ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.
“ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.
“ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ”ಎಂದು ಹಾರೈಸಿದರು.
ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.
“ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.
“ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ” ಎಂದು ಹಾರೈಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಧಾನ ಸಂಪಾದಕಿ ಶಹನಾಜ್ ಎಂ. “25 ವರ್ಷಗಳ ಹಾದಿಯನ್ನು ವಿವರಿಸಿದ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ ಎಂದರು. ಅನುಪಮ ಮಾಸಿಕ ಡಿಜಿಟಲ್ ರೂಪದಲ್ಲಿ ಯೂ ಬರಲಿದೆ” ಎಂದರು.
ಬೆಥನಿ ಸಂತ ತೆರೇಸಾ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಲೂರ್ಡ್ಸ್: “ಅನುಪಮ ಪತ್ರಿಕೆ ಒಂದು ನಂಬಿಕೆಯ ಅಡಿಗಲ್ಲಾಗಿದೆ. ಮೌಲ್ಯಗಳಿಗೆ ಬೆಲೆ ನೀಡಿ, ಜವಾಬ್ದಾರಿಯುತ ಪತ್ರಿಕೋದ್ಯಮ ನಡೆಸುತ್ತಿದೆ. ಹಲವಾರು ಮಹಿಳೆಯರ ಕನಸು ಗಳಿಗೆ ಆಧಾರವಾಗಿ, ನೋವು ನಲಿವುಗಳನ್ನು ಹಂಚುತ್ತಿದೆ. ಹೀಗಾಗಿ ಈ ಪತ್ರಿಕೆ ಮಹಿಳೆಯರ ಜೊತೆಗಾತಿಯಾಗಿದೆ” ಎಂದರು.
ಆಪ್ತ ಸಮಾಲೋಚಕಿ ಡಾ। ರುಕ್ಸಾನ ಮಾತನಾಡುತ್ತಾ, “ವಿದ್ಯಾಭ್ಯಾಸ ಮಾಡಿದ ಹುಡುಗಿಯರನ್ನು ತಮಾಷೆ ಮಾಡುವ ಕಾಲದಲ್ಲಿ ಒಂದು ಯಶಸ್ವೀ ಪತ್ರಿಕೆ ನಡೆಸುತ್ತಿರುವುದು ದೊಡ್ಡಸಾಧನೆ” ಎಂದರು. “ಮಹಿಳೆಯೊಬ್ಬಳ ಸಹನೆ, ತಾಳ್ಮೆಯ ಎದುರು, ಯಾವ ಪುರುಷನೂ ಇಲ್ಲ. ಇಂದು ಮಹಿಳೆ ಎಷ್ಟೇ ದೊಡ್ಡ ಹುದ್ದೆಗೆ ಏರಿದರೂ, ಮಹಿಳೆಯ ಜವಾಬ್ದಾರಿಯನ್ನು ಮರೆತಿರುವುದು ಸಾಧ್ಯವಿಲ್ಲ” ಎಂದರು. “ಬರವಣಿಗೆ ಶಾಶ್ವತವಾಗಿದೆ. ಇಂದು ಮುದ್ರಣ ಮಾಧ್ಯಮ ಮಾಯವಾಗುವಂತಿದೆ. ಆದರೆ ಹಾಗಾಗುವುದು ಬೇಡ. ಇಂದು ಬರೆದಿರುವುದು ಮುಂದಿನ ಕಾಲಕ್ಕೂ ಉಳಿಯಲಿ” ಎಂದರು.
ಮುಂಬೈನ ಹಿರಿಯ ವಕೀಲೆ, ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ತನ್ನ ಮನದಾಳದ ಮಾತು ಹಂಚಿಕೊಂಡರು ಹಿರಿಯ ಲೇಖಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ. ಅನುಪಮದ ಹಿರಿಯ ಓದುಗ ಬಳಗದ ಆಯೇಷಾ ಇಬ್ರಾಹಿಂ ಶಫಿರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅನುಪಮ ಓದುಗರಾದ ಶಿಹನಾ ಬಿ.ಮ್., ಶಮೀಮಾ ಕುತ್ತಾರ್ ಹಾಗೂ ಶ್ರೀಮತಿ ಸುಖಾಲಕ್ಷಿ ತಮ್ಮ ಅನಿಸಿಕೆಗಳನ್ನು ನೀಡಿದರು.
ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣರನ್ನು, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ಚೇರ್ ಮೆನ್ ಅಶ್ಫಾಕ್ ಅಹಮದ್ ಹೂಗುಚ್ಚ ನೀಡುವ ಮೂಲಕ ಸ್ವಾಗತಿಸಿದರು.
ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡುತ್ತಾ “ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು” ಎಂದು ಕಿವಿಮಾತು ಹೇಳಿದರು.
ಸಭೆಯ ಪ್ರಾರಂಭದಲ್ಲಿ ಬ್ರೈಟ್ ಮಾಡೆಲ್ ಸ್ಕೂಲ್ ವಿದ್ಯಾರ್ಥಿಗಳು ಸ್ತುತಿ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
“ಇತಿಹಾಸದ ಪ್ರತಿಯೊಂದು ಕ್ರಾಂತಿಯ ಹಿಂದೆ ಸಾಹಿತ್ಯದ ಪ್ರೇರಣೆ ಇದೆ. ಹಾಗೆಯೇ ಮಹಿಳೆಯರೇ ಸೇರಿ ಒಂದು ಪತ್ರಿಕೆನ್ನು 25ವರ್ಷ ನಡೆಸುತ್ತಿರುವುದು ಕೂಡಾ ಒಂದು ಕ್ರಾಂತಿ” ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ ಕೇಂದ್ರ ಸಮಿತಿ ಸದಸ್ಯೆ ಸಮೀನಾ ಅಫ್ಸಾನ್ ಹೇಳಿದರು. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
“ಬರವಣಿಗೆ ಎಲ್ಲಾ ಕಾಲಕ್ಕೂ ಒಂದು ಸಾಧನೆ. ಮಹಿಳೆಯರು ಬರವಣಿಗೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಲು ವೇದಿಕೆ ಪಡೆದುಕೊಂಡಿರುವುದು ಒಂದು ಕ್ರಾಂತಿಯಾಗಿದೆ. ಮಹಿಳೆಯರು ವೇದಿಕೆಯನ್ನು ಇನ್ನಷ್ಟು ಬಳಸಿಕೊಳ್ಳಬೇಕು” ಎಂದರು. ಅನುಪಮ “ಪತ್ರಿಕೆ ಎಲೆ ಮರೆಯ ಕಾಯಿಗಳನ್ನು ಕೂಡಾ ಮುನ್ನೆಲೆಗೆ ತಂದು ಅವರಿಗೆ ಧ್ವನಿ ನೀಡಿದೆ. ಈ ಧ್ವನಿ ಇಂದು ಶಕ್ತಿಯಾಗಿ ಬೆಳೆದಿದೆ. ಇದು ಎಲ್ಲಾ ಮಹಿಳೆಯರಿಗೆ ಮಾರ್ಗದರ್ಶಿ” ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಾದ ನಿವೃತ್ತ ಶಿಕ್ಷಕಿ ಲೇಖಕಿ ಕೆ.ಎ., ಸಾಮಾಜಿಕ ಕಾರ್ಯಕರ್ತೆ ಹರಿಣಿ, ರೋಹಿಣಿ, ಸಮಾಜ ಸೇವಕಿ ಹಿರಿಯ ಓದುಗೆ ಆಯಿಶಾ ಈ. ಶಾಫಿ ಅವರನ್ನು ಸನ್ಮಾನಿಸಲಾಯಿತು.
ಅನುಪಮ ಉಪಸಂಪಾದಕಿ ಸಬೀಹಾ ಫಾತಿಮಾ ಅತಿಥಿಗಳನ್ನು ಸ್ವಾಗತಿಸಿದರು. ಅಸ್ಮತ್ ವಗ್ಗ ಮತ್ತು ಲುಬ್ನಾ ಝಕೀಯ ಕಾರ್ಯಕ್ರಮ ನಿರೂಪಿಸಿದರು.
ಅನುಪಮ ಮಹಿಳಾ ಮಾಸಿಕಕ್ಕೆ 25 ವರ್ಷ ಪೂರ್ಣಗೊಂಡ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದೆ. ಈ ವಿಶೇಷಾಂಕವನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಕಾವೇರಿ ನಿವಾಸದಲ್ಲಿ ಇದೀಗಾಗಲೇ ಬಿಡುಗಡೆಗೊಳಿಸಿದ್ದಾರೆ.
ಈ ಬೆಳ್ಳಿ ಹಬ್ಬದ ಪ್ರಯುಕ್ತ ಮಂಗಳೂರಿನ ಪುರಭವನದಲ್ಲಿ ಜನವರಿ 15ರ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಅನುಪಮ ಮಹಿಳಾ ಓದುಗರ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಮತ್ತು ಬೆಳ್ಳಿ ಹಬ್ಬದ ಸಂಭ್ರಮವನ್ನು ಖ್ಯಾತ ಸಾಹಿತಿಗಳಾದ ಶ್ರೀಮತಿ ಡಾ| ಕೆ. ಶರೀಫಾ ಉದ್ಘಾಟಿಸಲಿದ್ದಾರೆ.
ಗೌರವ ಅತಿಥಿಗಳಾಗಿ, ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಡಾ| ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಮಂಗಳೂರು ನಗರ ಪೊಲೀಸ್ (ಸಂಚಾರ ವಿಭಾಗ) ACP ನಜ್ಮಾ ಫಾರೂಕಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆ ಮತ್ತು ಮಾಜಿ ವಿಧಾನಸಭೆ ಸದಸ್ಯೆ ಒಐಂ ಶಕುಂತಲಾ ಶೆಟ್ಟಿ, ಬೆಥನಿ ಸೈಂಟ್ ತೆರೇಸಾ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್, ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ, ಆಪ್ತ ಸಮಾಲೋಚಕಿ ಡಾ| ರುಕ್ಸಾನ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಕೆ.ಎ. ರೋಹಿಣಿ, ಸರಸ ಬಿ. ಕೃಷ್ಣ ಕಮ್ಮರಡಿ, ಸಮಾಜ ಸೇವಕಿ ಹರಿಣಿ ಕೆ., ಆಯಿಶಾ ಇ. ಶಾಫಿ ಅವರನ್ನು ಸನ್ಮಾನಿಸಲಾಗುವುದು. ಅದರೊಂದಿಗೆ ಕಾರ್ಯಕ್ರಮದಲ್ಲಿ ಓದುಗರು ತಮ್ಮ ಅನಿಸಿಕೆಯನ್ನು ನೀಡಲಿದ್ದು, ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ.
ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್, ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಶಾನ್ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಶಹನಾಝ್ ಎಂ. ಮಾತನಾಡಿದ್ದು, ಉಪ ಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿದ್ದಾರೆ. ಉಳಿದಂತೆ ಕಾರ್ಯಕ್ರಮದ ಸ್ವಾಗತ ಸಮತಿ ಸದಸ್ಯರುಗಳಾದ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಸದಸ್ಯೆ ಲೇಖಕಿ ಶ್ರೀಮತಿ ಸುಖಾಲಾಕ್ಷಿ, ಹಿದಾಯ ಫೌಂಡೇಶನ್ ಅಧ್ಯಕ್ಷೆ ಖುರ್ಷಿದಾ ಹಾಗೂ ಸಾಮಾಜಿಕ ಕಾರ್ಯಕರ್ತೆ ಹರಿಣಿ ಕೆ. ಉಪಸ್ಥಿತರಿದ್ದರು.
ಅನುಪಮ ಕಿರು ಪರಿಚಯ: ಪತ್ರಿಕೋದ್ಯಮವು ಪುರುಷರ ಕ್ಷೇತ್ರವೆಂಬ ಮಾತು ತುಂಬಾ ಪುರಾತನವಾಗಿದೆ. ಈಗ ಮಹಿಳೆಯರು ಈ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ನೂರಾರು ಮಹಿಳಾ ಪತ್ರಕರ್ತೆಯರು ತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿಯೂ ಸ್ತ್ರೀಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಹೀಗಿದ್ದರೂ ಮುಸ್ಲಿಮ್ ಮಹಿಳೆಯರ ಪಾಲುದಾರಿಕೆ ತೀರಾ ನಗಣ್ಯವೆನ್ನಬಹುದು.
ಇಂತಹ ಸಂದರ್ಭದಲ್ಲಿ 2000 ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಸ್ತ್ರೀಯರಿಂದಲೇ ಅನುಪಮ’ ಎಂಬ ಮಾಸ ಪತ್ರಿಕೆ ಆರಂಭಗೊಂಡಿತು. ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ಕೌಟುಂಬಿಕ ಪತ್ರಿಕೆ. ಅನುಪಮ’ ಜಾತಿ, ಜನಾಂಗ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಧ್ವನಿ ನೀಡಿದೆ.
ಇಂದು, ಹೆಚ್ಚಿನ ಪತ್ರಿಕೆಗಳು ವಿಷಯ ಲಂಪಟತನ, ಸ್ತ್ರೀ ಸೌಂದರ್ಯ, ನಗ್ನ ಪ್ರಿಯತೆಯನ್ನು ನೆಚ್ಚಿನ ಸುದ್ದಿಯಾಗಿಸಿರುವುದು ಎಲ್ಲರೂ ಬಲ್ಲರು. ಆದರೆ ಅನುಪಮ' ಶುದ್ಧ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿದೆ. ಹಿಂಸೆ, ಕಲಹ, ಒಡಕು, ಕೋಮು ಪಕ್ಷಪಾತ ಇತ್ಯಾದಿ ಕೆಡುಕುಗಳುಅನುಪಮ’ಕ್ಕೆ ಅಪರಿಚಿತವಾಗಿವೆ. ಇಂದು ಮಹಿಳೆಯರ ಸುಧಾರಣೆಯ ಹೆಸರಲ್ಲಿ ಶೋಷಣೆ ನಡೆಯುವುದೇ ಹೆಚ್ಚು. ಮನರಂಜನೆಯ ಹೆಸರಿನಲ್ಲಿ ಅಶ್ಲೀಲತೆ ದರ್ಶನವಾಗುವುದು ಜಾಸ್ತಿ.
ಮಹಿಳೆಯರೇ ನಡೆಸುತ್ತಿರುವ ರಾಜ್ಯದ ಏಕೈಕ ಮಹಿಳಾ ಮಾಸಿಕ ಅನುಪಮ ಮಾಸಿಕಕ್ಕೆ 25 ವರ್ಷಗಳು ತುಂಬಿದೆ. ಈ ಹಿನ್ನೆಲೆಯಲ್ಲಿ 25 ವರ್ಷಗಳ ಯಶಸ್ಸಿನ ಹಿನ್ನೋಟವಿರುವ ವಿಶೇಷ ಸಂಚಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.
ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಪತ್ರಿಕೋದ್ಯಮದಲ್ಲಿ ಮುಸ್ಲಿಂ ಮಹಿಳೆಯರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಈ ನಡುವೆ ಕೂಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ ಸಮುದಾಯದ ಮಹಿಳೆಯರೇ ನಡೆಸುತ್ತಿರುವ ಅನುಪಮ ಮಹಿಳಾ ಮಾಸಿಕವು 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ”ಎಂದು ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅನುಪಮ ಸಂಪಾದಕಿ ಶಹನಾಝ್ ಎಂ, “ರಾಜ್ಯದಲ್ಲಿ ಮಹಿಳೆಯರಿಗೆ ಗ್ಯಾರಂಟಿಗಳನ್ನು ಘೋಷಿಸಿ, ಅದನ್ನು ಅನುಷ್ಠಾನಕ್ಕೆ ತಂದ ನಂತರ ಮಹಿಳೆಯರ ಬದುಕಿನಲ್ಲಿ ಹಲವಾರು ಬದಲಾವಣೆ ಆಗಲು ನೆರವಾಗಿದೆ. ಮಹಿಳೆಯರ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನುಪಮ ಬಳಗ ಹಾಗೂ ಎಲ್ಲ ಮಹಿಳೆಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಎಂಟಿಸಿ ನಿಗಮದ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿಯರಾದ ಸಮೀನಾ ಉಪ್ಪಿನಂಗಡಿ, ಸಾಜಿದಾ ಮೂಮಿನ್, ಕುಲ್ಸುಮ್ ಅಬೂಬಕ್ಕರ್, ಎಸ್.ಎಂ. ಮುತ್ತಲಿಬ್, ಫೈಝಲ್ ಇಸ್ಮಾಯೀಲ್, ಸಲೀಂ ಬೋಳಂಗಡಿ ಉಪಸ್ಥಿತರಿದ್ದರು.
ಬಳಿಕ ಅನುಪಮ ಬಳಗವು ಈ ಸ್ಮರಣ ಸಂಚಿಕೆಯನ್ನು ಕರ್ನಾಟಕ ಸರಕಾರದಲ್ಲಿ ವಿವಿಧ ಸ್ಥಾನಗಳನ್ನುಅಲಂಕರಿಸಿರುವ ಹಾಗೂ ಸರಕಾರದ ಅಧಿಕಾರಿಗಳಾಗಿರುವ ಹೊಣೆಗಾರರನ್ನು ಭೇಟಿ ಮಾಡಿ ನೀಡಿತು.
ಸನ್ಮಾನ್ಯ ನಿಕೇತ್ ರಾಜ್ ಮೌರ್ಯ [ಉಪಾಧ್ಯಕ್ಷರು, (BMTC) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ (KPYCC) ರಾಜ್ಯ ಪ್ರಧಾನ ಕಾರ್ಯದರ್ಶಿ]
ಸನ್ಮಾನ್ಯ ರಿಜ್ವಾನ್ ಅರ್ಷದ್ [ಸದಸ್ಯರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ(GBA) ಹಾಗೂ MLA ಶಿವಾಜಿ ನಗರ, ಬೆಂಗಳೂರು]
ಸನ್ಮಾನ್ಯ ನಸೀರ್ ಅಹ್ಮದ್ [ವಿಧಾನ ಪರಿಷತ್ ಸದಸ್ಯ (MLC) ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ]
ಸನ್ಮಾನ್ಯ ಅಬ್ದುಲ್ ಅಹದ್ [DIG, ಪೊಲೀಸ್ ಉಪ ಮಹಾನಿರೀಕ್ಷಕರು, ಕರ್ನಾಟಕ ಸರಕಾರ]
ಯುದ್ಧಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಪತ್ರಕರ್ತರ ಹುತಾತ್ಮತೆಗೆ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವು ಸಾಕ್ಷಿಯಾಗಿದೆ. ಪತ್ರಕರ್ತರನ್ನೇ ಗುರಿ ಯಾಗಿಸಿ ಇನ್ನೂ ಹತ್ಯೆ ಮುಂದುವರೆ ದಿದೆ. ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಸುದ್ದಿ ಎಂದರೆ ಛಾಯಾಗ್ರಹಣಕ್ಕಾಗಿ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದ ಅಲ್ ಜಝೀರಾ ವರದಿಗಾರ ಅನಸ್ ಅಲ್-ಶರೀಫ್ ಅವರ ಸಾವು. ಈಗ, ಆ ಪ್ರತಿಭೆಯ ಹಾದಿಯಲ್ಲಿ ಅವರಿಗೆ ಬದಲಿಯಾಗಿ, ಜಬಾಲಿಯಾ ಅವರ ಮಗಳು ನೂರ್ ಅಬೂ ರುಕ್ಬಾ ಮೈಕ್ರೊಫೋನ್ ಅನ್ನು ಕೈಗೆತ್ತಿಕೊಂಡಿದ್ದಾರೆ.
ಗಾಝಾದ ಉತ್ತರದಲ್ಲಿರುವ ಜಬಾ ಲಿಯಾ ನಿರಾಶ್ರಿತರ ಶಿಬಿರದಲ್ಲಿ ಜನಿ ಸಿದ ಮತ್ತು ಹನ್ನೆರಡು ಬಾರಿ ಸ್ಥಳಾಂತರಗೊಂಡ ಮತ್ತು ಯುದ್ಧದ ಸಮಯದಲ್ಲಿ ಮೂವರು ಸಹೋದರರ ಹುತಾತ್ಮತೆಯಲ್ಲಿ ಹೆಮ್ಮೆಪಡುವ ಈ ಹುಡುಗಿ ಅಲ್-ಅಕ್ಸಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದವರು. ಅವರು ಮಹಿಳಾ ಕೇಂದ್ರ, ಇನ್ಸ್ಟಿಟ್ಯೂಟ್ ಫಾರ್ ಪ್ಯಾಲೆಸ್ತೀನ್ ಸ್ಟಡೀಸ್ ಮತ್ತು ಅಲ್ ಜಝೀರಾ ಸಂಸ್ಥೆಯ ಪತ್ರಿಕೋದ್ಯಮ ನಿಯತಕಾಲಿಕೆ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಮತ್ತು ನಂತರ ಪಾಲ್ ಮೀಡಿಯಾದಲ್ಲಿ ನಿರ್ಮಾಪಕಿಯಾಗಿ ಕೆಲಸ ಮಾಡಿ ದರು. ಅವರು ಯುದ್ಧದ ಮೊದಲು ಧ್ವನಿಮುದ್ರಿಕೆ ಕಲಾವಿದೆಯಾಗಿ ಮತ್ತು “ಎ ಫ್ಯೂಚರ್ ಆಫ್ ಪೀಸ್” ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಿದ್ದರು, ವಲಸೆ ಹೋದ ಜನರ ಮರಳುವಿಕೆಯನ್ನು ದಾಖಲಿಸುವ ವೀಡಿಯೊ ವೈರಲ್ ಆದಾಗ, ಅಲ್ ಜಝೀರಾದ ಉತ್ತರಾಧಿ ಕಾರಿಯಾಗಿ ಅನಸ್ ಷರೀಫ್‌ರ ಉತ್ತ ರಾಧಿಕಾರಿಯಾದರು.
ಅಲ್ ಜಝೀರಾಕ್ಕೆ ಆಯ್ಕೆಯಾದ ಕ್ಷಣಗಳನ್ನು ನೂರ್ ಹಂಚಿಕೊಂಡದ್ದು: “ಹೀಗೆ ಈ ಕ್ಷಣದಲ್ಲಿ ಅನಸ್ ಅವರ ಬದಲಿಯಾಗಿರುವುದು ವರ್ಣನಾತೀತ ಭಾವನೆ!” ಅನಸ್ ಕೇವಲ ವೃತ್ತಿಪರ ಸಹೋದ್ಯೋಗಿಯಾಗಿರಲಿಲ್ಲ. ಅವರು ನಿಜವಾದ ಸಹೋದರ: ಧೈರ್ಯ ಮತ್ತು ಸಮರ್ಪಣೆಯ ಉಜ್ವಲ ಉದಾ ಹರಣೆ, ಮೂವರು ಸಹೋದರರನ್ನು ಕಳೆದುಕೊಂಡ ನನಗೆ ನಾಲ್ಕನೇ ಸಹೋ ದರನಂತೆ, ಅವರು ತಮ್ಮ ಪ್ರೀತಿ ಮತ್ತು ಬೆಂಬಲವನ್ನು ಪೂರ್ಣ ಪ್ರಮಾಣದಲ್ಲಿ ಸುರಿಸಿದ ಧೈರ್ಯ ಮತ್ತು ಸಮರ್ಪಣೆಯ ಉಜ್ವಲ ಮಾದರಿ. ಅಂತಹ ವ್ಯಕ್ತಿಯ ಸ್ಥಾನಕ್ಕೆ ತಲುಪುವುದು ಅವರಿಗೆ ಬದಲಿ ಯಾಗುವುದು ಎಂಬ ಯೋಚನೆಯೇ ನನ್ನ ಹೃದಯದಲ್ಲಿ ಕಂಪನವನ್ನುಂಟು ಮಾಡಿದೆ ಅನೇಕರಿಗೆ, ನಾನು ಇನ್ನು ಮುಂದೆ ನೂರ್ ಅಲ್ಲ, ಅನಸ್‌ನ ಬದಲಿ. ನನ್ನ ಪ್ರಯಾಣವು ಅನಸ್ ನಿಲ್ಲಿಸಿದ ಸ್ಥಳದಿಂದ ಪ್ರಾರಂಭವಾಗುತ್ತದೆ.”
ಝೈತೂನ್ ಹೊರವಲಯದಲ್ಲಿ ಮಿಲಿಟರಿಯ ಉಪಸ್ಥಿತಿಯ ಬಳಿ ಇದೆ. ಬೀದಿಗಳು ನಿರ್ಜನವಾಗಿವೆ. ದೂರದಲ್ಲಿ ಯುದ್ಧವಿಮಾನಗಳಿಂದ ಬಂದ ಬಾಂಬ್ ಗಳ ಶಬ್ದವು ನನಗೆ ಭಯವನ್ನುಂಟು ಮಾಡಿತು. ಇಲ್ಲ, ಭಯ ಮಾಯವಾಗಿದೆ. ನಾನು ಜಬಾಲಿಯಾಳ ಮಗಳು, ಬಾಲ್ಯ ದಿಂದಲೂ ಎಲ್ಲವೂ ನನಗೆ ಚಿರ ಪರಿಚಿತವಾಗಿದೆ. ಭಯವು ಯಾವುದಕ್ಕೂ ಅಡ್ಡಿಯಾಗಲು ಸಾಧ್ಯವಿಲ್ಲ.
ನೂರ್ ಕೇವಲ ವರದಿಗಾರ್ತಿಯಲ್ಲ, ಪ್ರತಿಯೊಬ್ಬ ದುಃಖಿತ ತಾಯಿ ಮತ್ತು ಸಹೋದರಿಯ, ಮತ್ತು ಬಾಲ್ಯ ಹೇಗಿದೆ ಎಂದು ತಿಳಿಯದ ಪ್ರತಿಯೊಬ್ಬ ಅನಾಥರ ಧ್ವನಿ. ನೂರ್ ಹೇಳಲು ಬಹಳಷ್ಟು ಇದೆ: “ಗಾಝಾದ ಕಥೆಯನ್ನು ಅದರ ಮಕ್ಕಳ ನಾಲಿಗೆಯಿಂದ ಸೆರೆಹಿಡಿದು ಅದನ್ನು ಜಗತ್ತಿಗೆ ಕೇಳುವಂತೆ ಮಾಡುವುದು. ನನ್ನ ಮಾಧ್ಯಮ ಕೆಲಸವೆಂದರೆ ಗಾಝಾ ಮತ್ತು ಪ್ರಪಂಚದ ನಡುವೆ ಸೇತುವೆ ಯನ್ನು ನಿರ್ಮಿಸುವುದು. ದುಃಖ ಮತ್ತು ದುರಂತಕ್ಕೆ ಸಾಕ್ಷಿಯಾಗಿ, ನೆನಪುಗಳು ಮತ್ತು ಧ್ವನಿಗಳು ಮಾತ್ರ ಉಳಿದಿರು ವವರ ವಕ್ತಾರನಾಗಿ, ನಾನು ನಿಜವಾದ ಗಾಝಾವನ್ನು ನನ್ನೊಂದಿಗೆ ಒಯ್ಯು ತ್ತೇನೆ. ಗಾಝಾದ ಅವಶೇಷಗಳಿಂದ ಮೇಲೇರುವ ಸ್ಮಶಾನ ಭೂಮಿ, ಸಾವಿಗೆ ಸವಾಲು ಹಾಕುವ ಜೀವನ ಶೈಲಿ. ಮಾಧ್ಯಮ ಕೆಲಸವು ಬದುಕುಳಿಯುವ ಸಾಧನವಾಗಿರಬೇಕು. ಈ ಮೈಕ್ರೊಫೋನ್ ನನಗೆ ಪ್ರತಿಯೊಬ್ಬ ಹುತಾತ್ಮರ, ಯಾವುದೇ ಕ್ಷಣದಲ್ಲಿ ಸಾವನ್ನು ಎದುರಿಸುತ್ತಿರುವವರ ಸಂದೇಶವನ್ನು ಜಗತ್ತಿಗೆ ನೀಡಲು ಶಕ್ತಿ ಯನ್ನು ನೀಡಬೇಕು. ನಾನು ನಾಶವಾದ ಬೀದಿಗಳಲ್ಲಿ, ಗಾಯಗೊಂಡವರಿಂದ ತುಂಬಿರುವ ಆಸ್ಪತ್ರೆಗಳ ಮೂಲಕ ನಡೆ ಯುತ್ತೇನೆ. ಅನೇಕರ ಅಂತ್ಯವಾಗಬಹು ದಾದ ಕ್ಷಣಗಳನ್ನು ಸೆರೆಹಿಡಿಯುವುದು, ಜಗತ್ತಿಗೆ ದೈನಂದಿನ ವಾಸ್ತವಗಳ ನೇರ ಚಿತ್ರಣವನ್ನು ನೀಡುವುದು – ಇದು ನನ್ನ ಕರ್ತವ್ಯ.”
ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ (₹2,000) ಹಣ ಬಿಡುಗಡೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಾಹಿತಿಯಂತೆ, ಈ ಕಂತಿನ ಹಣವು ಜನವರಿ ಮೊದಲ ವಾರದಿಂದಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆಯಾಗಲು ಪ್ರಾರಂಭವಾಗಿದೆ.
2. 181 ಹೊಸ ಸಹಾಯವಾಣಿ (Helpline) ಆರಂಭ
ಹಣ ಜಮೆಯಾಗದ ಬಗ್ಗೆ ಅಥವಾ ಯೋಜನೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಲು ಸರ್ಕಾರವು ಹೊಸದಾಗಿ ‘181’ ಸಹಾಯವಾಣಿಯನ್ನು ಆರಂಭಿಸಿದೆ.
ಮಹಿಳೆಯರು ಇನ್ಮುಂದೆ ಹಣದ ವಿಚಾರವಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.
ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಅರ್ಜಿಯ ಸ್ಥಿತಿ ಮತ್ತು ಹಣ ಬಾರದಿರಲು ಕಾರಣವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
3. ಬಾಕಿ ಇರುವ ಫೆಬ್ರವರಿ ಮತ್ತು ಮಾರ್ಚ್ ಕಂತುಗಳ ಚರ್ಚೆ
ಕಳೆದ ವರ್ಷದ (2025) ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಇನ್ನೂ ಕೆಲವು ಫಲಾನುಭವಿಗಳಿಗೆ ತಲುಪಿಲ್ಲ ಎಂಬ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳು ನಡೆದಿವೆ. ಈ ಬಾಕಿ ಹಣದ (ಸುಮಾರು ₹5,000 ಕೋಟಿ) ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಹಣ ಬಂದಿದೆಯೇ ಎಂದು ಪರೀಕ್ಷಿಸುವುದು ಹೇಗೆ?
ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ತಿಳಿಯಲು ಈ ಕ್ರಮಗಳನ್ನು ಅನುಸರಿಸಿ:
DBT Karnataka App:
ಪ್ಲೇ ಸ್ಟೋರ್‌ನಿಂದ ಈ ಆ್ಯಪ್ ಡೌನ್‌ಲೋಡ್ ಮಾಡಿ ನಿಮ್ಮ ಆಧಾರ್ ಮೂಲಕ ಲಾಗಿನ್ ಆಗಿ ‘Payment Status’ ನೋಡಿ.
181 ಸಹಾಯವಾಣಿ: ನೇರವಾಗಿ ಕರೆ ಮಾಡಿ ಮಾಹಿತಿ ಪಡೆಯಿರಿ.
ಬ್ಯಾಂಕ್ ಖಾತೆ:
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (NPCI Mapping) ಆಗಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಿ.
4. ಯಶಸ್ಸಿನ ಕಥೆ:
ಹನುಮಮ್ಮನವರ ಉದಾಹರಣೆ
ರಾಯಚೂರು ಜಿಲ್ಲೆಯ ಸಿಂಧನೂರಿನ ಹನುಮಮ್ಮ ಎಂಬ ಫಲಾನುಭವಿ ಗೃಹಲಕ್ಷ್ಮಿ ಯೋಜನೆಯ ಉಳಿತಾಯದ ಹಣದಿಂದ ಫ್ರಿಡ್ಜ್ (Refrigerator) ಖರೀದಿಸಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಹೇಗೆ ಸಹಾಯ ಮಾಡುತ್ತಿವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ (“ಗ್ಯಾರಂಟಿ ಉತ್ಸವ”) ಉಲ್ಲೇಖಿಸಲಾಗುತ್ತಿದೆ.