Category: ಕಥೆಗಳು

  • ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? 
ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

    ಮಕ್ಕಳು ಹೆಚ್ಚು ಸಿಹಿ ತಿನ್ನುತ್ತಿದ್ದಾರೆಯೇ..? ಅದನ್ನು ಕಡಿಮೆ ಮಾಡಲು ಇಲ್ಲಿವೆ ಮಾರ್ಗಗಳು

    ​”ಮಕ್ಕಳಲ್ಲವೇ, ಅವರು ಸಿಹಿ ಮತ್ತು ಮಿಠಾಯಿಗಳನ್ನು ತಿನ್ನಲಿ ಬಿಡಿ” ಎಂದು ಹೇಳುವವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಆದರೆ ನೆನಪಿರಲಿ, ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಆರೋಗ್ಯವೇ ನಮಗೆ ಮುಖ್ಯ.
    ​ಸಿಹಿ ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಮಕ್ಕಳ ವಿಷಯಕ್ಕೆ ಬಂದರೆ ಕೇಳಲೇಬೇಡಿ. ಚಾಕೊಲೇಟ್, ಕೇಕ್, ಸಿಹಿತಿಂಡಿ ಮತ್ತು ತಂಪು ಪಾನೀಯಗಳೆಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. “ಮಕ್ಕಳೇ ತಾನೇ, ಸ್ವಲ್ಪ ಹೆಚ್ಚು ತಿಂದರೆ ಏನಾಗುತ್ತದೆ?” ಎಂದು ನಿರ್ಲಕ್ಷಿಸಬೇಡಿ. ದೊಡ್ಡವರಂತೆ ಅತಿಯಾದ ಸಿಹಿ ಸೇವನೆಯು ಮಕ್ಕಳ ದೈನಂದಿನ ಜೀವನದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

    ಅತಿಯಾದ ಸಿಹಿ ಸೇವನೆಯಿಂದ ಆಗುವ ತೊಂದರೆಗಳು:

    ಹಸಿವು ಕಡಿಮೆಯಾಗುವುದು: ಸಕ್ಕರೆ ಅಂಶ ಹೆಚ್ಚಿರುವ ತಿಂಡಿಗಳನ್ನು ತಿನ್ನುವುದರಿಂದ ಮಕ್ಕಳ ಹಸಿವು ಕಡಿಮೆಯಾಗುತ್ತದೆ. ಇದರಿಂದ ಅವರು ಪೌಷ್ಟಿಕ ಆಹಾರಗಳನ್ನು ಸೇವಿಸಲು ಹಿಂಜರಿಯುತ್ತಾರೆ.

    ​ಪೋಷಕಾಂಶಗಳ ಕೊರತೆ: ಸರಿಯಾದ ಊಟ ಮಾಡದಿದ್ದರೆ ಮಗುವಿನ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ಕಬ್ಬಿಣಾಂಶ ಮತ್ತು ನಾರಿನಂಶದಂತಹ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

    ಆರೋಗ್ಯ ಸಮಸ್ಯೆಗಳು:

    ಹೆಚ್ಚು ಸಿಹಿ ತಿನ್ನುವುದರಿಂದ ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಅಲ್ಲದೆ, ಹಗಲಿನಲ್ಲಿ ಅತಿಯಾದ ಸಕ್ಕರೆ ಸೇವನೆಯು ಮಕ್ಕಳ ನಿದ್ರೆಯ ಮೇಲೂ ಪರಿಣಾಮ ಬೀರಬಹುದು.

    ಇದನ್ನು ನಿಯಂತ್ರಿಸುವುದು ಹೇಗೆ?

    ಊಟದ ನಂತರ ಸಿಹಿ ನೀಡಿ: ಒಂದು ವೇಳೆ ಮಗು ಸಿಹಿ ಕೇಳಿದರೆ, ಊಟದ ನಂತರ ಸ್ವಲ್ಪ ನೀಡುವ ಅಭ್ಯಾಸ ಮಾಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಹೀರಿಕೊಳ್ಳುವ ಪ್ರಮಾಣ ನಿಧಾನವಾಗುತ್ತದೆ.

    ಆಹಾರ ಕ್ರಮದ ಮೇಲೆ ನಿಗಾ ಇರಲಿ: ದಿನವಿಡೀ ಮಗುವಿಗೆ ಸರಿಯಾದ ಸಮಯಕ್ಕೆ ಊಟ, ತಿಂಡಿ ಮತ್ತು ಸಾಕಷ್ಟು ನೀರು ಕುಡಿಸುವ ಅಭ್ಯಾಸ ಮಾಡಿಸಿ. ಹೊಟ್ಟೆ ತುಂಬಿದ್ದರೆ ಅವರಿಗೆ ಸಿಹಿ ತಿನ್ನುವ ಹಂಬಲ ತಾನೇ ಕಡಿಮೆಯಾಗುತ್ತದೆ.

    ಬಹುಮಾನವಾಗಿ ಸಿಹಿ ನೀಡಬೇಡಿ: ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದಾಗ ಅಥವಾ ಯಾವುದಾದರೂ ಕೆಲಸ ಮಾಡಿದಾಗ ಸಿಹಿತಿಂಡಿ, ಚಾಕೊಲೇಟ್ ಅಥವಾ ಐಸ್ ಕ್ರೀಮ್ ನೀಡುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ “ಸಿಹಿ ತಿನ್ನುವುದು ಒಂದು ಬಹುಮಾನ ಅಥವಾ ಒಳ್ಳೆಯದು” ಎಂಬ ತಪ್ಪು ಕಲ್ಪನೆ ಮಕ್ಕಳಲ್ಲಿ ಮೂಡುತ್ತದೆ.

    ಎಲ್ಲಾ ​ಸಂದರ್ಭಗಳಲ್ಲೂ ಜಾಗರೂಕರಾಗಿರಿ: ಮನೆಯಲ್ಲಿ ಸಮಾರಂಭ ಅಥವಾ ಮದುವೆ ಇದ್ದಾಗಲೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಿತವಾಗಿ ಸಿಹಿ ತಿನ್ನಲು ಬಿಡಿ.

    ​ಮನೆಯಿಂದಲೇ ಉತ್ತಮ ಆಹಾರ ಪದ್ಧತಿಯನ್ನು ಕಲಿಸಿಕೊಡುವುದು ಪೋಷಕರ ಜವಾಬ್ದಾರಿ.

  • ಮಕ್ಕಳ Screen ಬಳಕೆಗೆ ಆಸ್ಟ್ರೇಲಿಯಾ ಮಾದರಿ ಕಾನೂನು: 
ಮದ್ರಾಸ್ ಹೈಕೋರ್ಟ್ ಸಲಹೆ

    ಮಕ್ಕಳ Screen ಬಳಕೆಗೆ ಆಸ್ಟ್ರೇಲಿಯಾ ಮಾದರಿ ಕಾನೂನು: ಮದ್ರಾಸ್ ಹೈಕೋರ್ಟ್ ಸಲಹೆ


    ​ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಮಾಧ್ಯಮಗಳ ಅತಿಯಾದ ವ್ಯಸನಕ್ಕೆ ಒಳಗಾಗುತ್ತಿರುವುದು ಮತ್ತು ಅಂತರ್ಜಾಲದಲ್ಲಿ ಅಶ್ಲೀಲ ವಿಷಯಗಳು ಯಾವುದೇ ಅಡೆತಡೆಯಿಲ್ಲದೆ ಲಭ್ಯವಿರುವುದು ಇಡೀ ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಈ ಕಳವಳಕಾರಿ ವಿದ್ಯಮಾನದ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿರುವ ಮದ್ರಾಸ್ ಹೈಕೋರ್ಟ್, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದನ್ನು ತಡೆಯಲು ಆಸ್ಟ್ರೇಲಿಯಾ ಮಾದರಿಯ ಕಾನೂನು ಜಾರಿಗೆ ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

    ಎಸ್. ವಿಜಯಕುಮಾರ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ. ರಾಮಕೃಷ್ಣನ್ ಅವರ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಐತಿಹಾಸಿಕ ಕಾನೂನನ್ನು ಅಂಗೀಕರಿಸಿದೆ.

    ಭಾರತದಲ್ಲೂ ಇಂತಹ ಕಾನೂನಿನ ಅಗತ್ಯವಿದ್ದು, ಅಂತಹ ವ್ಯವಸ್ಥೆ ಜಾರಿಗೆ ಬರುವವರೆಗೆ ಸರ್ಕಾರವು ಸಾರ್ವಜನಿಕರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
    ​ಪ್ರಸ್ತುತ ಕಾಲಘಟ್ಟದಲ್ಲಿ ಇಂತಹ ಕಠಿಣ ಕ್ರಮ ಅತ್ಯಂತ ಅನಿವಾರ್ಯವಾಗಿದೆ. ಏಕೆಂದರೆ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಷಯಗಳು ಮಕ್ಕಳ ಮೇಲೆ ಮಾನಸಿಕವಾಗಿ ತೀವ್ರ ಪ್ರಭಾವ ಬೀರುತ್ತಿದ್ದು, ಅವರನ್ನು ಸೈಬರ್ ಲೋಕದ ಅಪಾಯಗಳಿಗೆ ಒಡ್ಡುತ್ತಿವೆ.

    ಇಂಟರ್ನೆಟ್ ಸೇವಾ ಪೂರೈಕೆದಾರರು ಪೋಷಕರಿಗಾಗಿ ವಿಶೇಷ ನಿಯಂತ್ರಣ ವ್ಯವಸ್ಥೆಗಳನ್ನು ರೂಪಿಸಬೇಕಾದ ಅಗತ್ಯವಿದ್ದು, ಮಕ್ಕಳನ್ನು ದಾರಿ ತಪ್ಪಿಸುವ ಕಂಟೆಂಟ್‌ಗಳಿಂದ ದೂರವಿಡುವುದು ಇಂದಿನ ತುರ್ತು ಅಗತ್ಯವಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮದ ಕಪಿಮುಷ್ಠಿಗೆ ಸಿಲುಕುತ್ತಿರುವ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಆದಷ್ಟು ಬೇಗ ಆಸ್ಟ್ರೇಲಿಯಾ ಮಾದರಿಯ ಕಾನೂನು ತರುವ ಕುರಿತು ಚಿಂತಿಸಬೇಕಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

    ಭಾರತದಂತಹ ಬೃಹತ್ ದೇಶದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಇಂತಹ ನಿಯಮಗಳು ಜಾರಿಗೆ ಬರುವುದು ಅವರ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

  • ಬಂಧನ: ಕಥೆ

    ಬಂಧನ: ಕಥೆ

    ಇವತ್ತು ಗುರುವಾರ. ನನಗೆ ಅಲ್ಲಿಗೆ ಹೋಗಬೇಕಮ್ಮಾ… ಮಗಳು ಶಾಲೆಯಿಂದ ಬೇಗ ಬಂದರೆ… ಎಂದಿನಂತೇ ಏನಾದರೂ ಕಾರಣ ಹೇಳಿ ಬಿಡು ಅಮ್ಮಾ. ಅವಳಿಗಿಷ್ಟದ ತಿಂಡಿ ಮಾಡಿದ್ದೇನೆ…

    ಸಾಯಿರಾ ಸಿಂಗರಿಸಿಕೊAಡು ಬುರ್ಖಾ ಧರಿಸಿ ಹೊರಟಾಗ ತಾಯಿ ಫಾತೀಮಾ ಟಿಫಿನ್ ಬಾಕ್ಸ್ನ್ನು ಮಗಳ ಕೈಗೆ ಕೊಡುತ್ತಾ ಇದರಲ್ಲಿ ಶೇವಿಗೆ ಪಾಯಸ ಇದೆ, ಆತನಿಗೆ ತುಂಬಾ ಇಷ್ಟ ತಾನೆ… ಕೊಡು.. ಎಂದರು ನಗುತ್ತಾ, ಅಂಗಳದಲ್ಲಿಟ್ಟ ಸ್ಕೂಟರ್ ಹತ್ತಿ ಆಕೆ ಕೈಯಾಡಿಸಿದಳು.

    ಶಾಂತ ಲಾಡ್ಜ್’ನೊಳಗೆ ಸಾಯಿರಾ ಬಂದಾಗ ವಾಚ್‌ಮ್ಯಾನ್ ಪರಿಚಯದ ನಗೆ ಬೀರಿ ಸಲಾಮ್ ಹೇಳಿದ. ಸಾರ್… ಬಂದಿದ್ದರಾ? ಸಾಯಿರಾ ಕೇಳಿದಾಗ, ವಾಚ್‌ಮ್ಯಾನ್ ನಸುನಗುತ್ತಾ ಹೌದು ಮ್ಯಾಡಮ್… ಅವರು ಬಂದು ಆದಾಗಲೇ ಅರ್ಧ ಗಂಟೆ ಆಗಿರಬಹುದು. ಸಾಯಿರಾ ಅವಸರದಲ್ಲಿ ಲಿಫ್ಟ್ನೊಳಗೆ ನುಸುಳಿಕೊಂಡು ಉಸಿರು ಬಿಟ್ಟಳು. ರೂಮ್ ನಂಬರ್ ನೂರಹನ್ನೊಂದರ ಮುಂದೆ ನಿಂತ ಸಾಯಿರಾ ಮೆಲ್ಲನೆ ಬಾಗಿಲು ತಟ್ಟಿದಳು. ಮೆಲ್ಲನೆ ಬಾಗಿಲು ತೆರೆಯಿತು. ಸಾಯಿರಾ ನಸು ನಗುತ್ತಾ ತನ್ನೆದುರು ನಿಂತವನನ್ನು ನೋಡಿದಳು. ಸಲಾಮ್ ಹೇಳಿದ ಆತ ಅವಳನ್ನು ಬರಸೆಳೆದುಕೊಳ್ಳುತ್ತಾ, “ಯಾಕಿಷ್ಟು ತಡ ಮಾಡಿದೆ ಚಿನ್ನಾ?” ಎಂದ ನಸು ಮುನಿಸು ತೋರಿಸುತ್ತಾ. ಸ್ಸಾರೀ… ಮಗಳನ್ನು ಶಾಲೆಗೆ ಕಳುಹಿಸಿ ಬರಬೇಕಲ್ಲವೇ? ಬೇಸರ ಮಾಡಬೇಡಿ… ಬರುವ ವಾರ ನಿಮಗಿಂತಲೂ ಮುಂಚೆ ನಾನೇ ಬಂದು ನಿಮ್ಮನ್ನು ಕಾಯುತ್ತೇನೆ… ಸರಿನಾ? ಅಂದಹಾಗೆ ಅಮ್ಮ ನಿಮಗೆ ಪಾಯಸ ಕೊಟ್ಟು ಕಳುಹಿಸಿದ್ದಾಳೆ. ನೀವು ನಿಮ್ಮ ಬಾಹುಗಳ ಬಿಗಿತವನ್ನು ಸಡಲಿಸಿದರೆ… ನಾನು ಟಿಫಿನ್ ಬಿಚ್ಚಬಹುದೂ… ಸಾಯಿರಾ ತುಂಟ ನೋಟದೊಂದಿಗೆ ಹೇಳಿದಾಗ ಅವನು ಆಕೆಯ ಸೊಂಟದಿಂದ ಕೈ ತೆಗೆದ.

    ವಾಹ್! ಅತ್ತೆಯ ಕೈ ರುಚಿ ಅದ್ಭುತ! ನನ್ನ ಅಮ್ಮನೂ ಇದೇ ರೀತಿ ಪಾಯಸ ಮಾಡುತ್ತಿದ್ದರು… ಪಾಯಸವನ್ನು ಚಪ್ಪರಿಸುತ್ತಾ ಪತಿ ಹೇಳಿದಾಗ ಸಾಯಿರಾ ಖುಶಿಗೊಂಡಳು. ಹನೀಫ್ ತಾನು ತಂದ ಮಲ್ಲಿಗೆಯನ್ನು ಪತ್ನಿಯ ತಲೆಗೆ ತಾನೇ ಮುಡಿಸುತ್ತಾ, “ನೀನು ಸದಾ ಮದುಮಗಳಂತೇ ನನ್ನ ಮುಂದೆ ಇರಬೇಕು ಸಾಯಿರಾ, ನಿನ್ನ ಮಗಳ ಹುಟ್ಟಿದ ಹಬ್ಬ ನಾಳೆ ತಾನೆ. ನನಗೆ ದಾರಿಯಲ್ಲಿ ಬರುತ್ತಿರಬೇಕಾದರೆ ನೆನಪಾಯಿತು. ಹೋದ ವರ್ಷ ಅವಳಿಗೆ ಕಾಲಿನ ಗೆಜ್ಜೆ ನೀಡಿದ್ದೆ. ಈ ಬಾರಿ ನಾನು ಏನು ಖರೀದಿಸಲಿ…” ಎಂದು ಚಿಂತಿಸುತ್ತಿದ್ದಾಗ ಸುಂದರವಾದ ಡ್ರೆಸ್ ಶೋಕೇಸ್‌ನಲ್ಲಿ ಕಂಡು ಬಂತು. ಅದನ್ನೇ ಉಡುಗೊರೆಯಾಗಿ ತಂದೆ. ನೀವು… ಅವಳನ್ನು ಪ್ರೀತಿಸುತ್ತೀರಿ… ಆದರೆ… ಆಕೆಗೆ ನಿಮ್ಮ ಪರಿಚಯವೂ ಇಲ್ಲ! ಅವಳ ಶಾಲೆಯ ಫೀಸ್, ಆಕೆಗೆ ವಸ್ತ್ರ, ಉಡುಗೊರೆ ಎಲ್ಲವನ್ನೂ ನೀವು ಕೊಡುತ್ತಿದ್ದೀರಿ, ಅವಳಿಗೆ ಅದನ್ನೆಲ್ಲಾ ನೀಡುತ್ತಿರುವ ವ್ಯಕ್ತಿಯ ಕುರಿತು ಏನೂ ತಿಳಿದಿಲ್ಲ. ನಾನು ಏನು ಮಾಡಲಿ ಹನೀಫ್? ಯಾವಾಗ ಅವಳಿಗೆ ತಿಳಿಸುವುದು? ಆಕೆಯ ಅಮ್ಮನ ಬದುಕಲ್ಲಿ ಪತಿ’ ಎಂಬ ಓರ್ವನಿದ್ದಾನೆ… ಆಕೆಗೆ ಮಲ ತಂದೆ ಇದ್ದಾರೆಂದು ಹೇಗೆ ತಿಳಿಸಲಿ?

    ಅವಳ ಅಪ್ಪ ಆಕ್ಸಿಡೆಂಟ್‌ನಲ್ಲಿ ತೀರಿ ಹೋದ ನಂತರ ನಾನು ಬೇರೆ ಮದುವೆನೇ ಆಗಲಾರೆ ಎಂದು ನಿರ್ಧಾರ ಮಾಡಿದ್ದೆ. “ಅಮ್ಮಾ… ನಿಮ್ಮನ್ನು ನಾನೇ ಸಾಕುತ್ತೇನೆ, ನಾನು ಕಲಿತು ಉದ್ಯೋಗ ಮಾಡ್ತೇನೆ, ಅಪ್ಪನನ್ನು ನೆನೆದು ಕಣ್ಣೀರು ಹಾಕುತ್ತಿರಬೇಡಿ…!” ಎಂದು ನನ್ನನ್ನು ಅಂದು ಸಂತೈಯಿಸಿದಾಗ ಪಿಂಕಿಗೆ ಎಂಟು ವರ್ಷ. ಈಗ ಹದಿನಾಲ್ಕು ವರ್ಷಕ್ಕೆ ಕಾಲಿಡುತ್ತಿದ್ದಾಳೆ. ನಿಮ್ಮನ್ನು ಮದುವೆ ಆಗಿ ಎರಡು ವರ್ಷ ಆಯಿತು. ಪಿಂಕಿಗೆ ಅವಳ ಅಮ್ಮನ ಬದುಕಲ್ಲಿ ಬೇರೊಬ್ಬ ಬರುವುದೇ ಇಷ್ಟವಿಲ್ಲ ಎಂಬ ಸತ್ಯ ನನಗೆ ತಿಳಿದಿತ್ತು. ಅಮ್ಮನ ಬಲವಂತ ಹಾಗೂ ತನ್ನ ಭವಿಷ್ಯದ ಚಿಂತೆ ಮಾಡಿಕೊಂಡು ನಾನು ಮರು ವಿವಾಹಕ್ಕೆ ಮನಸ್ಸು ಮಾಡಿದ್ದೆ. ಇಪ್ಪತೆಂಟರ ಹರೆಯಕ್ಕೇ ನಾನು ಗಂಡನನ್ನು ಕಳೆದುಕೊಂಡಾಗ ಮಗಳಿಗಾಗಿ ಮಾತ್ರ ಅಂದು ಬದುಕಿದ್ದೆ. ವರ್ಷ ಕಳೆದಂತೇ ರಾತ್ರಿಯು ನನ್ನನ್ನು ನಿದ್ರಾಹೀನಳನ್ನಾಗಿಸಿತು. ಬಯಕೆಗಳನ್ನು ತಡೆದುಕೊಳ್ಳಲು ನಾನು ಬಚ್ಚಲು ಕೋಣೆಯೊಳಗೆ ಹೊಕ್ಕು ತಣ್ಣೀರನ್ನು ತಲೆಮೇಲೆ ಹೊಯ್ದುಕೊಳ್ಳುತ್ತಿದ್ದೆ. ಉಪವಾಸ ವ್ರತ ಮಾಡುತ್ತಿದ್ದೆ. ಯಾರೊಂದಿಗು ಹೇಳಲಾಗದ ಈ ಒಂಟಿಯಾತನೆಯಲ್ಲಿ ನಾನು ಬೆಂದು ಹೋಗುತ್ತಿದ್ದಾಗ ನನ್ನ ದೊಡ್ಡಪ್ಪನನ್ನು ಭೇಟಿ ಆಗಲು ನೀವು ಮನೆಗೆ ಬಂದಿರಿ. ನನ್ನನ್ನು ನೋಡಿದಿರಿ. ನನ್ನ ಕಥೆಯೆಲ್ಲಾ ನಿಮಗೆ ತಿಳಿಯಿತು. ಪಿಂಕಿಗೆ ಈಗ ತಿಳಿಯುವುದೇ ಬೇಡಾ, ಪ್ರಾಯಕ್ಕೆ ಬಂದಾಗ ತಿಳಿದೇ ತಿಳಿಯುತ್ತದೆ… ಎಂದೆಲ್ಲಾ ಅಮ್ಮ ಸಮಧಾನಿಸಿ ನಿಮ್ಮೊಂದಿಗೆ ಮದುವೆಗೆ ಒಪ್ಪಿಸಿದರು. ನಾವಿಂದು ಗುಟ್ಟಾಗಿ ದಾಂಪತ್ಯ ನಡೆಸುತ್ತಿದೇವೆ… ಇನ್ನು ಎಷ್ಟು ಸಮಯ ಹನೀಫ್…? ಈ ರೀತಿ ಗುಟ್ಟು ಇಡುವುದು? ಪ್ರತೀ ಗುರುವಾಗ ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ಪ್ರಶ್ನಿಸುತ್ತಿದ್ದಾಳೆ ಮಗಳು. ಸುಳ್ಳು ಹೇಳಿ ಬರುವುದೇ ಕಷ್ಟವಾಗುತ್ತಿದೆ. ನಾನು ನಿಮ್ಮೊಂದಿಗೆ ಮೊಬೈಲ್‌ನಲ್ಲಿ ಹರಟುತ್ತಿದ್ದರೆ ಸಂಶಯದಿಂದ ನೋಟ ಹರಿಸುತ್ತಿದ್ದಾಳೆ. ಅವಳಿಗೆ ಸತ್ಯ ತಿಳಿಸಿ ಬಿಡಬೇಕು ಎಂದು ಈಗೀಗ ಅನಿಸುತ್ತಿದೆ. ಆಕೆ ದೊಡ್ಡವಳಾಗಿದ್ದಾಳೆ… ಅರ್ಥ ಮಾಡಿಕೊಳ್ಳಬಹುದೂ…

    ಸಾಯಿರಾಳ ಮಾತುಗಳನ್ನು ಮೌನವಾಗಿ ಆಲಿಸುತ್ತಿದ್ದ ಹನೀಫ್ ಪತ್ನಿಯನ್ನು ಸಮಧಾನಿಸಿದ. ಪಿಂಕಿಗೆ ಮದುವೆ ಸಮಯ ಬಂದಾಗ ನಾನು ಮುಂದೆ ಬರಲೇಬೇಕಲ್ಲವೇ? ಸಹನೆ ವಹಿಸು.. ಅವಳು ಈ ಸತ್ಯವನ್ನು ಒಪ್ಪಿಕೊಳ್ಳುವಳು. ಸಾಯಿರಾ ಅವನ ಎದೆಗೆ ಮುಖ ಒತ್ತಿ ಕಣ್ಣು ಮುಚ್ಚಿದಳು. ಪುರುಷನ ಆಸರೆ ಇಲ್ಲದೇ ಬದುಕುವುದೇ ಕಷ್ಟ… ನಿಮ್ಮಂತಹ ಒಳ್ಳೆಯ ಸಂಗಾತಿಯನ್ನು ನಾನು ಪಡೆದುಕೊಂಡದ್ದು ನನ್ನ ಪುಣ್ಯ. ಮನಸ್ಸಲ್ಲೇ ಪಿಸುಗುಟ್ಟಿಕೊಂಡಳು.

    ಮಮ್ತಾಜ್ ಮಲಗಿದ್ದಲ್ಲಿಂದಲೇ ಮೊಬೈಲ್‌ಗೆ ಕರೆ ಮಾಡಿದಳು. ಪತ್ನಿಯ ನಂಬರ್ ನೋಡಿ ಹನೀಫ್ ಆತುರದಿಂದ ರಿಸೀವ್ ಮಾಡಿದ.

    ರೀ… ನೀವು ಬರುವಾಗ ನನಗೆ ಎರಡು ನೈಟ್ ಡ್ರೆಸ್ ತನ್ನಿ. ಮಂಗಳೂರಿನಲ್ಲಿ ಒಳ್ಳೆಯ ನೈಟಿ ಸಿಗುತ್ತದೆ. ಬರಲು ತುಂಬಾ ತಡಮಾಡ ಬೇಡಿ… ನನ್ನ ಮಾತ್ರೆಗಳನ್ನೂ ಮರೆಯದೇ ತಂದು ಬಿಡಿ.
    ಓ.ಕೆ… ಮಮ್ತಾ, ಡ್ರೆಸ್ ರ‍್ತೇನೆ. ಬೇರೆ ಏನಾದರೂ ಬೇಕಾ? ಊಟ ಮಾಡು… ನನ್ನನ್ನು ಕಾಯುತ್ತಾ ಕುಳಿತಿರಬೇಡಾ… ಹನೀಫ್ ಪತ್ನಿಗೆ ಹೇಳುತ್ತಿರುವುದನ್ನು ಕೇಳಿ ಸಾಯಿರಾ ಶಬ್ದವಾಗದಂತೇ ಕುಳಿತಳು.
    ಹನೀಫ್ ಸಾಯಿರಾಳತ್ತ ತಿರುಗಿ, “ಚಿನ್ನಾ… ನನಗೆ ಎರಡು ನೈಟ್ ಡ್ರೆಸ್ ಖರೀದಿ ಮಾಡಬೇಕು ನಿನಗೆ ತಿಳಿದಿರುತ್ತದೆ… ಹೆಂಗಸರು ಯಾವ ರೀತಿಯ ಡ್ರೆಸ್ ಹಾಕುವುದೆಂದೂ…”
    ನಿಮ್ಮ ಪತ್ನಿ ತುಂಬಾ ದಪ್ಪದ ಹೆಂಗಸಾ? ಸಾಯಿರಾ ಕೇಳಿದಳು.

    ಹೌದೂ… ಇದೀಗ ದಪ್ಪ ಆಗಿರುವುದು, ಪಕ್ಷವಾತಕ್ಕೆ ಈಡಾದ ಬಳಿಗೆ ಹಾಸಿಗೆಯ ರೋಗಿಯಾಗಿ ಮಲಗಿದ್ದಲ್ಲೇ ಇದ್ದಾಗ ವ್ಯಾಯಾಮ ಇಲ್ಲ… ದಪ್ಪ ಆಗುತ್ತಾ ಹೋದಳು. ಮೂರು ವರ್ಷದಿಂದ ನಾನೇ ಅವಳ ಸೇವೆ ಮಾಡುತ್ತಿರುವುದು. ಮಗ ಸೊಸೆ ಅಮೇರಿಕಾದಿಂದ ಎಂದಾದರೂ ಬಂದಾಗ ತುಂಬಾ ಖುಶಿಯಲ್ಲಿರುತ್ತಾಳೆ. ಈಗ ನಾನು ಅವಳ ಕಣ್ಣ ಮುಂದೆನೇ ಇರಬೇಕು. ಅದಕ್ಕೇ ಎಲ್ಲಾ ವ್ಯಾಪಾರವನ್ನು ತಮ್ಮಂದಿರಿಗೆ ವಹಿಸಿ ಅವಳೊಂದಿಗೆ ಇರುವುದು. ಗುರುವಾರದ ದಿನ ಮಾತ್ರ ಮಂಗಳೂರಿನಲ್ಲಿ ಕೆಲಸ ಇದೆಯೆಂದು ಹೇಳಿ ಬರುತ್ತೇನೆ. ನಿನ್ನನ್ನು ಒಮ್ಮೆ ನಮ್ಮ ಕಾರ್ಕಳದ ಮನೆಗೆ ಕರೆದೊಯ್ಯ ಬೇಕೆಂದು ಆಸೆ ಇದೆ. ಆದ್ರೆ… ಮಮ್ತಾಳಿಗೆ ನಿನ್ನನ್ನು ಏನೆಂದು ಪರಿಚಯಿಸುವುದು? ಅವಳ ಪತಿ ಎಂದಿಗೂ ಇನ್ನೊಂದು ಹೆಂಗಸಿನತ್ತ ನೋಡದಂತಹ ಏಕಪತ್ನೀ ವ್ರತನಾಗಿರಬೇಕೆಂದು ಅವಳು ಬಯಸುತ್ತಾಳೆ. ನಮ್ಮ ದಾಂಪತ್ಯ ಮಧುರವಾಗಿದೆ. ನಾನು ಹೆಣ್ಣಿನ ಸಂಗ ಇಲ್ಲದೇ ಹೇಗೆ ಜೀವಿಸುತ್ತಿದ್ದೇನೆಂದು ಅವಳು ಯೋಚಿಸುವುದೇ ಇಲ್ಲ. ಅವಳ ಮಟ್ಟಿಗೆ ನಾನು ಐವತ್ತರ ಪ್ರಾಯದವನು ನನಗೆ ಸೆಕ್ಸ್ನ ಅಗತ್ಯವಿಲ್ಲ ಎಂದು ತಿಳಿದರಲೂ ಬಹುದು. ಅವಳಿಗೆ ಶುಗರ್, ಬಿ.ಪಿ. ಕೂಡಾ ಇದೆ. ಆದರಿಂದ ನಾನು ಅವಳಿಗೆ ಯಾವುದೇ ಮಾನಸಿಕ ನೋವು ಕೊಡದೇ ಸತ್ಯವನ್ನು ಮುಚ್ಚಿಟ್ಟು ಬಿಟ್ಟೆ. ಕೆಲವು ವೇಳೆ ಒಬ್ಬರ ಸುಳ್ಳು ಮುಚ್ಚುಮರೆಯ ಇನ್ನೋರ್ವರಿಗೆ ಬದುಕಲ್ಲಿ ಸಂತಸ ನೀಡುತ್ತದೆ. ಅವಳು ಆಕೆಯ ನಂಬಿಕೆಯಲ್ಲಿ ನೆಮ್ಮದಿಯಲ್ಲಿದ್ದಾಳೆ ಎಂದಾದರೂ ತಿಳಿಯಬಹುದೂ… ನೋಡುವ.

    ಪಿಂಕಿ ಹದಿಹರೆಯಕ್ಕೆ ಕಾಲಿಟ್ಟಳು. ಹನೀಫ್‌ನ ಗೆಳೆಯನ ಮಗ ಇಂಜಿನಿಯರ್ ತನ್ನ ಮಲ ಮಗಳಾದ ಪಿಂಕಿಯ ಫೋಟೋವನ್ನು ಹನೀಫ್ ತೋರಿಸಿದಾಗ ಖುಶಿಯಿಂದಲೇ ವಧುವನ್ನು ಒಪ್ಪಿಕೊಂಡ. ಹೆಣ್ಣು ನೋಡುವ ಶಾಸ್ತçವೂ ಮುಗಿದು ಮದುವೆಗೆ ದಿನ ನಿಗದಿಯಾಯಿತು. ಮಲ ಮಗಳ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಹನೀಫ್ ವಹಿಸಿಕೊಂಡಿದ್ದ. ಮದುವೆಯ ಕಾಗದ ಪ್ರಿಂಟ್ ಆಗಲು ಬಾಕಿ ಇತ್ತು. ಪಿಂಕಿ ತಾನೇ ಮದುವೆ ಕಾಗದದ ರೂಪರೇಖೆಯನ್ನು ಸಿದ್ಧಪಡಿಸಿ ಅಮ್ಮನ ಕೈಗೆ ನೀಡಿದಳು.

    ಅಮ್ಮಾ… ಇದರಲ್ಲಿ ಬರೆದಂತೇ ಪ್ರಿಂಟ್ ಆಗಲಿ. ನನ್ನ ಗೆಳತಿಯರೆಲ್ಲಾ ಬರುತ್ತಾರೆ. ನಾವು ಹೆಚ್ಚು ಜನರನ್ನು ಆಮಂತ್ರಿಸುವುದು ಬೇಡಾ. ಮದುವೆಗೆ ಬಹಳ ಖರ್ಚು ಆಗುತ್ತಾ ಇದೆ. ಈಗಲೇ ನನ್ನ ಬಂಗಾರ, ವಸ್ತçಕ್ಕೆಂದೇ ಎರಡುವರೆ ಲಕ್ಷ ಖರ್ಚು ಮಾಡಿದ್ದಿ. ಅದ್ಧೂರಿ ಮದುವೆ ಬೇಡಾ…

    ಮಗಳು ಹೇಳಿದಾಗ ಸಾಯಿರಾ ಮದುವೆಯ ಕಾಗದತ್ತ ಕಣ್ಣು ಹಾಯಿಸಿದಳು. ಪಿಂಕಿ ಹಾಗೂ ವರನ ಹೆಸರಿನ ಕೆಳಗೆ ಮಿಸ್ಟರ್ ಹನೀಫ್ ಮಿಸೆಸ್ ಸಾಯಿರಾ ಎಂದು ಪ್ರಿಂಟಾಗಿರುವ ಅಕ್ಷರಗಳನ್ನು ನೋಡಿ ಸಾಯಿರಾ ದಿಗ್ಭçಮೆಯಿಂದ ಮಗಳತ್ತ ನೋಡಿದಳು.

    ಯಾಕಮ್ಮಾ… ಈ ರೀತಿ ಹೆದರಿ ಬಿಟ್ಟೆ! ನನಗೆ ಎಲ್ಲಾ ಗೊತ್ತಾಗಿದೆ. ನನ್ನನ್ನು ಬೆನ್ನ ಹಿಂದೆ ನಿಂತು ಪೋಷಿಸುವ ಓರ್ವ ಅಪ್ಪ ಇರುವುದು ನೀನು ತಿಳಿಸದೇ ಹೋದ್ರೂ ನಾನು ಪತ್ತೆ ಹಚ್ಚಿದೆ. ಇಂದು ನಾನು ವಿದ್ಯಾವಂತಳಾಗಿ ನಿಂತು, ಒಳ್ಳೆಯ ಗಂಡು ನನ್ನನ್ನು ಮದುವೆ ಆಗಲು ಸಿದ್ಧವಾದದ್ದು ನನ್ನ ಮದುವೆಯ ಜವಾಬ್ದಾರಿ ಎಲ್ಲವನ್ನೂ ನಿರ್ವಹಿಸಿದ ಆ ಪುಣ್ಯಾತ್ಮ ನನಗೆ ಜನ್ಮ ನೀಡದ ತಂದೆ ಆಗಿರಬಹುದೂ… ಆದ್ರೆ ನನ್ನ ಅಮ್ಮನ ಬದುಕಿಗೆ ಆಸರೆಯಾಗಿ ನಿಂತ ಅವರು ನನಗೆ ತಂದೆ ಸಮಾನ ತಾನೆ? ನಾನು ಅಜ್ಜಿಯೊಂದಿಗೆ ಎಲ್ಲಾ ಕೇಳಿ ತಿಳಿದುಕೊಂಡೆ. ನಾನು ಎಷ್ಟು ಸ್ವಾರ್ಥಿ ಮಗಳಲ್ಲಾ… ಅಮ್ಮಾ… ಬುದ್ಧಿ ಇಲ್ಲದ ವಯಸ್ಸಲ್ಲಿ ನಾನು ಏನೋ ಅಂದಿದ್ದಕ್ಕೆ ನೀನು ನನ್ನ ಮುಂದೆ ರಹಸ್ಯ ಬಾಯಿ ಬಿಡಲಿಲ್ಲ. ಅಮ್ಮಾ… ನಾನು ಅವರನ್ನು ಅಪ್ಪಾ’ ಎಂದು ಕರೆಯಬಹುದೇ? ಸಾಯಿರಾ ಕುಳಿತಲ್ಲಿಂದ ಒಮ್ಮೆಲೇ ಎದ್ದು ನಿಂತು ಮಗಳನ್ನು ಬಿಗಿಯಾಗಿ ಅಪ್ಪಿ ಹಿಡಿದು ಬಿಕ್ಕಳಿಸಿದಳು. ಅಮ್ಮಾ… ನನಗೆ ನೆಮ್ಮದಿಯಾಯಿತು. ನಾನು ವಿವಾಹ ಆಗಿ ಹೋದ ನಂತರ ನೀನು ಒಂಟಿಯಾಗಿರಲಾರೆ. ನನಗೆ ಅವರನ್ನು ನೋಡಬೇಕಮ್ಮಾ… ಸಾಯಿರಾಳ ಮೊಬೈಲ್ ರಿಂಗಾಯಿತು. ಹನೀಫ್‌ನ ನಂಬರ್ ನೋಡಿ ಖುಶಿಯಿಂದ ಸಾಯಿರಾ ಮಗಳತ್ತ ನೋಡಿ, “ನೀನು ಕೇಳುವಾಗಲೇ ನಿನ್ನ ಅಪ್ಪನ ಕರೆ ಬಂತು… ಮಾತನಾಡು ಮಗಳೇ…” ಎಂದು ಮೊಬೈಲ್ ನೀಡಿದಳು. ಪಿಂಕಿ ನಡುಗುವ ಕೈಯಿಂದ ಮೊಬೈಲ್ ತಗೊಂಡು ಕಿವಿಗೆ ಒತ್ತಿಕೊಂಡಳು.

    ಹಲೋ… ಆಚೆಯಿಂದ ಧನಿ ಕೇಳಿ ಬಂತು. ಪಿಂಕಿ ಹೆದರುತ್ತಲೇ… “ಹಲೋ ಅಸ್ಸಾಲಾಮ್ ಅಲೈಕುಮ್ ಡ್ಯಾಡ್… ನಾನು ಪಿಂಕಿ ಮಾತನಾಡುವುದೂ…” ಎಂದಳು. ಏನೆAದೇ…! ಡ್ಯಾಡ್!? ಇನ್ನೊಮ್ಮೆ ಹೇಳೂ ಪಿಂಕೀ… ಹನೀಫ್‌ನ ಧ್ವನಿ ಭಾರವಾಗಿ ಗದ್ಗದಿತವಾಗಿತ್ತು. ಹಾಯ್… ಡ್ಯಾಡ್! ಹೌ ಆರ್ ಯೂ? ನನಗೆ ಎಲ್ಲಾ ವಿಷಯ ತಿಳಿದಿದೆ. ನಿಮ್ಮನ್ನು ಭೇಟಿ ಆಗಲು ಕಾತುರಿಸುತ್ತಿದ್ದೇನೆ ಡ್ಯಾಡ್… ಥ್ಯಾಂಕ್ಸ್, ಅಲ್‌ಹಮ್ದುಲಿಲ್ಲಾಹ್! ನನ್ನ ಎದೆಯ ಭಾರ ಕಡಿಮೆ ಆಯಿತು. ಅಂದಹಾಗೇ… ಒಂದು ವಿಷಯ ಹೇಳಲು ಕಾಲ್ ಮಾಡಿದ್ದೆ, ಅರ್ಜೆಂಟ್… ಅಮ್ಮನಿಗೆ ಸೆಲ್ ನೀಡೂ… ಬೇಗಾ… ಎಂದರು ಆತುರದಿಂದ. ಅಮ್ಮಾ… ಅಪ್ಪನಿಗೆ ಏನೋ ಅರ್ಜೆಂಟ್ ಮಾತನಾಡಬೇಕಂತೇ ನಿನ್ನ ಬಳಿ… ಹಲೋ… ಏ… ಏನೂರೀ…? ಸಾಯಿರಾ ಗಾಬರಿಯಿಂದ ಕೇಳಿದಳು. ನೀನು ಬೇಗನೇ ಹೊರಟು ಸಿಟಿ ಆಸ್ಪತ್ರೆಗೆ ಬಾ. ಮಮ್ತಾಜ್ ಸೀರಿಯಸ್ ಆಗಿದ್ದಾಳೆ. ಒಮ್ಮೆ ಅವಳನ್ನು ನೋಡು, ಡಾಕ್ಟರ್ ಭರವಸೆ ಬಿಟ್ಟಿದ್ದಾರೆ. ನಿಮ್ಮವರಿಗೆ ಸುದ್ಧಿ ಮುಟ್ಟಿಸಲು ಹೇಳಿದ್ರು… ನೀನು ಪಿಂಕಿ ಒಟ್ಟಿಗೇ ಬೇಗನೇ ಬಂದು ಬಿಡು. ಸಾಯಿರಾ

    ಮಗಳೊಂದಿಗೆ ಆಸ್ಪತ್ರೆಗೆ ಬಂದಾಗ ಐ.ಸಿ. ರೂಮಲ್ಲಿ ಹನೀಫ್ ಅಳುತ್ತಾ ಮಮ್ತಾಜ್‌ನ ಪಕ್ಕ ನಿಂತಿದ್ದರು. ಸಾಯಿರಾ ಮೆಲ್ಲನೇ ಮಮ್ತಾಜ್‌ನ ಹತ್ತಿರ ನಡುಗುತ್ತಾ ನಿಂತಳು. ಮಮ್ತಾಜ್‌ನ ಕಣ್ಣು ನಿರೀಕ್ಷಿಸುತ್ತಿತ್ತು… ಆಕೆಯನ್ನೂ ಸಾಯಿರಾಳನ್ನು ಸನ್ನೆಯಿಂದ ಹತ್ತಿರ ಕರೆದಳು. ನೀನೂ.. ಸಾ…ಯಿ…ರಾ… ತಾನೆ? ಆಕೆಯ ಕೈಗಳನ್ನು ಮೆಲ್ಲನೇ ಮೇಲೆತ್ತಿ ಕೇಳಿದಳು. ನನಗೆ ಗೊತ್ತಿದೇ… ಹನೀಫ್‌ನತ್ತ ಕೈ ತೋರಿಸಿ ಆಕೆ ನಸು ನಗು ಬೀರಿದಳು. ಮೊಬೈಲ್‌ನಲ್ಲಿತ್ತು ನಿನ್ನ ಹೆಸರು. ತುಂಬಾ ಒಳ್ಳೆಯವರು ನನ್ನ ಗಂಡ. ಅವರನ್ನು ಕೈ ಬಿಡಬೇಡಾ… ಒಂದು ವರುಷದಿಂದ ನಿನ್ನನ್ನು ನೋಡಲು ಬಯಸುತ್ತಿದ್ದೆ… ಇಂದು ಕೊನೆಗಳಿಗೆಯಲ್ಲಿ ಕಾಣುವಂತಾಯಿತೂ… ನನ್ನ ಮಗ… ಸಲ್ಮಾನ್‌ಗೆ ನೀನುಅಮ್ಮ’ ಆಗಬೇಕೂ… ನನ್ನ ಮನೆಯಲ್ಲಿ… ಇರಬೇಕೂ… ಮಮ್ತಾಜ್ ಏದುರಿಸಿರು ಬಿಡ ತೊಡಗಿದಳು. ಕಣ್ಣುಗಳು ನೋಟ ನೆಟ್ಟಿರುವಂತೇ ದೇಹ ತಟಸ್ಥವಾಯಿತು.

    ಸಾಯಿರಾಳ ಕೈಯನ್ನು ಬಿಗಿಯಾಗಿ ಹಿಡಿದು ಮಮ್ತಾಜ್‌ಳ ತೆರೆದ ಕಣ್ಣನ್ನು ಮುಚ್ಚಿದ ಸಾಯಿರಾ ಕಂಬನಿ ಒರೆಸಿಕೊಂಡು ಪತಿಯತ್ತ ನೋಡಿದಳು. ದುಃಖದಿಂದ ಕುಸಿದ ಹನೀಫ್‌ರನ್ನು ಪಿಂಕಿ ಹಿಡಿದುಕೊಂಡು ಸಂತೈಯಿಸುತ್ತಿರುವುದು ಕಾಣಿಸಿತೂ… ಡ್ಯಾಡ್… ಧೈರ್ಯ ವಹಿಸಿಕೊಳ್ಳಿ… ಮಗಳ ಮಾತುಗಳು ಅವರ ಮನಸ್ಸಿಗೆ ಹಾಯೆನಿಸಿದವು.

    ಶಹನಾಝ್ ಎಂ.

  • ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? 
ಇಲ್ಲಿದೆ ಪರಿಹಾರ ಸೂತ್ರಗಳು

    ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? ಇಲ್ಲಿದೆ ಪರಿಹಾರ ಸೂತ್ರಗಳು

    ಮಾವಿನ ತೋಪಿನಲ್ಲಿ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದ ಹಳೆಯ ದಿನಗಳು ಕೇವಲ ನೆನಪು. ಆ ಉತ್ಸಾಹದ ಬದಲಿಗೆ, ಇಂದು ಮನೆಗಳ ನಾಲ್ಕು ಗೋಡೆಗಳ ಒಳಗೆ ಬಂಧಿಯಾಗಿರುವ ಹೊಸ ಪೀಳಿಗೆಯೊಂದು, ರೀಲ್‌ಗಳು ಮತ್ತು ಶಾರ್ಟ್ಗಳ ಅಂತ್ಯವಿಲ್ಲದ ಹರಿವನ್ನು ನೋಡುವುದನ್ನು ನಾವು ನೋಡುತ್ತಿದ್ದೇವೆ.

    ಪ್ರತಿಯೊಂದು ಯುಗದಲ್ಲೂ, ವಿಭಿನ್ನ ವ್ಯಸನಗಳು ಮನುಷ್ಯನನ್ನು ವಶಪಡಿಸಿಕೊಳ್ಳಲು ಬಂದಿವೆ. ಅಫೀಮು ಮತ್ತು ಮದ್ಯದಿಂದ ಕೂಡಿದ ವ್ಯಸನ ಅನೇಕ ಜೀವಗಳನ್ನು ನಾಶಮಾಡಿವೆ. ಇಂದು, ಡಿಜಿಟಲ್ ಹೆರಾಯಿನ್ ಎಂಬ ಸುಂದರ ಹೆಸರಿನ ಮೊಬೈಲ್ ಫೋನ್‌ಗಳು ಅವುಗಳ ಸ್ಥಾನವನ್ನು ಪಡೆದುಕೊಂಡಿವೆ.

    ಮೆದುಳನ್ನು ಹೆಪ್ಪುಗಟ್ಟಿಸುವ ಮಾಂತ್ರಿಕ ದೃಶ್ಯಗಳನ್ನು ಗಂಟೆಗಟ್ಟಲೆ ರೀಲ್‌ಗಳು ಮತ್ತು ಶಾರ್ಟ್ಗಳ ಮೂಲಕ ವೀಕ್ಷಿಸುತ್ತಿರುವ ಮಗುವಿನ ಮೆದುಳಿನಲ್ಲಿ ಏನಾಗುತ್ತದೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಪ್ರತಿ ಸೆಕೆಂಡಿಗೆ ಬದಲಾಗುವ ದೃಶ್ಯಗಳಿಗೆ ಅನುಗುಣವಾಗಿ ಅವರ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವು ವೇಗವಾಗಿ ಏರುತ್ತದೆ ಮತ್ತು ಇಳಿಯುತ್ತದೆ. ಅದು ಒದಗಿಸುವ ತಾತ್ಕಾಲಿಕ ಆನಂದವನ್ನು ಮತ್ತೆ ಮತ್ತೆ ಪಡೆಯಲು ಅವರ ಮನಸ್ಸುಗಳು ಹಂಬಲಿಸುತ್ತವೆ. ಪುಸ್ತಕ ಓದುವ ಶಾಂತ ಆನಂದವನ್ನು ಅಥವಾ ನಂತರ ಸ್ನೇಹಿತರೊಂದಿಗೆ ಆಟವಾಡುವಾಗ ಸಿಗುವ ಸಾಮಾಜಿಕ ಮೋಜನ್ನು ಅವರು ಅನುಭವಿಸಲು ಸಾಧ್ಯವಾಗುವುದಿಲ್ಲ. ಏಕಾಗ್ರತೆ ಕಳೆದುಹೋಗುತ್ತದೆ, ಸ್ಮರಣಶಕ್ತಿ ಕಡಿಮೆಯಾಗುತ್ತದೆ ಮತ್ತು ಆಲೋಚನಾ ಸಾಮರ್ಥ್ಯವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ.

    ಅಜ್ಜ-ಅಜ್ಜಿ ಹೇಳುವ ಕಥೆಗಳು ಮತ್ತು ಬಾಲ್ಯದಲ್ಲಿ ಪೋಷಕರು ತೋರಿಸುವ ಪ್ರಕೃತಿಯ ಅದ್ಭುತಗಳ ಮೂಲಕ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತಿತ್ತು. ಆದರೆ, ಇಂದು, ಕಾರ್ಟೂನ್ ಮತ್ತು ಗೇಮ್‌ಗಳ ಕೃತಕ ಜಗತ್ತಿನಲ್ಲಿ ಅಲೆದಾಡುವ ಮಕ್ಕಳು ತಮ್ಮ ವಿಶಿಷ್ಟ ಕಲ್ಪನೆಗಳನ್ನು ಕಳೆದುಕೊಳ್ಳುತ್ತಾರೆ. ಅವರು ತಾವು ನೋಡುವ ಪಾತ್ರಗಳಂತೆ ಮಾತನಾಡಲು ಮತ್ತು ವರ್ತಿಸಲು ಪ್ರಾರಂಭಿಸುತ್ತಾರೆ. ವಾಸ್ತವ ಮತ್ತು ಭ್ರಮೆಯನ್ನು ಪ್ರತ್ಯೇಕಿಸಲು ಸಾಧ್ಯವಾಗದ ಒಂದು ರೀತಿಯ ಕನಸಿನ ಸ್ಥಿತಿಗೆ ಅವರು ಜಾರುತ್ತಾರೆ.

    ಆರೋಗ್ಯ ಸಮಸ್ಯೆಗಳು
    ಮಾನಸಿಕ ಪರಿಣಾಮಗಳ ಜೊತೆಗೆ, ದೈಹಿಕ ಸವಾಲುಗಳು ಸಹ ಸಣ್ಣದಲ್ಲ. ಫೋನ್ ನೋಡುತ್ತಾ ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು ಮಕ್ಕಳ ಕಣ್ಣುಗಳ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. `ಕಂಪ್ಯೂಟರ್ ವಿಷನ್ ಸಿಂಡ್ರೋಮ್’ ಎಂದು ಕರೆಯಲ್ಪಡುವ ರೋಗ ಇಂದಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ಕುತ್ತಿಗೆ ನೋವು, ಬೆನ್ನು ನೋವು ಮತ್ತು ಬೊಜ್ಜು ಕೂಡ ಉಳಿದ ಲಕ್ಷಣಗಳಾಗಿವೆ. ಓಡುತ್ತಾ ಆಟವಾಡಬೇಕಾದ ವಯಸ್ಸಿನಲ್ಲಿ, ಆಟದ ಮೈದಾನಗಳಿಂದ ವಂಚಿತರಾದ ಮಕ್ಕಳು ರೋಗಗಳ ಕತ್ತಲಕೋಣೆಯಲ್ಲಿ ಬಂಧಿ ಯಾಗುತ್ತಿದ್ದಾರೆ.

    ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಇದು ಮಕ್ಕಳಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ಸರಿಯಾದ ನಿದ್ರೆ ಸಿಗದ ಮಗು ಅಧ್ಯಯನದತ್ತ ಗಮನಹರಿಸಲು ಮತ್ತು ಆರೋಗ್ಯವಾಗಿರಲು ಹೇಗೆ ಸಾಧ್ಯವಾಗುತ್ತದೆ?

    ನೈತಿಕತೆಯ ಕುಸಿತ
    ಇಂಟರ್‌ನೆಟ್‌ನ ವಿಶಾಲ ಜಗತ್ತು ಮಕ್ಕಳಿಗೆ ತೆರೆದುಕೊಂಡಾಗ, ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯ ಮತ್ತು ಅಪಾಯಕಾರಿ ಆನ್‌ಲೈನ್ ಬಲೆಗಳಿಗೆ ಸುಲಭವಾಗಿ ಆಕರ್ಷಿತರಾಗಬಹುದು. ಹಿಂಸೆ ಮತ್ತು ಅಶ್ಲೀಲತೆಯಿಂದ ತುಂಬಿರುವ ಆಟಗಳು ಮತ್ತು ವೀಡಿಯೊಗಳು ಅವರ ಯುವ ಮನಸ್ಸನ್ನು ವಿಷಪೂರಿತಗೊಳಿಸುತ್ತವೆ. ಅವರು ಸಹಾನುಭೂತಿ, ಪ್ರೀತಿ ಮತ್ತು ಕರುಣೆಯನ್ನು ಕಲಿಯಬೇಕಾದ ವಯಸ್ಸಿನಲ್ಲಿ, ಕೃತಕ ಪ್ರಪಂಚದ ಕ್ರೌರ್ಯವನ್ನು ಕಂಡು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತಾರೆ.

    ತಮ್ಮ ಮಕ್ಕಳಿಗೆ ಫೋನ್‌ಗಳನ್ನು ನೀಡುವ ಮೂಲಕ ತಮ್ಮ ಕೆಲಸವನ್ನು ಸುಲಭಗೊಳಿಸುವ ಪೋಷಕರು, ನೆನಪಿಡಿ, ನೀವು ಮಾಡುತ್ತಿರುವ ಕೆಲಸಗಳ ದೂರಗಾಮಿ ಪರಿಣಾಮಗಳನ್ನು ನಿಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗದಿರಬಹುದು.

    ನಾವು ಏನು ಮಾಡಬಹುದು?
    ನಮ್ಮ ಕಣ್ಣ ಮುಂದೆ ಒಂದು ಪೀಳಿಗೆ ದಾರಿ ತಪ್ಪುತ್ತಿರುವಾಗ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಅದಕ್ಕೆ ಖಂಡಿತಾ ಪರಿಹಾರಬೇಕು.

    ಮಾದರಿಯಾಗಿ:
    ಮಕ್ಕಳಿಗೆ ಫೋನ್ ಬಳಸಬೇಡಿ ಎಂದು ಹೇಳುವ ಮೊದಲು, ನಾವೇ ಅದರ ಬಳಕೆಯನ್ನು ನಿಯಂತ್ರಿಸಬೇಕು. ಕುಟುಂಬದೊAದಿಗೆ ಕಳೆಯುವ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ದೂರವಿಡಿ.

    ಸಮಯ ಮಿತಿಯನ್ನು ನಿಗದಿಪಡಿಸಿ:
    ಮಕ್ಕಳ Screen ನೋಡುವ ಸಮಯಕ್ಕೆ ಸ್ಪಷ್ಟ ಮಿತಿಯನ್ನು ನಿಗದಿಪಡಿಸಿ. ಆ ಸಮಯದ ಕಳೆದ ಬಳಿಕ ರಾಜಿ ಮಾಡಿಕೊಳ್ಳಲು ಸಿದ್ದರಾಗಬಾರದು.

    ಮುಕ್ತವಾಗಿ ಮಾತನಾಡಿ:
    ಆನ್‌ಲೈನ್ ಪ್ರಪಂಚದ ಅಪಾಯಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಅವರಿಗೆ ಕಲಿಸಿ.

    ಹೊಸ ಲೋಕಗಳನ್ನು ತೆರೆಯಿರಿ:
    ಅವರನ್ನು ಕೈ ಹಿಡಿದು ಪುಸ್ತಕಗಳು, ಆಟಗಳು ಮತ್ತು ಪ್ರಕೃತಿಯ ಜಗತ್ತಿಗೆ ತಲುಪಿಸಿ. ಪ್ರವಾಸಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ಹೊಸ ಅನುಭವಗಳನ್ನು ನೀಡಿ.

    ಕಾಮನಬಿಲ್ಲನ್ನು ನೋಡಲು ಆಕಾಶದತ್ತ ನೋಡಿ, ಚಿಟ್ಟೆಯನ್ನು ನೋಡಲು ತೋಟಕ್ಕೆ ಹೋಗಿ, ಮತ್ತು ಅವರ ಸ್ನೇಹಿತರ ಪ್ರೀತಿಯನ್ನು ಅನುಭವಿಸಲು ಅವರೊಂದಿಗೆ ಆಟವಾಡುವ ಅವಕಾಶ ಕೊಡಿ. ಆಕಾಶ ಮತ್ತು ಭೂಮಿಯ ಸಂಪರ್ಕವನ್ನು ಕಳೆದುಕೊಂಡು ಆರು ಇಂಚಿನ ಪರದೆಗೆ ಕುಗ್ಗುವ ಪೀಳಿಗೆ ನಮಗೆ ಅಗತ್ಯವಿಲ್ಲ.

    “ಉಜ್ವಲ ಬಾಲ್ಯ” ಎಂಬುದು ಪ್ರತಿ ಮಗುವಿನ ಹಕ್ಕು. ಆ ಹಕ್ಕನ್ನು ಅವರಿಗೆ ನಿರಾಕರಿಸುವ ಹಕ್ಕು ನಮಗಿಲ್ಲ. ನೆನಪಿಡಿ, ಇಂದು ನಾವು ಅವರಿಗೆ ನೀಡುವ ಗಮನ ಮತ್ತು ಪ್ರೀತಿ ನಾಳಿನ ಸಮಾಜದ ಶಕ್ತಿ. ಅದಕ್ಕಾಗಿ, ಅವರಿಗೆ ಪ್ರೀತಿ, ಜ್ಞಾನ ಮತ್ತು ಅನುಭವಗಳ ಹೊಸ ಬಾಗಿಲುಗಳನ್ನು ತೆರೆಯೋಣ. ಆ ಮೂಲಕ, ಅವರ ಬೆಳವಣಿಗೆ ಮತ್ತು ಆ ಮೂಲಕ ನಮ್ಮ ದೇಶದ ಭವಿಷ್ಯ ಉಜ್ವಲ ವಾಗಲಿ.

    ಸಮಿಯುಲ್ಲಾ

  • ಗೆಳೆಯನ ಪತ್ನಿಗೆ ರಕ್ತ ನೀಡಲು ಅರ್ಷದ್ ನೊಂದಿಗೆ ಗಲಭೆ ಪೀಡಿತ ಊರಿಗೆ ಹೊರಟ ಲೋಹಿತ್: ಮುಂದೇನಾಯ್ತು?

    ಗೆಳೆಯನ ಪತ್ನಿಗೆ ರಕ್ತ ನೀಡಲು ಅರ್ಷದ್ ನೊಂದಿಗೆ ಗಲಭೆ ಪೀಡಿತ ಊರಿಗೆ ಹೊರಟ ಲೋಹಿತ್: ಮುಂದೇನಾಯ್ತು?

    ಲೋಹಿತ ಅಮೆರಿಕದಿಂದ ಬಂದು ಎರಡು ದಿನಗಳಾಗಿದ್ದವು, ಅವನು ಅಮೆರಿಕದಿಂದ ಹೊರಡುವ ಸಮಯದಲ್ಲೇ ಅವನ ಗೆಳೆಯ ರವೀಂದ್ರ ಫೋನ್ ಮಾಡಿ ತನ್ನ ಹೆಂಡತಿಗೆ ತೀರ ಅರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ಸೇರಿಸಲಾಗಿದೆಯೆಂಬ ವಿಚಾರ ತಿಳಿಸಿದಾಗ “ನಾ ಊರಿಗೆ ಹೊರಡುತ್ತಿದ್ದೇನೆ ಅಲ್ಲಿ ಒಂದು ವಾರ ಇರುತ್ತೇನೆ, ಈ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮಲ್ಲಿ ಬರುತ್ತೇನೆ, ಧೈರ್ಯದಿಂದಿರು ಏನು ಆಗುವುದಿಲ್ಲ” ಎಂದು ಸಮಾಧಾನ ಹೇಳಿದ.

    ಸಮಯದ ಎಷ್ಟೇ ಅಭಾವವಿದ್ದರೂ ಅಮೆರಿಕಕ್ಕೆ ಹಿಂತಿರುಗುವುದಕ್ಕೆ ಮುನ್ನ ಅವಕಾಶ ಮಾಡಿಕೊಂಡು ಗೆಳೆಯನನ್ನು ಭೇಟಿ ಮಾಡಲೇ ಬೇಕೆಂದು ತೀರ್ಮಾನಿಸಿದ ಲೋಹಿತ ಅವನು ಸಹ ವೈದ್ಯನಾಗಿರುವುದರಿಂದ ಗೆಳೆಯನ ಮಡದಿಯ ಖಾಯಿಲೆ ಬಗ್ಗೆ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಏನಾದರೂ ಸಲಹೆ ಕೊಡಬಹುದೆಂದು ಅವನ ಆಲೋಚನೆಯಾಗಿತ್ತು.

    ಅವನ ಊರಿಂದ ರವೀಂದ್ರ ಇರುವ ಶಹರಕ್ಕೆ ಹೆಚ್ಚೆಂದರೆ ಮೂರು ತಾಸಿನ ಹಾದಿ.
    ಅಮೆರಿಕದಿಂದ ಬಂದ ಎರಡು ದಿನ ಬಳಿಕ ಅದೊಂದು ದಿನ ಲೋಹಿತ ಅರ್ಷದ್‌ಗೆ ಫೋನ್ ಮಾಡಿ ನಾಳೆ ಬೆಳೆಗ್ಗೆ ಬರುವುದಕ್ಕಾಗುತ್ತೇನೆಂದು ವಿಚಾರಿಸಿದ ಅವನು ಬರುತ್ತೇನೆಯೆಂದು ಒಪ್ಪಿಕೊಂಡ. ಆ ಮೇಲೆ ಲೋಹಿತ, ರವೀಂದ್ರನಿಗೆ ಫೋನ್ ಮಾಡಿ ನಾಳೆ ಬರುತ್ತಿದ್ದೇನೆ ಎಂಬ ಸಮಾಚಾರ ಮುಟ್ಟಿಸಿದ.

    ಅರ್ಷದ್ ಟ್ಯಾಕ್ಸಿ ಚಾಲಕ, ಲೋಹಿತ ಅಮೆರಿಕದಿಂದ ಬಂದು ಇಲ್ಲಿ ಎಲ್ಲಾದರೂ ಹೋಗುದಿದ್ದರೆ ಅರ್ಷದ್‌ಗೆ ಫೋನ್ ಮಾಡುತ್ತಿದ್ದ, ಅವನು ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಹಿಂದೆ ಹಾಕಿ ಬಂದು ಲೋಹಿತನ ಕಾರು ಓಡಿಸುತ್ತಿದ್ದ.
    ಎರಡು ತಿಂಗಳ ಹಿಂದಷ್ಟೇ ರವೀಂದ್ರನ ಮಗ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದ ಈ ಸಮಾಚಾರವನ್ನು ಅಳುತ್ತ ಹೇಳಿದಾಗ ಆಗ ಲೋಹಿತ ಅಮೆರಿಕದಲ್ಲಿದ್ದ ಮತ್ತು ಆಸ್ಪತ್ರೆಯಿಂದ ಮನೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದ. ಅಂದು ಲೋಹಿತ ಸರಿಯಾಗಿ ನಿದ್ದೆ ಮಾಡಲಿಲ್ಲ. ಹತ್ತಾರು ಬಾರಿ ಗೆಳೆಯನಿಗೆ ಫೋನ್ ಮಾಡಿ ಸಮಾಧಾನ ಹೇಳಿದ್ದ.

    ಲೋಹಿತ ಮತ್ತು ರವೀಂದ್ರ ಅನೇಕ ವರ್ಷದವರೆಗೆ ಸಹಪಾಠಿಗಳಾಗಿದ್ದರು.
    ಕೊಟ್ಟ ಮಾತಿನಂತೆ ಅರ್ಷದ್ ಬೆಳಗ್ಗೆಯೇ ಬಂದ ಬಿಟ್ಟ, ಉಪಹಾರದ ಬಳಿಕ ಇಬ್ಬರು ಹೊರಟರು.
    ಮಧ್ಯದಾರಿಯಲ್ಲಿ ಲೋಹಿತನಿಗೆ ಟೀ ಕುಡಿಯಬೇಕೆಂದೆನಿಸಿ ಎಲ್ಲಾದರೊಂದು ಕಡೆ ಕಾರು ನಿಲ್ಲಿಸಲು ಸೂಚಿಸಿದ.
    ಮುಂದೊAದು ಊರಿತ್ತು. ರಸ್ತೆ ಪಕ್ಕದಲ್ಲಿರುವ ದರ್ಶಿನಿ ಮುಂದೆ ನಿಲ್ಲಿಸಿದ ಅರ್ಷದ್ ಅವರಿಬ್ಬರು ಇಳಿದು ಟೀ ಸೇವಿಸಿ ಹಿಂತಿರುಗಿದಾಗ ಕಾರು ಬಳಿ ನಡು ವಯಸ್ಸಿನ ಹಳ್ಳಿ ಮಹಿಳೆಯೊಬ್ಬಳು ಆರೇಳು ವರ್ಷದ ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಲೋಹಿತ ಕಾರು ಹತ್ತಲು ಹೋದಾಗ ಮಹಿಳೆ ಬಂದು, ಬಸ್ಸುಗಳಲ್ಲಿ ತುಂಬ ರಷ್ ಇದೆ, ಹತ್ತಲು ಸಹ ಸಾಧ್ಯವಿಲ್ಲ, ತಬ್ಬಲಿ ಕೂಸಿಗೆ ಜ್ವರ ಇಲ್ಲಿ ಔಷಧಿಗೆ ಬಂದಿದ್ದೆ. ಮುಂದಿನ ಊರಿನವರೆಗೆ ಕರೆದುಕೊಂಡು ಹೋಗಿ ಎಂದು ವಿನಂತಿಸಿಕೊAಡಳು. “ಪುಣ್ಯ ಬರುತ್ತೆಯಪ್ಪ ಇಲ್ಲ ಎನ್ನ ಬೇಡಿ” ಕೊನೆಯಲ್ಲಿ ಈ ವಾಕ್ಯ ಹೇಳಿದಳು.

    ಹಿಂದಿನ ಆಸನವಂತು ಖಾಲಿಯಿದೆ ಕೂರಿಸಿಕೊಂಡು ಹೋದರಾಯಿತು ಎಂದು ಹಿಂದಿನ ಬಾಗಿಲನ್ನು ತೆರೆದಾಗ ಮಹಿಳೆ ಮೊದಲು ಮಗುವನ್ನು ಜೋಪಾನವಾಗಿ ಕೂರಿಸಿ ಆ ಮೇಲೆ ಅವಳು ಹತ್ತಿಕೊಂಡಳು.

    ಕಾರು ಮುಂದೆ ಹೊರಟಾಗ ಲೋಹಿತ ಹಿಂತಿರುಗಿ ಮಹಿಳೆಯನ್ನು ನೋಡುತ್ತ ಆ ಮಗುವಿನ ತಂದೆ ತಾಯಿ ಎಲ್ಲಿ ಎಂದು ಹೀಗೆ ಸಹಜವಾಗಿ ವಿಚಾರಿಸಿದ, ಮಗುವಿನ ಹಿಂದೆ ಒಂದು ನೋವಿನ ಕಥೆಯೇ ಇತ್ತು.

    ಸುಮಾರು ನಾಲ್ಕು ವರ್ಷದ ಕೆಳಗೆ ಅದೆಲ್ಲಿಂದಲೂ ಮುಸ್ಲಿಂ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಮುಸ್ಲಿಂರ ಒಂದು ಕುಟುಂಬ ಸಹ ಇಲ್ಲದ ಆ ಹಳ್ಳಿಗೆ ಬಂದರು, ಬರಿಕೈಯಲ್ಲಿ ಬಂದ ಅವರು ಆಲೆಮನೆಗಳಲ್ಲಿ ಕೆಲಸ ಮಾಡುತ್ತ ಅಲ್ಲೆ ಬಾಡಿಗೆಗೊಂದು ಕೋಣೆ ಹಿಡಿದು ಜೀವನ ಮಾಡ ತೊಡಗಿದರು, ಯಾರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವಿದ್ದರು, ಊರಿನ ಹತ್ತಿರವೇ ಹರಿಯುವ ನದಿಗೆ ಅವರು ಮಾಮೂಲಿನಂತೆ ಒಂದು ದಿನ ಹೋದರು. ಮಗುವನ್ನು ಅಂಗನವಾಡಿಯಲ್ಲಿ ಬಿಟ್ಟು ಹೋದಾಗ ನದಿ ತುಂಬಿ ಹರಿಯುತ್ತಿತ್ತು.

    ಬಟ್ಟೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಹೆಂಡತಿ ನದಿಯಲ್ಲಿ ಜಾರಿಕೊಂಡಳು. ಅವಳನ್ನು ಕಾಪಾಡಲು ಗಂಡ ನದಿಗೆ ದುಮುಕಿದ, ನೀರಿನ ಹರಿತ ಜಾಸ್ತಿಯಿತ್ತು, ಹರಿಯುವ ನದಿಯಲ್ಲಿ ಇಬ್ಬರೂ ಕೊಚ್ಚಿಕೊಂಡರು ಆಮೇಲೆ ಊರಿನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು, ಅವರಿಬ್ಬರ ಹೆಣಗಳು ದೊರೆತವು, ಆಮೇಲೆ ಊರಿನವರು ಸ್ವಲ್ಪ ದೂರದ ಹಳ್ಳಿಯಲ್ಲಿರುವ ಮುಸ್ಲಿಂರನ್ನು ಕರೆಸಿ ಅವರ ಧರ್ಮ ಪದ್ಧತಿಯಂತೆ ಅವರನ್ನು ದಫನ್ ಮಾಡಿಸಿದರು. ಇದಾದ ಬಳಿಕ ಮಗುವನ್ನು ಯಾರು ನೋಡಿ ಕೊಳ್ಳುತ್ತಾರೆಂದು ಪ್ರಶ್ನೆ ಮುಂದೆ ಬಂದಾಗ ಆ ಹಿಂದು ಮಹಿಳೆ ಮುಂದೆ ಬಂದು ಇದರ ಜವಾಬ್ದಾರಿ ನನ್ನ ಮೇಲಿರಲಿ ನನ್ನ ಎರಡು ಮಕ್ಕಳಂತೆ ಇದನ್ನು ಸಹ ಸಾಕುತ್ತೇನೆ ಎಂದು ಊರಿನವರ ಮುಂದೆ ಒಪ್ಪಿಕೊಂಡು ಅಂದಿನಿAದ ಅವಳೇ ಆ ಮಗುವನ್ನು ನೋಡುಕೊಳ್ಳುತ್ತಿದ್ದಳು. ಆ ಮಗುವಿನ ಅಪ್ಪ ಅಮ್ಮ ಏನು ಹೆಸರನ್ನು ಇಟ್ಟಿದ್ದರೂ ಅದನ್ನು ಬದಲಾಯಿಸಲಿಲ್ಲ.

    ಇಷ್ಟ್ಟೆಲ್ಲ ಕಥೆ ಹೇಳಿದ ಬಳಿಕ ಮಹಿಳೆ ಮೌನ ಧರಿಸಿಕೊಂಡು ರಸ್ತೆಯ ಕಡೆಯೇ ಗಮನವಿಟ್ಟು ನೋಡುತ್ತಿದ್ದಳು. ಅವಳು ಇಳಿಯುವ ಸ್ಥಳ ಬಂದ ಕೂಡಲೇ “ಇಲ್ಲೇ ನಿಲ್ಲಿಸಿ” ಎಂದಳು.
    ಅವಸರ ಬೇಡ ಮಹಿಳೆ ನೆಮ್ಮದಿಯಿಂದ ಇಳಿಯಲಿ ಎಂದು ಅರ್ಷದ್ ಇಂಜೀನ್ ಆಫ್ ಮಾಡಿದ.
    ಮಹಿಳೆ ಮೊದಲು ತಾನಿಳಿದು ಆಮೇಲೆ ಮಗುವನ್ನು ಜೋಪಾನವಾಗಿ ಇಳಿಸಿಕೊಂಡಳು.
    “ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ಹಾರೈಸಿದಳು.
    ಇವಳ ಹಾರೈಕೆ ಖಂಡಿತ ದೇವರು ಒಪ್ಪುತ್ತಾನೆ ಎಂದು ಯೋಚಿಸಿದ ಲೋಹಿತ.

    ಕಾರು ಒಡಿಸುತ್ತಿದ್ದರೂ ತನ್ನ ಇಡೀ ಗಮನವೆಲ್ಲ ಮಹಿಳೆಯ ಕಡೆಯಲಿಟ್ಟಿದ್ದ ಅರ್ಷದ್, ಮಹಿಳೆ ಇಳಿದ ಬಳಿಕ ಅರ್ಷದ್ “ದೇವರು ಯಾವ ಯಾವ ರೂಪದಲ್ಲಿರುತ್ತಾನೆ ಎಂದು ಹೇಳುವುದಕ್ಕಾಗುವುದಿಲ್ಲ.”

    ಲೋಹಿತ ಏನನ್ನು ಹೇಳಲಿಲ್ಲ ಅವನಿಗಂತು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದಂತಾಯಿತು. ಅರ್ಷದ್ ಕಾರು ಸ್ಟಾರ್ಟ್ ಮಾಡುತ್ತಿರುವಾಗ ಲೋಹಿತ ಹೇಳಿದ, “ಅರ್ಷದ್ ಈ ಊರು ನೆನಪಿಡಿ. ಬರುವಾಗ ಆ ಮಹಿಳೆಯನ್ನು ಮತ್ತೆ ಭೇಟಿ ಮಾಡೋಣವಂತೆ ಅವಳಿಗೆ ಏನಾದರೂ ಸಹಾಯ ಮಾಡೋಣ ಎನಿಸುತ್ತಿದೆ.”
    “ಆಯಿತು” ಎಂದ ಅರ್ಷದ್.
    ಕಾರು ಚಲಿಸುತ್ತಿರುವಾಗ ಲೋಹಿತ ನಾಲ್ಕಾರು ಬಾರಿ ಹಿಂತಿರುಗಿ ಮಹಿಳೆ ಕಡೆ ನೋಡಿದ.

    ಅಲ್ಲಿಂದ ಅವರು ಒಂದಿಷ್ಟು ದೂರ ಹೋಗಿರಬೇಕು. ಅಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಅವರ ಶಹರದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿದೆ. ಶಹರದ ಒಂದೆಡೆ ಹಿಂದು ಮುಸ್ಲಿಂ ದಂಗೆಯಾಗಿದೆ ಎಂದ. ಆಮೇಲೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ, ಶಹರದ ಯಾವುದೂ ಒಂದು ಮೂಲೆಯಲ್ಲಿ ಗಲಾಟಿಯಾಗಿರುವುದು ವಾಹನಗಳು ಓಡಾಡುತ್ತಿವೆ, ಜನ ಸಹ ತಿರುಗಾಡುತ್ತಿದ್ದಾರೆ ಎಂದಾಗ ಲೋಹಿತನಿಗೆ ಸ್ವಲ್ಪ ಧೈರ್ಯ ಬಂತು.
    ಅವನು ಯೋಚನೆ ಮಾಡುತ್ತಿರುವುದನ್ನು ಕಂಡು ಅರ್ಷದ್ ಕಾರಣ ಕೇಳಿದ.
    “ಅಲ್ಲಿ ರಾತ್ರಿ ಹಿಂದು ಮುಸ್ಲಿಂ ದಂಗೆಯಾಗಿದೆಯಲ್ಲ”

    “ಇತ್ತೀಚೆಗೆ ಅಲ್ಲಿ ದಿನನಿತ್ಯ ದಂಗೆಯಾಗುತ್ತಲೆಯಿವೆ. ಎರಡು ಕಡೆಯವರು ಬೇರೆಲ್ಲ ವ್ಯವಹಾರ ಬಿಟ್ಟು ಗಲಾಟೆ ಮಾಡುವುದಕ್ಕೆ ನಿಂತು ಬಿಟ್ಟಿದ್ದಾರೆ. ಮೊನ್ನೆ ನಾನು ಅಲ್ಲಿ ಹೋಗಿದ್ದೆ, ಬಾಡಿಗೆ ಸಿಕ್ಕಿತ್ತು, ರಸ್ತೆಯಲ್ಲಿ ಜನ ಹೆದರಿಸಿದರು, ಆದರೆ ಅಲ್ಲಿ ಹೋದಾಗ ಎಲ್ಲಾ ಸಹಜವಾಗಿತ್ತು. ಯಾವುದೋ ಒಂದು ಏರಿಯದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿರುತ್ತೆ ಆ ಕಡೆ ಹೋಗಬಾರದು, ಅರ್ಷದ್ ಹೇಳಿದ ಧೈರ್ಯದಿಂದ.

    ರಸ್ತೆಯಲ್ಲಿ ಭೇಟಿಯಾದ ಆ ಹಿಂದು ಮಹಿಳೆಯ ಬಗ್ಗೆ ಯೋಚಿಸಿದ ಲೋಹಿತ, ಮುಸ್ಲಿಂರ ಮಗುವನ್ನು ಪೋಷಿಸುತ್ತಿರುವ ಆ ಅವಿದ್ಯಾವಂತೆ ಮಹಿಳೆಯಲ್ಲಿರುವ ಮಾನವೀಯತೆ ವಿದ್ಯಾವಂತರಲಿಲ್ಲ.
    ಅರ್ಷದ್ ಹೇಳಿದ ಮಾತಿನಿಂದ ಅವನಿಗೆ ಸ್ವಲ್ಪ ಸಮಾಧಾನವಾಯಿತು. ಯಾವ ಅನಾಹುತವಿಲ್ಲದೆ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿದರೆ ಸಾಕೆಂದು ಮನದಲ್ಲಂದುಕೊAಡ.

    ಇನ್ನೇನು ಅರ್ಧ ಗಂಟೆಯಲ್ಲಿ ಅವರ ಕಾರು ಶಹರದ ಗಡಿ ದಾಟಬೇಕೆಂದುವಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಶಹರದ ಎಲ್ಲಾ ಕಡೆ ದಂಗೆ ಎದ್ದಿದೆ, ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿಲ್ಲ, ಅಂಗಡಿ ಮುಂಗಟ್ಟು ಮುಚ್ಚಲಾಗಿವೆ, ರಸ್ತೆಗಳಲ್ಲಿ ವಾಹನಗಳ, ಜನಗಳ ಸಂಚಾರವಿಲ್ಲ, ಹಲವಾರು ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
    “ಏನಂತೆ ಸಾರ್” ಅರ್ಷದ್ ಕೇಳಿದ.
    “ಏನಿಲ್ಲ ನೀವಂತು ಎಚ್ಚರದಿಂದಿರಿ”

    “ನೀವು ಭಯ ಪಡಬೇಡಿ” ಎಂದು ಅರ್ಷದ್ ಹೇಳುತ್ತಿರುವಾಗಲೇ ಎದುರಿಂದ ಒಂದು ಕಾರು ಬಂತು. ಅದರ ಗಾಜು ಹೊಡೆದು ಹೋಗಿದ್ದವು, ಬಾನೇಟ್ ಮೇಲೆ ನಾಲ್ಕಾರು ಕಡೆ ರಕ್ತದ ಕಲೆಗಳಿದ್ದವು, ಕಾರಿನಲ್ಲಿರುವವರು ತುಂಬ ಭಯಭೀತಿಕ್ಕೊಳಗಾಗಿದ್ದರು.

    ಲೋಹಿತನ ಕಾರು ಹೊರವಲಯಲ್ಲಿತ್ತು. ಇನ್ನೇನು ಶಹರದೊಳಗೆ ಪ್ರವೇಶಿಸಬೇಕು ಅಷ್ಟರಲ್ಲಿ ಕಾರನ್ನು ಪೋಲಿಸರು ನಿಲ್ಲಿಸಿದರು. ಪೋಲಿಸರು ಯಾವ ವಾಹನವು ಒಳಗೆ ಹೋಗದಂತೆ ತಡೆಯುತ್ತಿದ್ದರು. ಶಹರದೊಳಗಿನಿಂದ ಬರುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು.

    ಅರ್ಷದ್ ಒಂದೆಡೆ ಕಾರು ನಿಲ್ಲಿಸಿಬಿಟ್ಟ, ಇನ್ನು ಶಹರದೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದೆನಿಸುತ್ತಿರುವಾಗಲೇ ರವೀಂದ್ರ ಫೋನ್ ಮಾಡಿ ಅವನ ಮಡದಿಗೆ ಕೂಡಲೇ ರಕ್ತ ಬೇಕಾಗಿದೆ. ರಕ್ತದ ಗ್ರೂಪ್ ಎಬಿ ನೆಗೆಟಿವ್, ಇಲ್ಲಿ ಆಸ್ಪತ್ರೆಯಲ್ಲಿ ಆ ಗ್ರೂಪ್‌ನ ರಕ್ತವಿಲ್ಲ. ಈ ಸಮಯದಲ್ಲಿ ಹೊರಗಿನಿಂದ ತರಿಸಲು ಸಹ ಸಾಧ್ಯವಿಲ್ಲ ಎಂದು ನಿರಾಸೆಯಿಂದ ತಿಳಿಸಿದ. ಆ ಗ್ರೂಪ್‌ನ ರಕ್ತ ಸಿಗಬೇಕಾದರೆ ಸ್ವಲ್ಪ ಕಷ್ಟವೇ. ಲೋಹಿತ ಯೋಚಿಸಿದ.

    ಆದಷ್ಟು ಬೇಗ ಬಿಗುವಿನ ವಾತಾವರಣ ಕಡಿಮೆಯಾಗಿ ಆಸ್ಪತ್ರೆಗೆ ತಲುಪಿದರೆ ಸಾಕೆಂದು ಯೋಚಿಸಿದ. ಎಂಥ ಪರೀಕ್ಷೆಯ ಸಮಯ ಎದುರಾಗಿದೆ. ಒಬ್ಬರ ಜೀವ ರಕ್ಷಣೆ ಮಾಡುವ ಅವಕಾಶ ಸಿಕ್ಕಿಯೂ ಸ್ವಲ್ಪದರಲ್ಲಿ ತಪ್ಪಿ ಹೋಗುತ್ತಿದೆಯಲ್ಲ. ಹೀಗೆಲ್ಲ ಯೋಚಿಸಲು ಮುಖ್ಯಕಾರಣವೇನೆಂದರೆ ಲೋಹಿತನ ರಕ್ತದ ಗ್ರೂಪ್ ಸಹ ಎಬಿ ನೆಗೆಟಿವ್ ಆಗಿತ್ತು.

    ತನ್ನ ರಕ್ತದ ಗ್ರೂಪ್ ಯಾವುದೆಂದು ಅವನು ಗೆಳೆಯನಿಗೆ ಹೇಳದೆ ನೇರವಾಗಿ ಹೋಗಿ ಕೊಟ್ಟೆ ಬಿಡೋಣ ಎಂದು ಅವನ ಲೆಕ್ಕಾಚಾರವಾಗಿತ್ತು.

    ಸ್ವಲ್ಪ ಸಮಯದ ಬಳಿಕ ಸುರೇಂದ್ರ ಫೋನ್ ಮಾಡಿ ಅವರೆಲ್ಲಿದ್ದಾರೆಂದು ವಿಚಾರಿಸಿದ, ಶಹರದ ಹೊರವಲಯದಲ್ಲಿದ್ದೇನೆ ಶಹರದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ವಿವರಿಸಿದಾಗ, ಹಿಂತಿರುಗಿ ಹೊರಟು ಹೋಗಿ ಜೀವದ ಹಂಗು ಬಿಟ್ಟು ಒಳ ಬರಬೇಡಿ, ಆಸ್ಪತ್ರೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಾಗಿದ್ದಾರೆ ಖಂಡಿತವಾಗಿ ಬರಬೇಡಿ ಬೇಡಿಕೊಂಡ ಸುರೇಂದ್ರ.

    ಬೇರೆ ಸಂದರ್ಭವಾಗಿದ್ದರೆ ಅವನು ಹಿಂತಿರುಗಿ ಹೋಗುತ್ತಿದ್ದ. ಆದರೆ ಗೆಳೆಯನ ಮಡದಿಗೆ ರಕ್ತದ ಅವಶ್ಯಕತೆ ಇರುವುದನ್ನು ತಿಳಿದು ಹಿಂತಿರುಗಿ ಹೋಗುವುದು ಸರಿಯಿಲ್ಲ. ಇಲ್ಲೇ ಇದ್ದು ಶಹರದ ಸ್ಥಿತಿ ಸುಧಾರಣೆಯಾಗುವ ವರೆಗೆ ಕಾಯಬೇಕು. ಕಾರು ಶಹರದೊಳಗೆ ಪ್ರವೇಶಿಸಲು ಅವಕಾಶ ಕೊಟ್ಟರೆ ಸಾಕೆಂದು ಯೋಚಿಸಿದ.

    ಶಹರದೊಳಗೆ ಯಾವ ವಾಹನವೂ ಹೋಗದಂತೆ ತಡೆದಿರುವುದರಿಂದ ಅವನ ಕಾರಿನ ಹಿಂದೆ ಮುಂದೆ ಅನೇಕ ವಾಹನಗಳು ನಿಂತುಕೊಳ್ಳಲು ಆರಂಭಿಸಿದವು. ನೋಡುನೋಡುತ್ತಿದ್ದಂತೆ ವಾಹನಗಳ ಸಾಲ ಹೆಚ್ಚಾಗತೊಡಗಿತ್ತು.
    ವಾಹನದೊಳಗೆ ಕುಳುತಿರುವವರು ಪೈಕಿ ಯಾರೊಬ್ಬರು ಹೊರ ಬಾರದೆ ಒಳಒಳಗೆಯೇ ಭಯ ಭೀತಿಕ್ಕೊಳಗಾಗಿ ಮೌನ ಧರಿಸಿಕೊಂಡಿದ್ದರು. ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆದಾಗ ಸಾಲಾಗಿ ನಿಂತಿರುವ ವಾಹನಗಳು ಹಾರನ್‌ಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೇ ಯಾರೊಬ್ಬರು ಇಂಜಿನ್‌ಗಳನ್ನು ಆಫ್ ಮಾಡುವುದಿಲ್ಲ. ಆದರೆ ಈಗ ಇಲ್ಲಿ ಬೇರೆಯೇ ಸನ್ನವೇಶವಿತ್ತು” ನಿಜ ಸಂಗತಿ ಏನೆಂದು ಅರಿತು ಎಲ್ಲರೂ ಇಂಜಿನ್‌ಗಳನ್ನು ಆಫ್ ಮಾಡಿದ್ದರು. ಮೌನವಾಗಿ ಹೋಗಿದ್ದರು ಮತ್ತು ಒಬ್ಬರನೊಬ್ಬರನ್ನು ಸಂದೇಹದಿAದ ನೋಡುತ್ತಿದ್ದರು.

    ರಕ್ತ ಸಿಕ್ಕಿದಿಯೋ ಇಲ್ಲವೋ ಅವನು ಎಷ್ಟೊಂದು ಸಂಕಷ್ಟದಲ್ಲಿದ್ದಾನೆಯೋ ಅವನಿಗೆ ಫೋನ್ ಮಾಡಿದಾಗ ಅವನ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿತ್ತು. ಲೋಹಿತ ಯಾಕಿಷ್ಟು ಬೇಚೈನಾಗಿದ್ದಾನೆಂದು ಅರ್ಷದ್‌ಗೆ ತಿಳಿಯಲಿಲ್ಲ.
    “ಮನೆಯಿಂದ ಸ್ವಲ್ಪ ಮುಂಚಿತವಾಗಿ ಹೊರಟ್ಟಿದ್ದರೆ ಅಥವಾ ಶಹರದೊಳಗೆ ಪ್ರವೇಶಿಸಲು ಅವಕಾಶ ಸಿಕ್ಕಿದ್ದರೆ ಕಾರು ಅತಿವೇಗದಿಂದ ಚಲಾಯಿಸುತ್ತ ಆಸ್ಪತ್ರೆಗೆ ತಲುಪಿಸಿ ಬಿಡುತ್ತಿದ್ದೆ” ಅರ್ಷದ್ ಹೇಳಿದ.
    ಆದರೆ ಲೋಹಿತ ತನ್ನದೇ ವಿವಾರದಲ್ಲಿ ಮುಳುಗಿದ್ದ.

    ನಾನು ಎಲ್ಲಾ ವಿಷಯದ ಬಗ್ಗೆ ಪಾಸಿಟೀವ್ ಆಗಿ ಯೋಚಿಸುತ್ತೇನೆ. ನನ್ನ ರಕ್ತದ ಗ್ರೂಪ್ ಯಾಕೆ ನೆಗೆಟಿವ್, ಈಗಿನ ಕಾಲದಲ್ಲಿ ಒಳ್ಳೆ ಯೋಚನೆ ಮಾಡುವ ಜನರೇ ಇಲ್ಲವೇನು? ಮನುಷ್ಯ ಯಾಕೆ ಇಷ್ಟೊಂದು ಕ್ರೂರಿಯಾಗಿ ಧರ್ಮದ ಹೆಸರಿನಲ್ಲಿ ಯಾಕೆ ರಕ್ತ ಹರಿಸುತ್ತಿದ್ದಾನೆ. ವಿಜ್ಞಾನಿಗಳು ಆಕಾಶದಿಂದ ಬಾಂಬ್‌ಗಳನ್ನು ಬೀಳುಸುವುದರ ಬದಲು ಆಕಾಶದಿಂದ ಹೂಮಳೆ ಹೊಮ್ಮಿಸುವುದರ ಬಗ್ಗೆ ಯಾಕೆ ಯೋಚಿಸುತ್ತಿಲ್ಲ?

    ಲೋಕೇಶ ಏನೇನೋ ಯೋಚಿಸುತ್ತ ಕ್ಷಣದಿಂದ ಕ್ಷಣಕ್ಕೆ ಕಂಗಾಲಾಗಿ ಹೋಗುತ್ತಿರುವಾಗಲೇ ಫೋನ್ ಮೊಳಗಿತ್ತು. ಸುರೇಂದ್ರನ ಫೋನ್ ಇರುವುದರಿಂದ ಲೋಹಿತ ತನ್ನ ಹೃದಯದ ಬಡಿತದ ಮೇಲೆ ನಿಯಂತ್ರಣ ಪಡೆಯುತ್ತ ಮೊಬೈಲ್ ಆನ್ ಮಾಡಿದ.

    ಬಂತು ಗೆಳೆಯನ ಮಡದಿಗೆ ಸಕಾಲದಲ್ಲಿ ರಕ್ತ ಸಿಕ್ಕಿದೆ ಎಂಬ ಸಂತೋಷದ ಸುದ್ದಿ ದಂಗೆಯಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡಿರುವ ಗಾಯಾಳನೊಬ್ಬ ಜತೆಯಲ್ಲಿ ಬಂದಿದ್ದ ಮುಸ್ಲಿಂ ಯುವಕನೊಬ್ಬನ ರಕ್ತದ ಗ್ರೂಪ್ ಎಬಿ ನೆಗೆಟಿವ್ ಆಗಿದ್ದು, ವೈದ್ಯರು ಅವನಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆಯಿದೆ ಎಂದಾಗ ಅವನು ಯಾರಿಗೆ ಏನೇಂತು ಬಗ್ಗೆ ವಿಚಾರಿಸಿದೆ ರಕ್ತದಾನ ಮಾಡಿದ.

    ಲೋಹಿತ ಇದೆಲ್ಲವನ್ನು ಕೇಳಿದ ಬಳಿಕ ಮೌನ ಧರಿಸಿಕೊಂಡ, ರಸ್ತೆಯಲ್ಲಿ ಸಿಕ್ಕಿದ ಮುಸ್ಲಿಮ್ ಮಗುವನ್ನು ಸಲಹುತ್ತಿರುವ ಮಹಿಳೆ ಮತ್ತು ಇಂಥ ದಂಗೆಯ ಸಮಯದಲ್ಲಿ ಹಿಂದು ಮಹಿಳೆಗೆ ರಕ್ತ ನೀಡಿದ ಮುಸ್ಲಿಂ ಯುವಕ, ಇವರಿಬ್ಬರೂ ಅವನ ಮನಸ್ಸಿನಲ್ಲಿ ತುಂಬಿಕೊAಡಿದ್ದರು.

    ಈಗಿನ ಸ್ಥಿತಿಯಲ್ಲಿ ಇಂಥವರೇ ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಕತ್ತಲೆ ಹರಡಿಕೊಂಡಿರುವ ಈ ಸಮಯದಲ್ಲಿ ಇವರೇ ಮಿನುಗುವ ನಕ್ಷತ್ರಗಳು.

    ಲೋಹಿತನ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿರುವ ಕಣ್ಣೀರನ್ನು ಕಂಡು “ಯಾಕೆ ಸಾರ್ ಕಣ್ಣೀರು ಹಾಕುತ್ತಿದ್ದೀರಾ?”
    ಅರ್ಷದ್ ಕೇಳಿದ.

    ಅದೀಬ್ ಅಖ್ತರ್, ಮೈಸೂರು

  • ಅಮ್ಮನ ಹೆಸರಲ್ಲೇ ವೃದ್ಧಾಶ್ರಮ ಕಟ್ಟಿಸಿದ ಮಗ: 
“ಸನ್ಮಾನ” ಕಥೆ

    ಅಮ್ಮನ ಹೆಸರಲ್ಲೇ ವೃದ್ಧಾಶ್ರಮ ಕಟ್ಟಿಸಿದ ಮಗ: “ಸನ್ಮಾನ” ಕಥೆ

    ಅಂದು ನಾನು ಎಂದಿನಂತೆ ಬೆಳಗಿನ ಜಾವ, ಚಹಾ ಕುಡಿಯುತ್ತಾ ಇದ್ದೆ. ನನ್ನ ಮೊಬೈಲ್ ಒಂದೇ ಸವನೆ ರಿಂಗಣಿಸತೊಡಗಿತು. ಇನ್ನೂ ಅರ್ಧ ಚಹಾ ಉಳಿದಿತ್ತು. ತಕ್ಷಣ ಟೀಪಾಯಿ ಮೇಲೆ ಅದನ್ನು ಇಟ್ಟು ಮೊಬೈಲನ್ನು ಕೈಗೆತ್ತಿಕೊಂಡೆ. ಅದು ಅಮೃತ ಫೌಂಡೇಶನ್ ನಿರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ’ದಿಂದ ಕರೆ ಬಂದಿತ್ತು. ಅದನ್ನು ನೋಡಿದಾಗಲೇ ನನಗೆ ಅಚ್ಚರಿ ಸಂತಸ ಏಕಕಾಲದಲ್ಲಿ ಉಂಟಾದವು. ಕರೆಯನ್ನು ಸ್ವೀಕರಿಸಿ ಕಿವಿಯ ಬಳಿ ತಂದೆ. “ಸರ್, ನೀವು ಬರಬೇಕು; ನಿರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ, ಅದು ಈಗ ಹತ್ತು ವರ್ಷಗಳನ್ನು ಪೂರೈಸಿದೆ; ಸಂಸ್ಥೆಯು ಪ್ರಾರಂಭವಾದಾಗಿನಿAದಲೂ ತಾವು ಇದಕ್ಕೆ ಹಣವನ್ನು ಸಂದಾಯ ಮಾಡುತ್ತಾ ಬಂದಿರುವಿರಿ; ಹಾಗಾಗಿ ದಶಮಾನೋತ್ಸವವನ್ನು ಇಟ್ಟುಕೊಂಡಿದ್ದೇವೆ; ಆದ್ದರಿಂದ ನಿಮಗೆ ಸನ್ಮಾನ ಸಮಾರಂಭದ ವ್ಯವಸ್ಥೆ ಮಾಡಿದ್ದೇವೆ” ಎಂದು ಅಲ್ಲಿಯ ವ್ಯವಸ್ಥಾಪಕರು ಹೇಳಿದರು. ಅವರ ಮಾತು ಕೇಳಿ ನನಗೆ ಇನ್ನಷ್ಟು ಖುಷಿಯಾಯಿತು. ಅಂದರೆ… ನಾನು ಸಂದಾಯ ಮಾಡುತ್ತಿರುವ ಹಣವು ಸಕಾಲಕ್ಕೆ ಸೇರುತ್ತದೆಂದಾಯಿತು. ಈಗ ನಾನು ಹತ್ತು ವರ್ಷಗಳ ಹಿಂದೆ ಸರಿಯಬೇಕಾಯಿತು. ನಾನು ಕಟ್ಟಡ ಕಾರ್ಮಿಕನಾಗಿದ್ದೆ. ಎಂದಿನAತೆ ಅಂದು ಕೆಲಸದಲ್ಲಿ ತೊಡಗಿರುವಾಗ, ಯಾರೋ ಒಬ್ಬರು ಕೈಯಲ್ಲಿಕರಪತ್ರ’ಗಳನ್ನು ಹಿಡಿದುಕೊಂಡು ನಾವು ನಿರ್ಮಿಸುತ್ತಿರುವ ಕಟ್ಟಡದ ಹತ್ತಿರ ಬಂದರು. ಅವರು ಎಲ್ಲರಿಗೂ ನೀಡುವಂತೆ ನನಗೂ ಒಂದು ಕರಪತ್ರವನ್ನು ನೀಡಿದರು. ನಾನು ಅದನ್ನು ಸರಿಯಾಗಿ ಮಡಿಕೆ ಮಾಡಿಕೊಂಡು ಜೇಬಿನಲ್ಲಿಟ್ಟುಕೊಂಡೆ. ಮಧ್ಯಾಹ್ನದ ಊಟದ ಸಮಯದಲ್ಲಿ ಅದನ್ನು ಬಿಡಿಸಿ ಓದಿಕೊಂಡೆ. ಮತ್ತೆ ಅದನ್ನು ಭದ್ರವಾಗಿ ಜೇಬಿಗೆ ಇಳಿಸಿದೆ. ಎಂದಿನAತೆ ನನ್ನ ಕಾಯಕದಲ್ಲಿ ಎಂದುತೊಡಗಿದೆ. ಕೆಲಸ ಬಿಟ್ಟು, ಸಾಯಂಕಾಲದ ಹೊತ್ತಿಗೆ ಮನೆಗೆ ಬಂದು ಮಡದಿಗೆ ಕರಪತ್ರವನ್ನು ತೋರಿಸಿದೆ. ಅವಳು ಅದನ್ನು ಬಿಡಿಸಿ ಓದಿಕೊಂಡಳು. ಅವಳ ಮುಖದ ಮೇಲೆ ಯಾವುದೋ ಉತ್ಸಾಹದ ಕಳೆಯು ಗೋಚರಿಸಿತು. ನಾನು ಅದನ್ನು ಸೂಕ್ಷö್ಮವಾಗಿ ಗಮನಿಸಿದ್ದೆ.

    “ನೋಡಿ, ನಾವು ನಮ್ಮ ಗಳಿಕೆಯ ಒಂದು ಭಾಗವನ್ನು ಯಾಕೆ ವೃದ್ಧಾಶ್ರಮಕ್ಕೆ ನೀಡಬಾರದು? ಇದರಿಂದ ನಾವು ಸಮಾಜಕ್ಕೆ ಒಂದು ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ!”ಎAದು ಹೃದಯ ತುಂಬಿ ಹೇಳಿದಳು”. ಹೌದು, ನನ್ನ ವಿಚಾರವು ಅದೇ ಆಗಿತ್ತು. ಆದಾಯದ ಸ್ವಲ್ಪ ಭಾಗವನ್ನು ವೃದ್ದಾಶ್ರಮಕ್ಕೆ ಮೀಸಲಿಟ್ಟರೆ ….ಮುಂದೊAದು ದಿನ ಅದರಿಂದ ನಮಗೆ ನೆರವಾಗಬಹುದು. ಯಾವುದಕ್ಕೂ ಕಾಲವು ಹೀಗೆಯೇ ಇರುತ್ತದೆಂದು ಹೇಳಲು ಬರುವುದಿಲ್ಲ. ಇದ್ದ ಮಗನು ತನ್ನ ಮಡದಿ ಮಕ್ಕಳೊಂದಿಗೆ ಮಂಗಳೂರಿನ ಕೆಲಸಕ್ಕೆ ಹೊರಟು ಹೋಗಿದ್ದಾನೆ. ಅವನು ಕೂಡ ನನ್ನಂತೆಯೇ ಕಟ್ಟಡ ಕಾರ್ಮಿಕನಾಗಿದ್ದಾನೆ. ಇಲ್ಲಿಯ ಅಲ್ಪ ಆದಾಯವು ಅವನಿಗೆ ಹಿಡಿಸಿರಲಿಲ್ಲ. ಇತ್ತಿತ್ತಲಾಗಿ ಅವನು ಅಲ್ಲಿ ಫ್ಲಾಟ್ ಕೊಂಡು ಮನೆಯನ್ನು ಕಟ್ಟಿಸಿಕೊಂಡಿದ್ದಾನೆ. ಗೃಹಪ್ರವೇಶಕ್ಕೆ ನಾನು, ಮಡಿದಿಯೊಂದಿಗೆ ಅಲ್ಲಿ ಹೋಗಿ ಬಂದಿದ್ದೇನೆ. ಅವರು ಬರುವುದು ಊರಿನ ಜಾತ್ರೆ ಬಂದಾಗಲೆ! ಅವನು ಕೂಡ ನಮಗೆ ಅಲ್ಲಿಯೇ ಬರುವಂತೆ ಸತಾಯಿಸುತ್ತಿದ್ದ. ಆದರೆ ನಮಗೆ ಅಲ್ಲಿ ಹೊರಡಲು ಇಷ್ಟವಿರಲಿಲ್ಲ. ಹುಟ್ಟಿದ ಮನೆ, ಊರು ಬಿಡಲಾಗುತ್ತಿಲ್ಲ.ಅಲ್ಲದೆ ಮಡದಿಯು ಇಲ್ಲಿಯೆ ಟೈಲರಿಂಗ್ಅಂಗಡಿಯನ್ನು ಇಟ್ಟುಕೊಂಡಿದ್ದಾಳೆ. ಎಲ್ಲಿಯೂ ಹೋಗುವಂತಿಲ್ಲ! ಪರಿಚಿತರು ಬಟ್ಟೆಗಳನ್ನು ಹೊಲಿಸಿಕೊಳ್ಳಲು ಬರುತ್ತಿರುತ್ತಾರೆ.

    ಮಡದಿಯು ತನ್ನ ದುಡಿಮೆಯಲ್ಲಿನ ಒಂದು ಪಾಲನ್ನು ನನಗೆ ನೀಡಿದಾಗ ನಾನು, ನನ್ನದನ್ನು ಸೇರಿಸಿ ವೃದ್ಧಾಶ್ರಮಕ್ಕೆ ಸಂದಾಯ ಮಾಡುತ್ತಿದ್ದೆ. ಈ ನಡುವೆ ಮಡದಿಯ ಸಾವು ನನ್ನನ್ನು ದಿಕ್ಕು ತೋಚದಂತೆ ಮಾಡಿತು. ಮಗ, ಸೊಸೆ, ಮೊಮ್ಮಕ್ಕಳು ಅಂತಿಮ ಸಂಸ್ಕಾರಕ್ಕೆ ಅತಿಥಿಗಳಂತೆ ಬಂದು ಹೋದರು. ಮಡದಿಯ ನೆನಪು ಕಣ್ಣೀರು ತರಿಸಿತು… ಟೀಪಾಯಿ ಮೇಲಿದ್ದ ಚಹಾದ ಕಪ್‌ಗೆ ಇರುವೆಗಳು ಮುತ್ತಿಕ್ಕಿದ್ದವು, ಚಹಾದ ಕಪ್ ವೃದ್ಧಾಶ್ರಮದಂತೆ, ಇರುವೆಗಳು ವೃದ್ಧರು, ಅನಾಥರಂತೆ ಗೋಚರಿಸಿದಾಗ ಮತ್ತೆ ನಾನು ವಾಸ್ತವ ಲೋಕಕ್ಕೆ ಬಂದೆ.

    ಈಗ ನನಗೆ ಕಾರ್ಮಿಕರ ನಿವೃತ್ತಿ ವೇತನವು ಬರುತ್ತಿದೆ. ಆದರೆ ವದ್ಧಾಶ್ರಮಕ್ಕೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸಿಲ್ಲ! ನಾನು ಮುಂದಾಲೋಚನೆಯಿಂದ ಈ ಕ್ರಮ ಕೈಗೊಂಡಿದ್ದು ಸರಿಯಾಗಿಯೇ ಇದೆ, ಎಂದು ಈಗ ಅನಿಸುತ್ತಿದೆ. ಎಲ್ಲವೂ ನಾನು ಅಂದುಕೊಳ್ಳುತ್ತಿರುವಂತೆ ನಡೆಯುತ್ತಾ ಬಂದಿದೆ, ಅತ್ತ ಮಗ ಬಂದುಬಿಡು, ಎಂದು ಪದೇಪದೇ ಫೋನಾಯಿಸುತ್ತಲೇ ಇರುತ್ತಾನೆ. ಈಗ ಅವನಿಗೇ ಬೇಸರವಾಗಿ ನಿಲ್ಲಿಸಿದ್ದಾನೆ. ಹಾಗಂತ ನಾನು ಅವರಿಗೆ ಬೇಸರವಾಗಿಲ್ಲ. ಆದರೆ ಅವರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದು ನನಗೆ ಸಂತೋಷ ತಂದಿದೆ. ಕೆಲವೊಂದು ಬಾರಿ ಮನಸ್ಸು ಯೋಚಿಸುತ್ತದೆ… ಅವರೊಂದಿಗೆ ಹೋಗಿ ಕಾಲ ಕಳೆಯಬೇಕೆಂದು! ಮರುಕ್ಷಣ ಮುಂದಿನದನ್ನು ನೆನೆಸಿಕೊಂಡಾಗ ನನಗೆ ತುಂಬಾ ವೇದನೆ ಆಗುತ್ತದೆ. ಇನ್ನೂ ಗಟ್ಟಿಮುಟ್ಟಾಗಿದ್ದೇನೆ. ಮುಂದೆ ಇನ್ನಷ್ಟು ವೃದ್ಧಾಪ್ಯವು ಸಮೀಪಿಸುವ ಪೂರ್ವದಲ್ಲಿಯೇ ವೃದ್ಧಾಶ್ರಮದಲ್ಲಿ ನನ್ನ ಅಂತಿಮ ದಿನಗಳನ್ನು ಕಳೆಯಬೇಕೆಂದಿದ್ದೇನೆ. ಆದರೆ ನಾನು ಆ ವಿಷಯವನ್ನು ಯಾರೊಂದಿಗೂ ಇನ್ನೂ ಹೇಳಿಕೊಂಡಿಲ್ಲ. ನಾನು ಈ ಹಿಂದೆ ತೆಗೆದುಕೊಂಡ ನಿರ್ಧಾರವು ಸರಿಯಾಗಿಯೇ ಇದೆ, ಎಂದೆನಿಸುತ್ತದೆ. ಹೇಗೂ ನಾನು ಅವರಿಗೆ ಹೊಸ ಪರಿಚಯ ಅಲ್ಲ! ಸತತ ಹತ್ತು ವರ್ಷಗಳಿಂದಲೂ ಅವರ ಒಡನಾಟದಲ್ಲಿದ್ದೇನೆ. ನನಗೆ ಅಲ್ಲಿ ಯಾವತ್ತೂ ಸ್ವಾಗತವಿದೆ. ಮುಂದಿನ ದಿನಗಳಲ್ಲಿ ಅವರು ನನ್ನನ್ನು ಚೆನ್ನಾಗಿಯೇ ನಡೆಸಿಕೊಳ್ಳುತ್ತಾರೆಂಬ ಭರವಸೆಯು ನನ್ನಲ್ಲಿದೆ.

    ಆಗಾಗ ಮಗ ಫೋನಾಯಿಸುತ್ತಲೇ ಇರುತ್ತಾನೆ. ಆರೋಗ್ಯದ ಬಗ್ಗೆ ಕೇಳುತ್ತಾನೆ. ನಾನು ಹೇಗೂ ನಿರ್ಧಾರ ಮಾಡಿ ಬಿಟ್ಟಾಗಿದೆ! ‘ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ಲ ‘ಎಂಬAತಾಗಿದೆ. ಈ ಹಿಂದೆ ಅದೆಷ್ಟೋ ಆ ಆಶ್ರಮದ ವಿಳಾಸವನ್ನು ಕೇಳಿಕೊಂಡು ಬಂದ ಅನಾಥರಿಗೆ, ಅಸಹಾಯಕರಿಗೆ, ವೃದ್ಧರಿಗೆ ನೀಡಿದ್ದೇನೆ. ಅವರೀಗ ನೆಮ್ಮದಿಯಿಂದಿರಬಹುದು. ಆದರೆ ನಾನೇ ಇದುವರೆಗೂ ಆ ಆಶ್ರಮವನ್ನು ನೋಡಿಯೇ ಇಲ್ಲ! ಈಗ ಅಂತಹ ಸುವರ್ಣಅವಕಾಶವು ಬಂದೊದಗಿದೆ.ಈಗ ವಿಷಯವನ್ನು ಮಗ, ಸೊಸೆಗೆ ಪ್ರಸ್ತಾಪ ಮಾಡಬೇಕೆಂದಿದ್ದೇನೆ. ಮರುಕ್ಷಣ ನನ್ನ ನಿರ್ಧಾರಕ್ಕೆ ಅವರು ಅಡ್ಡಿ ಬಂದರೆ… ನನ್ನ ಕನಸು ನುಚ್ಚುನೂರಾಗುವುದರಲ್ಲಿ ಸಂಶಯವೇ ಇಲ್ಲ!ಎಂದು ಆ ವಿಷಯವನ್ನು ಕೈಬಿಡುತ್ತೇನೆ. ಯಾವುದಕ್ಕೂ ನನ್ನಿಂದಾಗಿ ಅವರಿಗೆ ತೊಂದರೆಯು ಬರಬಾರದು!

    ಹೊರಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮನೆಗೆ ಬೀಗ ಹಾಕಿ ಹೊರಬಂದೆ. ಮನೆಯಿಂದ ಹೊರಡುವಾಗ ಒಂದು ಸಲ ಮನೆಯನ್ನು ಹಿಂದಿರುಗಿ ನೋಡಿದೆ. ಮಡದಿ ಜ್ಞಾಪಕಕ್ಕೆ ಬಂದಳು. ‘ನನ್ನನ್ನು ಕರೆದುಕೊಂಡು ಹೋಗಿರಿ’ ಎನ್ನುತ್ತಿರುವಂತೆ ಭಾಸವಾಯಿತು. ಕಣ್ಣುಗಳ ತುಂಬಾ ದಳದಳ ನೀರು ಇಳಿಯತೊಡಗಿದವು…
    ಬಸ್ ನಿಲ್ದಾಣಕ್ಕೆ ಬಂದಾಗ ಬಸ್ಸು ಹೊರಡುವ ಸಿದ್ಧತೆಯಲ್ಲಿತ್ತು. ತಕ್ಷಣ ಬಸ್ ಏರಿದೆ. ಹುಟ್ಟಿದ ಊರು ಹಿಂದೆ ಸರಿಯತೊಡಗಿದಾಗ… ನಾನು ಏನನ್ನೋ ಕಳೆದುಕೊಂಡAತೆನಿಸಿತು. ನಾನು ಅಲ್ಲಿವರೆಗೂ ನಿರ್ಮಿಸಿದ ಕಟ್ಟಡಗಳು ಮಾತ್ರ ಶುಭಾಶಯಗಳು’ ಹೇಳುತ್ತಿರುವಂತೆ ತೋರಿತು. ಆ ಊರಿಗೆ ಬಂದಿದ್ದಾಯ್ತು. ಆಟೋರಿಕ್ಷಾದವನಿಗೆ ವಿಳಾಸ ತೋರಿಸಿ ಹತ್ತಿದ್ದಾಯ್ತು. ಕೆಲ ನಿಮಿಷಗಳಲ್ಲಿ ಆಟೋರಿಕ್ಷಾ ಆ ಊರಿನ ಹೊರವಲಯಕ್ಕೆ ಬಂದಿತು. ಕಟ್ಟಡದ ಮೇಲ್ಭಾಗದಲ್ಲಿ ನಾಮಫಲಕವು ಎದ್ದು ತೋರಿತು. ಅಮೃತ ಫೌಂಡೇಶನ್ ನೀರಾಶ್ರಿತರ ಕೇಂದ್ರ ಮತ್ತು ವೃದ್ಧಾಶ್ರಮ’. ನಾಮಫಲಕದಿಂದ ನನ್ನ ಬಾಳಿನಲ್ಲಿ ಹೊಸ ಬೆಳಕು ಮೂಡಿಬಂದAತಾಯಿತು. ಸ್ವರ್ಗಕ್ಕೆ ಮೂರೇ ಗೇಣು ಎಂಬAತಾಯಿತು…

    ವೃದ್ಧಾಶ್ರಮದ ಸುತ್ತಲೂ ಸುಂದರವಾದ ಪಾರ್ಕ್, ಅಲ್ಲಲ್ಲಿ ಕಲ್ಲಿನ ಬೆಂಚುಗಳು ಎತ್ತರವಾದ ಅಶೋಕ ವೃಕ್ಷಗಳು ಇನ್ನಿತರ ಮರಗಳು , ಅರಳಿದ ತರತರಸುಮಗಳು ಗೋಚರಿಸಿದವು. ಕ್ಷಣ ಕಾಲ ನನಗೆ ಸ್ವರ್ಗ ಲೋಕಕ್ಕೆ ಬಂದAತೆನಿಸಿತು. ಯಾರದೋ ಗಣ್ಯರ ಭಾಷಣವು ಸ್ಪೀಕರಿನಿಂದ ಕೇಳಿ ಬರುತ್ತಿತ್ತು. ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ … ನನ್ನಲ್ಲಿ ಶಕ್ತಿ ,ಧೈರ್ಯ ಮೈಯಲ್ಲಿ ತುಂಬಿದAತಾಯಿತು. ಸಭಾಭವನವು ಕ್ಕಿಕ್ಕಿರಿದಿತ್ತು. ವೇದಿಕೆಯಲ್ಲಿ ಗಣ್ಯರ ಭಾಷಣವು ಮುಂದುವರೆದಿತ್ತು. ನಾನು ಒಂದು ಮೂಲೆಯಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡೆ. ಅಷ್ಟರಲ್ಲಿ, ಯಾರದೋ ಕರೆ ಬಂದಿತು. ನೋಡಿದಾಗ ಅದು ಮಗನ ಕರೆಯಾಗಿತ್ತು. ಸದ್ದು ಗದ್ದಲದಲ್ಲಿ ಸರಿಯಾಗಿ ಕೇಳಿಸುವುದಿಲ್ಲವೆಂದು ಸಭಾಭವನದಿಂದ ಹೊರಬಂದೆ. ಅವನು ವಾರದ ಹಿಂದೆಯೇ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದ. ಈಗ ನಾನು ಕರೆಯನ್ನು ಸ್ವೀಕರಿಸಿದೆ.

    “ಅಪ್ಪಾಜಿ, ಮುಂದಿನ ತಿಂಗಳು ಹತ್ತನೇಯ ತಾರೀಖಿಗೆ ‘ಅಮ್ಮನ ದಿನ’ ವಿದೆ. ನಾನು ನಗರದ ಹೊರವಲಯದಲ್ಲಿ ಮೂರು ಎಕರೆ, ಐದು ಗುಂಟೆ ಜಮೀನನ್ನು ಖರೀದಿಸಿದ್ದೇನೆ. ಅಲ್ಲಿ ಅಮ್ಮನ ಹೆಸರಿನಲ್ಲಿ ವೃದ್ಧಾಶ್ರಮವನ್ನು ಪ್ರಾರಂಭಿಸಬೇಕೆAದಿದ್ದೇನೆ. ಇದರಿಂದ ಸಮಾಜಕ್ಕೆ ನಾವು ಅಳಿಲು ಸೇವೆಯನ್ನು ಸಲ್ಲಿಸಿದಂತಾಗುತ್ತದೆ. ಭೂಮಿ ಪೂಜೆಯನ್ನು ಅಂದೆ ಇಟ್ಟುಕೊಳ್ಳಲು ಶಾಸ್ತ್ರಿಗಳು ಹೇಳಿದ್ದಾರೆ. ಇದರಿಂದ ಅಮ್ಮನ ಆತ್ಮಕ್ಕೆ ಶಾಂತಿಯು ಆದಂತಾಗುತ್ತದೆ. ನೀವು ಬೇಗ ಬಂದುಬಿಡಿ. ಉಳಿದ ವಿಷಯಗಳನ್ನು ಮನೆಯಲ್ಲಿ ಯೇ ಚರ್ಚಿಸೋಣ, ನನ್ನ ಗೆಳೆಯನ ಅಪ್ಪಾಜಿಯವರಿಂದ, ನೀವು ತಪ್ಪದೇ ವೃದ್ಧಾಶ್ರಮಕ್ಕೆ ಹಣವನ್ನು ಸಂದಾಯ ಮಾಡುತ್ತಿರುವಿರೆಂದು ತಿಳಿದು ಬಂದಿತ್ತು. ನಾನು ಆಗಿನಿಂದಲೇ ಒಂದು ನಿರ್ಧಾರಕ್ಕೆ ಬಂದಿದ್ದೆ. ಅಮ್ಮನ ಹೆಸರಿನಲ್ಲಿ ವ್ರದ್ಧಾಶ್ರಮವನ್ನು ಪ್ರಾರಂಭಿಸಬೇಕೆAದು….!” ಮಗನ ಮಾತು ಕೇಳಿ ಇದು ಕನಸೋ, ನನಸೋ ಒಂದೂ ತಿಳಿಯದಂತಾಯಿತು. ಅವನ ಮೇಲೆ ಅಪಾರ ಗೌರವ, ಹೆಮ್ಮೆ ಮೂಡ ತೊಡಗಿತು

    ನಾನು ವ್ರದ್ದಾಶ್ರಮವನ್ನು ಸೇರಲು ಹೊರಟರೆ… ಅವನು ಅಂತಹ ವ್ರದ್ದಾಶ್ರಮವನ್ನೇ ನಿರ್ಮಿಸಲು ಹೊರಟಿರುವುದು ನನ್ನ ಸಂತಸಕ್ಕೆ ಪಾರವೇ ಇಲ್ಲದಂತಾಯಿತು. ಯಾವುದಕ್ಕೂ ನನ್ನ ನಿರ್ಧಾರವನ್ನು ತಿಳಿಸದೆ ಒಳ್ಳೆಯದೇ ಆಯಿತು. ಇದು ಎಲ್ಲರಿಗೂ ಸಾಧ್ಯವಾಗದ ಕೆಲಸ! ಅವನ ನಿಸ್ವಾರ್ಥ ಸೇವೆಯ ಮುಂದೆ ನಾನು ಕುಬ್ಜನಾಗಿಬಿಟ್ಟೆ. ಅವನು ನೆರವೇರಿಸುವ ಕಾರ್ಯದಲ್ಲಿ ನಾನು ಭಾಗಿಯಾಗಬೇಕು. ಆಶ್ರಮದಿಂದ ಸಮಾಜದಲ್ಲಿಯ ದೀನದಲಿತರಿಗೆ, ದುರ್ಬಲರಿಗೆ, ವೃದ್ಧರಿಗೆ, ಅಸಹಾಯಕರಿಗೆ, ಅನಾಥರಿಗೆ ನೆಮ್ಮದಿಯ ಜೀವನವನ್ನು ಕಟ್ಟಿ ಕೊಟ್ಟಂತಾಗುತ್ತದೆ. ಮಗನನ್ನು ಹೇಗೆ ಹೊಗಳಿಕೊಳ್ಳಬೇಕೆಂದು ನನಗೆ ಒಂದೂ ತಿಳಿಯಲಿಲ್ಲ. ಆ ಒಂದು ಕರಪತ್ರವು ಮಗನಿಂದ ದೊಡ್ಡ ಸಾಧನೆಯನ್ನೇ ಮಾಡಿಸಿಬಿಟ್ಟಿತು. ಕೂಡಲೇ ನಾನು ಅಲ್ಲಿಂದ ಹಿಂದಿರುಗಿದೆ. ಅಷ್ಟರಲ್ಲಿ… ಧ್ವನಿವರ್ಧಕದಲ್ಲಿ ನನ್ನ ಹೆಸರು ಕೇಳಿ ಬಂದಿತು. ಈಗ ನಾನು ಸನ್ಮಾನಿಸಿಕೊಳ್ಳಲು ಬಯಸಲಿಲ್ಲ! ಮಗನ ಮಾತುಗಳಿಂದಲೇ ನನಗೆ ಹೆಚ್ಚಿನ ಸನ್ಮಾನವಾಗಿ ಬಿಟ್ಟಿತ್ತು. ಆ ವೃದ್ಧಾಶ್ರಮವನ್ನು ಒಂದು ಬಾರಿ ಕಣ್ಣುತುಂಬಾ ನೋಡಿದೆ. `ಅಮೃತ್ ಫೌಂಡೇಶನ್…’ ಎನ್ನುವ ಹೆಸರಿನಲ್ಲಿ ನನ್ನ ಮಡದಿಯ ಹೆಸರು ಗೋಚರಿಸಿತು.

  • ಜ್ಞಾನೋಲೂಕ

    ಜ್ಞಾನೋಲೂಕ

    ಒಂದು ಅರಣ್ಯದ ಎಲ್ಲಾ ಪ್ರಾಣಿಗಳು ತೀರ್ಮಾನ ತೆಗೆದುಕೊಳ್ಳಲು ಚರ್ಚಿಸುತ್ತಿದ್ದಾಗ, ಕೀಚುಮೀಚಾದ ನಡುವೆ ಓಲೆಯೊಂದು ಮೌನವಾಗಿಯೇ ಗಮನಿಸುತ್ತಿತ್ತು. ಕೊನೆಗೆ, ಎಲ್ಲರೂ ಓಲೆಯ ಶಾಂತವಾದ ಮಾತನ್ನು ಕೇಳಿ ಸಮಸ್ಯೆಗೆ ಪರಿಹಾರ ಕಂಡರು.
    ಪಾಠ: ಗದ್ದಲಕ್ಕಿಂತ ನಿಶ್ಶಬ್ದ ಜ್ಞಾನ ಶ್ರೇಷ್ಠ.

  • ಆಮೆ ಮತ್ತು ಎರೆಹುಳು

    ಆಮೆ ಮತ್ತು ಎರೆಹುಳು

    ಆಮೆಯು ನದಿಗೆ ಹೋದಾಗ ನಡು ರಸ್ತೆಯಲ್ಲಿ ಎರೆಹುಳುವನ್ನು ಕಂಡು ಅದನ್ನು ನೆರವಿಗೆ ತೆಗೆದುಕೊಂಡಿತು. ದಿನಗಳ ನಂತರ ಆಮೆ ಒಂದು ಬಂಡೆಯಲ್ಲಿ ಸಿಕ್ಕಿ ಬಿದ್ದಾಗ ಆ ಎರೆಹುಳು ತನ್ನ ಕೊಂಬೆಗಳಿಂದ ಪತ್ತೆ ಹಚ್ಚಿ ನೆರವಾಯಿತು.
    ಪಾಠ: ಸಣ್ಣ ಸಹಾಯವೂ ಸಕಾಲದಲ್ಲಿ ದೊಡ್ಡ ಉದ್ಧಾರವಾಗಬಹುದು.

  • ನರಿಯ ಉಪಾಯ

    ನರಿಯ ಉಪಾಯ

    ನಟ ಕಮಲ್ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…

    “ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…

    “ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು! 

    ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!

    ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.

    ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.

    ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.

    ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.

    ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು. 

    ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…

    “ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…

    “ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು! 

    ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!

    ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.

    ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.

    ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.

    ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.

    ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು. 

     ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಮೊಸಳೆಯು ತನ್ನನ್ನು ತಾನೇ ಹಳಿದುಕೊಂಡಿತು!

  • ಅಮ್ಮ ಪ್ಲೀಸ್!

    ಅಮ್ಮ ಪ್ಲೀಸ್!

    “ಸಕೀನಾ! ಸಕೀನಾ! ಎಲ್ಲಿದ್ದೀಯಾ? ಇಲ್ಲಿ ನೋಡು ನನ್ನ ಎದೆಯಲ್ಲಿ ಏನೋ ಇದೆ. ಹುಣ್ಣು ಆಗಿರಬಹುದು. ಕೈಗೆ ತಾಗುತ್ತಿದೆ. ಆದರೆ, ಬಚಾವಾದೆನಪ್ಪ ನೋಯುವುದಿಲ್ಲ” ಎಂದು ಹೇಳುತ್ತಾ ಪರ್ವೀನ್, ಸಕೀನಾಳನ್ನು ಮನೆ ಇಡೀ ಹುಡುಕಿದಳು.

    ಸಕೀನ, ಪರ್ವೀನಳ ತಮ್ಮನ ಹೆಂಡತಿ. ಸಕೀನಾ ಸ್ನಾನಕ್ಕೆ ಹೋಗಿದ್ದಾಳೆ ಎಂದು ಅರಿತು ಪರ್ವೀನ್ ಸೋಫಾದಲ್ಲಿ ಕೂತು ಕಾಯುತ್ತಾ ಅಲ್ಲೇ ನಿದ್ದೆಗೆ ಜಾರಿದಳು.

    ಸ್ನಾನ ಮುಗಿಸಿ ಬಂದ ಸಕೀನ ಸೋಫಾದಲ್ಲಿ ತನ್ನ ವಸ್ತçದ ಪರಿವೆ ಇಲ್ಲದೆ ಅಡ್ಡಾದಿಡ್ಡಿಯಾಗಿ ಮಲಗಿರುವ ಪರ್ವೀನ್‌ಳನ್ನು ಎಬ್ಬಿಸಿ “ಹೀಗೆ ಯಾಕೆ ಮಲಗಿದ್ದೀರಾ? ನಿದ್ರಿಸ ಬೇಕೆಂದರೆ ಒಳಗೆ ಕೊಠಡಿಯಲ್ಲಿ ಮಲಗಬಾರದೇ ಯಾರಾದರು ಬಂದವರು ನೋಡಿದರೆ ಎಷ್ಟು ಮುಜುಗರ” ಎಂದು ಹೇಳಿದಳು.

    “ಸಕೀನಾ, ಎಷ್ಟು ಹೊತ್ತಿನಿಂದ ನಾನು ನಿನಗೆ ಕಾಯುತ್ತಿದ್ದೇನೆ! ನಿನಗೆ ವಿಷಯ ಏನೂಂತ ತಿಳಿಯಿತೆ?” ಎಂದು ಕೇಳಿದಳು.

    “ಇಲ್ಲ ಅಕ್ಕ ಏನಾಯಿತು ಹೇಳಿ”

    ಪರ್ವೀನ್, ಸಕೀನಾಳ ಕೈಯನ್ನು ಹಿಡಿದು ತನ್ನ ಎದೆಯ ಮೇಲಿಟ್ಟು, “ಇಲ್ಲಿ ಮುಟ್ಟಿ ನೋಡು. ನನ್ನ ಎದೆಯಲ್ಲಿ ಹುಣ್ಣಾಗಿದೆ. ಇದು ಎಂತಹ ಹುಣ್ಣು ನೋವಿಲ್ಲದ ಹುಣ್ಣು. ನೋವಿಲ್ಲದೆ ಇರುವುದೇ ಸಂತೋಷ” ಎಂದು ಹೇಳಿದಳು.

    ಇವಳ ಮಾತು ಕೇಳುತ್ತಿದ್ದ ಸಕೀನಾಳಿಗೆ ಹೃದಯದಲ್ಲಿ ಒಮ್ಮೆ ಧಸಕ್ಕ್ ಆಯಿತು. ಆಕೆ ಪರ್ವೀನ್‌ಳ ಎದೆಯ ಮೇಲೆ ಕೈ ಆಡಿಸುತ್ತಾ, “ಇದು ಯಾವಾಗದಿಂದ ಇದೆ? ಇಷ್ಟು ದಿನ ಯಾಕೆ ಹೇಳಲಿಲ್ಲ” ಎಂದು ಗಾಬರಿಯಿಂದ ಕೇಳಿದಳು.

    “ಯಾ ಅಲ್ಲಾಹ್! ಪರ್ವೀನ್‌ಗೆ ಆಗಿರುವ ಈ ಹುಣ್ಣು ಎಂತಹ ಹುಣ್ಣಾಗಿರಬಹುದು?” ಎಂದು ಚಿಂತಿಸುತ್ತಾ ತನ್ನ ಮೈದುನ ಅಬ್ದುಲ್ಲಾಗೆ ಕರೆ ಮಾಡಿ ವಿಷಯವನ್ನು ತಿಳಿಸಿದಳು. ಇಂತಹ ಸಮಯ ನನ್ನ ಪತಿ ಜೀವಂತವಾಗಿರುತ್ತಿದ್ದರೆ ಅಕ್ಕನ ಜವಾಬ್ದಾರಿಯನ್ನು ಹೊರುತ್ತಿದ್ದರು. ಏನು ಮಾಡಬೇಕು ಎಂದು ಅವರು ತಿಳಿದಷ್ಟು, ನಮಗೆ ಯಾರಿಗೂ ತಿಳಿದಿಲ್ಲ ಎಂದು ಯೋಚಿಸುತ್ತಾ ತೀರಿ ಹೋದ ತನ್ನ ಪತಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡಳು.

    ಗಾಬರಿಗೊAಡ ಸಕೀನಾ ಅಬ್ದುಲ್ಲಾಗೆ ಪುನಃ ಕರೆ ಮಾಡಿ ಬೇಗ ಬರುವಂತೆ ಹೇಳಿದಳು. ಅಬ್ದುಲ್ಲಾ ಬಂದ ತಕ್ಷಣ, ವೈದ್ಯರ ಅಪಾಯಿಂಟ್ಮೆAಟ್ ಪಡೆದು ಪರ್ವೀನಳನ್ನು ವೈದ್ಯರಲ್ಲಿ ಕರಕೊಂಡು ಹೋದರು.

    ಪರ್ವೀನಳನ್ನು ಪರೀಕ್ಷಿಸಿದ ವೈದ್ಯರು ಸಕೀನಾಳಿಗೆ ಯಾವುದರ ಬಗೆ ಭಯವಿತ್ತೋ ಅದನ್ನೇ ಹೇಳಿದರು.

    ಪರ್ವೀನಳಿಗೆ ಬ್ರೆಸ್ಟ್ ಕ್ಯಾನ್ಸರ್ ಎಂದು ಹೇಳಿದಾಗ ಸಕೀನ ಮತ್ತು ಅಬ್ದುಲ್ಲಾಗೆ ಕಾಲ ಕೆಳಗಿನಿಂದ ನೆಲ ಕುಸಿದಂತೆ ಆಯಿತು. ಸಕೀನಾ ನಡುಗುತ್ತಾ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು ಅಲ್ಲೆ ಕೂತು ಅಳ ತೊಡಗಿದರು. ಈಗ ನಾವೇನು ಮಾಡಲಿ ಎಂಬ ಚಿಂತೆ ಆಕೆಗೆ ಕಾಡ ತೊಡಗಿತು.

    ವೈದ್ಯರು ತಮ್ಮ ಮಾತನ್ನು ಮುಂದುವರಿಸುತ್ತಾ, “ಇವರಿಗೆ ಆದಷ್ಟು ಬೇಗ ಸರ್ಜರಿ ಮಾಡಬೇಕು” ಆಸ್ಪತ್ರೆಯಲ್ಲಿ ಯಾವಾಗ ದಾಖಲಾಗುತ್ತೀರಿ? ಎಂದು ಕೇಳಿದಾಗ, ಸಕೀನ ಅಬ್ದುಲ್ಲಾನ ಮುಖ ನೋಡಿ, ಏನು ಮಾಡುವುದೆಂದು ಸನ್ನೆಯಿಂದ ನೋಡಿದಳು.

    `ಕ್ಯಾನ್ಸರ್’ ಎಂಬ ಪದ ಕೇಳಿದ ತಕ್ಷಣ ಅಬ್ದುಲ್ಲಾ ಕೂಡ ಗಾಬರಿಗೊಂಡರು. ಅಕ್ಕನಿಗೆ ಇಂತಹ ದೊಡ್ಡ ರೋಗ ಹೇಗೆ ಬಂತು? ಇನ್ನು ಏನು ಮಾಡುವುದು ಹಣ ಎಲ್ಲಿಂದ ತರಲಿ ಎಂದೆಲ್ಲಾ ಯೋಚಿಸುತ್ತಾ ಅಬ್ದುಲ್ಲಾಹ್,

    “ಎಷ್ಟು ಖರ್ಚು ಬರಬಹುದು ಡಾಕ್ಟೆçÔ ಎಂದು ಮೆಲುಧ್ವನಿಯಲ್ಲಿ ಕೇಳಿದರು.

    “ಎಲ್ಲಾ ಖರ್ಚು ಸೇರಿಸಿ ೩ ರಿಂದ ೪ ಲಕ್ಷ ಬೇಕಾಗುವುದು” ಎಂದು ವೈದ್ಯರು ಹೇಳಿದಾಗ ಸಕೀನ ಮತ್ತು ಅಬ್ದುಲ್ಲಾರಿಗೆ ಏನು ಮಾಡಬೇಕೆಂದು ತೋಚದಾಯಿತು. ಸಮಸ್ಯೆ ಸರ್ಜರಿಯಲ್ಲಿ ಮುಗಿಯುವುದಿಲ್ಲ. ಕೀಮಿಯೋ ತೆರಪಿ ಮಾಡಬೇಕಾಗುತ್ತದೆ. ಆಗಾಗ ಮಾಡುವಾಗ ಅದಕ್ಕೂ ಹಣದ ಅಗತ್ಯ ಇದೆ. ಏನು ಮಾಡುವುದು ಎಂದು ಇಬ್ಬರೂ ಮಾತನಾಡಿಕೊಂಡರು.

    ಪರ್ವೀನ್, ಅಬ್ದುಲ್ಲಾಹ್ ಮತ್ತು ಲತೀಫ್‌ರ ಏಕೈಕ ಸಹೋದರಿ. ಆಕೆ ವಿಧವೆ. ಮಕ್ಕಳೂ ಇಲ್ಲ. ಅಪ್ಪ-ಅಮ್ಮನೂ ಇಲ್ಲ. ಈಗ ಅಣ್ಣ ಕೂಡ ತೀರಿ ಹೋಗಿದ್ದಾರೆ.

    ಅಷ್ಟು ಹಣ ಎಲ್ಲಿಂದ ತರುವುದು ಎಂಬ ಚಿಂತೆಯೊAದಿಗೆ ಪರ್ವೀನಳ ಸರ್ಜರಿ ಮಾಡುವ ತಯಾರಿಯನ್ನೂ ಅಬ್ದುಲ್ಲಾ ಮತ್ತು ಸಕೀನ ಮಾಡಲು ಅನುವಾದರು.

    ಪರ್ವೀನ್ ವಿವಾಹದ ನಂತರ ಮಾನಸಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕೇವಲ ತಿನ್ನುವ ಮತ್ತು ಸುತ್ತಾಡುವ ಶೋಕಿ.

    ಪರ್ವೀನಳ ಪತಿ ಜೀವಂತವಾಗಿದ್ದಾಗ, ಅವರಿಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ. ಇಬ್ಬರು ಪರಸ್ಪರ ನೋಡುತ್ತಲೇ ಭುಸುಗುಟ್ಟಲು ಆರಂಭಿಸುತ್ತಿದ್ದರು.

    ಪರ್ವೀನ್‌ಳ ಅಪ್ಪ ಹುಸೇನ್ ಓರ್ವ ಶ್ರೀಮಂತ ವ್ಯಕ್ತಿ. ಆತ ಎಮ್‌ಎಸ್‌ಡಬ್ಲೂö್ಯ ಕಲಿತು, ತಾನು ಜನರ ಸೇವೆ ಮಾಡಬೇಕೆಂದು ಬೇರೆ ರಾಜ್ಯದ ಒಂದು ಚಿಕ್ಕ ಹಳ್ಳಿಯಲ್ಲಿ ನೆಲೆಸಿದರು. ಹಳ್ಳಿಗರ ಅಗತ್ಯಗಳಿಗೆ ಕಾಳಜಿವಹಿಸಿ ಸಹಕರಿಸುವವರು ಯಾರೂ ಇರಲಿಲ್ಲ. ಜನರ ಸೇವೆ ಮಾಡುದರೊಂದಿಗೆ ಅವರು ವ್ಯಾಪಾರವನ್ನು ಮಾಡುತ್ತಿದ್ದರು ಮತ್ತು ಹಳ್ಳಿಯ ಜನರಿಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದ್ದರು. ವಿವಾಹವಾಗಿ ಪತ್ನಿಯನ್ನೂ ಹಳ್ಳಿಗೆ ಕರಕೊಂಡು ಹೋದ ಹುಸೈನ್ ಹಸನ್ಮುಖಿ ಮತ್ತು ಶ್ರೀಮಂತಿಕೆಯೊAದಿಗೆ ಹೃದಯ ಶ್ರೀಮಂತಿಕೆಯೂ ಆಗಿದ್ದ ಪತಿ-ಪತ್ನಿಯರು ಆ ಊರಿನವರಿಗೆ ಬಹಳ ಪ್ರೀತಿ ಪಾತ್ರರಾಗಿದ್ದರು. ಹಳ್ಳಿಗರು ತಮ್ಮೆಲ್ಲ ಸುಖ-ದುಃಖಗಳಲ್ಲಿ ಹುಸೈನ್ ಮತ್ತು ಅವರ ಪತ್ನಿಯನ್ನೂ ಮರೆಯುತ್ತಿರಲಿಲ್ಲ.

    ಆ ಹಳ್ಳಿಯಲ್ಲಿ ಸರಿಯಾದ ಶಾಲೆಗಳು ಇರದ ಕಾರಣ, ತಮ್ಮ ಮಕ್ಕಳಿಗೆ ದೂರದ ಊರಿನಲ್ಲಿರುವ ವಸತಿ ಶಾಲೆಗೆ ಸೇರಿಸಿದರು. ಮೂವರು ಅಲ್ಲೇ ಓದುತ್ತಿದ್ದರು.

    ತಂದೆ-ತಾಯಿಯಿAದ ದೂರ ಇದ್ದು ಓದುವುದು ಮಕ್ಕಳಿಗೆ ಇಷ್ಟ ಇರಲಿಲ್ಲದಿದ್ದರೂ ಅಪ್ಪ-ಅಮ್ಮನ ನಿರ್ಧಾರದ ಮುಂದೆ ತಲೆ ಬಾಗುವ ಅನಿವಾರ್ಯ ಇತ್ತು. ಮೂವರಿಗೂ ಅಪ್ಪ-ಅಮ್ಮನಿಗೆ ಎದುರು ಹಾಕುವ ಧೈರ್ಯ ಇರಲಿಲ್ಲ ಮತ್ತು ಅವರಿಂದ ದೂರ ಇರಲು ಇಷ್ಟವೂ ಇರಲಿಲ್ಲ.

    ಪರ್ವೀನ್‌ಗೆ ತಾನು ಡಾಕ್ಟರ್ ಆಗಬೇಕು ಎಂಬ ಹಂಬಲ ಇತ್ತು. ಆದುದರಿಂದ ಆಕೆ ಆ ವಾತಾವರಣಕ್ಕೆ ತನ್ನನ್ನು ಹೊಂದಿಸಿ ಬಹಳ ನಿಷ್ಠೆಯಿಂದ ಕಲಿಯ ತೊಡಗಿದಳು. ಮೂವರು ಮನಸಿಟ್ಟು ಶಿಕ್ಷಣ ಮುಂದುವರಿಸಿದರು.

    ಪರ್ವೀನ್ ತನ್ನ ಕ್ಲಾಸಿನಲ್ಲಿ ಓದುವುದರಿಂದ ಹಿಡಿದು ಎಲ್ಲಾ ಚಟುವಟಿಕೆಯಲ್ಲಿ ಮೊದಲಿಗಳಾಗಿದ್ದಳು. ಹತ್ತನೆಯ ಪರೀಕ್ಷೆಯಲ್ಲಿ ಅವಳು ಅಗ್ರಸ್ಥಾನದಲ್ಲಿದ್ದಳು. ಮುಂದಿನ ಶಿಕ್ಷಣ ಮೆರಿಟ್‌ನಲ್ಲಿ ಕಲಿತು ಹೆಸರುವಾಸಿಯಾದ ಡಾಕ್ಟರ್ ಆಗಿ ಅಪ್ಪ-ಅಮ್ಮನ ಹೆಸರು ಬೆಳಗಿಸಬೇಕು ಎಂಬ ಹಂಬಲ ಪರ್ವೀನಳದ್ದು.

    ಆದರೆ, ಆಕೆಯ ಕನಸು, ಆಶೆ ಎಲ್ಲವೂ ನುಚ್ಚು ನೂರಾಗುವ ಸಮಯ ಬಂತು. ಹೀಗಾಗಬಹುದು ಎಂದು ಪರ್ವೀನ್ ಕನಸು ಮನಸಿನಲ್ಲಿ ಯೋಚಿಸಿರಲಿಲ್ಲ.

    ಅಂದರೆ, ಹುಸೇನ್‌ರವರ ಆಪ್ತ ಮಿತ್ರ, ಪರ್ವೀನ್‌ಳನ್ನು ತನ್ನ ಮಗನೊಂದಿಗೆ ವಿವಾಹ ಮಾಡಿಸಬೇಕು ಎಂದು ವಿನಂತಿಸಿದರು. ಹುಸೇನರಿಗೂ, ಮಿತ್ರನ ಕುಟುಂಬ ಹಾಗೂ ರಾಹಿಲ್ ತುಂಬ ಇಷ್ಟ. ರಾಹಿಲ್ ಪರ್ವೀನಳಿಗಿಂತ ೧೫ ವರ್ಷ ದೊಡ್ಡವನಾದರೂ, ಮಿತ್ರನ ಮಗ ಮತ್ತು ವೈದ್ಯ ಕೂಡ ಮತ್ತು ಮಗಳ ಉಜ್ವಲ ಭವಿಷ್ಯಕ್ಕೆ ಉತ್ತಮ ಎಂದು ಯೋಚಿಸಿ ಸಂತೋಷ ಪಟ್ಟರು. ಪತ್ನಿಯೊಂದಿಗೆ ಈ ಬಗ್ಗೆ ಚರ್ಚಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.

    ಉತ್ತಮ ಶಿಕ್ಷಣ ಪಡೆದು ವೈದ್ಯಳಾಗಬೇಕು ಎಂಬ ಕನಸು ಕಂಡ ಪರ್ವೀನ್ ಯಾವ ಕಾರಣಕ್ಕೂ ಮದುವೆಗೆ ಒಪ್ಪಲಿಲ್ಲ. ಆಕೆ ಶಿಕ್ಷಣ ಪಡೆದು ತನ್ನ ಕಾಲಲ್ಲಿ ನಿಲ್ಲಬೇಕು ಎಂಬ ಬಯಕೆಯನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಹಾಗೂ ಆಕೆಗೆ ಆ ಹುಡುಗ ಇಷ್ಟವು ಇರಲಿಲ್ಲ. ಅಪ್ಪ-ಅಮ್ಮನ ಇಚ್ಛೆ ಮತ್ತು ನಿರ್ಧಾರದ ಮುಂದೆ ಅವಳ ನಿರ್ಧಾರ ಮತ್ತು ಇಚ್ಛೆಗೆ ಮನ್ನಣೆ ದೊರಕಲಿಲ್ಲ. “ಅಮ್ಮ ಪ್ಲೀಸ್” ಎಂದು ಗೋಗರೆದರೂ ಅದಕ್ಕೆ ಬೆಲೆ ಇಲ್ಲ.

    ಒಲ್ಲದ ಮನಸ್ಸಿನಿಂದ ವಿವಾಹವಾದ ಪರ್ವೀನ್‌ಳಿಗೆ ಪತಿಯೊಂದಿಗೆ ಹೊಂದಾಣಿಕೆ ಆಗಲು ೧-೨ ವರ್ಷ ತಗಲಿತು. ರಾಹಿಲ್ ಕೂಡ ಪತ್ನಿಯನ್ನು ಸಂತೋಷ ಪಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಆತ ಓರಟು ಸ್ವಭಾವದವನಾಗಿದ್ದ ಹಾಗೂ ಸ್ವಾರ್ಥಿಯೂ ಆಗಿದ್ದ.

    ಪರ್ವೀನ್ ಗರ್ಭಿಣಿ ಆದಳು. ರಾಹಿಲ್‌ನೊಂದಿಗೆ ಆಕೆಗೆ ನೆಮ್ಮದಿ ದೊರೆಯುತ್ತಿರಲಿಲ್ಲದಿದ್ದರೂ ತಾನು ಗರ್ಭಿಣಿ ಎಂಬ ಸಂತೋಷದಿAದ ಆಕೆ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಗರಿಷ್ಠ ಪ್ರಯತ್ನಿಸಿದಳು. ಆದರೆ ಪತಿಗೆ ಈ ವಿಷಯ ತಿಳಿಸಲು ಎರಡು ತಿಂಗಳು ಕಳೆಯಲಿ ಎಂದು ಆಕೆಯ ಯೋಚನೆ. ಹಗಲಿರುಳು ತನಗೆ ಹುಟ್ಟುವ ಮಗುವಿನ ಬಗ್ಗೆ ಕನಸು ಕಾಣುವುದು ಆಕೆಯ ದಿನ ನಿತ್ಯದ ಕೆಲಸ.

    ಎರಡು ತಿಂಗಳು ಮುಗಿಯುವಷ್ಟರಲ್ಲೇ ಪತಿಯೊಂದಿಗೆ ಹೇಳಬೇಕು ಎಂದು ನಿರ್ಧರಿಸಿದ ಆ ದಿನ ಬಂದೇ ಬಿಟ್ಟಿತು. ನಮಗೆ ಮಗು ಆಗುವ ಸಂತೋಷ ಪತಿಯ ಮುಖದಲ್ಲಿ ನೋಡಬೇಕು. ನಂತರ ಅಮ್ಮನಿಗೆ, ಅತ್ತೆಗೆ ಹೇಳಬೇಕು ಎಂಬ ಲೆಕ್ಕಾಚಾರ ಅವಳದಾಗಿತ್ತು.

    ನಾಳೆ ಹೇಳಬೇಕು ಎಂದು ಯೋಚಿಸಿ ಪರ್ವೀನ್ ರಾತ್ರಿ ನಿದ್ದೆ ಇಲ್ಲದೆ ಹಾಸಿಗೆಯಲ್ಲಿ ಹೊರಲಾಡುತ್ತಾ ಬೆಳಿಗ್ಗೆ ಬೇಗನೆ ಎದ್ದು ತನ್ನನ್ನು ಶೃಂಗರಿಸಿ ಪತಿ ಏಳುವುದನ್ನು ಕಾತರದಿಂದ ಕಾಯುತ್ತಾ, ಪತಿಗಾಗಿ ಬೆಳಗಿನ ಉಪಹಾರವನ್ನು ತಯಾರು ಮಾಡಿದಳು. ಕೆಲಸದ ಮಧ್ಯೆ ಪದೇ ಪದೇ ಕೋಣೆಗೆ ಹೋಗಿ ಪತಿ ಎದ್ದಿರಬಹುದೇ ಎಂದು ನೋಡುವುದರಲ್ಲಿ ಕಳೆಯಿತು ಆಕೆಯ ಸಮಯ.

    ದಿನಾಲೂ ಏಳುವ ಹೊತ್ತಿನಲ್ಲೇ ಎದ್ದ ರಾಹಿಲ್, ಮದುಮಗಳಂತೆ ಶೃಂಗರಿಸಿರುವ ಪತ್ನಿಯ ಕಡೆ ಪ್ರಶ್ನಾರ್ಥಕವಾಗಿ ನೋಡಿದ. “ಏನು ಮದುವೆಗೆ ಹೋಗಲಿಕ್ಕಿದೆಯೇ? ಅಥವಾ ಅಮ್ಮನ ಮನೆಗೆ ಹೋಗುವ ತಯಾರಿಯೇ?” ಎಂದು ಕೇಳಿದ. ಪರ್ವೀನ್ ನಾಚುತ್ತಾ, ಇಲ್ಲ ಎಂದು ತಲೆ ಅಲ್ಲಾಡಿಸಿದಳು.

    “ಮತ್ತೇ?”

    ಪರ್ವೀನ್ ಪತಿಯ ಹತ್ತಿರ ಕೂತು ಪತಿಯ ಕೈಯನ್ನು ತನ್ನ ಕೈಯಲ್ಲಿಟ್ಟು, ಮುಖವನ್ನು ನೋಡುತ್ತಾ, “ತುಂಬಾ ದಿವಸದಿಂದ ಒಂದು ವಿಷಯ ನಿಮ್ಮಲ್ಲಿ ಹಂಚಬೇಕು ಎಂದು ಕಾಯುತ್ತಿದ್ದೆ.”

    “ತುಂಬ ದಿನ ಯಾಕೆ ಕಾದೆ? ಬೇಗನೆ ಹೇಳಬಾರದೆ? ಏನು ವಿಷಯ” ಎಂದು ಒರಟಾಗಿ ಹೇಳಿದ.

    “ನಾನು ಗರ್ಭಿಣಿ. ನಿನ್ನೆಗೆ ಎರಡು ತಿಂಗಳು ಕಳೆಯಿತು. ಮೂರನೇ ತಿಂಗಳು ಆರಂಭಗೊAಡಿತು” ಎಂದು ಸಂತೋಷದಿAದ ಹೇಳಿದಳು.

    ಈ ವಿಷಯವನ್ನು ಕೇಳಿದ ರಾಹಿಲಿನ ಮುಖ ಕಪ್ಪಾಯಿತು. ತನ್ನ ಕೈಯನ್ನು ಆಕೆಯ ಕೈಯಿಂದ ಎಳೆದು, ಒಮ್ಮೆಲೆ ಎದ್ದು ನಿಂತು, 

    “ನಿನಗೆ ತಲೆ ಕೆಟ್ಟಿದೆಯೆ? ವಿವಾಹದ ಎರಡೇ ವರ್ಷದಲ್ಲಿ ಮಗುವಾ! ನಮಗೆ ಐದು ವರ್ಷದ ನಂತರ ಮಗು ಆಗಬೇಕೆಂದು ನಾನು ನಿರ್ಧರಿಸಿದ್ದೆ” ಎಂದು ಅಬ್ಬರಿಸಿದ.

    ಪರ್ವೀನಳ ಇಷ್ಟು ದಿನದ ಉತ್ಸಾಹಕ್ಕೆ ನೀರೆರಚಿದಂತಾಯಿತು. ಆಕೆ ಗಡಗಡನೆ ನಡುಗ ತೊಡಗಿದಳು. ಮನಸ್ಸಿಗಾದ ನೋವನ್ನು ತಡೆಲಾರದೆ ಆಕೆ ಅಳುತ್ತಾ, “ನಿಮಗೆ ಸಂತೋಷ ಆಗಲಿಲ್ಲವೇ? ನಾನು ಈ ಸಂತೋಷವನ್ನು ಮೊದಲು ನಿಮ್ಮೊಂದಿಗೆ ಹಂಚಲು ಇಷ್ಟು ದಿನದಿಂದ ಕಾತರದಿಂದ ಕಾಯುತ್ತಿದ್ದೆ” ಎಂದು ನಡುಗುವ ಧ್ವನಿಯಲ್ಲಿ ಹೇಳಿದಳು.

    ರಾಹಿಲ್ ಚೀರಾಡುತ್ತಾ, “ನಡಿ! ಈಗಲೇ ನಡಿ! ಈ ಗರ್ಭವನ್ನು ಈಗಲೇ ತೆಗೆದು ಬಿಡುವ” ಎಂದು ಪರ್ವೀನಳ ಕೈ ಹಿಡಿದೆಳೆದ. ಪರ್ವೀನ್ ಒಪ್ಪಲಿಲ್ಲ. ಪರ್ವೀನ್ ಕೂಗಾಡಿದಳು. ಕಿರುಚಾಡಿದಳು.

    ರಾಹಿಲ್ ತನ್ನ ಅಮ್ಮನ ಬಳಿ ಹೋಗಿ “ನನಗೆ ಈಗ ಮಗು ಬೇಡ! ಪರ್ವೀನ್‌ಗೆ ಹೇಳಿ. ಈ ಗರ್ಭವನ್ನು ಈಗಲೇ ತೆಗೆಯಬೇಕು. ಐದು ವರ್ಷದ ತನಕ ನನಗೆ ಮಗು ಬೇಡ. ಅಮ್ಮ ಪರ್ವೀನ್‌ಗೆ ಹೇಳಿ” ಅಂತ ಚೀರಾಡಿದ.

    ಪರ್ವೀನ್ ತನ್ನ ಅಮ್ಮನಿಗೆ ಫೋನಾಯಿಸಿ ಎಲ್ಲ ವಿಷಯವನ್ನು ತಿಳಿಸಿದಳು. ಅಮ್ಮ ರಾಹಿಲ್‌ನ ಅಮ್ಮನಿಗೆ ಫೋನಾಯಿಸಿ ಮಾತನಾಡಿದರು. ಆದರೆ ಅವರು ಮಗನ ಪರ ವಹಿಸಿದರು. ಅಮ್ಮ ರಾಹಿಲ್‌ಗೆ ಫೋನಾಯಿಸಿ ಸಮಜಾಯಿಸಲು ಪ್ರಯತ್ನಿಸಿದರು. ಆದರೆ, ರಾಹಿಲ್ ಯಾವ ಕಾರಣಕ್ಕೂ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

    ಅಂದೇ ಪರ್ವೀನ್‌ಗೆ ಆಸ್ಪತ್ರೆಗೆ ಕೊಂಡು ಹೋಗಲಾಯಿತು. ಅತ್ತು ಅತ್ತು ಪರ್ವೀನ್‌ಳ ಮುಖ ಊದಿ ಕೊಂಡಿತು. ಪರ್ವೀನ್ ಆಸ್ಪತ್ರೆಯಲ್ಲಿ ಪುನಃ ರಾಹಿಲ್ ಮತ್ತು ಅತ್ತೆ-ಮಾವನೊಂದಿಗೆ ಬೇಡಿಕೊಂಡಳು. ತನಗೆ ಈ ಮಗು ಬೇಕು ಎಂದು ಕೂಗಾಡಿದಳು, ಕಿರುಚಿದಳು ಆದರೆ ಯಾರಿಗೂ ಆಕೆಯ ಮೇಲೆ ದಯೆ ಬರಲಿಲ್ಲ.

    ಪರ್ವೀನ್ ಅಮ್ಮನಿಗೆ ಫೋನಾಯಿಸಿ “ನಾನು ಮದುವೆಗೆ ತಯಾರಿರಲಿಲ್ಲ ಎಂದು ಹೇಳಿದಾಗ, ನೀವೆಲ್ಲರೂ ಸೇರಿ ನನ್ನ ಇಚ್ಛೆಯನ್ನು ಗಾಳಿಗೆ ತೂರಿ ನನಗೆ ವಿವಾಹ ಮಾಡಿಸಿದರಿ. ರಾಹಿಲ್ ನನಗೆ ಇಷ್ಟ ಇಲ್ಲ ಎಂದು ಹೇಳಿದಾಗಲೂ ನೀವು ಯಾರೂ ನನ್ನ ಮಾತಿಗೆ ಬೆಲೆ ಕೊಡಲಿಲ್ಲ. ಒಲ್ಲದ ಮನಸ್ಸಿನಿಂದ ನಾನು ಅವನೊಂದಿಗೆ ಹೊಂದಿಕೊAಡೆ. ಗರ್ಭಿಣಿ ಆದೆ. ಆದರೆ, ಈಗ ನನಗೆ ಮಗು ಬೇಕು ಎಂದು ಗೋಗರೆದರೂ, ನನ್ನ ಈ ಇಚ್ಛೆಯನ್ನು ಗಾಳಿಗೆ ತೂರಲಾಗುತ್ತಿದೆ. ಸಮಾಜದ ಮುಂದೆ ಈ ಎರಡು ಮನೆಯವರು ಶಿಕ್ಷಿತರು ಎಂದು ಗುರುತಿಸಿಕೊಂಡವರು. ಆದರೆ ಒಂದು ಹೆಣ್ಣಿನ ಬಾಳಿಗೆ, ಹೆಣ್ಣಿನ ಮಾತಿಗೆ, ಹೆಣ್ಣಿನ ನಿರ್ಧಾರಕ್ಕೆ ಈ ಎಜುಕೇಟಡ್ ಜನರ ಮುಂದೆ ಬೆಲೆ ಇಲ್ಲ. ನಾನು ನಿಮ್ಮೆಲ್ಲರನ್ನು ದ್ವೇಷಿಸುತ್ತೇನೆ. ನನ್ನ ಶಿಕ್ಷಣ, ವೈದ್ಯೆ ಆಗುವ ಕನಸು, ತಾಯಿ ಆಗುವ ಕನಸು, ನನ್ನ ಜೀವನ ಎಲ್ಲವನ್ನು ಹಾಳು ಮಾಡಿ ನುಚ್ಚು ನೂರು ಮಾಡಿದ ನಿಮಗೆಲ್ಲರಿಗೂ ನಾನು ದ್ವೇಷಿಸುತ್ತೇನೆ” ಎಂದು ಅಳುತ್ತಾ ಹೇಳಿ, ಅಮ್ಮನ ಉತ್ತರಕ್ಕೆ ಕಾಯದೆ ಫೋನಿಟ್ಟಳು.

    ಪತಿಗೂ ಈ ಎಲ್ಲ ವಿಷಯವನ್ನು ಹೇಳಿದಳು. ಪತಿಯ ಮನಸ್ಸು ಕರಗಬಹುದು ಎಂದು ಯೋಚಿಸಿ ಆತನ ಕಾಲ ಮೇಲೆ ಕೂತು ಗೋಗರೆದಳು. ಆದರೆ ಆ ಕಲ್ಲು ಹೃದಯ ಕರಗಲೇ ಇಲ್ಲ. ಬಲವಂತದಿAದ ಆಕೆಯ ಗರ್ಭ ತೆಗೆಯಲಾಯಿತು.

    ಪರ್ವೀನ್‌ಗೆ ಎಚ್ಚರ ಆದಾಗ ತಾನು ಕತ್ತಲೆಯಲ್ಲಿ ಇರುವಂತೆ, ತನ್ನ ಸುತ್ತ ಮತ್ತು ರಾಕ್ಷಸರು ಕೂತಂತೆಯು, ತನ್ನನ್ನು ಚುಚ್ಚಿ ತಿನ್ನುವಂತೆ ಭಾಸವಾಯಿತು. ಆಕೆ ತಲೆ ಹಿಡಿದು ಕಿರುಚಾಡ ತೊಡಗಿದಳು. ನರ್ಸ್ ಚುಚ್ಚು ಮದ್ದು ಕೊಟ್ಟು ನಿದ್ರೆಗೆ ಹೋಗುವಂತೆ ಮಾಡಿದಳು.

    ಪರ್ವೀನ್‌ಗೆ ಸರಿಯಾಗಿ ಎಚ್ಚರ ಆದಾಗ ಯಾರೊಂದಿಗೂ ಮಾತನಾಡಲಿಲ್ಲ. ಮುಖ ತಿರುಗಿಸಿ ಮಲಗಿದಳು. ಆಕೆ ಎಲ್ಲರನ್ನೂ ದ್ವೇಷಿಸುತ್ತಿದ್ದಳು. ಹೊಟ್ಟೆಗೆ ಕೈ ಆಡಿಸಿದಾಗ ಅಲ್ಲಿ ಶೂನ್ಯ ಕವಿದಿತ್ತು. ಆಕೆ ಹೊಟ್ಟೆಗೆ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತಳು. ಆಕೆಯ ಹಸಿವು ಬಾಯಾರಿಕೆ ಎಲ್ಲವೂ ಬತ್ತಿ ಹೋಗಿತ್ತು.

    ಮನೆಗೆ ಬಂದ ನಂತರವು ಹಗಲಿರುಳು ಅಳುವುದು ಮತ್ತು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅಮ್ಮನ ಮನೆಗೆ ಹೋಗಿ ಸ್ವಲ್ಪ ವಿಶ್ರಾಂತಿ ಮಾಡಿ ಬಾ ಎಂದು ಹೇಳಿದಾಗಲೂ ಆಕೆ ಹೋಗಲಿಲ್ಲ. ಅಮ್ಮ ಬಂದು ಕರೆದಾಗಲು ಪರ್ವೀನ್ ಅಮ್ಮನ ಮುಖವನ್ನು ನೋಡಲು ಇಷ್ಟಪಡಲಿಲ್ಲ. ಬಲವಂತದಿAದ ಪರ್ವೀನಳನ್ನು ಅಮ್ಮ ತನ್ನ ಮನೆಗೆ ಕರೆದುಕೊಂಡು ಬಂದರು.

    ಒAದು ಕಾಲದಲ್ಲಿ ಮಾತಿನ ಮಲ್ಲಿ ಎಂದು ಹೆಸರು ಪಡೆದ ಪರ್ವೀನ್, ಈಗ ಮಾತನಾಡುವುದನ್ನೇ ಮರೆತು ಬಿಟ್ಟಿದ್ದಳು. ಯಾರೊಂದಿಗೂ ಮಾತನಾಡುವುದಿಲ್ಲ. ತನ್ನ ಮಂಚದ ಮೇಲೆ ಮಲಗಿ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ತನ್ನಷ್ಟಕ್ಕೆ ಮಾತನಾಡುವುದು, ಅಳುವುದು, ನಗುವುದು ಆಕೆಯ ದಿನಚರಿ.

    ಕ್ರಮೇಣ ಆಕೆ, ಸಿಕ್ಕ ಎಲ್ಲ ವಸ್ತುಗಳನ್ನು ತನ್ನ ಮಗುವೆಂದು ಬಗೆದು, ಅದರೊಂದಿಗೆ ಮಾತನಾಡುವುದು, ನಗುವುದು, ಹಾಲುಣಿಸುವುದು, ಕುಣಿಯುವುದು ಎಲ್ಲವೂ ಆರಂಭಗೊAಡಿತು. ಆಕೆ ಮಾನಸಿಕವಾಗಿ ಜರ್ಜರಿತಳಾಗಿದ್ದಳು.

    ತನ್ನ ಮಗಳು ಮಾನಸಿಕ ರೋಗಿ ಆಗಿದ್ದಾಳೆ ಎಂದು ತಿಳಿಯಲು ಅಮ್ಮನಿಗೆ ಸಮಯ ಬೇಕಾಗಿರಲಿಲ್ಲ. ಆಕೆಯ ಮೇಲೆ ಆಗಿರುವ ಈ ಅನ್ಯಾಯಕ್ಕೆ ನಾವೆಲ್ಲರು ಕಾರಣ ಎಂದು ತನ್ನೊಳಗೆ ಒಪ್ಪಿಕೊಂಡರು. ಆದರೆ ಈಗ! ಈಗ ಸಮಯ ಕೈ ಮೀರಿದೆ.

    ಪದೇ ಪದೇ ವೈದ್ಯರು ಸಂಪರ್ಕ ದೊಡ್ಡ ತಲೆನೋವಾಗಿ ಪರಿಣಮಿಸಿತು. ವರ್ಷಗಳ ಮೇಲೆ ವರ್ಷಗಳು ಕಳೆದರೂ ಪರ್ವೀನ್ ಸರಿ ಆಗಲಿಲ್ಲ. ಪತಿಗೆ ತನ್ನನ್ನು ಮುಟ್ಟಲು ಬಿಡಲಿಲ್ಲ. ಪತಿಯನ್ನು ದ್ವೇಷಿಸಿದರೂ ಆತನೊಂದಿಗೆ ಬಾಳುತ್ತಿದ್ದಳು.

    ತನ್ನ ಏಕೈಕ ಮಗಳ ಅವಸ್ಥೆ ಕಂಡು ಅಮ್ಮ ಕೊರಗಿ ಕೊರಗಿ ಹಾಸಿಗೆ ಹಿಡಿದರು. ತನ್ನನ್ನು ನೋಡಲೇ ಅಥವಾ ಮಗಳನ್ನು ನೋಡುವುದೇ! ಆದರೆ ಪರ್ವೀನ್‌ಗೆ ಅಮ್ಮನ ಈ ಸ್ಥಿತಿಯಿಂದ ಮನ ನೋಯುತ್ತಿದ್ದರೂ, ಆಕೆ ಅಮ್ಮನ ಹತ್ತಿರ ಸುಳಿಯುತ್ತಿರಲಿಲ್ಲ. ಈಕೆಯ ದುಃಖದಿಂದ ಅಮ್ಮ ತೀರಿಕೊಂಡರು. ಪರ್ವೀನ್ ಪತಿ ಮತ್ತು ತಂದೆಯೊಡನೆ ಹಣಕ್ಕೆ ಜಗಳಾಡುತ್ತಿದ್ದಳು. ತನಗೆ ಇಚ್ಛೆ ಬಂದAತೆ ಹಣವನ್ನು ಪೋಲು ಮಾಡುವುದೇ ಆಕೆಯ ಅತ್ಯಂತ ಆಸಕ್ತಿದಾಯಕ ಕೆಲಸ.

    ಸಂಬAಧಿಕರು, ಪರಿಚಯಸ್ಥರು ಎಲ್ಲರೂ ಆಕೆಯನ್ನು ನೋಡಿ ತಮಾಷೆ ಮಾಡಿ ನಗುವವರೇ ಮತ್ತು ಜರೆಯುವವರೇ ಆದರೆ! ಆಕೆ ಯಾಕೆ ಹೀಗೆ ಆದಳು ಎಂದು ಚಿಂತಿಸುವವರು ಅಥವಾ ಅವಳೊಂದಿಗೆ ಮಾತನಾಡುವವರು ಯಾರೂ ಇಲ್ಲ.

    ಕ್ರಮೇಣ ಅಪ್ಪನನ್ನು ಮತ್ತು ಪತಿಯನ್ನು ಕಳಕೊಂಡರು. ಪರ್ವೀನಳ ಜೀವನದಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಪತಿಯ ಮನೆಯಲ್ಲಿ ಆಕೆಯ ಬಗ್ಗೆ ಕನಿಕರವುಳ್ಳವರು ಯಾರೂ ಇಲ್ಲ. ಪರ್ವೀನ್ ತನ್ನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಇರ ತೊಡಗಿದಳು. ಅತ್ತಿಗೆ ಎಲ್ಲ ರೀತಿಯಲ್ಲಿ ಪರ್ವೀನ್‌ಳ ಆರೈಕೆ ಮಾಡುತ್ತಿದ್ದಳು. ಆದರೆ ಪರ್ವೀನಳಿಗೆ ಅಗತ್ಯವಿರುವ ನೆಮ್ಮದಿ, ಸಂತೋಷ ಅತ್ತಿಗೆಯಿಂದಲು ಕೊಡಲು ಸಾಧ್ಯವಿಲ್ಲ. ಈಗ ಪರ್ವೀನ್ ಅಣ್ಣನನ್ನು ಕಳಕೊಂಡರೂ ಆಕೆಯ ಮೇಲೆ ಯಾವುದೇ ಪರಿಣಾಮ ಬೀಳಲಿಲ್ಲ. ವಿಧಿ ಲಿಖಿತದೊಂದಿಗೆ ಹೋರಾಡಿ ಸೋತು ಹೊಗಿದ್ದಾಳೆ.

    ಯೌವನವನ್ನು ದಾಟಿ ವೃದ್ಧಾಪ್ಯಕ್ಕೆ ಕಾಲಿಡುತ್ತಿರುವ ಪರ್ವೀನ್ ಕ್ಯಾನ್ಸರ್ ಎಂಬ ಭಯಾನಕ ರೋಗಕ್ಕೆ ತುತ್ತಾಗಿದ್ದಾಳೆ. ಆದರೆ ಆಕೆಗೆ ಇದರ ಪರಿವೆಯೂ ಇಲ್ಲ. ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿರುವ ಆಕೆಯ ರೋಗವನ್ನು ವೈದ್ಯರು, ವೈದ್ಯಕೀಯ ವಿಭಾಗ ಅಥವಾ ತಮ್ಮ ಮತ್ತು ಅತ್ತಿಗೆ ಆಕೆಯ ಆರೋಗ್ಯಕ್ಕಾಗಿ ಸುರಿಸುತ್ತಿರುವ ಹಣ ಯಾವುದು ಅವಳಿಗೆ ಉತ್ತಮ ಆರೋಗ್ಯ ದೊರಕಿಸುತ್ತಿಲ್ಲ.

    ಅವಳು ಜೀವಂತ ಶವವಾಗಿ ಉಳಿದಳು.