು ಅದರ ಅಡಿಪಾಯವನ್ನು ಹಾಕಿದಾಗ ಅಲ್ಲಿ ನಡೆದ ಒಂದು ಸಮಾರಂಭದಲ್ಲಿ ಗುಡ್ಡದಿಂದ ಕೂಡಿದಂತಹ ಪ್ರದೇಶವನ್ನು ತೋರಿಸಿ ಮುಂದೊAದು ದಿನ ಇಲ್ಲಿ ಹೆಣ್ಣು ಮಕ್ಕಳಿಗೆ ಪಿಯುಸಿ ಡಿಗ್ರಿ ಮತ್ತು ಬಿಎಡ್ ಕಾಲೇಜುಗಳು ಸ್ಥಾಪನೆಯಾಗುತ್ತದೆ. ಇದು ಹೆಣ್ಣು ಮಕ್ಕಳಿಗಾಗಿರುವ ಯುನಿವರ್ಸಿಟಿಯಾಗುತ್ತದೆ ಎಂದು ನಮ್ಮಲ್ಲಿ ಕನಸನ್ನು ಬಿತ್ತಿದ್ದರು. ಆ ಸಮಾರಂಭದಲ್ಲಿ ದೊಡ್ಡಪ್ಪನವರ ಕಣ್ಣುಗಳಲ್ಲಿದ್ದ ಹೊಳಪನ್ನು ನಾನಿಂದು ನೆನಪಿಸುತ್ತಿದ್ದೇನೆ.

    ಹಿರಾ ಶಿಕ್ಷಣ ಸಂಸ್ಥೆಯ ಹಿಂದೆ ಹೆಜ್ಜೆ ಹೆಜ್ಜೆಗೂ ಪ್ರಯಾಣಿಸಿದರು. ಇಂದು ಈ ಶಿಕ್ಷಣ ಸಂಸ್ಥೆಯ ಪ್ರತಿಯೊಂದು ಕಲ್ಲುಗಳು ಅವರ ಪರಿಶ್ರಮ ಮತ್ತು ದೂರದರ್ಶತ್ವಕ್ಕೆ ಸಾಕ್ಷಿಯಾಗಿ ನಮ್ಮ ಮುಂದಿದೆ. ಅಪಾರ ಸಂಖ್ಯೆ ವಿದ್ಯಾರ್ಥಿಗಳು ಅವರಿಗೆ ಅನುಕೂಲಕರವಾದ ವಾತಾವರಣದಲ್ಲಿ ಶಾಂತ ರೀತಿಯಲ್ಲಿ ಶಿಕ್ಷಣವನ್ನು ಮುಗಿಸಿ ಜಗತ್ತಿನ ವಿವಿಧ ಭಾಗಗಳಲ್ಲಿ ಪಸರಿಸಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

    ಹೆಣ್ಣು ಮಕ್ಕಳು ತಲೆಯ ಮೇಲೆ ವಸ್ತç ಹಾಕಿದರೆ ಅದು ಶಾಲಾ ವಸ್ತç ಸಂಹಿತೆಗೆ ಅಪವಾದವಾಗುತ್ತದೆ ಎಂದು ಅಪಪ್ರಚಾರ ನಡೆಸಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಳ್ಳು ನೀರು ಬಿಡಲು ಬಯಸುತ್ತಿರುವ ಸಮಾಜದಲ್ಲಿ, ಹೆಣ್ಣು ಮಕ್ಕಳ ಪರವಾಗಿ ಸದಾ ತುಡಿಯುತ್ತಿದ್ದ ಒಂದು ಆದರ್ಶ ವ್ಯಕ್ತಿತ್ವ ಕೆ.ಎಂ. ಶರೀಫ್ ಸಾಹೇಬರು. ಅವರ ಅಗಲಿಕೆಯು ಹೆಣ್ಣು ಮಕ್ಕಳ ಪರವಾಗಿ ನಿಂತಿದ್ದ ಓರ್ವ ಮಹಾನುಭಾವರ ನಿರ್ಗಮನವಾಗಿದೆ.

    ಅನುಪಮಾ ಮಹಿಳಾ ಮಾಸಿಕದ ಹುಟ್ಟು ಬೆಳವಣಿಗೆಯಲ್ಲಿ ನಮ್ಮೊಂದಿಗೆ ಸದಾ ಬೆಂಗಾವಲಾಗಿ ನಿಂತ ಮಹಾನುಭಾವರವರು. ನಮ್ಮ ಬಳಗದ ಪ್ರತಿಯೊಂದು ಏಳು ಬೀಳುಗಳಲ್ಲಿಯೂ ನಮ್ಮ ಜೊತೆಗಿದ್ದವರು. ನಮ್ಮ ಪತ್ರಿಕೆಯಲ್ಲಿ ಬರುವ ಪ್ರತಿಯೊಂದು ಲೇಖನದ ಬಗ್ಗೆಯೂ ಕೂಲಂಕುಶ ಪರಿಶೀಲನೆ ನಡೆಸುವವರು. ಉತ್ತಮ ವಿಮರ್ಶಕರು ಆಗಿದ್ದರು. ತಮ್ಮ ಅದ್ವಿತೀಯ ವರ್ಚಸ್ಸಿನಿಂದ, ಕಂಡ ಕನಸನ್ನು, ಕೈಗೆತ್ತಿಕೊಂಡ ಕೆಲಸವನ್ನು ಅರ್ಪಣಾ ಮನೋಭಾವದೊಂದಿಗೆ ಪೂರ್ತಿ ಗೊಳಿಸುವ ವಿಶಿಷ್ಟ ಛಲಗಾರ.

    ಮಂಗಳೂರಿನಲ್ಲಿ ಇಂದು ಇಸ್ಲಾಮಿನ ಕಂಪನ್ನು ಪಸರಿಸುತ್ತಿರುವ ಹತ್ತು ಹಲವು ಕೆಲಸಗಳ ರೂವಾರಿಯವರು. ಅನುಪಮ ಕಚೇರಿ ಇರುವ ಹಿದಾಯತ್ ಸೆಂಟರ್, ವಿಶಾಲವಾದ ಸುಸಜ್ಜಿತ ಶಾಂತಿ ಪ್ರಕಾಶನದ ಕಚೇರಿ, ಇಸ್ಲಾಮಿ ಪುಸ್ತಕಾಲಯ ವಿರಬಹುದು, ಬೋಳಾರದ ಇಸ್ಲಾಮಿಕ್-ಎ-ಎಜುಕೇಶನ್ ಸೆಂಟರ್ ಎಲ್ಲದರಲ್ಲಿಯೂ ಅವರ ಅಹರ್ನಿಸಿ ಪರಿಶ್ರಮವಿದೆ. ಒಂದು ಯೋಜನೆ ಮುಗಿದ ಕೂಡಲೇ ಇನ್ನೊಂದಕ್ಕೆ ಕೈ ಹಾಕುತ್ತಿದ್ದ, ಅದಕ್ಕಾಗಿ ರೂಪವೇಷಗಳನ್ನು ಸಿದ್ಧಪಡಿಸುತಿದ್ದ ಅವರು ಎಲ್ಲ ವಿಷಯಗಳಲ್ಲಿಯೂ ಮೇಧಾವಿ. ಯಾವ ವಸ್ತುಗಳು ಎಲ್ಲಿ ಚೆನ್ನಾಗಿರುತ್ತದೆ ಯಾರ ಬಳಿ ವಿಚಾರಿಸಿದರೆ ತಿಳಿಯುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದ ಕೆ.ಎಂ. ಶರೀಫ್ ಸಾಹೇಬರು ಯಾವುದೇ ಕೆಲಸದಲ್ಲಿ ಪಾಲ್ಗೊಂಡರು ಅದನ್ನು ಸುಂದರವಾಗಿ ಮತ್ತು ಗುಣಮಟ್ಟದೊಂದಿಗೆ ಮುಗಿಸುವುದರಲ್ಲಿ ಸಿದ್ದ ಹಸ್ತರು.

    ಯಾರಿಗೂ ಪುಕ್ಕಟೆ ಸಲಹೆ, ಉಪದೇಶ ನೀಡುವ ಜಾಯಮಾನ ಅವರದಾಗಿರಲಿಲ್ಲ. ಆದರೆ ತಮ್ಮ ಬಳಿ ಸಮಸ್ಯೆ ಹೇಳಿಕೊಂಡು ಬಂದ ಪ್ರತಿಯೊಬ್ಬರ ಪಾಲಿಗೂ ಅವರು ಆಪ್ತ ಸಮಾಲೋಚಕರು. ಉಪದೇಶ ಬಯಸುವವರಿಗೆ ಹಿರಿಯ ಮಾರ್ಗದರ್ಶಿ. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಸುಂದರವಾಗಿ ಪೂರ್ತಿಗೊಳಿಸಿದರೂ ಅದರಲ್ಲಿ ಹೆಚ್ಚಿನ ಪ್ರಯತ್ನ, ಹೋರಾಟ ಕೆ.ಎಂ. ಶರೀಫ್ ಸಾಹೇಬರದ್ದಾಗಿತ್ತು. ಆದರೆ ಎಂದೂ ಅದನ್ನು ಅವರು ಹೇಳಿಕೊಂಡವರಲ್ಲ. ವಿನಯಶೀಲತೆ ಅವರ ಹೆಗ್ಗಳಿಕೆ. ಅಧಿಕಾರ, ಹೆಸರು, ಪದವಿಗಾಗಿ ಯಾವುದೇ ಕೆಲಸವನ್ನು ಮಾಡಲು ಮತ್ತು ತನ್ನನ್ನು ಸಮಾಜ ಗುರುತಿಸಬೇಕೆಂದು ಅವರು ಬಯಸಲಿಲ್ಲ. ನಿಸ್ವಾರ್ಥತೆಯಿಂದ ಕೂಡಿದ ಮಾದರಿ ಯೋಗ್ಯ ಜೀವನವದು.

    ಅಲ್ಲಾಹನ ಮೇಲಿನ ಅಪಾರ ಭರವಸೆಯೊಂದಿಗೆ ಸಣ್ಣ ಮೊತ್ತವಿದ್ದರೂ ಸರಿ ಕೆಲಸ ಆರಂಭಿಸಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಉನ್ನತ ಕನಸುಗಳನ್ನು ಹೊಂದಿ ಗುರಿಯಡಿಗೆ ಗಮನಹರಿಸಲು ಯುವ ತಲೆಮಾರನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದರು. ಪ್ರತಿಭಾವಂತರನ್ನು ಗುರುತಿಸುವುದು, ಅವರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಂದ ಸಮಾಜಕ್ಕೆ ಯಾವ ಪ್ರಯೋಜನವನ್ನು ಪಡೆಯಬಹುದು ಎಂದು ಯೋಚಿಸಿ ಅದಕ್ಕಾಗಿ ಅಹರ್ನಿಶಿ ಕೆಲಸ ಮಾಡುವುದು ಅವರಿಗೆ ಮೀಸಲಾದ ವಿಶೇಷತೆ.

    85 ವರ್ಷಗಳ ಜೀವನದುದ್ದಕ್ಕೂ ತಾವು ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅಪಾರ ಪ್ರೀತಿ ಕಾಳಜಿ ಮತ್ತು ನಗು ಮುಖದೊಂದಿಗೆ ಎಲ್ಲರನ್ನು ಭೇಟಿಯಾದ ನನ್ನ ಪ್ರೀತಿಯ ದೊಡ್ಡಪ್ಪನ ಅಗಲಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ .ವಿಶೇಷವಾಗಿ ಅನುಪಮಾ ಬಳಗ ಹಿರಿಯ ಮಾರ್ಗದರ್ಶಕನನ್ನು, ಕೈಹಿಡಿದು ಮುನ್ನಡೆಸುತ್ತಿದ್ದ ಊರುಗೋಲನ್ನು ಕಳೆದುಕೊಂಡು ತಬ್ಬಲಿಯಾಗಿದೆ.

    ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಉಂಟಾಗುವುದರ ಬಗ್ಗೆ ಬಹಳ ಕಳವಳ ವ್ಯಕ್ತಪಡಿಸುತ್ತಿದ್ದ ಅವರು ಎಲ್ಲ ಧರ್ಮೀಯರೊಂದಿಗೂ ಸ್ನೇಹ ಪ್ರೀತಿಯ ಸಂಬಂಧವನ್ನು ಹೊಂದಿದ್ದರು. ಭಾರತದಂತಹ ಬಹುದರ್ಮಿಯ ಸಮಾಜದಲ್ಲಿ ಓರ್ವ ವ್ಯಕ್ತಿ ಯಾವ ರೀತಿಯಲ್ಲಿ ಬಾಳಬೇಕು ಎಂಬುದಕ್ಕೆ ಮಾದರಿಯಂತಿದ್ದರು. ಅವರ ಮರಣದ ವೇಳೆ ಆಗಮಿಸಿದ ಸುತ್ತಮುತ್ತಲಿನ ದೇಶ ಬಾಂಧವರು ಇಳಿಸಿದ ಕಣ್ಣೀರು ಅವರೊಂದಿಗಿದ್ದ ಪ್ರೀತಿಯ ಸ್ಪಷ್ಟ ನಿದರ್ಶನವಾಗಿತ್ತು. ಸೌಹಾರ್ದದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.

    ಮನುಷ್ಯ ಸಹಜವಾಗಿ ಅವರಿಂದ ಸಂಭವಿಸಿರಬಹುದಾದ ಎಲ್ಲ ತಪ್ಪುಗಳನ್ನು ದೇವನು ಮನ್ನಿಸಲಿ ಮತ್ತು ಅವರನ್ನು ಸ್ವರ್ಗಾನಗಳಲ್ಲಿ ಸೇರಿಸಲಿ ಎಂಬುದಾಗಿ ಹೃದಯವಂತರಾಳದಿಂದ ಪ್ರಾರ್ಥಿಸುತ್ತಿದ್ದೇನೆ.

    ಸಬೀಹ ಫಾತಿಮ

  • ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

    ಆಮಿರ್ ಅಲ್ ಮಹ್ದಿಯ ಪವಾಡ ಸದೃಶವಾದ ಪ್ರಯಾಣ

    2025ರ ಹಜ್ಜ್ ಯಾತ್ರೆ ಪೂರ್ಣಗೊಂಡು ಹಾಜಿಗಳೆಲ್ಲರೂ ತಾಯ್ನಾಡಿಗೆ ಮರಳಿದ್ದಾರೆ. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಪವಿತ್ರ ತೀರ್ಥಯಾತ್ರೆಯನ್ನು ಮುಗಿಸಿ ಹೊಸ ಹುರುಪು, ಹೊಸ ಚೈತನ್ಯದೊಂದಿಗೆ ಜೀವನದ ಜಂಜಾಟಕ್ಕೆ ಪುನಃ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
    ಈ ಬಾರಿಯ ಹಜ್ಜ್ ಕರ್ಮವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾಗರೂಕತೆ ವಹಿಸಿದ್ದರಿಂದ ಬಹಳ ಸುಸೂತ್ರವಾಗಿ ನೆರವೇರಿದೆ. ಈ ನಡುವೆ ಆಮಿರ್ ಮನ್ಸೂರ್ ಮಹ್ದಿ ಅಲ್ ಗದ್ದಾಫಿ ಎಂಬ 38 ರ ಹರೆಯದ ಲಿಬಿಯಾದ ಪೌರ ತನ್ನ ಹಜ್ಜ್ ಪ್ರಯಾಣದಲ್ಲಿ ಸಂಚಲವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲೂ ವಾರ್ತಾ ಮಾಧ್ಯಮಗಳಲ್ಲೂ ವೈರಲ್ ಆಗಿದ್ದರು.
    ಎಲ್ಲರಂತೆ ಆಮಿರ್ ಕೂಡ ಹಜ್ಜ್ ಯಾತ್ರೆಗಾಗಿ ಲಿಬಿಯಾದ ಸಭಾ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸೌದಿಗೆ ಹಜ್ಜ್ಗಾಗಿ ತೆರಳುವ ಎಲ್ಲ ಪ್ರಯಾಣಿಕರೂ ಬೋರ್ಡಿಂಗ್ ಪಾಸ್ ಪಡೆದು ವಿಮಾನದೊಳಗೆ ಪ್ರವೇಶಿಸಿದ್ದರು. ಆದರೆ ಆಮಿರ್‌ರಿಗೆ ಬೋರ್ಡಿಗೆ ಪಾಸ್ ನಿರಾಕರಿಸಲಾಗಿತ್ತು ಅದಕ್ಕೆ ಕಾರಣ ಪಾಸ್ ಪೋರ್ಟ್ನಲ್ಲಿರುವ ಗದ್ದಾಫಿ ಎಂಬ ಹೆಸರಿನಲ್ಲಿರುವ ಸಮಸ್ಯೆ ಎಂದು ಸೂಚಿಸಲಾಗಿತ್ತು. ಆಮಿರ್‌ನ ಹೊರತಾಗಿ ವಿಮಾನ ಪ್ರಯಾಣ ಹೊರಟಿತು. ಆದರೆ ವಿಧಿಯ ಆಟವನ್ನು ಬಲ್ಲವರಾರು. ವಿಮಾನ ಆಕಾಶದೆತ್ತರಕ್ಕೆ ಹಾರಿ ಸ್ವಲ್ಪದರಲ್ಲೇ ತಾಂತ್ರಿಕ ಸಮಸ್ಯೆಯ ಕಾರಣ ವಿಮಾನವನ್ನು ನಿಲ್ದಾಣಕ್ಕೆ ಮರಳಿಸಬೇಕಾಯಿತು.
    ಆದರೆ ವಿಮಾನ ನಿಲ್ದಾಣದಲ್ಲಿರುವ ಆಮಿರ್ ನಾನು ಹಜ್ಜ್ನ ಸಂಕಲ್ಪ ಮಾಡಿ ತಾಯ್ನಾಡಿನಿಂದ ಹೊರಟಿದ್ದೇನೆ ಮತ್ತು ಇನ್ನು ಸೌದಿಗಲ್ಲದೆ ಮರಳಿ ಮನೆಗೆ ಹೋಗಲಾರೆ ಎಂದು ಹಠ ಹಿಡಿದು ಕುಳಿತಿದ್ದಾರೆ. ನಿಲ್ದಾಣಕ್ಕೆ ಮರಳಿದ ವಿಮಾನದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿದರೂ ಆಮಿರ್ ನನ್ನು ವಿಮಾನದೊಳಗೆ ಪ್ರವೇಶಿಸಲು ಪೈಲಟ್ ಅನುಮತಿ ನೀಡಲೇ ಇಲ್ಲ. ಪ್ರಯಾಣಕ್ಕೆ ಸಜ್ಜಾದ ವಿಮಾನವು ಆಕಾಶದೆತ್ತರಕ್ಕೆ ಹಾರಿ ಮಾಯವಾಯಿತು. ಪುನಃ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಾಗ ಗತ್ಯಂತರವಿಲ್ಲದೆ ನಿಲ್ದಾಣಕ್ಕೆ ಮರಳಬೇಕಾಯಿತು. ಆದರೆ ಈ ಬಾರಿ ಪೈಲಟ್‌ಗೆ ಏನೋ ಸಂಶಯ ಕಾಡತೊಡಗಿತು. ಅವನು ಆಗಲೇ ಸೂಚನೆ ನೀಡಿದ. ಇನ್ನು ವಿಮಾನವು ಲ್ಯಾಂಡಿಗ್ ಮಾಡುವುದಾದರೆ ಆಮಿರ್ ನ ಹೊರತಾಗಿ ವಿಮಾನ ಟೇಕ್ ಆಫ್ ಮಾಡಲಾರದು ಎಂಬ ಸಂಕಲ್ಪದೊAದಿಗೆ ವಿಮಾನವನ್ನು ಕೆಳಗಿಳಿಸಲಾಯಿತು. ಪುನಃ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿ ಆಮಿರ್‌ನಿಗೆ ಪ್ರವೇಶಾನುಮತಿ ನೀಡಿ ವಿಮಾನವು ಹಾರಾಡಿತು ಮತ್ತು ಜೆದ್ದಾ ವಿಮಾನ ನಿಲ್ದಾಣಕ್ಕೆ ತಲುಪಿತು.
    ಆಮಿರ್ ತನ್ನ ಹದಿನಾರನೆಯ ಪ್ರಾಯದಲ್ಲಿ ಹಜ್ಜ್ ಎಂಬ ಪವಿತ್ರ ಕರ್ಮ ನಿರ್ವಹಿಸುವ ಕನಸನ್ನು ಕಂಡಿದ್ದ. ಆದರೆ ಕಾರಣಾಂತರದಿAದ ಅದು ಸಾಧ್ಯವಾಗಲಿಲ್ಲ. ತನ್ನ 38 ನೆಯ ಪ್ರಾಯದಲ್ಲಿ ತನ್ನ ಕನಸು ನೆರವೇರುವ ಸಮಯ ಕೂಡಿ ಬಂದಿತ್ತು. ಅದರ ಸಕಲ ಸಿದ್ಧತೆಗಳನ್ನು ಮಾಡಿ ವಿಮಾನ ನಿಲ್ದಾಣ ತಲುಪಿದಾಗ ಇಂತಹ ಒಂದು ಕಹಿ ಅನುಭವವಾಗಿತ್ತು. ಓರ್ವ ಪ್ರಯಾಣಿಕನು ಪ್ರಯಾಣದ ಸಕಲ ಸಿದ್ಧತೆಗಳನ್ನು ಮಾಡಿ ತನ್ನದಲ್ಲದ ತಪ್ಪಿನಿಂದ ಆ ಪ್ರಯಾಣ ಮೊಟಕುಗೊಳ್ಳುವಾಗ ಅವನು ಅನುಭವಿಸುವ ಮಾನಸಿಕ ಯಾತನೆ, ತಳಮಳ ಮತ್ತು ಸಂಘರ್ಷ ಮಾತಿನಲ್ಲಿ ವರ್ಣಿಸಲು ಅಸಾಧ್ಯ. ಅದನ್ನು ಅನುಭವಿಸುವವರಿಗೆ ಅದರ ಸಂಕಷ್ಟದ ಬಗ್ಗೆ ಅರಿವಿರುತ್ತೆ. ಆಮಿರ್‌ನ ಅನುಭವ ಕೂಡ ಇದಕ್ಕೆ ಭಿನ್ನವಲ್ಲ. ಆದರೆ ಸಾಧಾರಣ ಗತಿಯಲ್ಲಿ ಪ್ರಯಾಣ ಮೊಟಕುಗೊಂಡರೆ ತನ್ನ ವಿಧಿಯನ್ನು ಹಳಿಯುತ್ತಾ ಪ್ರಯಾಣಿಕನು ಮರಳುವುದೇ ಹೆಚ್ಚು. ವಿಮಾನ ನಿಲ್ದಾಣದ ಅಧಿಕಾರಿಗಳು ಆಮಿರ್ ನನ್ನು ಅದೆಷ್ಟೋ ಸಂತೈಸಿರಬಹುದು, ತನ್ನ ಅದೃಷ್ಟ ದಲ್ಲಿ ಈ ಬಾರಿಯ ಹಜ್ಜ್ ಬರೆದಿಲ್ಲ ಎಂಬಿತ್ಯಾದಿ ಮಾತುಗಳಿಂದ ಆಮಿರ್ ನಿಗೆ ಮನವರಿಕೆ ಮಾಡಿಕೊಟ್ಟಿರಲೂಬಹುದು. ಆದರೆ ಆಮಿರ್ ಕುಳಿತಲ್ಲಿಂದ ಕದಲಲೇ ಇಲ್ಲ. ಇಂದಿನ ಹಜ್ಜ್ ವಿಮಾನ ಹೊರಟಿದೆ ಇನ್ನು ಬರುವ ವರ್ಷ ಹೋಗಬಹುದು ಎಂದು ಅವನನ್ನು ಅಧಿಕಾರಿಗಳು ಸಂತೈಸಲು ಪ್ರಯತ್ನಿಸಿದರೂ ಅದ್ಯಾವುದಕ್ಕೂ ಕಿವಿಗೊಡದೆ, ಅಲ್ಲಿ ಸದ್ದು ಗದ್ದಲ ಮಾಡುವುದೋ, ಬೊಬ್ಬೆ ಹೊಡೆಯುವುದೋ ಪ್ರತಿಭಟನೆ ನಡೆಸುವುದೋ ಅಥವಾ ಅಧಿಕಾರಿಗಳನ್ನು ತರಾಟೆಗೆ ತೆಗೆಯುವುದೋ ಇದ್ಯಾವುದರ ಗೋಜಿಗೆ ಹೋಗದೆ ನನ್ನನ್ನು ಬಿಟ್ಟು ಈ ವಿಮಾನ ಹಾರಾಡುವುದಿಲ್ಲ ಎಂದು ಮಾತ್ರ ಹೇಳುತ್ತಾ ಅಲ್ಲಿಯೇ ಉಳಿದುಬಿಡುತ್ತಾನೆ.
    ಓರ್ವ ಪ್ರಯಾಣಿಕನಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದೆ ಇದ್ದರೆ ಇನ್ನೊಂದು ವಿಮಾನದಲ್ಲಿ ಬದಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತೆ. ಆದರೆ ಹಜ್ಜ್ ವಿಮಾನದಲ್ಲಿ ಅಂತಹ ಒಂದು ಬದಲು ವ್ಯವಸ್ಥೆ ಇದೆಯೋ ಎಂದು ತಿಳಿದಿಲ್ಲ. ಆದರೂ ತಾನು ಹಜ್ಜ್ಗಲ್ಲದೆ ಮರಳಿ ತಾಯ್ನಾಡಿಗಿಲ್ಲ ಎಂಬ ಆಮಿರ್‌ನ ದೃಢ ನಿರ್ಧಾರ ಮತ್ತು ಇಚ್ಛಾ ಶಕ್ತಿ ಅದಕ್ಕೂ ಮಿಗಿಲಾದ ದೇವನ ಮೇಲಿರುವ ಭರವಸೆ ಮತ್ತು ಸಂಕಲ್ಪ ನಿಜಕ್ಕೂ ಅದ್ಭುತವಾದುದು. ಏಕೆಂದರೆ ಓರ್ವ ಪ್ರಯಾಣಿಕನನ್ನು ಬಿಟ್ಟು ಹೋದ ಕಾರಣದಿಂದ ವಿಮಾನ ತನ್ನ ನಿರ್ಧೀಷ್ಟ ಸ್ಥಳವನ್ನು ತಲುಪದೆ ತಾಂತ್ರಿಕ ದೋಷ ಕಂಡುಬರುವುದು ಮತ್ತು ಅದಕ್ಕಾಗಿ ಎರಡೆರಡು ಬಾರಿ ಮರಳಿ ಸ್ವನಿಲ್ದಾಣದಲ್ಲಿ ಇಳಿಸುವುದು ಇಂದೊAದು ಅಪರೂಪದ ಘಟನೆಯೇ ಸರಿ. ಇಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಮಧ್ಯಪ್ರವೇಶಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ನಮ್ಮ ಕಾಲದ ಆಧ್ಯಾತ್ಮಿಕ ಶೋಷಣೆ ಮಾಡುವಂತಹ ಪವಾಡವೇನಲ್ಲ. ಮಹಾಪುರುಷರ ಜೀವಂತವಿರುವ ಅಥವಾ ಮೃತಶರೀರದ ಪವಾಡದ ವ್ಯಾಪಾರ ನಡೆಸುವ ಇಂದಿನ ಕಾಲದಲ್ಲಿ ಇದನ್ನೊಂದು ಪವಾಡವಾಗಿ ನೋಡುವವರಿದ್ದರೂ ಅತಿಶಯೋಕ್ತಿಯಲ್ಲ. ಆದರೆ ಇದು ಯಾವುದೇ ಕಟ್ಟು ಕತೆಯ ಪವಾಡವಲ್ಲ. ಇದೊಂದು ಬಲವಾದ ದೃಢ ನಂಬಿಕೆ ಮತ್ತು ಇಚ್ಛಾಶಕ್ತಿಯ ಸಂಕೇತವಷ್ಟೆ.
    ಹಿAದೆ ನಾವೆಲ್ಲರೂ ಅಜ್ಜಿ ಕಥೆ ಕೇಳಿದವರಾಗಿದ್ದೇವೆ. ಆ ಕಥೆಗಳಲ್ಲಿ ಒಂದು ಸಂದೇಶ ಇದ್ದೆ ಇರುತ್ತೆ. ಆದರೆ ಇದು ಕಥೆಯಲ್ಲ ವಾಸ್ತವ. ನೂರಾರು ಜನರ ಮುಂದೆಯೇ ನಡೆದ ಘಟನೆ. ಯಾವುದೇ ಒಂದು ಘಟನೆ ಒಂದು ಹತ್ತಿಪ್ಪತ್ತು ವರ್ಷಗಳ ಹಿಂದೆ ನಡೆದದ್ದಾಗಿದ್ದರೆ ಅದು ಕಾಲ್ಪನಿಕ ಕತೆ ಎಂದು ಅಲ್ಲಗಳೆಯುವ ಸಾಧ್ಯತೆಯೇ ಹೆಚ್ಚು.
    ಪ್ರತಿಯೊಂದು ಧರ್ಮಗಳಲ್ಲೂ ವಿಭಿನ್ನ ರೀತಿಯಲ್ಲಿ ಧಾರ್ಮಿಕ ಆರಾಧಾನೆ ಮತ್ತು ಆಧ್ಯಾತ್ಮಿಕ ಚೈತನ್ಯಗಳಿಗೆ ಹೇತುವಾಗಬಲ್ಲ ಆಚಾರಣೆಗಳಿರುತ್ತೆ. ಇವೆಲ್ಲವುಗಳಲ್ಲೂ ಸಂಕಲ್ಪವೆAಬುದು ಬಹಳ ಮುಖ್ಯ ಪಾತ್ರ ವಹಿಸುತ್ತೆ. ಸಂಕಲ್ಪವಿಲ್ಲದ ಯಾವುದೇ ಆರಾಧನೆಗಳು ಫಲಶೂನ್ಯ. ಇಸ್ಲಾಮಿನಲ್ಲೂ ಆರಾಧನೆಗಳ ಸ್ವೀಕಾರ್ಯಕ್ಕೆ ಸಂಕಲ್ಪವು ಅತಿ ಅಗತ್ಯ. ಮತ್ತು ಪ್ರಾರ್ಥನೆಗಳ ಸ್ವೀಕೃತಕ್ಕೆ ಶುದ್ಧ ಸಂಪಾದನೆ ಮಾನದಂಡ ಎಂದು ಹೇಳುತ್ತೆ. ನಮ್ಮ ಸಂಪಾದನೆ ಶುದ್ಧವಲ್ಲದಿದ್ದಲ್ಲಿ ಮತ್ತು ಅದು ಅಕ್ರಮ ಅನೀತಿ ಮತ್ತು ಅನ್ಯಾಯವಾಗಿ ಸಂಪಾದಿಸಿದ್ದರೆ ದೇವನ ಮುಂದೆ ಎಷ್ಟೇ ಬೇಡಿದರೂ, ಎಷ್ಟೇ ಪ್ರಾರ್ಥನೆ ಮಾಡಿದರೂ ಆ ಪ್ರಾರ್ಥನೆಯನ್ನು ತಡೆಹಿಡಿಯಲಾಗುತ್ತೆ ಅಥವಾ ಸ್ವೀಕೃತವಾಗಲಾರದು ಎಂದು ಹೇಳಲಾಗುತ್ತೆ. ಏಕೆಂದರೆ ಪ್ರಾರ್ಥನೆಗೆ ಉತ್ತರ ಸಿಗಬೇಕಿದ್ದರೆ ನಾವು ಉಣ್ಣುವ ಆಹಾರ ಮತ್ತು ಮಾಡುವ ಸಂಪಾದನೆ ಹಲಾಲ್ ಅಥವಾ ಶುದ್ಧವಾಗಿರಬೇಕಾದುದು ಅತಿ ಅಗತ್ಯ. ಅನ್ಯಾಯವಾಗಿ ಸಂಪಾದಿಸಿ ಪ್ರಾರ್ಥನೆ ಮಾಡಿದರೆ ಅದು ಸ್ವೀಕೃತವಾಗಲಾರದು ಎಂಬುದು ಇಸ್ಲಾಮಿನ ತತ್ವ. ಅದೇ ರೀತಿ ಹಜ್ಜ್ ಎಂಬ ಪವಿತ್ರ ಕರ್ಮವು ಇಸ್ಲಾಮಿನ ಬುನಾದಿ ಅಥವಾ ಪಂಚ ಸ್ಥಂಭಗಳಲ್ಲೊAದು. ಆದ್ದರಿಂದಲೇ ಪವಿತ್ರವಾದ ಕರ್ಮಕ್ಕೆ ಖರ್ಚು ಮಾಡುವ ಹಣ ಪವಿತ್ರವಾಗಬೇಕಿರುವುದು ಅನಿವಾರ್ಯ.
    ಓರ್ವ ಹಜ್ಜ್ ಯಾತ್ರಿಕನ ದೇವನ ಮೇಲಿನ ಭರವಸೆ ಮತ್ತು ಸಂಕಲ್ಪವು ವಿಮಾನವನ್ನೇ ಮರಳಿಸುವಷ್ಟರ ಮಟ್ಟಿಗೆ ಪಾತ್ರ ವಹಿಸುತ್ತೆ ಎಂದಾದರೆ ನಾವು ನಮ್ಮ ದೇವ ಭಯ ಮತ್ತು ಸಂಕಲ್ಪ ಶುದ್ಧಿಯನ್ನೊಮ್ಮೆ ಆತ್ಮಾವಲೋಕನಕ್ಕೆ ಒಡ್ಡಬೇಕಿದೆ.
    ಪ್ರವಾದಿ ಮುಹಮ್ಮದ್(ಸ)ರವರ ಶಿಕ್ಷಣ ಪ್ರಕಾರ ತಾನು ಉಡುವುದು, ಕುಡಿಯುವುದು ಮತ್ತು ಉಣ್ಣುವುದು ನ್ಯಾಯವಲ್ಲದ ಸಂಪಾದನೆಯಿAದಾದರೆ ಎಷ್ಟೇ ಪ್ರಾರ್ಥಿಸಿದರೂ ಉತ್ತರ ಸಿಗಲಾರದು. ಓರ್ವನ ಸಂಪಾದನೆ ನ್ಯಾಯಯುತವಾಗಿದ್ದರೆ ಮತ್ತು ಅಕ್ರಮದ ಸಂಪಾದನೆಯಿAದ ತನ್ನ ಹೊಟ್ಟೆ ತುಂಬಿಸಲಾರೆ ಎಂದು ದೃಢ ನಿಶ್ಚಯ ಮಾಡಿದ್ದರೆ ಅವನ ಸಂಕಲ್ಪಕ್ಕನುಸಾರ ದೇವನು ಅವನ ಕರ್ಮಗಳಿಗೆ ಫಲವನ್ನು ನೀಡುವನು. ಒಟ್ಟಿನಲ್ಲಿ ತನ್ನ ಸಂಕಲ್ಪ ಶುದ್ಧಿಯಾಗಿರಬೇಕು. ಪ್ರವಾದಿಯ ಅನುಚರರು ಮುಂಜಾನೆ ಎದ್ದು ದುಡಿಮೆಗಾಗಿ ಮನೆಯಿಂದ ಹೊರಡುವಾಗ ಅವರ ಪತ್ನಿಯರು ಈ ರೀತಿ ತಾಕೀತು ಮಾಡುತ್ತಿದ್ದರಂತೆ, ನೀವು ಅಕ್ರಮ ಸಂಪಾದನೆ ಮಾಡಿ ಮನೆಗೆ ತರಬೇಡಿ.
    ಓರ್ವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ದೊಡ್ಡ ಶ್ರೀಮಂತನಾಗಿದ್ದರೂ ಐಹಿಕ ಜೀವನದಲ್ಲಿ ಅವನಿಗೆ ಮನ್ನಣೆ ದೊರಕೀತು. ಆದರೆ ಅವನ ಸಂಪಾದನೆ ಶುದ್ಧವಲ್ಲದಿದ್ದರೆ ಅವನು ದೇವನ ದೃಷ್ಟಿಯಲ್ಲಿ ನಿಕೃಷ್ಟನೂ ಅಧಮನೂ ಆಗಿರುವನು. ಬಹುಷ ಆಮಿರ್‌ನ ಸಂಕಲ್ಪ ಶುದ್ಧಿಯಿಂದಲೇ ಅವನಿಗೆ ಇಂತಹ ಒಂದು ಸೌಭಾಗ್ಯ ದೊರಕಿದೆ. ಅದಲ್ಲದೆ ಇದ್ದರೆ ನಾನು ಹಜ್ಜ್ ಯಾತ್ರೆಗಾಗಿ ಸಂಕಲ್ಪ ಮಾಡಿ ಬಂದಿದ್ದೇನೆ ಮತ್ತು ಇನ್ನು ಹಜ್ಜ್ಗಲ್ಲದೆ ಇಲ್ಲಿಂದ ಮರಳಲಾರೆ ಎಂದು ದೃಢ ನಿರ್ಧಾರ ಮಾಡಲು ಹೇಗೆ ಸಾಧ್ಯ. ಆಮಿರ್ ಇಲ್ಲದೆ ಈ ವರ್ಷದ ಹಜ್ಜ್ ಅಪೂರ್ಣ ಎಂದು ದೇವನು ನಿರ್ಧರಿಸಿದ್ದರೆ ಅದು ನಡೆದೇ ತೀರುವುದು. ದೇವನ ಇಚ್ಛೆಗೆ ವಿರುದ್ಧವಾದ ಯಾವುದು ಕೂಡ ನಡೆಯುವುದಿಲ್ಲ ಎಂಬುದು ವಾಸ್ತವ. ಪರ್ವತದ ತಪ್ಪಲಿನಲ್ಲಿ ಮರದ ಒಂದು ಎಲೆ ಉದುರಿ ಬೀಳುವುದಿದ್ದರೂ ಅದು ದೇವನ ಆಜ್ಞೆಯಂತೆಯೇ ವಿನಃ ನಮ್ಮ ಆಜ್ಞೆಯಂತಲ್ಲ.
    ಆಮಿರ್ ಕೊನೆಯ ಯಾತ್ರಿಕನಾಗಿ ವಿಮಾನದೊಳಕ್ಕೆ ಪ್ರವೇಶಿಸಿದರೂ ಎಲ್ಲಾ ಪ್ರಯಾಣಿಕರ ಮತ್ತು ಸಿಬ್ಬಂಧಿ ವರ್ಗದ ಗಮನ ಸೆಳೆದು ಮೊದಲಿಗನಾದ. ಜೆದ್ದಾ ವಿಮಾನ ನಿಲ್ದಾಣ ತಲುಪುದ್ದಿಂತೆ ಆಮಿರ್‌ನ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತಿದ್ದಂತೆ ಜಗತ್ತಿನಲ್ಲೇ ಹೀರೊ ಆಗಿ ಎಲ್ಲರ ಪ್ರಶಂಸೆಗೆ ಪಾತ್ರನಾದ.
    ಆಮಿರ್‌ನಂತಹ ದೃಢ ಚಿತ್ತದ, ಇಚ್ಛಾ ಶಕ್ತಿಯ, ಸಂಕಲ್ಪ ಶುದ್ಧಿಯ, ಯಾರೊಂದಿಗೂ ವೈಮನಸ್ಸಿಲ್ಲದ, ಅಸೂಯೆ ಅಹಂಕಾರ ಮತ್ತು ಆಡಂಭರತೆಯನ್ನು ಮೈಗೂಡಿಸಿಕೊಳ್ಳದ ಹಜ್ಜಾಜ್‌ಗಳು ಇನ್ನೂ ವರ್ಷಂಪ್ರತಿ ಹೆಚ್ಚಾಗಲಿ ಮತ್ತು ಅಂತಹ ಮುತ್ತು ರತ್ನಗಳು ಬೆಳೆದು ಬರಲಿ ಎಂದು ಹಾರೈಸೋಣ.
    ಅಬ್ದುಸ್ಸಲಾಮ್, ದೇರಳಕಟ್ಟೆ

  • ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

    ಕುಮಾರಿ ಹರ್ಷಿಯ ಬಾನುರವರ ಮನ ಮುಟ್ಟುವ ಬರಹ…

    ನಮಸ್ಕಾರ ಬಂಧುಗಳೇ,

    ನಾನು ಶಿಕ್ಷಕಿಯಾಗಬೇಕೆಂದು ನಮ್ಮ ಅಮ್ಮ ಆಸೆಪಟ್ಟಿದ್ರು. ಹಾಗಾಗಿ ಓದು-ಬರಹ ಕಲಿಯಲು ಕಷ್ಟ ಎನಿಸಿದರೂ ಸಹ ಅಮ್ಮನ ಒಂದೇ ಒಂದು ಆಸೆ ಈಡೇರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಮುಕ್ಕಾಲು ಭಾಗ ಅಂಧತ್ವವನ್ನು ಹೊತ್ತು ಹುಟ್ಟಿದ ನನಗೆ ಸಾಮಾನ್ಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಶಾಲೆಗೆ ನನ್ನನ್ನು ದಾಖಲಿಸಿದರು. ನನ್ನ ಕಲಿಕೆಯೇ ಅಲ್ಲಿ ಆಗುತ್ತಿರಲಿಲ್ಲ. ಕಾರಣ ಕಪ್ಪುಹಲಗೆಯ ಅಕ್ಷರಗಳು ನನಗೆ ಕಾಣುತ್ತಿರಲಿಲ್ಲ. ಅಕ್ಕ ಪಕ್ಕದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿರಲಿಲ್ಲ. ಬದಲಾಗಿ ಆಡಿಕೊಳ್ಳುತ್ತಿದ್ದರು, ಛೇಡಿಸುತ್ತಿದ್ದರು. ಶಿಕ್ಷಕರು ನಮ್ಮ ತಂದೆ ತಾಯಿಗಳಿಗೆ ಸಲಹೆ ಕೊಟ್ಟರು: “ದಯವಿಟ್ಟು ನಿಮ್ಮ ಮಗುವನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ. ನಿಮ್ಮ ಮಗಳ ಭವಿಷ್ಯ ಉತ್ತಮವಾಗುತ್ತದೆ”.

    ನಮ್ಮ ತಂದೆ-ತಾಯಿ ಅಂದು ತೆಗೆದುಕೊಂಡ ನಿರ್ಧಾರ ನನ್ನ ಜೀವನದ ದಿಕ್ಕೇ ಬದಲಾಯಿಸಿತು. ಅವರು ಹೀಗೆ ಉತ್ತರಿಸಿದರು:- “ನೋಡಿ ಸರ್, ನಮ್ಮ ಮಗಳು ಹೇಗಾದರೂ ಇರಲಿ, ನಮ್ಮ ಕಣ್ಣ ಮುಂದೆ ಬೆಳೆಯ ಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಅವಳಿಂದ ನಾವು ಯಾವ ನಿರೀಕ್ಷೆಯೂ ಮಾಡಲ್ಲ. ಅವಳು ನಮ್ಮನ್ನು ಸಾಕಬೇಕೆಂದು ನಾವು ಬಯಸುವುದಿಲ್ಲ. ನಾವು ಬದುಕಿರುವವರೆಗೂ ಕೊನೆಯವರೆಗೂ ನಾವು ಅವಳನ್ನು ನೋಡಿಕೊಳ್ಳುತ್ತೇವೆ. ಕಷ್ಟನೋ ಸುಖನೋ ನಮ್ಮ ಮಗು ನಮ್ಮ ಜೊತೆಯೇ ಇರಲಿ” ಎಂದು ಉತ್ತರಿಸಿ ಮನೆಯ ಕಡೆ ಹೆಜ್ಜೆ ಹಾಕಿದರು. ಅಕ್ಕ ಪಕ್ಕದ ಮನೆಯವರ ಚುಚ್ಚು ಮಾತುಗಳಿಗೂ ಆಹಾರವಾದರು. “ಅಯ್ಯೋ ಪಾಪ, ಈ ಮಗು ನಾ ಅವರ ತಂದೆ ತಾಯಿ ಸಾಯೋವರೆಗೂ ಸಾಕಬೇಕಲ್ಲ!” ಎಂದು ಜನರೆಲ್ಲ ಆಡಿಕೊಂಡು ನಗುತ್ತಿದ್ದರು.

    ಇದನ್ನೆಲ್ಲ ಮೌನವಾಗಿ ಗಮನಿಸುತ್ತಿದ್ದ ನನಗೂ ನಾನೇಕೆ ನನ್ನ ಅಪ್ಪ ಅಮ್ಮನಿಗೆ ಹೊರೆಯಾಗಿರಬೇಕು ನಾನೂ ಸಹ ಓದಬೇಕು ಏನಾದರೂ ಮಾಡಬೇಕು ಎಂಬ ಆಲೋಚನೆ ಉಂಟಾಯಿತು. ತರಗತಿಯಲ್ಲಿ ಶಿಕ್ಷಕರು ಸರತಿಯ ಸಾಲಿನಲ್ಲಿ ಎಲ್ಲರನ್ನೂ ಓದಿಸುತ್ತಿದ್ದರು. ನನ್ನ ಸರದಿ ಬಂದಾಗ ನಿನ್ನ ಕೈಲಾಗಲ್ಲಮ್ಮ ಕಷ್ಟ ಆಗುತ್ತೆ ಕುಳಿತುಕೋ ಎಂದು ಕೂರಿಸಿಬಿಡುತ್ತಿದ್ದರು. ಅದಕ್ಕೆ ಕಾರಣ ಶಿಕ್ಷಕರಿಗೆ ನನ್ನ ಮೇಲಿರುವ ಕಾಳಜಿಯೋ ಅನುಕಂಪವೋ ತಿಳಿಯದು. ನಂತರದ ದಿನಗಳಲ್ಲಿ ಸ್ವತಃ ನಾನೇ ಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. ಕಾರಣ ಅಪ್ಪ ಅಮ್ಮ ಅಷ್ಟೇನೂ ಓದಿಲ್ಲ. ಅಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರು (ಈಗ ನಿವೃತ್ತರು).

    ಅಮ್ಮ ಗೃಹಿಣಿ, ನಾನೇ ಮೊದಲ ಮಗು ಆಗಿದ್ರಿಂದ ಹೇಳಿಕೊಡುವವರಾರೂ ಇರಲಿಲ್ಲ. ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಕಲಿತ ನಾನು ಸರದಿಯ ಸಾಲಿನಲ್ಲಿ ನನ್ನ ಸರದಿ ಬಂದಾಗ ನಾನೇ ಎದ್ದು ನಿಂತೆ ಎಂದಿನAತೆ ನನ್ನ ಶಿಕ್ಷಕರು ಕೂರಲು ಹೇಳಿದರು. ಆಗ ನಾನು ಹೇಳಿದೆ, “ಸರ್. ನಾನೂ ಓದುತ್ತೇನೆ, ತಪ್ಪಿದ್ದರೆ ತಿಳಿಸಿ ಸರಿ ಇದ್ದರೆ ಓದಲು ಅವಕಾಶ ಕೊಡಿ” ಎಂದೆ. ಅಂದೇ ನನಗೆನಿಸಿದ್ದು, “ಅನುಕಂಪ ಬೇಡ, ಅವಕಾಶ ಕೊಡಿ” ಎಂದು. ಗುರುಗಳು ಓದಲು ತಿಳಿಸಿದರು. ಕನ್ನಡ ಪಾಠ ಓದಿದೆ. ನಂತರ ಇತರೆ ವಿಷಯಗಳನ್ನು ಓದಲು ಹೇಳಿದರು ಅವುಗಳನ್ನೂ ಓದಿದೆ. ಆಗ ಶಿಕ್ಷಕರೆಲ್ಲ ಒಟ್ಟಿಗೆ ಒಂದೆಡೆ ಸೇರಿ ಇವಳೂ ಸಹ ಓದಬಲ್ಲಳು. ಪ್ರೋತ್ಸಾಹದ ಅಗತ್ಯವಿದೆ. ಎಂದರಿತ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ೬ನೇ ತರಗತಿಯಿಂದ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಆಟಕ್ಕೆಂದು ಹೋದರೆ ಸಹಪಾಠಿಗಳಿಂದ ಹೀಯಾಳಿಕೆಗೊಳಗಾಗಬೇಕಿತ್ತು. ಕುರುಡಿ ಎಂದು ಆಡಿಕೊಳ್ಳುತ್ತಿದ್ದರು. ಭಯದಿಂದಲೇ ಶಾಲೆಯ ಆಟದ ಮೈದಾನದಲ್ಲಿರಬೇಕಿತ್ತು. ಶಾಲೆ ಬಿಟ್ಟ ನಂತರ ಮನೆ ಕಡೆ ಹೋಗ್ತಾ ಇದ್ರೆ ಕಲ್ಲಲ್ಲೆಲ್ಲ ಹೊಡೆಯೋರು. ೭ನೇ ತರಗತಿಯಲ್ಲಿ ಅನುತ್ತೀರ್ಣವಾಗಲು ಕಾರಣ ಗಣಿತದ ಲೆಕ್ಕಗಳು ಕಪ್ಪು ಹಲಗೆಯ ಮೇಲೆ ಕಾಣದಿರುವುದು. ನಂತರ ಕಷ್ಟಪಟ್ಟು ಅಭ್ಯಾಸ ಮಾಡಿ ಪರೀಕ್ಷೆ ೭ನೇ ತರಗತಿ ಪಾಸಾದೆ. ಪ್ರೌಢ ಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು, ವಿಜ್ಞಾನದ ಚಿತ್ರಗಳು, ಸಮಾಜ ವಿಜ್ಞಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಪ್ರೌಢ ಶಾಲೆಯಲ್ಲಿ ನಾನು ಮೊದಲ ಬೆಂಚಿನ ಮೊದಲ ವಿದ್ಯಾರ್ಥಿನಿ. ಹಾಗಿದ್ದರೂ ಸಹ ಕಪ್ಪು ಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ. ನಮ್ಮ ಶಿಕ್ಷಕರು ಈ ವಿಚಾರದಲ್ಲಿ ಬಹಳ ಸಹಕಾರ ಕೊಟ್ಟರು. ಅವರು ಹೇಳಿಕೊಂಡೇ ಪಾಠಗಳ ನೋಟ್ಸ್ ಅನ್ನು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ನಾನೂ ಸಹ ಅದನ್ನು ಆಲಿಸುವುದರ ಮೂಲಕ ವೇಗವಾಗಿ ಬರೆದುಕೊಳ್ಳುತ್ತಿದ್ದೆ. ಶಾಲೆಯಲ್ಲಿ ನಡೆಯುವ ಯಾವುದೇ ಸಂಗತಿಗಳನ್ನು ಮನೆಯಲ್ಲಿ ಅಪ್ಪ ಅಮ್ಮನಿಗೆ ಹೇಳುತ್ತಿರಲಿಲ್ಲ. ಎಲ್ಲಿ ನನಗೆ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂಬ ಭಯ ಕಾಡುತ್ತಿತ್ತು. ಆಟಕ್ಕೆ ಹೋಗದೆ ಕೇವಲ ಪಾಠಗಳ ಅಭ್ಯಾಸವನ್ನೇ ಮಾಡುತ್ತಿದ್ದೆ. ಜನಪದ ಗೀತೆ, ಭಾವಗೀತೆ, ಪ್ರಬಂಧ ರಚನೆ, ಏಕಪಾತ್ರಾಭಿನಯ ಹೀಗೆ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದೆ. ನನ್ನ ಶಿಕ್ಷಕರೂ ಸಹ ಪ್ರೋತ್ಸಾಹಿಸುತ್ತಿದ್ದರು. ನನ್ನ ಪೋಷಕರು ಶಾಲೆ ದೂರ ಇದ್ದರೆ ಓಡಾಟ ಕಷ್ಟ ಎಂದು ಮನೆಯ ಹತ್ತಿರವೇ ಇದ್ದ ಅನುದಾನಿತ ಶಾಲೆಗಳಲ್ಲಿ ಓದಿಸಿದರು. ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ಕಾಲೇಜು ಶಿಕ್ಷಣಕ್ಕಾಗಿ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿಗೆ ಸೇರಿಸಿದರು. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಬೇಕೆಂದು ನನಗೆ ಆಸೆ ಇತ್ತು. ಆದರೆ ಅಲ್ಲಿನ ಆಡಳಿತಾಧಿಕಾರಿಗಳು ಕೊಡಲು ನಿರಾಕರಿಸಿದರು. ಅವರು ಕೊಡುವ ಕಾರಣ ಹೀಗಿದೆ: “ನೋಡಮ್ಮ, ವಿಜ್ಞಾನÀ ವಿಭಾಗಕ್ಕೆ ಸೇರಿಸಿಕೊಳ್ಳೋದಕ್ಕೆ ನಮಗೇನೂ ತಕರಾರಿಲ್ಲ ನಿನಗೆ ಅರ್ಹತೆಯೂ ಇದೆ. ಆದರೆ ಮಾನವೀಯತೆ ದೃಷ್ಟಿಯಿಂದ ನಾವು ನಿನಗೆ ಕೊಡುವುದಿಲ್ಲ. ದೈಹಿಕವಾಗಿ ಸದೃಢರಾಗಿರುವವರೇ ಕಣ್ಣಿನಲ್ಲಿ ಆಸಿಡ್ ಎಲ್ಲ ಚೆಲ್ಲಿಕೊಂಡ ಉದಾಹರಣೆಗಳಿವೆ. ದಯವಿಟ್ಟು ಕ್ಷಮಿಸು. ನೀನು ಕಲಾವಿಭಾಗ ಆರಿಸಿಕೊಂಡು ಅಧ್ಯಯನ ಮಾಡುವುದೇ ಸರಿ” ಎಂದು ಹೇಳಿದರು. ಬೇರೆ ಬೇರೆ ಖಾಸಗಿ ಶಾಲೆಗಳಿಗೂ ಹೋಗಿ ಕೇಳಿದೆ. ಅಲ್ಲಿಯೂ ನನಗೆ ವಿಜ್ಞಾನ ವಿಭಾಗಕ್ಕೆ ಸೇರಲು ಅವಕಾಶ ಕೊಡಲಿಲ್ಲ. ಕಡೆಗೆ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ ಕಲಾ ವಿಭಾಗದಲ್ಲಿಯೇ ಅಭ್ಯಾಸ ಮಾಡಿದೆ. ಕಾಲೇಜು ಸ್ವಲ್ಪ ದೂರ ಹಾಗಾಗಿ ಮನೆಯ ಹತ್ತಿರವೇ ಇದ್ದ ನನ್ನ ಸಹಪಾಠಿಗಳ ಜೊತೆಯಲ್ಲಿಯೇ ಕಾಲೇಜಿಗೆ ಹೋಗುತ್ತಿದ್ದೆ. ಎಲ್ಲವೂ ಥಿಯರಿಯೇ ಇದ್ದಿದ್ದರಿಂದ ನನಗಲ್ಲಿ ಸಮಸ್ಯೆಯಾಗಲಿಲ್ಲ. ಆದರೆ ಇಂಗ್ಲಿಷ್ ವ್ಯಾಕರಣ ಹೇಳಿಸಿಕೊಳ್ಳಲು ನಮ್ಮ ಸಹಪಾಠಿಗಳ ಜೊತೆ ಇಂಗ್ಲಿಷ್ ಉಪನ್ಯಾಸಕರ ಮನೆಗೆ ಹೋಗಿ ಹೇಳಿಸಿಕೊಳ್ಳುತ್ತಿದ್ದೆವು. ಪ್ರೌಢಶಾಲಾ ಹಂತದಲ್ಲೂ ಶಿಕ್ಷಕರ ಮನೆಗೆ ಹೋಗಿ ಹೇಳಿಸಿಕೊಂಡ ಉದಾಹರಣೆಗಳಿವೆ. ಪಿಯುಸಿಯಲ್ಲಿ ನಿರಾತಂಕವಾಗಿ ಓದಿ ದ್ವಿತೀಯ ಪಿ.ಯು.ಸಿ.ಯನ್ನು ಉತ್ತಮ ಅಂಕಗಳೊAದಿಗೆ ಉತ್ತೀರ್ಣವಾದ ನಂತರ ಮುಂದೇನು ಎಂಬ ಚಿಂತೆ ಉಂಟಾಯಿತು. ಆಗ ಅಲ್ಲಿದ್ದ ಒಬ್ಬರು ಉಪನ್ಯಾಸಕರು ಐಚ್ಛಿಕ ಕನ್ನಡ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನಾರಿಸಿಕೊಂಡು ಬಿಎ ಅಭ್ಯಾಸ ಮಾಡಲು ಸಲಹೆ ಕೊಟ್ಟರು ಅದರಂತೆ ಪದವಿ ಕಾಲೇಜಿಗೆ ಸೇರಿದೆ ಅಲ್ಲಿ ನನಗೆ ಮೊದಲು ಪರಿಚಯವಾದವರು ಕನ್ನಡದ ಪ್ರೊಫೆಸರ್. ಎಂಟನೆಯ ತರಗತಿಯಿಂದಲೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ನನ್ನ ಬರವಣಿಗೆಗೆ ಮತ್ತಷ್ಟು ಪ್ರೋತ್ಸಾಹ ಅಲ್ಲಿ ನನಗೆ ದೊರೆಯಿತು. ಪದವಿ ತರಗತಿಯನ್ನೂ ಸಹ ಪೂರ್ಣಗೊಳಿಸಿದ ನಂತರ ಬಿಎಡ್‌ಗೆ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ಬರೆದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆಯಿತು ವಿವೇಕಾನಂದ ಬಿ.ಎಡ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ದೊರೆಯಿತು. ಇಷ್ಟೇ ಕೋನಮಿತಿಯಲ್ಲಿ ಪುಸ್ತಕ ಹಿಡಿಯಬೇಕು ಓದುಗಾರಿಕೆ ಕೌಶಲದಲ್ಲಿ ಎಂಬುದು ನಿಯಮ. ನನಗೆ ಅದು ಸಾಧ್ಯವಾಗುವುದಿಲ್ಲ ಕಣ್ಣಿಗೆ ತುಂಬಾ ಸಮೀಪ ಹಿಡಿದುಕೊಂಡರಷ್ಟೇ ಕಾಣುವುದು. ಸ್ವಲ್ಪ ಅಂತರವಿದ್ದರೂ ಕಾಣುವುದಿಲ್ಲ. ಕನ್ನಡ ಮೆಥೇಡ್ ಬೋಧಿಸುವ ಶಿಕ್ಷಕರ ಬಳಿ ನನ್ನ ಅಳಲನ್ನು ತೋಡಿಕೊಂಡೆ. ನಿನಗೆ ಆಸಕ್ತಿ ಇದ್ಯಲ್ಲ ಅದು ಮೆಚ್ಚುವಂಥದ್ದೆ. ನಿನ್ನಂತಹ ಕೆಲವು ಪ್ರಕರಣಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಧೈರ್ಯವಾಗಿ ನಿನ್ನ ಅಧ್ಯಯನ ಮುಂದುವರೆಸು ಎಂದು ಹೇಳಿದರು. ನಾನು ಓದಿದ ಪ್ರೌಢಶಾಲೆಗೆ ನನಗೆ ಬೋಧನಾಭ್ಯಾಸಕ್ಕೆ ನಿಯೋಜಿಸಿದರು. ವಿಶಿಷ್ಟವಾದ ಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವ ನನ್ನ ಕಾಯಕ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಯಿತು ಪರಿಸರ ಪಾಠಕ್ಕೆ ಸಂಬAಧಿಸಿದAತೆ ಬೇರೆ ಬೇರೆ ದಿನಪತ್ರಿಕೆಯಲ್ಲಿನ ಪರಿಸರಸಂಬAಧಿ ಭಾವಚಿತ್ರಗಳನ್ನು ಕತ್ತರಿಸಿ ಡ್ರಾಯಿಂಗ್ ಚಾರ್ಟ್ಗೆ ಅಂಟಿಸಿ ಮಾಹಿತಿಗಳನ್ನು ಕೆಳಗೆ ಬರೆದುಕೊಂಡು ಹೋಗಿದ್ದೆ. ಉಪನ್ಯಾಸಕರು ಅದನ್ನು ಮೆಚ್ಚಿಕೊಂಡೇ ಅವರೇ ಸನ್ನಿವೇಶಗಳನ್ನು ವಿವರಿಸಿದರು. ಬಿಎಡ್ ವ್ಯಾಸಂಗ ಮುಗಿದ ನಂತರ ಯಾವ ಖಾಸಗಿ ಶಾಲೆಯವರೂ ನನಗೆ ಬೋಧನೆಗೆ ಅವಕಾಶ ಕೊಟ್ಟಿಲ್ಲ. ಟ್ಯುಟೋರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದೆ ಅಷ್ಟೆ. ನನ್ನ ಪರಿಸ್ಥಿತಿ ನೋಡಿ ಇವಳಿಂದೇನಾಗುತ್ತೆ ಎಂದು ಯಾವ ಖಾಸಗಿ ಶಾಲೆಯವರೂ ಸಹ ನನಗೆ ಬೋಧನೆಗೆ ಅವಕಾಶ ಕೊಡಲು ಸಿದ್ದವಿರಲಿಲ್ಲ. ಹೀಗಿರುವಾಗ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರೆ ಕೊಟ್ಟಿತು. ನಾನು ಸತತವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯೂ ಆದೆ. ನಾನು ಬರೆದ ಎಲ್ಲ ಪರೀಕ್ಷೆಗಳು ಸಾಮಾನ್ಯ ವಿದ್ಯಾರ್ಥಿಯಾಗಿಯೇ ಬರೆದದ್ದು.. ನನ್ನ ಶಿಕ್ಷಕರ ಒತ್ತಾಯಕ್ಕೆ ಮಣಿದು ಅಂಗವಿಕಲರ ಪ್ರಮಾಣಪತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಗತ್ತಿಸಿದ್ದೆ. ಆಯ್ಕೆಯಾದ ನಂತರ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯ ಆರ್‌ಎಂಎಸ್‌ಎ ಶಾಲೆಗೆ ಕನ್ನಡ ಭಾಷಾ ಶಿಕ್ಷಕಿಯಾಗಿ ವರದಿ ಮಾಡಿಕೊಂಡೆ. ಪ್ರಾರಂಭದಲ್ಲಿ ನನಗೆ ಇಲ್ಲಿಯೂ ಕಷ್ಟವಾಯಿತು. ಇಲ್ಲೂ ಸಹ ಎಲ್ಲರ ಹೀಯಾಳಿಕೆ ಹೀಗಳಿಕೆಗೆ ಗುರಿಯಾಗಬೇಕಾಯಿತು. ವಿದ್ಯಾರ್ಥಿಗಳಾದಿಯಾಗಿ ಎಲ್ಲರ ಅಪಹಾಸ್ಯ ಬೈಗುಳಗಳಿಗೆ ಗುರಿಯಾಗಬೇಕಾಯಿತು. ನಾನು ಪಾಠ ಓದಲು ಪ್ರಾರಂಭಿಸಿದರೆ ಎಲ್ರೂ ನಗಾಡುವುದು ಕಿರುಚುವುದು ನಿತ್ಯದ ಚಟುವಟಿಕೆಯಾಗಿತ್ತು. ನನ್ನ ಕೆಲಸ ನನಗೆ ಎಷ್ಟೇ ಕಷ್ಟವಾದರೂ ನಾನೇ ಅದನ್ನು ಪೂರ್ಣಗೊಳಿಸಬೇಕಿತ್ತು. ಪಾಠ ಬೋಧನೆಯ ಜೊತೆಗೆ ತರಗತಿ ಶಿಕ್ಷಕಿ ಎನ್ನುವ ಜವಾಬ್ದಾರಿಯೂ ಹೆಗಲೇರಿತ್ತು. ಪಾಠ ಮಾಡುವುದೇ ದುಸ್ತರವಾಗಿದ್ದಾಗ ಹೆಚ್ಚುವರಿ ಕೆಲಸಗಳ ಭಾರ ಸಾಕಷ್ಟು ಒತ್ತಡ ಉಂಟು ಮಾಡುತ್ತಿತ್ತು. ಇಲ್ಲಿ ಕನ್ನಡ ಕಲಿಸುವುದು ಸವಾಲಿನ ಕೆಲಸ. ಕಾರಣ ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ತೆಲುಗು, ತಮಿಳು ಮಾತೃಭಾಷಿಕರು. ಆಂಗ್ಲ ಮಾಧ್ಯಮ ಶಾಲೆ. ಪಾಠ ಓದುವಾಗ ವಿದ್ಯಾರ್ಥಿಗಳ ನಗು. ಇದರಿಂದ ತಪ್ಪಿಸಿಕೊಳ್ಳಲು ಪಾಠಗಳೆಲ್ಲ ಕಂಠಪಾಠ ಮಾಡಿಕೊಂಡೆ. ಎಲ್ಲಿ ನಿಲಿಸಿದರೆ ಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಳ್ಳಬೇಕಿತ್ತು. ಈ ಮಾರ್ಗ ಕಂಡುಕೊAಡ ಮೇಲೆ ವಿದ್ಯಾರ್ಥಿಗಳ ಅಪಹಾಸ್ಯ ನಿಂತು ಹೋಯಿತು. ನಂತರದಲ್ಲಿ ವ್ಯಾಕರಣ ಬೋಧನೆಗೆ ಕಪ್ಪು ಹಲಗೆಯ ಮೇಲೆ ಬರೆಯಲೇಬೇಕಿತ್ತು ಹಾಗಾಗಿ ನಾನು ಪ್ರತಿಯೊಂದು ವ್ಯಾಕರಣಾಂಶಗಳಿಗೂ ಮಾದರಿಗಳನ್ನು ತಯಾರಿಸಿಕೊಂಡೆ ಅದರ ಮೂಲಕ ಬೋಧನೆ ಮಾಡಲು ಪ್ರಾರಂಭಿಸಿದೆ. ಬೋಧನಾ ವಿಧಾನ ಉತ್ತಮ ಫಲಿತಾಂಶ ಉಂಟು ಮಾಡಿದರೆ ಅದನ್ನು ಮುಂದುವರೆಸುತ್ತಿದ್ದೆ ಇಲ್ಲವಾದಲ್ಲಿ ಬೇರೆ ವಿಧಾನ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದ್ದೆ. ಹೇಗೆ ನಾನು ಸಂದರ್ಶನ ಮಾದರಿ ವಿಧಾನ, ನಾಟಕ ಅಭಿನಯ ವಿಧಾನ, ಮಾದರಿಯೊಂದಿಗೆ ಬೋಧನೆ, ಉಪನ್ಯಾಸ ವಿಧಾನ, ಚರ್ಚಾ ವಿಧಾನ ಹೀಗೆ ಬೇರೆ ಬೇರೆ ವಿಧಾನಗಳ ಮೂಲಕ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತೇನೆ. ಕಳೆದ ನಾಲ್ಕೂ ಎಸ್‌ಎಸ್‌ಎಲ್‌ಸಿ ಬ್ಯಾಚ್‌ಗಳಲ್ಲಿ ಎರಡು ಬ್ಯಾಚ್ ಕನ್ನಡದಲ್ಲಿ ಶೇಕಡ ೧೦೦ ಫಲಿತಾಂಶ ಬಂದಿರುತ್ತದೆ. ಉಳಿದೆರಡು ಬ್ಯಾಚ್ ೯೮.೫. ಶೇ ಫಲಿತಾಂಶ ಬಂದಿರುತ್ತದೆ. ಕಳೆದ ಬಾರಿ ೧೦೦ಕ್ಕೆ ೧೦೦ ಮೂರು ವಿದ್ಯಾರ್ಥಿನಿಯರು ಪಡೆದಿರುತ್ತಾರೆ. ಅವರಿಗೆ ನನ್ನ ಸ್ವಂತ ಖಾತೆಯಿಂದ ೧೦೦೦ ರೂ. ನಗದು ಹಾಗು ಪದಕವನ್ನಿತ್ತು ಮುಖ್ಯಶಿಕ್ಷಕರ ಮೂಲಕ ಗೌರವಿಸಲಾಯಿತು. ಮಕ್ಕಳಿಗೆ ಬೇರೆ ಬೇರೆ ಪುಸ್ತಕಗಳನ್ನು ಓದಿಸಿ ಬರೆಸುವ ಆಲೋಚನೆ ಇದೆ.. ಇದರಿಂದ ಓದುವ ಹವ್ಯಾಸ ಬೆಳೆಸಬಹುದು.

    ನಮ್ಮ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಂದಿನ ತಿಂಗಳಿAದ ಗೋಡೆ ಪತ್ರಿಕೆ ಹೊರ ತರುವ ಉದ್ದೇಶವಿತ್ತು. ಅವುಗಳನ್ನು ಸಾಕಾರಗೊಳಿಸಬೇಕೆನ್ನುವಷ್ಟರಲ್ಲಿ ನನ್ನ ತವರು ಜಿಲ್ಲೆಯಾದ ಹಾಸನ ಜಿಲ್ಲೆಗೆ ವರ್ಗವಾಯಿತು. ೧೯ ಅಕ್ಟೋಬರ್ ೨೦೧೯ರಲ್ಲಿ ನಾನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣ ಬೆಳಗೊಳ ಹೋಬಳಿಗೆ ಸೇರಿದ ಜುಟ್ಟನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ವರದಿ ಮಾಡಿಕೊಂಡೆ. ಇನ್ನೇನು ಮಕ್ಕಳೊಂದಿಗೆ ಬೆರೆಯಬೇಕು ಹೊಂದಿಕೊಳ್ಳಬೇಕು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕೆನ್ನುವ ಯೋಜನೆಗಳನ್ನು ರೂಪಿಸುವಾಗಲೇ ಕೊರೋನ ಎಂಬ ಪೆಡಂಭೂತ ಅಡ್ಡಿಯಾಯಿತು. ದೇಶದಾದ್ಯಂತ ಲಾಕ್ ಡೌನ್. ಆ ಎರಡು ವರ್ಷಗಳು ಏನೂ ಮಾಡಲಾಗದ ಅಸಹಾಯಕತೆ. ಆನ್ ಲೈನ್ ತರಗತಿಗಳನ್ನು ಮಾಡೋಣ ಎಂದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದರು. ಮೊದಲೇ ಅಲ್ಲಿನ ಶಾಲೆಗೆ ಪ್ರಯಾಣಿಸುವುದೇ ನನಗೆ ಸವಾಲಿನ ಕೆಲಸ. ಅರಸೀಕೆರೆಯಿಂದ ಚನ್ನರಾಯಪಟ್ಟಣ, ಚನ್ನರಾಯಪಟ್ಟಣದಿಂದ ಹಿರೀಸಾವೆ, ಹಿರೀಸಾವೆಯಿಂದ ಜುಟ್ಟನಹಳ್ಳಿ ಹೀಗೆ ಮೂರು ವಾಹನಗಳನ್ನು ಬಳಸಿ ಅರಸೀಕೆರೆಯಿಂದ ನೂರು ಕಿ.ಮೀ ದೂರದಲಿರುವ ಶಾಲೆಗೆ ಹೋಗಿ ಅಧ್ಯಯನ ಅಧ್ಯಾಪನದಲಿ ತೊಡಗಿಸಿಕೊಳ್ಳಬೇಕಿತ್ತು. ನಾವು ಶಾಲೆ ತಲುಪಿ ಅಲ್ಲಿಂದ ಮಕ್ಕಳಿರುವ ಹಳ್ಳಿಗಳಿಗೇ ಹೋಗಿ ಬೋಧನೆ ಮಾಡತೊಡಗಿದೆವು. ಅಲ್ಲಿ ಲಾಕ್ ಡೌನಿದ್ದದ್ರಿಂದ ವಾಹನ ವ್ಯವಸ್ಥೆ ಇರಲಿಲ್ಲ. ದಿನಕೆ ಐನೂರರಿಂದ ಆರು ನೂರು ರೂಪಾಯಿಗಳು ಆಟೊ ಬಾಡಿಗೆ ಕೊಡಬೇಕಿತ್ತು. ಈಗಲೂ ಹಾಗೆಯೇ. ಬೆಳಗಿನ ಜಾವ ಆರು ಗಂಟೆ ಬಸ್ಸಿಗೆ ಹೊರಟರೆ ಮನೆ ತಲುಪುವುದು ಸಂಜೆ ಏಳೂವರೆ ಎಂಟು ಗಂಟೆಯೂ ಆಗಿ ಬಿಡುತ್ತದೆ. ಶಾಲೆಯಲ್ಲಿ ಬಿಡುವಿಲ್ಲದ ತರಗತಿಗಳು. ಹಾಗಾಗಿ ಶಾಲೆಯ ಇತರೆ ಕೆಲಸಗಳನ್ನೆಲ್ಲ ಮನೆಗೇ ಹೊತ್ತು ತಂದು ಮಾಡಿ ಕೊಳ್ಳುವೆ. ಶಾಲೆಯಲ್ಲಿ ನನಗೆ ಸಂಪೂರ್ಣ ಸಹಕಾರವಿದೆ ಆದರೂ ಪ್ರಯಾಣವೇ ನನ್ನ ಪಾಲಿಗೆ ಸವಾಲಿನ ಸಂಗತಿ. ಪ್ರತಿ ದಿನ ಇನ್ನೂರು ಕಿ.ಮೀ ಪ್ರಯಾಣದ ಕಾರಣ ಆರು ಗಂಟೆಗಳು ಪ್ರಯಾಣದಲ್ಲಿಯೇ ಕಳೆದು ಹೋಗುತ್ತದೆ. ಶಾಲೆಯಿಂದ ಅರಸೀಕೆರೆಗೆ ಬಂದ ನಂತರ ಸಂಗೀತ ಹಾಗೂ ವೀಣೆ ತರಗತಿಗೆ ಹೋಗಿ ಮನೆಗೆ ಬರುವುದು ರಾತ್ರಿ ಎಂಟು ಗಂಟೆ. ಮನೆಗೆ ಬಂದ ನಂತರ ಶುಭ್ರವಾಗಿ ಊಟ ಮುಗಿಸಿ ಸಂಗೀತ ಅಭ್ಯಾಸ, ವೀಣೆ ಅಭ್ಯಾಸ, ಮಾರನೆಯ ದಿನ ತೆಗೆದುಕೊಳ್ಳುವ ತರಗತಿಗಳ ಸಿದ್ದತೆ , ಕವನ, ಲೇಖನ ಬರೆವಣಿಗೆ ನಂತರ ಸರಿಯಾಗಿ ಹನ್ನೆರಡು ಗಂಟೆಗೆ ಡೈರಿ ಬರೆದು ಮಲಗಿದರೆ ಪುನಃ ಏಳುವುದು ಬೆಳಗಿನ ಜಾವ ಮೂರು ಗಂಟೆಗೆ. ಹೀಗಿತ್ತು ನನ್ನ ದಿನಚರಿ. ಆದರೆ ಇತ್ತೀಚೆಗೆ ನನಗೆ ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆಯಾಗಿದೆ. ಕೇವಲ ಮೂವ್ವತ್ತೆರಡು ಕಿ.ಮೀ. ದೂರ ಇರುವ ಶಾಲೆ. ಒಟ್ಟು ಅರವತ್ನಾಲ್ಕು ಕಿ.ಮೀ. ಪ್ರಯಾಣ. ಒಂದೂವರೆ ಗಂಟೆಯಷ್ಟೆ ಪ್ರಯಾಣದ ಅವಧಿ. ನನ್ನ ಸೃಜನಶೀಲ ಕೆಲಸಗಳಿಗೊಂದಷ್ಟು ಸಮಯ ದೊರಕಿತೆಂದೇ ಹೇಳಬಹುದು. ಹೀಗೆ ಬೆಳಗಿನ ಜಾವ ಮೂರು ಗಂಟೆಗೆ ಎದ್ದರೆ ಮಲಗುವುದು ರಾತ್ರಿ ಹನ್ನೆರಡು ಗಂಟೆಗೆ. ನನಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಹ ಸಾಲದಾಗಿತ್ತು. ಒತ್ತಡದ ನಡುವೆ ಒಂದಿಷ್ಟು ಉಲ್ಲಾಸ ಉತ್ಸಾಹ ತಂದು ಕೊಡುವುದು ನನಗೆ ಸಂಗೀತ ಹಾಗೂ ಸಾಹಿತ್ಯ. ಹಾಗಾಗಿ ಸಪ್ತಸ್ವರ ನಾದ ಮಂದಿರದ ನನ್ನ ಪೂಜ್ಯ ಗುರುಗಳಾದ ವಿದೂಷಿ ಶ್ರೀ ಮತಿ ವೀಣಾ ಮೇಡಮ್ ಬಳಿ ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ವೀಣೆಯನ್ನು ಅಭ್ಯಸಿಸುತಿರುವೆ. ಸಾಹಿತ್ಯ ಸೃಷ್ಟಿಯೂ ಜೊತೆ ಜೊತೆಗೆ ಸಾಗುತ್ತಲಿದೆ. ಹೀಗೆ ವೃತ್ತಿ ಪ್ರವೃತ್ತಿ ಎಂದು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ನನಗೆ ಅತಿ ಹೆಚ್ಚು ಖುಷಿ ಕೊಡುವ ಕ್ಷಣಗಳೆಂದರೆ ಅದು ನನ್ನ ವಿದ್ಯಾರ್ಥಿಗಳೊಂದಿಗೆ ಕಳೆಯುವ ಕ್ಷಣಗಳು. ಕಲಿತು ಕಲಿಸುವ ತತ್ವವನ್ನು ನನ್ನೊಳಗೆ ಅಳವಡಿಸಿಕೊಂಡಿರುವುದರಿAದ ನಿರಂತರ ಕಲಿಕಾರ್ಥಿಯಾಗಿದ್ದೇನೆ. 

    ವೈದ್ಯೆಯಾಗಬೇಕೆಂಬ ಕನಸು ನನಸಾಗಲಿಲ್ಲವಾದರೂ ಇಂದು ನನ್ನ ವಿದ್ಯಾರ್ಥಿಗಳು ಸಾಕಷ್ಟು ಜನ ವೈದ್ಯಕೀಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ನನ್ನ ಸಂಪರ್ಕದಲ್ಲಿರುವುದು ಹೆಮ್ಮೆಯ ಸಂಗತಿ.

    “ಹರ ಕೊಲ್ಲಲ್ ಗುರು ಕಾಯ್ವರು” ಎಂಬ ನಾಣ್ಣುಡಿಯಂತೆ ನನ್ನ ಪಾಲಿಗೆ ನನ್ನನ್ನು ಅನವರತ ಪ್ರೋತ್ಸಾಹಿಸುವ ಪ್ರೇರೇಪಿಸುವ ಪ್ರತಿಯೊಬ್ಬರೂ ಕೂಡ ಗುರು ಸಮಾನರೇ ಇವು ಕೇವಲ ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಕಿಯಾಗಿ ನನ್ನ ಅನುಭವ. 

    ಬೋಧನೆಗೆ ಯಾವ ಖಾಸಗೀ ಶಾಲೆಯೂ ಅವಕಾಶ ಕೊಡದಿದ್ದ ಸಂದರ್ಭದಲ್ಲಿ ಸರ್ಕಾರ ನನಗೆ ಇಂಥ ಸುವರ್ಣಾವಕಾಶ ಕೊಟ್ಟಿದೆ. ಶಿಕ್ಷಕಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಅಮ್ಮನ ಕನಸು ಸಾಕಾರಗೊಳಿಸಿದ ಖುಷಿ ಇದೆ ನನಗೆ.

    ಧನ್ಯವಾದಗಳು ಮಾನ್ಯರೇ, ಗೌರವಾನ್ವಿತರೇ, ಬಂಧುಗಳೇ.

    ಕು.ಹರ್ಷಿಯಾ ಭಾನು

    ಕನ್ನಡ ಭಾಷಾ ಶಿಕ್ಷಕಿ

    ಸರ್ಕಾರಿ ಪ್ರೌಢಶಾಲೆ

    ಸಾತೇನಹಳ್ಳಿ

    ದಂಡಿಗನಹಳ್ಳಿ ಹೋಬಳಿ

    ಚನ್ನರಾಯಪಟ್ಟಣ ತಾಲೂಕು

    ಹಾಸನ ಜಿಲ್ಲೆಪಿ£: 573111