Category: ಬಾಳಬುತ್ತಿ

  • 40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    40ರ ಆಸುಪಾಸಿನ ಮಹಿಳೆಯರ ‘ಮರೆವಿನ’ ಕವನವಿದು…

    ಈಗೀಗ ನನಗೆ ಅತೀವ ಮರೆವು,
    ಫ್ರಿಜ್ಜು ತೆರೆಯುತ್ತೇನೆ,
    ಯಾಕೆ ತೆರೆದೆ ಎಂದು ಮರೆಯುತ್ತೇನೆ.

    ಬಟ್ಟೆ ಬರೆಗಳನ್ನು ಮಡಚಲೆಂದು
    ಕೋಣೆಗೆ ತೆರಳುತ್ತೇನೆ.
    ಅಲ್ಲಿ ಮತ್ತೇನೋ ಕೆಲಸ ಕಂಡೊಡನೆ
    ಈ ಕೆಲಸ ಮರೆಯುತ್ತೇನೆ.

    ವಿಶೇಷ ಅಡುಗೆ ಮಾಡಲೆಂದು
    ಹೊರಟಾಗಲೂ ಅಷ್ಟೇ,
    ಕೆಲವೊಂದು ಸಾಮಗ್ರಿಗಳನ್ನು
    ಹಾಕಲೂ ಮರೆಯುತ್ತೇನೆ.

    ಏನೋ ಹೇಳಲೆಂದು
    ಬಾಯಿ ತೆರೆಯುತ್ತೇನೆ,
    ಮಧ್ಯದಲ್ಲಿ ಮತ್ತೇನೋ ಮಾತು ಬಂದರೆ ಸಾಕು
    ಈ ವಿಷಯ ಮರೆತೇಹೋಗುತ್ತೇನೆ.

    ಇದು ನನ್ನ ಸಮಸ್ಯೆ ಮಾತ್ರವೇ
    ಪ್ರಶ್ನಿಸುವೆ ಹಲವು ಬಾರಿ
    ಇಲ್ಲ ನಮ್ಮದೂ ಕೂಡಾ
    ಅನ್ನುತ್ತಾರೆ ಗೆಳತಿಯರು ಸಾರಿ.

    ಬಹುಷಃ ನಲ್ವತ್ತರ ಅಂಚಿನಲ್ಲಿರುವ
    ನಮಗೆ ಇದು ಸಾಮಾನ್ಯ
    ಆದರೂ ಈ ಬಗ್ಗೆ
    ಮುಗಿಯದು ತಲ್ಲಣ

    ಮತ್ತೊಮ್ಮೆ ನನ್ನಲ್ಲೇ ಪ್ರಶ್ನಿಸುತ್ತೇನೆ.
    ಅದೇಕೆ ನನಗೆ ನನ್ನ
    ಸಮಸ್ಯೆಗಳು ಮರೆಯುವುದಿಲ್ಲ,
    ಹಿಂದೊಮ್ಮೆ ಘಟಿಸಿದ ಕಹಿಘಟನೆ
    ಮರೆತುಹೋಗುವುದಿಲ್ಲ,

    ಬದುಕಿಗೆ ವಿದಾಯ ಹೇಳಿದ
    ಅಪ್ಪನ ಅಗಲಿಕೆಯ ನೋವೇಕೆ
    ಮರೆತು ಹೋಗುವುದಿಲ್ಲ,
    ಜವಾಬ್ದಾರಿಗಳೂ ಮರೆತು ಹೋಗುವುದಿಲ್ಲ.

    ನಾನು ಮರೆಯುವುದು ಅತ್ಯಂತ ಕ್ಷುಲ್ಲಕ ವಿಷಯಗಳನ್ನು.
    ಮನೆಯನ್ನು ನಡೆಸುವುದಾಗಲಿ,
    ಮಕ್ಕಳಿಗೆ ಉಣಿಸುವುದಾಗಲಿ ನಾನು ಮರೆಯುವುದಿಲ್ಲ.
    ಆದರೂ ನನಗೀಗ ಹೆಸರು
    ಮಹಾನ್ ಮರೆಗುಳಿ.

    ಹೌದು ಕೆಲವೊಮ್ಮೆ ಅನಿಸುವುದು
    ಮರೆಯಬೇಕು ಎಲ್ಲವನ್ನು,
    ತಿಂಗಳು ತಿಂಗಳು ಅನುಭವಿಸುವ ನೋವನ್ನು,
    ಎಂದೋ ಅನುಭವಿಸಿದ,
    ಇಂದಿಗೂ ಚುಚ್ಚುವ ಅವಮಾನವನ್ನು,
    ಮನದಲ್ಲಿ ಅದುಮಿಟ್ಟುಕೊಂಡಿರುವ ಆಸೆಯನ್ನು,

    ನಾಳೆ ಎನ್ನುವುದನ್ನು
    ಮರೆಯಬೇಕು, ಮರೆತು ಬದುಕಬೇಕು.
    ಬದುಕಲ್ಲಿ ಒಂದು ದಿನವನ್ನು ನನಗಾಗಿ ಬದುಕಬೇಕು.
    ಯಾವುದೇ ಧಾವಂತವಿಲ್ಲದೆ,
    ಯಾವುದೇ ಒತ್ತಡವಿಲ್ಲದೆ,
    ಯಾವ ಜವಾಬ್ದಾರಿಯ ಹಂಗೂ ಇಲ್ಲದೇ.
    ನಾನಾಗಿ, ನನಗಾಗಿ.

    ಅಸ್ಮತ್ ವಗ್ಗ

  • ಏರಿ ರೇಷ್ಮೆ ಚಿಣುರು ಪೋಷಣೆ – ಹಳ್ಳಿಯ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ

    ಏರಿ ರೇಷ್ಮೆ ಚಿಣುರು ಪೋಷಣೆ – ಹಳ್ಳಿಯ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ದಾರಿ

    ನಾಗಾಲ್ಯಾಂಡ್ ರಾಜ್ಯದ ತುಒಫೆಮಾ ಗ್ರಾಮದಲ್ಲಿ ಎರಡು ಮಹಿಳೆಯರು ಏರಿ ರೇಷ್ಮೆ ಚಿಣುರು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು, ತಮ್ಮದೇ ಆದ ಸಂಸ್ಕರಣಾ ಘಟಕ ಆರಂಭಿಸಿ, ವರ್ಷದಲ್ಲಿ ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸುತ್ತಿದ್ದಾರೆ. ರಾಜ್ಯದ ರೇಷ್ಮೆ ಇಲಾಖೆ ಮತ್ತು ಗ್ರಾಮೀಣ ಇಲಾಖೆ ನೀಡಿದ ತರಬೇತಿ ಹಾಗೂ ಬೆಂಬಲದಿಂದ ಈ ಮಹಿಳೆಯರು ಈಗ ಇತರ ಮಹಿಳೆಯರಿಗೂ ಉದ್ಯೋಗ ಕಲ್ಪಿಸುವ ಮಟ್ಟಿಗೆ ಬೆಳೆಯುತ್ತಿದ್ದಾರೆ. ಈ ಉದ್ದಿಮೆ ಅವರುಗಳಿಗೆ ಆತ್ಮವಿಶ್ವಾಸ ಹಾಗೂ ಸಮೃದ್ಧಿಯ ದಿಕ್ಕಿನಲ್ಲಿ ದಾರಿ ತೋರಿಸಿದೆ.

  • ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

    ನಮ್ಮ ಬೆಲೆಯನ್ನು ತಿಳಿದುಕೊಳ್ಳಬೇಕು

    ನಿಮಗೊಂದು ಕಥೆ ಹೇಳುತ್ತೇನೆ. ಆಬಿದ್ ಎಂಬ ಯುವಕ ಒಂದು ಶೂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕಠಿಣವಾಗಿ ಪರಿಶ್ರಮ ಪಡುತ್ತಿದ್ದ. ಐದು ವರ್ಷದಿಂದ ವಿಭಿನ್ನ ವಿನ್ಯಾಸಗಳನ್ನು ಮಾಡುತ್ತಿದ್ದ. ಅವನ ವಿನ್ಯಾಸದ ಪ್ರಕಾರ ಬಿಡುಗಡೆಯಾದ ಸ್ಯಾಂಡಲ್ ಮತ್ತು ಶೂಗಳಿಗೆ ಮಾರ್ಕೆಟ್‌ನಲ್ಲಿ ಉತ್ತಮ ಬೇಡಿಕೆಯಿತ್ತು. ಆದರೂ ಕಂಪೆನಿಯ ಮೆನೇಜರ್ ಆತನನ್ನು ಒಮ್ಮೆಯೂ ಹೊಗಳಲಿಲ್ಲ. ಒಳ್ಳೆಯ ಒಂದು ಮಾತನ್ನೂ ಹೇಳಲಿಲ್ಲ. ಆರು ತಿಂಗಳ ಹಿಂದೆ ಬಂದ ನೌಕರನಿಗೂ ಭಡ್ತಿ ದೊರೆತದ್ದು ಕಂಡು ದುಃಖವಾಯಿತು. ತನ್ನ ಸಾಮರ್ಥ್ಯವನ್ನು ಯಾರೂ ಗುರುತಿಸುತ್ತಿಲ್ಲವಲ್ಲ ಎಂದು ಯೋಚಿಸುತ್ತಾ ದಾರಿಯಲ್ಲಿ ನಡೆಯು ತ್ತಿದ್ದ. ಆಗ ದಾರಿಯಲ್ಲಿ ಒಬ್ಬ ಮುದುಕ ನನ್ನು ಕಂಡ. ಸಮೀಪದಲ್ಲಿ ಬಿದ್ದಿದ್ದ ಸಣ್ಣ ಬೆಣಚು ಕಲ್ಲನ್ನು ತೆಗೆದುಕೊಳ್ಳಲು ಆ ವ್ಯಕ್ತಿ ಹೆಣಗಾಡುತ್ತಿದ್ದರು. ಆಬಿದ್ ಅವರ ಬಳಿ ಹೋಗಿ ಅದನ್ನು ತೆಗೆದುಕೊಟ್ಟ. ಮುದುಕ ಆಬಿದ್‌ನಿಗೆ ಧನ್ಯವಾದ ಸಲ್ಲಿಸಿದರು.

    “ಇದೊಂದು ಸಾಮಾನ್ಯ ಕಲ್ಲಲ್ಲವೇ, ಏನು ಇದಕ್ಕಿಷ್ಟು ವಿಶೇಷತೆ?” ಎಂದು ವ್ಯಕ್ತಿಯೊಂದಿಗೆ ಆಬಿದ್ ಕೇಳಿದ. “ಮಗನೇ, ಈ ಲೋಕದಲ್ಲಿ ಯಾವುದೂ ಸಾಮಾನ್ಯವಲ್ಲ. ಸರಿಯಾದ ಸ್ಥಳದಲ್ಲಿ ಅಥವಾ ಪ್ರತಿಯೊಂದಕ್ಕೂ ತನ್ನದೇ ಆದ ಅಸಾಮಾನ್ಯ ಮೌಲ್ಯವಿದೆ.”

    ಆದರೆ ಮುದುಕನ ಮಾತು ಆಬಿದ್‌ಗೆ ಅರ್ಥವಾಗಲಿಲ್ಲ ಎಂದು ಮುದುಕನಿಗೆ ಗೊತ್ತಾಯಿತು. ಆತ ಆಬಿದ್‌ಗೆ ಆ ಕಲ್ಲನ್ನು ಕೊಡುತ್ತಾ, “ನೀನು ಈ ಕಲ್ಲನ್ನು ಆ ಸ್ಟೇಶನರಿ ಅಂಗಡಿಗೆ ಕೊಡು. ಆಗ ಈ ಕಲ್ಲಿಗೆ ಎಷ್ಟು ರೂಪಾಯಿ ಕೊಡುತ್ತೀರಾ ಎಂದು ಕೇಳು.” ಆಬಿದ್ ಆ ಕಲ್ಲನ್ನು ಕೊಂಡು ಹೋದಾಗ ಐವತ್ತು ರೂಪಾಯಿ ಕೊಡುತ್ತೇನೆಂದು ಅಂಗಡಿಯಾತ ಹೇಳಿದ. ಆ ವಿಷಯ ಆಬಿದ್ ವೃದ್ಧನೊಂದಿಗೆ ಹೇಳಿದಾಗ, ಆಭರಣದ ಅಂಗಡಿಗೆ ತೆಗೆದು ಕೊಂಡು ಹೋಗಲು ಸೂಚಿಸಿದ. ಅಲ್ಲಿ ೫೦೦ ರೂಪಾಯಿ ಕೊಡುತ್ತೇವೆ ಎಂದಾಗ ಮುದುಕ ಅದನ್ನು ಮ್ಯೂಸಿಯಂಗೆ ತೋರಿಸಲು ಹೇಳಿದನು. ಇದು ಸಾಮಾನ್ಯ ಕಲ್ಲಲ್ಲವೆಂದೂ ಚಂದ್ರನ ಉಲ್ಕಾ ಶಿಲೆಯ ದ್ದೆಂದು ಮ್ಯೂಸಿಯಂನ ವ್ಯಕ್ತಿ ಹೇಳಿದರು. ೨೦,೦೦೦ ಬೆಲೆಯನ್ನೂ ಹೇಳಿದರು.

    ಆಶ್ಚರ್ಯದಿಂದ ಈ ವಿಷಯವನ್ನು ವೃದ್ಧನಿಗೆ ಹೇಳಿದಾಗ, ಕುಳಿತಲ್ಲಿ ಕುಳಿತರೇ, ತಲುಪುವಲ್ಲಿಗೆ ತಲುಪಿದರೇ, ಅದರ ನೈಜ ಮೌಲ್ಯ ದೊರೆಯುತ್ತದೆ ಎಂದು ವೃದ್ಧ ಹೇಳಿದ. ಆ ಕಲ್ಲನ್ನು ಆಬಿದ್‌ಗೆ ಉಡುಗೊರೆಯಾಗಿ ನೀಡಿದ. ಅಂದು ರಾತ್ರಿ ವೃದ್ಧನು ಹೇಳಿದ ವಿಷಯದ ಕುರಿತೇ ಯುವಕ ಯೋಚಿಸಿದ. ಮರುದಿನ ಆಫೀಸ್‌ಗೆ ಹೋಗಿ ತನ್ನ ಕೆಲಸಕ್ಕೆ ರಾಜೀ ನಾಮೆ ನೀಡಿದ. ಮ್ಯಾನೇಜರ್ ಎಷ್ಟೇ ವಿನಂತಿಸಿದರೂ ಆತ ಕೇಳಲಿಲ್ಲ.

    ಇನ್ನೊಂದು ಶೂ ಕಂಪೆನಿಗೆ ಅವನು ಸೇರಿಕೊಂಡ. ಆಬಿದ್‌ನ ಪ್ರತಿಭೆಯನ್ನು ತಿಳಿದುಕೊಂಡ ಕಂಪೆನಿಯು ಆತನಿಗೆ ಉತ್ತಮ ಹುದ್ದೆ ನೀಡಿತು.

    ಈ ಕತೆಯಿಂದ ಹಲವು ವಿಷಯಗಳು ನಿಮಗೆ ತಿಳಿದಿರಬಹುದು. ನಾವು ಇರುವ ಸ್ಥಳಗಳು ಬಹಳ ಮುಖ್ಯ. ಕೊಳದಲ್ಲಿ ಕಟ್ಟಿದ ನೀರು ಮತ್ತು ಸಮುದ್ರದಲ್ಲಿ ತೆರೆಯಾಗಿ ಅಪ್ಪಳಿಸುವುದು ನೀರೇ ಆಗಿದೆ. ಅದರ ಸ್ಥಳ ವಿಭಿನ್ನವಾಗಿದೆ ಎಂಬುದೇ ವ್ಯತ್ಯಾಸ. ಆದರೆ ಆ ಬದಲಾವಣೆ ಎಷ್ಟು ದೊಡ್ಡದು ಎಂದು ಯೋಚಿಸಿದರೆ ಅರ್ಥಮಾಡಿಕೊಳ್ಳಬಹುದು. ಟಿ