Category: ಅಡುಗೆ

  • ಫುಡ್ ಪ್ಯಾಕೆಟ್ ಮೇಲೆ ಇನ್ಮುಂದೆ ‘ಹೈಡ್ ಅಂಡ್ ಸೀಕ್’ ಆಟ ನಡೆಯಲ್ಲ: 
ಗ್ರಾಹಕರಿಗಾಗಿ ಬದಲಾಗಲಿದೆ ನಿಯಮ!

    ಫುಡ್ ಪ್ಯಾಕೆಟ್ ಮೇಲೆ ಇನ್ಮುಂದೆ ‘ಹೈಡ್ ಅಂಡ್ ಸೀಕ್’ ಆಟ ನಡೆಯಲ್ಲ: ಗ್ರಾಹಕರಿಗಾಗಿ ಬದಲಾಗಲಿದೆ ನಿಯಮ!

    ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ಪೌಷ್ಟಿಕಾಂಶದ ವಿವರಗಳನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಮುಂಭಾಗದಲ್ಲೇ ಪ್ರದರ್ಶಿಸಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಪ್ರಮುಖ ಶಿಫಾರಸು ಮಾಡಿದೆ. ಪ್ರಸ್ತುತ ಹೆಚ್ಚಿನ ಕಂಪನಿಗಳು ಪೌಷ್ಟಿಕಾಂಶದ ಮಾಹಿತಿಯನ್ನು ಪ್ಯಾಕೆಟ್‌ನ ಹಿಂಭಾಗದಲ್ಲಿ ಅತ್ಯಂತ ಸಣ್ಣ ಅಕ್ಷರಗಳಲ್ಲಿ ನೀಡುತ್ತಿದ್ದು, ಇದು ಸಾಮಾನ್ಯ ಗ್ರಾಹಕರಿಗೆ ಓದಲು ಅಥವಾ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿದೆ.

    ಆದ್ದರಿಂದ, ಗ್ರಾಹಕರು ತಾವು ಸೇವಿಸುವ ಆಹಾರದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂಶ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ‘ಫ್ರಂಟ್ ಆಫ್ ಪ್ಯಾಕೇಜ್ ಲೇಬಲಿಂಗ್'(FOPL) ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸಮಿತಿ ಒತ್ತಿ ಹೇಳಿದೆ.

    ​ಜೀವನಶೈಲಿ ಸಂಬಂಧಿತ ಕಾಯಿಲೆಗಳಾದ ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ, ಜನರು ತಾವು ಖರೀದಿಸುವ ಆಹಾರದ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಬಣ್ಣಗಳ ಸಂಕೇತ ಅಥವಾ ಎಚ್ಚರಿಕೆ ಚಿಹ್ನೆಗಳನ್ನು ಬಳಸಿ ಆಹಾರದ ಗುಣಮಟ್ಟವನ್ನು ಪ್ಯಾಕೆಟ್ ಮುಂಭಾಗದಲ್ಲೇ ಗುರುತಿಸುವುದರಿಂದ ಗ್ರಾಹಕರು ಆರೋಗ್ಯಕರ ಆಯ್ಕೆಗಳನ್ನು ಮಾಡಲು ಸಾಧ್ಯವಾಗುತ್ತದೆ.

    ಈ ಬದಲಾವಣೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ಸೂಚಿಸಿದೆ. ಇದು ಕೇವಲ ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದಲ್ಲದೆ, ಆಹಾರ ತಯಾರಿಕಾ ಕಂಪನಿಗಳು ಹೆಚ್ಚು ಪೌಷ್ಟಿಕಾಂಶಯುಕ್ತ ಉತ್ಪನ್ನಗಳನ್ನು ತಯಾರಿಸುವಂತೆ ಪ್ರೇರೇಪಿಸುತ್ತದೆ.

  • ವಿಶ್ವದ ಅತ್ಯಂತ ರುಚಿಕರ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ನಗರವೇ ಫಸ್ಟ್!

    ವಿಶ್ವದ ಅತ್ಯಂತ ರುಚಿಕರ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ನಗರವೇ ಫಸ್ಟ್!

    ಭಾರತೀಯ ಖಾದ್ಯಗಳ ರುಚಿಗೆ ಮನಸೋಲದವರೇ ಇಲ್ಲ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಘಮಘಮಿಸುವ ಮಸಾಲೆ ಮತ್ತು ವೈವಿಧ್ಯಮಯ ಖಾದ್ಯಗಳು ಜನರನ್ನು ತನ್ನತ್ತ ಸೆಳೆಯುತ್ತವೆ.

    ಭಾರತದ ರುಚಿಕರ ನಗರಗಳು ಎಂದ ಕೂಡಲೇ ನಮಗೆ ನೆನಪಾಗುವುದು ಹೈದರಾಬಾದಿನ ಬಿರಿಯಾನಿ ಅಥವಾ ದೆಹಲಿಯ ಚಾಟ್ಸ್. ಆದರೆ ಇವೆಲ್ಲವನ್ನೂ ಹಿಂದಿಕ್ಕಿ ಈಗ ಭಾರತದ ಮತ್ತೊಂದು ನಗರ ಜಾಗತಿಕ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದೆ. ವಿಶ್ವಪ್ರಸಿದ್ಧ ‘ಟೇಸ್ಟ್ ಅಟ್ಲಾಸ್’ ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವದ ಅತ್ಯುತ್ತಮ ಆಹಾರದ ನಗರಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಅಚ್ಚರಿಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

    ​ಈ ಜಾಗತಿಕ ಪಟ್ಟಿಯಲ್ಲಿ ಕೋಲ್ಕತ್ತಾ 24ನೇ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತದ ಅತ್ಯಂತ ರುಚಿಕರ ಆಹಾರದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈ, ಹೈದರಾಬಾದ್ ಮತ್ತು ದೆಹಲಿಯಂತಹ ನಗರಗಳನ್ನು ಕೆಳಕ್ಕೆ ತಳ್ಳಿ ಕೋಲ್ಕತ್ತಾ ಈ ಗೌರವ ಪಡೆದಿರುವುದು ಆಹಾರ ಪ್ರೇಮಿಗಳಲ್ಲಿ ಸಂಭ್ರಮ ತಂದಿದೆ. ಇಲ್ಲಿನ ಸಿಹಿ ತಿಂಡಿಗಳಾದ ರಸಗುಲ್ಲಾ ಮತ್ತು ಮಿಸ್ಟಿ ದೋಯ್ ಮಾತ್ರವಲ್ಲದೆ, ಕಟಿಕಾಬಾಬ್ ಮತ್ತು ಅಲ್ಲಿನ ವಿಶಿಷ್ಟ ಶೈಲಿಯ ಬಿರಿಯಾನಿ ವಿಶ್ವದಾದ್ಯಂತ ಇರುವ ಆಹಾರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

    ​ಕೋಲ್ಕತ್ತಾದ ಜೊತೆಗೆ ಮುಂಬೈ 35ನೇ ಸ್ಥಾನ, ಹೈದರಾಬಾದ್ 39ನೇ ಸ್ಥಾನ ಹಾಗೂ ದೆಹಲಿ ಮತ್ತು ಚೆನ್ನೈ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿಶ್ವದಾದ್ಯಂತ ಇರುವ ಲಕ್ಷಾಂತರ ಪ್ರವಾಸಿಗರ ರೇಟಿಂಗ್ ಮತ್ತು ಸ್ಥಳೀಯ ಖಾದ್ಯಗಳ ರುಚಿಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇಟಲಿಯ ರೋಮ್ ನಗರ ಜಗತ್ತಿನಲ್ಲೇ ನಂಬರ್ ಒನ್ ಆಹಾರದ ನಗರವಾಗಿ ಹೊರಹೊಮ್ಮಿದೆ. ಭಾರತದ ನಗರವೊಂದು ಜಾಗತಿಕ ಮಟ್ಟದಲ್ಲಿ ಟಾಪ್ 25ರೊಳಗೆ ಸ್ಥಾನ ಪಡೆದಿರುವುದು ನಮ್ಮ ದೇಶದ ಶ್ರೀಮಂತ ಆಹಾರ ಪದ್ಧತಿಗೆ ಸಂದ ಗೌರವವಾಗಿದೆ

  • ಟರ್ಕಿಶ್ ಪಿಝ್ಝ

    ಟರ್ಕಿಶ್ ಪಿಝ್ಝ

    ಹಿಟ್ಟಿಗಿರುವ ಸಾಮಗ್ರಿಗಳು:

    • ಮೈದ- ೩೧/೨ ಕಪ್,
    • ಬಿಸಿ ನೀರು- ೧೧/೪ ಕಪ್,
    • ಇನ್‌ಸ್ಟನ್ಟ್ ಈಸ್ಟ್- ೧ ಟೀ.ಸ್ಪೂ.,
    • ಸಕ್ಕರೆ- ೧ ಟೀ.ಸ್ಪೂ.,
    • ಉಪ್ಪು- ೧೧/೨ ಟೀ.ಸ್ಪೂ.,
    • ಓಲಿವ್ ಆಯಿಲ್- ೨ ಟೀ.ಸ್ಪೂ.
    • ಕೀಮ ಮಾಡಲಿಕ್ಕಿರುವ ಸಾಮಗ್ರಿಗಳು:
    • ಮಟನ್ ಕೀಮ- ೪೦೦ ಗ್ರಾಮ್,
    • ಈರುಳ್ಳಿ ದೊಡ್ಡದು- ೧,
    • ಬೆಳ್ಳುಳ್ಳಿ- ೩-೪ ಎಸಳು (ಚೆನ್ನಾಗಿ ಅರೆದದ್ದು),
    • ಟೊಮೆಟೊ- ೨,
    • ಕೆಂಪು ಕ್ಯಾಪ್ಸಿಕಮ್- ೧ (ಸಣ್ಣದು),
    • ಹಸಿರು ಕ್ಯಾಪ್ಸಿಕಮ್- ೧ (ಸಣ್ಣದು),
    • ಹಸಿಮೆಣಸಿನ ಕಾಯಿ- ೧,
    • ಟೊಮೆಟೊ ಪೇಸ್ಟ್- ೧೧/೨ ಟೀ.ಸ್ಪೂ.
    • ಕೆಂಪು ಮೆಣಸಿನ ಪೇಸ್ಟ್- ೧ ಟೀ.ಸ್ಪೂ.
    • (ಅಗತ್ಯ ಬಿದ್ದರೆ ಹೆಚ್ಚು ಬಳಸಬಹುದು),
    • ಪುದಿನ ಎಲೆ- ೧/೨ ಕಪ್ (ಸಣ್ಣಗೆ ಕತ್ತರಿಸಿದ್ದು),
    • ತಾಪ್ರಿಕ ಪೌಡರ್- ೧ ಟೀ.ಸ್ಪೂ.,
    • ಜೀರಿಗೆ ಹುಡಿ- ೧/೨ ಟೀ.ಸ್ಪೂ.,
    • ಕರಿಮೆಣಸಿನ ಹುಡಿ- ೧/೨ ಟೀ.ಸ್ಪೂ.,
    • ಉಪ್ಪು- ರುಚಿಗೆ,
    • ಆಲಿವ್ ಎಣ್ಣೆ- ೩ ಟೀ.ಸ್ಪೂ.,
    • ಲಿಂಬೆರಸ- ೧ ಟೀ.ಸ್ಪೂ.

    ಹಿಟ್ಟು ತಯಾರಿಸುವ ವಿಧಾನ:
    ಒಂದು ಪಾತ್ರೆಯಲ್ಲಿ ಮೈದ, ಬಿಸಿ ನೀರು, ಉಪ್ಪು, ಸಕ್ಕರೆ, ಈಸ್ಟ್, ಆಲಿವ್ ಆಯಿಲ್ ಎಲ್ಲ ಸೇರಿಸಿ ಚೆನ್ನಾಗಿ ಕಲಸಿರಿ. (ಚಪಾತಿ ಹಿಟ್ಟಿನ ಹಾಗೆ) ಇದನ್ನು ೪೦-೬೦ ನಿಮಿಷ ಚೆನ್ನಾಗಿ ಒದ್ದೆ ಬಟ್ಟೆಯಿಂದ ಸುತ್ತಿ ಇಡಿ.

    ಕೀಮ ತಯಾರಿಸುವ ವಿಧಾನ:
    ಈರುಳ್ಳಿ, ಕ್ಯಾಪ್ಸಿಕಮ್, ಟೊಮೆಟೊ, ಪುದಿನ ಎಲೆ ಮುಂತಾ ದವುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಅರಿಯಿರಿ. ಈ ಮಿಶ್ರಿತವನ್ನು ಮಟನ್ ಕೀಮದೊಂದಿಗೆ ಇತರ ವಸ್ತುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

    ಪಿಝ್ಝ ತಯಾರಿಸುವ ವಿಧಾನ:
    ಹಿಟ್ಟನ್ನು ೮ ಒಂದೇ ಅಳತೆಯ ಉಂಡೆಗಳಾಗಿ ವಿಭಾಗಿಸಿ. ತೆಳ್ಳಗೆ ಲಟ್ಟಿಸಿ ತೆಗೆಯಿರಿ. ಒಂದು ಬಟರ್ ಪೇಪರಿನಲ್ಲಿ ಲಟ್ಟಿಸಿದ ಹಿಟ್ಟು ಇಟ್ಟು ಅದರ ಮೇಲೆ ಮಟನ್ ಮಿಶ್ರಿತ ಕೈಯಿಂದ ಹರಡಿ. (ಪ್ಯಾನ್‌ನ ಮೇಲೆ ತೆಗೆದಿರಲು ಅನುಕೂಲವಾಗಲಿಕ್ಕಾಗಿ ಹೀಗೆ ಬಟರ್ ಪೇಪರಿನ ಮೇಲೆ ಇಡಲಾಗುತ್ತದೆ) ಬಳಿಕ ಇದನ್ನು ಬಿಸಿಯಾದ ಪ್ಯಾನ್‌ನ ಮೇಲೆ ಬಟರ್ ಪೇಪರ್ ನೊಂದಿಗೇ ಇರಿಸಬಹುದು. ಸ್ವಲ್ಪ ಬಿಸಿಯಾದ ಕೂಡಲೇ ಬಟರ್ ಪೇಪರ್ ತೆಗೆದು ಸಣ್ಣ ಉರಿಯಲ್ಲಿ ಪಾತ್ರೆ ಮುಚ್ಚಿ ಇಟ್ಟು ೮-೧೦ ನಿಮಿಷ ಬೇಯಿಸಿ ಪಿಝ್ಝ ತಯಾರಿಸಿ.

    ಬಡಿಸುವ ವಿಧಾನ:
    ಪಿಝ್ಝದ ಮೇಲೆ ಪುದಿನ ಎಲೆ, ಈರುಳ್ಳಿ, ಟೊಮೆಟೊ, ಮುಳ್ಳು ಸೌತೆ, ಮೊಸರು, ಲಿಂಬೆರಸ ಮುಂತಾದವುಗಳನ್ನು ಸೇರಿಸಿ ಬಡಿಸಬಹುದು. ಬಿಸಿಯಾದ ಟರ್ಕಿಶ್ ಪಿಝ್ಝವನ್ನು ಸಲಾಡ್‌ನೊಂದಿಗೆ ರೋಲ್ ಮಾಡಿಯೂ ಸವಿಯಬಹುದು.

  • ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: 
ಮಾಡುವ ವಿಧಾನ ಹೇಗೆ?

    ಟರ್ಕಿಶ್ ಅದಾನ ಚಿಕನ್ ಕಬಾಬ್ ಬಿರಿಯಾಣಿ: ಮಾಡುವ ವಿಧಾನ ಹೇಗೆ?

    ಕಬಾಬ್ ತಯಾರಿಸಲು ಬೇಕಾಗುವ ವಸ್ತುಗಳು:

    ಕೋಳಿಮಾಂಸ ಕೀಮ- 750 ಗ್ರಾಮ್, ಈರುಳ್ಳಿ- 1, ಕೆಂಪು ಕ್ಯಾಪ್ಸಿಕಮ್- 1, ಕೊತ್ತಂಬರಿ ಸೊಪ್ಪು- ಕತ್ತರಿಸಿದ್ದು – 1 ಕಪ್, ಚಿಲ್ಲಿ ಫ್ಲೇಕ್ಸ್- 1 ಟೀ.ಸ್ಪೂ., ಪ್ಯಾಪ್‌ರಿಕ ಪೌಡರ್- 1 ಟೀ.ಸ್ಪೂ., ಹಸಿಮೆಣಸಿನ ಕಾಯಿ ಪೇಸ್ಟ್- 1, ಬೆಳ್ಳುಳ್ಳಿ ಪೇಸ್ಟ್- 1 ಟೀ.ಸ್ಪೂ., ಎಣ್ಣೆ- 2-3 ಟೀ.ಸ್ಪೂ., ಉಪ್ಪು- ರುಚಿಗೆ.

    ಮಸಾಲ ತಯಾರಿಸಲಿಕ್ಕಿರುವ ವಸ್ತುಗಳು:
    ಮೊಸರು- 1 ಕಪ್, ಈರುಳ್ಳಿ (ಡೀಪ್ ಫ್ರೈ ಮಾಡಿದ್ದು) ಒಂದು ಕಪ್, ಎಣ್ಣೆ- 1/2 ಕಪ್, ಏಲಕ್ಕಿ- 2, ಕೆತ್ತೆ- 1 ಇಂಚು, ಗರಮ್ ಮಸಾಲೆ ಹೂ- 2, ಕರಿಮೆಣಸು- 1/4 ಟೀ.ಸ್ಪೂ., ಬೇಲೀಫ್- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಟೀ.ಸ್ಪೂ., ಮೆಣಸಿನ ಹುಡಿ- 1/2 ಟೀ.ಸ್ಪೂ., ಹಳದಿ ಹುಡಿ- 1/2 ಟೀ.ಸ್ಪೂ., ಗರಮ್ ಮಸಾಲೆ ಹುಡಿ- 1 ಟೀ.ಸ್ಪೂ., ಕೊತ್ತಂಬರಿ ಹುಡಿ- 2 ಟೀ.ಸ್ಪೂ., ಜೀರಿಗೆ ಹುಡಿ (ಹುರಿದದ್ದು)- 1/2 ಟೀ.ಸ್ಪೂ., ಉಪ್ಪು- ರುಚಿಗೆ, ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು- 1 ಕಪ್, ಪುದಿನ ಎಲೆ ಕತ್ತರಿಸಿದ್ದು- 1/2 ಕಪ್, ಹಸಿಮೆಣಸಿನ ಕಾಯಿ- 3, ಕಬಾಬ್- ತಯಾರಿಸಿ ಇಟ್ಟದ್ದು, ಲಿಂಬೆರಸ- 2 ಟೀ.ಸ್ಪೂ.

    ನೈಅಕ್ಕಿ ತಯಾರಿಸಲು ಬೇಕಾಗುವ ವಸ್ತುಗಳು:
    ನೀರು- 41/2 ಕಪ್, ಚೀಲೀಫ್ (ಬಿರಿಯಾಣಿ ಎಲೆ)- 1, ಕೆತ್ತೆ- 1 ಇಂಚು, ಲವಂಗ- 4, ಏಲಕ್ಕಿ- 2, ಲಿಂಬೆರಸ- 1/2 ಟೀ.ಸ್ಪೂ., ಎಣ್ಣೆ- ಒಂದು ಟೀ.ಸ್ಪೂ., ನೈಅಕ್ಕಿ- 3 ಕಪ್ (600 ಗ್ರಾಮ್), ಗೋಡಂಬಿ- ಒಂದು ಹಿಡಿ, ಒಣದ್ರಾಕ್ಷಿ- 3/4 ಹಿಡಿ, ಉಪ್ಪು- ರುಚಿಗೆ.

    ದಮ್ ಮಾಡಲಿಕ್ಕಿರುವ ವಸ್ತುಗಳು:
    ಪುದಿನ ಎಲೆ- 3/4 ಕಪ್, ತುಪ್ಪ- 2 ಟೀ.ಸ್ಪೂ.

    ಕಬಾಬ್ ತಯಾರಿಸುವ ವಿಧಾನ:
    ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸೇರಿಸಿ ಅರೆದಿಡಿ. ಸೋಸು ಪಾತ್ರೆಗೆ ಹಾಕಿ ನೀರನ್ನು ಬಸಿಯಿರಿ. ಇದನ್ನು ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೀಮ ಮಾಡಿದ ಚಿಕನ್. ಉಪ್ಪು, ಚಿಲ್ಲಿಫ್ಲೆಕ್ಸ್, ಪ್ಯಾಪ್‌ರಿಕ ಪೌಡರ್, ಹಸಿಮೆಣಸಿನ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 30 ನಿಮಿಷ ಫ್ರಿಜ್‌ನಲ್ಲಿ ಇಡಿ.
    ಇದರಿಂದ ಒಂದು ಉಂಡೆ ತೆಗೆದು ಕೈಯನ್ನು ಒದ್ದೆ ಮಾಡಿ ಕಬಾಬ್ ಸ್ಟಿಕ್‌ನಲ್ಲಿ ಪ್ರೆಸ್ ಮಾಡಿ ಹಿಡಿಯುವಂತೆ ಶೇಪ್ ಮಾಡಿರಿ. ಹೀಗೆ ಮಾಡಿದ ಕಬಾಬ್‌ಗಳನ್ನು ಒಂದು ತೆರೆದ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಲ್ಲ ಕಡೆ ತಿರುಗಿಸುತ್ತಾ ಬೇಯಿಸಿ ಕಬಾಬ್ ತಯಾರಾಯಿತು.

    ರೈಸ್ ತಯಾರಿಸುವ ವಿಧಾನ:
    ನೈಅಕ್ಕಿಯನ್ನು ಚೆನ್ನಾಗಿ ತೊಳೆದು ನೀರು ಬಸಿದು 30 ನಿಮಿಷ ಇಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೇಲೀಫ್, ಕೆತ್ತೆ, ಲವಂಗ ಏಲಕ್ಕಿ ಸೇರಿಸಿ ಕೈಯಾಡಿಸಿ ಬಳಿಕ ಇದಕ್ಕೆ ಅಕ್ಕಿ ಸೇರಿಸಿ 3-4 ನಿಮಿಷ ಹುರಿಯಿರಿ. ಇದಕ್ಕೆ ಚೆನ್ನಾಗಿ ಕುದಿಸಿದ ನೀರು ಸೇರಿಸಿ. ಕುದಿಯುತ್ತಾ ಬರುವಾಗ ಉಪ್ಪು ಲಿಂಬೆ ರಸ ಸೇರಿಸಿ ಮುಚ್ಚಳ ಮುಚ್ಚಿ 5-6 ನಿಮಿಷ ಬೇಯಿಸಿ.

    ಬಿರಿಯಾನಿ ತಯಾರಿಸುವ ವಿಧಾನ:
    ಗ್ರೈಂಡರ್ ನಲ್ಲಿ ಹುರಿದ ಈರುಳ್ಳಿ ಮೊಸರು ಸೇರಿಸಿ ಅರೆದು ತೆಗೆದಿಡಿ. ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಏಲಕ್ಕಿ, ಕೆತ್ತೆ, ಗರಮ್ ಮಸಾಲೆ ಹೂ, ಕರಿಮೆಣಸು, ಬೇ ಲೀಫ್ ಸೇರಿಸಿ ಹುರಿಯಿರಿ. ಅರೆದಿಟ್ಟ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಎರಡು ನಿಮಿಷ ಹುರಿಯಿರಿ. ಮೆಣಸಿನ ಹುಡಿ, ಹಳದಿ ಹುಡಿ, ಗರಮ್ ಮಸಾಲೆ ಹುಡಿ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಉಪ್ಪು ಸೇರಿಸಿ ಪುನಃ ಅಡಿಮೇಲು ಮಾಡಿ. ಕೊತ್ತಂಬರಿ ಸೊಪ್ಪು ಅರ್ಧಕ್ಕೆ ಕತ್ತರಿಸಿದ ಕಾಯಿಮೆಣಸಿ ಸೇರಿಸಿ ಬಾಡಿಸಿ.

    ಇದಕ್ಕೆ ತಯಾರಿಸಿಟ್ಟ ಕಬಾಬನ್ನು ಕಡ್ಡಿಯಿಂದ ಬೇರ್ಪಡಿಸಿ ಸೇರಿಸಿ ಅಡಿಮೇಲು ಮಾಡಿ. ಸಣ್ಣ ಉರಿಯಲ್ಲಿ ಎರಡು ನಿಮಿಷ ಪಾತ್ರೆ ಮುಚ್ಚಿ ಬೇಯಿಸಿ. ಅದರಲ್ಲಿರುವ ಕಬಾಬನ್ನು ಹೊರ ತೆಗೆದು ಆ ಉಳಿದ ಮಸಾಲೆಯ ಮೇಲೆ ಅನ್ನ ಹಾಕಿ ಅದರ ಮೇಲೆ ಕಬಾಬ್ ತುಂಡುಗಳನ್ನು ಇಟ್ಟು ಕೊತ್ತಂಬರಿ ಸೊಪ್ಪು, ಹುರಿದ ಈರುಳ್ಳಿ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ 8-10 ನಿಮಿಷ ದಮ್‌ನಲ್ಲಿಡಿ. ರುಚಿಕರವಾದ ಟರ್ಕಿಶ್ ಅದಾನ ಕಬಾಬ್ ಬಿರಿಯಾನಿ ತಯಾರಾಗಿದೆ.

  • ಪುಲಿಯೋಗರೆ

    ಪುಲಿಯೋಗರೆ

    Ingredients:

    • ಅಕ್ಕಿ (Rice) – 1 cup (cooked)
    • ಹುಣಸೆಹಣ್ಣು ಪೇಸ್ಟ್ (Tamarind paste) – 2 tbsp
    • ಎಳ್ಳು (Sesame seeds) – 1 tsp (dry roasted and ground)
    • ಬೆಲ್ಲ (Jaggery) – 1 tsp
    • ಎಣ್ಣೆ (Oil) – 2 tbsp
    • ಸಾಸಿವೆ (Mustard seeds) – 1 tsp
    • ಉದ್ದುಬೇಳೆ (Urad dal) – 1 tsp
    • ಅಡಿಕೆಕಡಲೆ (Chana dal) – 1 tsp
    • ಕರಿಬೇವು (Curry leaves) – few
    • ಹಸಿಮೆಣಸು (Green chilies) – 2, chopped
    • ಎಳ್ಳು (Dry red chilies) – 2
    • ಉಪ್ಪು (Salt) – to taste
    • ಏಲಕ್ಕಿ ಮತ್ತು ಹಿಂಗು (Hing/Asafoetida) – a pinch
    • ಕರಿಬೇವು ಪುಡಿ ಅಥವಾ ಪುಲಿಯೋಗರೆ ಪುಡಿ (Puliyogare mix powder) – optional
  • ಗೋಧಿ ಹಿಟ್ಟಿನ ಪಿಝ್ಝಾ

    ಗೋಧಿ ಹಿಟ್ಟಿನ ಪಿಝ್ಝಾ

    ಬೇಕಾಗುವ ಸಾಮಗ್ರಿಗಳು:

    ೧) ಗೋಧಿ ಹುಡಿ- ೧ ಕಪ್, ಮೊಸರು- ೧/೩ ಕಪ್, ಬೇಕಿಂಗ್ ಪೌಡರ್- ೧/೨ ಚಮಚ, ಬೇಕಿಂಗ್ ಸೋಡ- ೧/೪ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಸಕ್ಕರೆ (ಹುಡಿ ಮಾಡಿದ್ದು) – ೨ ಚಮಚ, ಎಣ್ಣೆ- ೨ ಚಮಚ.

    ೨) ಮಖಾನಿ ಸಾಸ್ ತಯಾರಿಸಲು:

    ಬೆಣ್ಣೆ- ೧ ಚಮಚ, ಎಣ್ಣೆ- ೧ ಸ್ಪೂ., ಜೀರಿಗೆ- ೧ ಸ್ಪೂ., ಶುಂಠಿ-  ೧ ಇಂಚು, ಬೆಳ್ಳುಳ್ಳಿ- ೫-೬ ಎಸಳು, ಹಸಿಮೆಣಸು- ೧, ನೀರುಳ್ಳಿ- ೩, ಗೇರುಬೀಜ- ೭-೮, ಟೊಮೆಟೊ- ೪, ಉಪ್ಪು- ೧೧/೨ ಸ್ಪೂ., ಕೆಂಪು ಮೆಣಸಿನ ಹುಡಿ- ೧/೨ ಸ್ಪೂ., ಇಡೀ ಗರಮ್ ಮಸಾಲಾ- ಲವಂಗ, ಕೆತ್ತೆ ದಾಲ್ಚಿನ್ನಿ ಎಲೆ, ಬೆಣ್ಣೆ- ೧ ಸ್ಪೂ., ಎಣ್ಣೆ- ೧/೨ ಸ್ಪೂ., ಕೆಂಪು ಮೆಣಸಿನ ಹುಡಿ- ೧ ಸ್ಪೂ., ಕೊತ್ತಂಬರಿ ಹುಡಿ- ೧/೨ ಸ್ಪೂ., ಗರಮ್ ಮಸಾಲಾ ಹುಡಿ- ೧/೪ ಸ್ಪೂ., ಫ್ರೆಶ್ ಕ್ರೀಮ್- ೨ ಸ್ಪೂ., ಕಸೂರಿ ಮೇತಿ- ೧ ಸ್ಪೂ., ಸಕ್ಕರೆ- ೧ ಸ್ಪೂ.

    ಪಿಝ್ಝಾದ ಮೇಲ್ಗಡೆ ಹಾಕಲು:

    ಕ್ಯಾಪ್ಸಿಕಮ್, ಪನೀರ್ ೫-೬ ತುಂಡು, ನೀರುಳ್ಳಿ, ಓರೆಗ್ಯಾನೋ, ಚಿಲ್ಲಿ ಫ್ಲೇಕ್ಸ್, ಮೊಝರೆಲ್ಲಾ ಚೀಝ್, ಚೀಝ್ ಸ್ಲೆöÊಸ್, ಉಪ್ಪು- ಬಾಣಲೆಯಲ್ಲಿ ಬಿಸಿ ಮಾಡಲು ಹಾಕಲು- ೨ ಕಪ್.

    ಮಾಡುವ ವಿಧಾನ

    ನಂಬರ್ (೧)ರಲ್ಲಿ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ನಾದಿ. ೮-೧೦ ನಿಮಿಷಗಳ ವರೆಗೆ ಎಣ್ಣೆ ಹಾಕಿ ಚೆನ್ನಾಗಿ ನಾದಿರಿ. ಮಧ್ಯೆ ಮಧ್ಯೆ ಕೈಗೆ ಎಣ್ಣೆ ಹಚ್ಚಿ ಚೆನ್ನಾಗಿ ನಾದಿರಿ. ಹಿಟ್ಟನ್ನು ಒಂದು ಬಾಲಿನ ಆಕಾರಕ್ಕೆ ತಂದು ಒಂದು ಬೌಲಿನಲ್ಲಿ ಸ್ವಲ್ಪ ಎಣ್ಣೆ ಹಚ್ಚಿ ಮುಚ್ಚಳ ಮುಚ್ಚಿ ೨ ಗಂಟೆ ಹಾಗೆಯೇ ಇಡಿ.

    ಈಗ ಒಂದು ಪ್ಯಾನ್ ಒಲೆಯ ಮೇಲಿಟ್ಟು ಅದಕ್ಕೆ ಬೆಣ್ಣೆ ಹಾಕಿ, ಜೊತೆಗೆ ಎಣ್ಣೆ ಸ್ವಲ್ಪ ಹಾಕಿ. ಈಗ ಜೀರಿಗೆ ಹಾಕಿ ಹುರಿಯಿರಿ. ನಂತರ ಇಡೀ ಗರಮ್ ಮಸಾಲಾ ಹಾಕಿ ಹುರಿಯಿರಿ. ನಂತರ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಈಗ ಕತ್ತರಿಸಿದ ನೀರುಳ್ಳಿ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನೀರುಳ್ಳಿ ನಸು ಕಂದು ಬಣ್ಣ ಬಂದಾಗ ಗೇರುಬೀಜ ಹಾಕಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊ ಹಾಕಿ ಹುರಿಯಿರಿ. ಬೇಕಾದಷ್ಟು ಉಪ್ಪು ಹಾಕಿ. ಸ್ವಲ್ಪ ಕೆಂಪು ಮೆಣಸಿನ ಹುಡಿ ಸೇರಿಸಿ. ೫ ನಿಮಿಷಗಳ ವರೆಗೆ ಹುರಿದು ಇದಕ್ಕೆ ೧/೨ ಕಪ್ ನೀರು ಸೇರಿಸಿ. ೫-೬ ನಿಮಿಷಗಳ ವರೆಗೆ ಮುಚ್ಚಳ ಮುಚ್ಚಿ ಬೇಯಿಸಿ. ಟೊಮ್ಯಾಟೋ ಬೆಂದ ಬಳಿಕ ಈ ಮಿಶ್ರಣವನ್ನು ಒಲೆಯಿಂದ ತೆಗೆದಿರಿಸಿ ತಣ್ಣಗಾಗಲು ಬಿಡಿ. ಬಳಿಕ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ಸೋಸುವ ಜರಡಿಗೆ ಹಾಕಿ, ಅದನ್ನು ಚೆನ್ನಾಗಿ ಜರಡಿ ಹಿಡಿಯಿರಿ. ತುಂಬಾ ನಯವಾದ ಮಿಶ್ರಣ ದೊರೆಯುತ್ತದೆ.

    ಪುನಃ ಒಂದು ಬಾಣಲೆಯನ್ನು ಒಲೆಯಲ್ಲಿಟ್ಟು ಅದಕ್ಕೆ ಬೆಣ್ಣೆ, ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಕೆಂಪು ಮೆಣಸಿನ ಹುಡಿ ಹಾಕಿ ಹುರಿಯಿರಿ. ನಂತರ ಜರಡಿಯಾಡಿಟ್ಟ ಮಿಶ್ರಣ ಹಾಕಿ. ಚೆನ್ನಾಗಿ ಕೈಯಾಡಿಸಿ. ಇದಕ್ಕೆ ಸ್ವಲ್ಪ ಕೊತ್ತಂಬರಿ ಹುಡಿ ಹಾಕಿ. ಈ ಸಮಯದಲ್ಲಿ ಉಪ್ಪು ಸರಿಯಾಗಿದೆಯಾ ನೋಡಿಕೊಂಡು ಹಾಕಿ. ೫-೬ ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಬಳಿಕ ಫ್ರೆಶ್ ಕ್ರೀಮ್ ಹಾಗೂ ಕಸೂರಿ ಮೇತಿ ಹಾಕಿ. ನಂತರ ಒಂದು ಚಮಚ ಹುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಿಝ್ಝಾದ ಮೇಲೆ ಹಾಕಲು ಸಾಸ್ ರೆಡಿ. ತಣ್ಣಗಾಗಲು ತೆಗೆದಿಡಿ.

    ನಂತರ ಚೆನ್ನಾಗಿ ನಾದಿ ಇಟ್ಟ ಹಿಟ್ಟನ್ನು ಎರಡು ಭಾಗಗಳಾಗಿ ಮಾಡಿ. ಒಂದು ಸ್ಟೀಲಿನ ಬಟ್ಟಲನ್ನು ತೆಗೆದು ಅದಕ್ಕೆ ಚೆನ್ನಾಗಿ ಎಣ್ಣೆ ಹಚ್ಚಿ. ಇದರ ಮಧ್ಯೆ ಒಂದು ದೊಡ್ಡ ಪಾತ್ರೆಯಲ್ಲಿ ಉಪ್ಪು ಹಾಕಿ (೨ ಕಪ್) ಅದರ ಮೇಲೆ ಒಂದು ಸ್ಟೀಲಿನ ಅಥವಾ ಅಲ್ಯೂಮಿನಿಯಂ ಸ್ಟಾö್ಯಂಡ್ ಇಟ್ಟು ಮುಚ್ಚಳ ಮುಚ್ಚಿ ೧೦ ನಿಮಿಷ ಮಂದ ಉರಿಯಲ್ಲಿ ಬಿಸಿಯಾಗಲು ಇಡಿ.

    ಈಗ ಹಿಟ್ಟನ್ನು ಎರಡು ಭಾಗ ಮಾಡಿ ಒಂದು ಭಾಗವನ್ನು ರೌಂಡ್ ಲಟ್ಟಿಸಿ, ಎಣ್ಣೆ ಹಚ್ಚಿದ ಸ್ಟೀಲ್ ಪ್ಲೇಟಿನಲ್ಲಿ ಅಂಟಿನವರೆಗೂ ಕೈಯಿಂದ ಒತ್ತುತ್ತಾ ಹರಡಿ. ಫೋರ್ಕ್ನಿಂದ ಇಡೀ ಹಿಟ್ಟಿನಲ್ಲಿ ಸಣ್ಣ ಸಣ್ಣ ರಂಧ್ರ ಮಾಡಿ. ನಂತರ ಇದರ ಮೇಲೆ ಬೆಣ್ಣೆ ಹಚ್ಚಿ. ಈಗ ತಯಾರಿಸಿಟ್ಟ ಮಖಾನಿ ಸಾಸ್ ಹಚ್ಚಿ ಅದರ ಮೇಲೆ ಚೀಝ್ ಸ್ಲೆöÊಸ್ ತುಂಡು ಮಾಡಿ ಇಡೀ ಪಿಝ್ಝಾದ ಮೇಲೆ ಹರಡಿ. ನಂತರ ಮೊಝರೆಲ್ಲ ಚೀಝ್ ಹಾಕಿ. ಈಗ ಪನೀರ್ ತುಂಡುಗಳನ್ನು ಮಖಾನಿ ಸಾಸ್‌ನಿಂದ ರೋಲ್ ಮಾಡಿ ಪಿಝ್ಝಾದ ಮೇಲೆ ಇಡಿ. ನೀರುಳ್ಳಿ ತುಂಡು, ಕ್ಯಾಪ್ಸಿಕಮ್ ತುಂಡುಗಳನ್ನು ಕೂಡಾ ಪಿಝ್ಝಾದ ಮೇಲೆ ಇಡಿ. ಮೇಲ್ಗಡೆ ಪುನಃ ಮೊಝರೆಲ್ಲ ಚೀಝ್ ಹಾಕಿ. ಓರೆಗ್ಯಾನೋ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ. ಇದನ್ನು ಬಿಸಿಯಾಗಲು ಇಟ್ಟ ದೊಡ್ಡ ಪಾತ್ರೆಯ ಸ್ಟಾö್ಯಂಡಿನ ಮೇಲಿಟ್ಟು ಮುಚ್ಚಳ ಮುಚ್ಚಿ. ಮಂದ ಉರಿಯಲ್ಲಿ ೧೫-೨೦ ನಿಮಿಷಗಳ ವರೆಗೆ ಬೇಯಿಸಿ. ಗೋಧಿ ಹಿಟ್ಟಿನ ಮಖಾನಿ ಪಿಝ್ಝಾ ರೆಡಿ.