ಅನುಪಮ ಮಾಸಿಕ ನೂತನ ಪ್ರಧಾನ ಸಂಪಾದಕಿ: ಸಬೀಹಾ ಫಾತಿಮಾ

ಅನುಪಮ ಮಹಿಳಾ ಮಾಸಿಕದ ನೂತನ ಪ್ರಧಾನ ಸಂಪಾದಕಿಯಾಗಿ “ಸಬೀಹ ಫಾತಿಮಾ”ರನ್ನು ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನೇಮಕ ಮಾಡಿದೆ.,

ಕಳೆದ 25 ವರ್ಷಗಳಿಂದ ಅನುಪಮದ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದ ಶಹನಾಝ್ ಎಂ ಅವರ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಸಬೀಹ ಫಾತಿಮಾ ಅವರನ್ನು ನೇಮಕ ಮಾಡಲಾಗಿದೆ. ಕಳೆದ 25 ವರ್ಷಗಳಲ್ಲಿ ಶಹನಾಝ್ ಎಂ. ಅವರು ಅತ್ಯುತ್ತಮವಾಗಿ ಹೊಣೆಗಾರಿಕೆ ನಿರ್ವಹಿಸಿದ್ದಾರೆ ಎಂದು ಟ್ರಸ್ಟ್ ಸ್ಮರಿಸಿದೆ.

ಸಬೀಹ ಫಾತಿಮಾ ಅವರು ಅನುಪಮ ಮಾಸಿಕದ ಸ್ಥಾಪಕ ಉಪಸಂಪಾದಕಿಯಾಗಿದ್ದು, ಲೇಖನಗಳು ಮತ್ತು ತಮ್ಮ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದಾರೆ ಎಂದು ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *