Tag: ಮುಖ್ಯ ಸುದ್ದಿ

  • “ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): 
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

    “ಅರಿವು: ಮಾನವೀಯತೆಯ ಜಾಗೃತಿ” ಅಭಿಯಾನ (ಅ. 2 – 12): ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕ

    ಬೆಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (GIO) ಕರ್ನಾಟಕದ ವತಿಯಿಂದ ನಗರದ ಕ್ವೀನ್ಸ್‌ರೋಡ್‌ನ ಬಿಫ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಅರಿವು – ಮಾನವೀಯತೆಯ ಜಾಗೃತಿ” ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ, ರಾಜ್ಯಾದ್ಯಂತ ಅಭಿಯಾನದ ಅಂಗವಾಗಿ ನಡೆಯಲಿರುವ ಕಾರ್ಯಚಟುವಟಿಕೆಗಳ ಕುರಿತು ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

    ‘ಅರಿವು’ ಕರ್ನಾಟಕದಾದ್ಯಂತ ಅಕ್ಟೋಬರ್ 2 ರಿಂದ ಅಕ್ಟೋಬರ್ 12ರವರೆಗೆ ನಡೆಯುವ ಅಭಿಯಾನವಾಗಿದ್ದು, ವಿಭಿನ್ನ ಸಮುದಾಯಗಳಲ್ಲಿ ದಯೆ, ಸಹಾನುಭೂತಿ ಮತ್ತು ಏಕತೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ.

    “ಅರಿವು” ಕೇವಲ ಒಂದು ಅಭಿಯಾನವಲ್ಲ –ಇದು ಪರಸ್ಪರ ಮಾನವೀಯತೆಯನ್ನು ಅಳವಡಿಸಿಕೊಳ್ಳಲಿಕ್ಕಾಗಿ ಒಂದು ಕರೆಯಾಗಿದೆ,” ಎಂದು GIO ಕರ್ನಾಟಕದ ರಾಜ್ಯಾಧ್ಯಕ್ಷೆ ನವೀದಾ ಅಸ್ಸಾದಿ ಹೇಳಿದರು.
    “ಯಾವುದೇ ಭೇದಭಾವಗಳಿಲ್ಲದೆ ಪರಸ್ಪರರ ಕಾಳಜಿವಹಿಸುದರಲ್ಲಿ ನಿಜವಾದ ಶಕ್ತಿಯಿದೆ ಎಂದು ನಾವು ನಂಬುತ್ತೇವೆ.”

    ಅವರು ಕುರ್‌ಆನ್‌ನ ಸೂಕ್ತವನ್ನು ಉಲ್ಲೇಖಿಸುತ್ತಾ ಅಭಿಯಾನದ ತತ್ತ್ವವನ್ನು ವಿವರಿಸಿದರು: “ಜನರೇ! ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು, ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನು ಮತ್ತು ಗೋತ್ರಗಳನ್ನು ಮಾಡಿದೆವು.” (ಕುರ್‌ಆನ್- 49: 13)
    “ಅರಿವು” ಇಂದಿನ ಅಸಹಿಷ್ಣುತೆ, ಭಿನ್ನತೆ ಮತ್ತು ಹಿಂಸೆಯ ಸವಾಲುಗಳಿಗೆ ಉತ್ತರವಾಗಿ ಚಿಂತನೆ, ಸುಧಾರಣೆ ಮತ್ತು ಸೇವೆಗಳನ್ನು ಉತ್ತೇಜಿಸುತ್ತದೆ.

    “ಅಂತರ್ಧರ್ಮೀಯ ಸಂವಾದವನ್ನು ಉತ್ತೇಜಿಸುವುದು, ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುವುದು., ಸಂವಾದ, ಬೆಂಬಲ ಮತ್ತು ಸಾಮಾಜಿಕ ಗುಣಮುಖತೆಗೆ ಸಮಗ್ರ ವೇದಿಕೆಗಳನ್ನು ಒದಗಿಸುವುದು, ಮಾನವೀಯತೆಯ ಕಾರ್ಯಗಳ ಮೂಲಕ ಇಸ್ಲಾಂ ನ ಸಂದೇಶವನ್ನು ಸಾಕಾರ ಗೊಳಿಸುವ ಉದ್ದೇಶಗಳನ್ನು ಈ ಅಭಿಯಾನ ಹೊಂದಿದೆ” ಎಂದವರು ತಿಳಿಸಿದರು.

    “ಅಭಿಯಾನದ ಅಂಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಗಳಾದ ,ಅಂತರ್ಧರ್ಮೀಯ ಸಂವಾದಗಳು ಮತ್ತು ಶಾಂತಿ ವಲಯಗಳು (Peace Circles), ಮಾನಸಿಕ ಆರೋಗ್ಯ ಕಾರ್ಯಾಗಾರಗಳು, ಕಲೆ,ಕವನ ಮತ್ತು ಪೋಸ್ಟರ್ ಸ್ಪರ್ಧೆಗಳು, ಸಾಮಾಜಿಕ ಮಾಧ್ಯಮ ರೀಲ್ಸ್ ಗಳು ಮತ್ತು ಜಾಗೃತಿ ವಿಡಿಯೋಗಳು, ಮಾಹಿತಿ ಪುಸ್ತಕ ಮತ್ತು ಕರಪತ್ರಗಳ ವಿತರಣೆ, ಮನೆಮನೆಗೆ ಜಾಗೃತಿ ಭೇಟಿ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ” ಎಂದು ತಿಳಿಸಿದರು.

    ಇಸ್ಲಾಮಿನ ಬೋಧನೆಗಳಿಂದ ಪ್ರೇರಣೆ ಪಡೆದ ‘ಅರಿವು’:

    “ಯಾರಾದರು ಒಬ್ಬ ಮನುಷ್ಯನನ್ನು ವಧಿಸಿದರೆ , ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ. ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೇ ಜೀವದಾನ ಮಾಡಿದಂತೆ.” (ಕುರ್‌ಆನ್ 5:32) ಎಂಬ ಸಂದೇಶವನ್ನು ನೀಡಿದರು.

    “GIO ಕರ್ನಾಟಕವು ದೈವಿಕ ಮಾರ್ಗದರ್ಶನದ ಬೆಳಕಿನಲ್ಲಿ ಯುವತಿಯರು ಮತ್ತು ವಿದ್ಯಾರ್ಥಿನಿಯರ ವೈಯಕ್ತಿಕ ಶ್ರೇಷ್ಠತೆ ಮತ್ತು ಸಮಾಜದ ಬದಲಾವಣೆಗೆ ಮೀಸಲಾಗಿರುವ ಸೈದ್ಧಾಂತಿಕ ಸಂಘಟನೆಯಾಗಿದೆ. ನಾವು ಸರ್ವ ಧರ್ಮದ ಮತ್ತು ಸಮುದಾಯದ ಜನರನ್ನು ನಮ್ಮೊಂದಿಗೆ ಸೇರಲು ಆಹ್ವಾನಿಸುತ್ತೇವೆ,” ಎಂದು ನವೀದಾ ಅಸ್ಸಾದಿ ಹೇಳಿದರು.

    “ನಾವು ದಯೆಯನ್ನು ಪುನಃ ನಮ್ಮ ಸುತ್ತಮುತ್ತಲೂ ಸ್ಥಾಪಿಸೋಣ ಮತ್ತು ಮುಂದಿನ ಪೀಳಿಗೆಗಳಿಗೆ ಮಾದರಿಯಾಗೋಣ” ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು.
    ಈ ಸಂದರ್ಭದಲ್ಲಿ ಅಭಿಯಾನದ ಸಂಯೋಜಕಿ ಅಫ್ರಾ ಫತೀನ್, GIO ಕರ್ನಾಟಕದ ಉಪಾಧ್ಯಕ್ಷೆ ಅನೀಸ್ ಫಾತಿಮಾ, JIH ಕರ್ನಾಟಕ ಕಾರ್ಯದರ್ಶಿ ತಶ್ಕೀಲ್ ಖಾನಂ, ಅನುಪಮಾ ಮಾಸಪತ್ರಿಕೆಯ ಉಪಸಂಪಾದಕಿ ಕುಲ್ಸೂಮ್ ಅಬೂಬಕ್ಕರ್ ಉಪಸ್ಥಿತರಿದ್ದರು.

    ಹೆಚ್ಚಿನ ಮಾಹಿತಿಗಾಗಿ ಅಥವಾ ಅಭಿಯಾನದಲ್ಲಿ ಪಾಲ್ಗೊಳ್ಳಲು:

    ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್, ಕರ್ನಾಟಕ
    ಶಾಂತಿ ಸದನ್, #52, 2ನೇ ಮೆೈನ್, 1ನೇ ಬ್ಲಾಕ್, ಆರ್‌ಟಿ ನಗರ, ಬೆಂಗಳೂರು – 560032
    ✉️ ಇಮೇಲ್: giokarnataka@anupamamasikagmail-com

    ಅಭಿಯಾನ ಸಂಯೋಜಕಿ:
    ಅಫ್ರಾ ಫತೀನ್, ಸಲಹಾ ಸಮಿತಿ ಸದಸ್ಯೆ, GIO ಕರ್ನಾಟಕ

  • ವೃದ್ಯಾಪ್ಯವು ಆನಂದವಾಗಿರಲಿ

    ವೃದ್ಯಾಪ್ಯವು ಆನಂದವಾಗಿರಲಿ

    ಮಾನವನ ಜೀವನಕ್ಕೆ ನಾಲ್ಕು ಹಂತಗಳು ಇವೆ. ಅದೃಷ್ಟವಂತರು ಈ ನಾಲ್ಕು ಹಂತಗಳನ್ನು ಅನುಭವಿಸುತ್ತಾರೆ- ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ. ಬಾಲ್ಯವು ಜೀವನದ ಅತಿ ಸೊಗಸಾದ ಹಂತ. ಕುತೂಹಲ ಮತ್ತು ಕಲಿಕೆಯ ಆಸಕ್ತಿ ಬಾಲ್ಯದ ವೈಶಿಷ್ಟ್ಯ. ಈ ಹಂತದಲ್ಲಿ ವ್ಯಕ್ತಿ ಭವಿಷ್ಯಕ್ಕೆ ಭದ್ರವಾದ ಅಡಿಕಲ್ಲುಗಳನ್ನು ಇಡುವುದು ಮುಖ್ಯ.

    ಯೌವ್ವನವು ಉತ್ಸಾಹದ ಹಾಗೂ ಕನಸುಗಳ ಹಂತ. ಒಳ್ಳೆಯ ಚಿಂತನೆಗಳು, ಕೆಟ್ಟ ಚಿಂತನೆಗಳು, ಉತ್ತಮ ಸ್ನೇಹಿತರು, ಕೆಟ್ಟ ಸ್ನೇಹಿತರು ಹಾಗೂ ಜೀವನದ ಗುರಿಗಳನ್ನು ನಿರ್ಧರಿಸುವ ಹಂತ. ಪ್ರೌಢಾವಸ್ಥೆ ಜೀವನದ ಹೊಣೆಗಾರಿಕೆಯ ಹಂತ. ಕುಟುಂಬ, ಸಮಾಜ, ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಪ್ರಮುಖ ಹಂತ. ಅನುಭವಗಳನ್ನು ಪಡೆಯುವುದು. ಇತರರ ಅನುಭವಗಳನ್ನು ಅವಲೋಕಿಸಿ ಅದರ ಬೆಳಕಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇದೇ ಹಂತದಲ್ಲಿ ಆಗುತ್ತದೆ.
    ವೃದ್ಧಾಪ್ಯವು ಮಾನವ ಜೀವನದ ಅಂತಿಮ ಹಂತ. ಈ ಹಂತದಲ್ಲಿ ದೈಹಿಕ ಶಕ್ತಿ ಕುಂದುತ್ತದೆ. ವೃದ್ಧಾಪ್ಯವು ಮಾನವ ಜೀವನದ ಅತ್ಯಂತ ಮಹತ್ವದ ಹಂತ. ಏಕೆಂದರೆ ಈ ಹಂತದಲ್ಲಿ ವ್ಯಕ್ತಿ ತನ್ನ ಹಿಂದಿನ ಜೀವನದ ಅನುಭವಗಳನ್ನು ಮುಂದಿಟ್ಟು ಯುವಪೀಳಿಗೆಗೆ ಮಾರ್ಗದರ್ಶನ ನೀಡುತ್ತಾನೆ.

    ಮಾನವ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುಖ-ಸಂತೋಷ, ಜಯ-ಸೋಲು, ಏರುಪೇರುಗಳು… ಅಂಗಗಳು. ಆದರೆ, ಪ್ರತಿಯೊಬ್ಬರೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿರಲಾರರು.

    ಕೆಲವರಲ್ಲಿ ಸ್ವಾಭಾವಿಕವಾಗಿ ಜೀವನದ ಸವಾಲುಗಳನ್ನು ಎದುರಿಸುವ ಶಕ್ತಿ ಇರುತ್ತದೆ. ಅವರು ಕಷ್ಟಗಳನ್ನು ಹೊಸ ಅವಕಾಶಗಳೆಂದು ನೋಡುತ್ತಾರೆ ಮತ್ತು ಸೋಲುಗಳಿಂದ ಪಾಠ ಕಲಿಯುತ್ತಾರೆ. ಇನ್ನೂ ಕೆಲವರಿಗೆ ಈ ಸಾಮರ್ಥ್ಯಗಳನ್ನು ಬೆಳೆಸಲು ತರಬೇತಿಯ ಅಗತ್ಯವಿರುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆ ದೊರೆತರೆ ಅವರು ಸಹ ಸಮರ್ಥ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.

    ಒಬ್ಬ ವ್ಯಕ್ತಿ ತನ್ನ ಜೀವನದ ಅರವತ್ತು ವರ್ಷಗಳನ್ನೂ ದಾಟಿದನು ಅಂದರೆ, ಅವನು ತನ್ನ ಜೀವನದ ಬಹು ದೊಡ್ಡ ಹಂತವನ್ನು ದಾಟಿದ್ದಾನೆ ಎಂದರ್ಥ. ಈ ಹಂತವು ಕೇವಲ ವಯಸ್ಸಿನ ಅಂಕಿ ಅಂಶ ಅಷ್ಟೇ ಅಲ್ಲ. ಅದು ಜೀವನದ ಅನುಭವದ ಮಹಾ ಸಂಪತ್ತು.

    ಮಾನವನನ್ನು ಮಣ್ಣಿನಿಂದ ಸೃಷ್ಟಿಸಿ, ನಂತರ ವೀರ್ಯದಿಂದ, ಬಳಿಕ ರಕ್ತಪಿಂಡದಿಂದ ರೂಪಿಸಿ, ಶಿಶುವಾಗಿ ಜನಿಸಿ, ಬಾಲ್ಯವನ್ನು ದಾಟಿ, ಯುವಕನಾಗಿ ಬೆಳೆಸಿ. ನಂತರ ಅತಿ ವೃದ್ಧಾಪ್ಯಕ್ಕೆ ತಲುಪಿ, ಕೊನೆಯಲ್ಲಿ ತಿಳಿಯದವನಾಗುವ ವರೆಗೂ ಹಾದು ಹೋಗುತ್ತಾನೆ ಎಂದು ಪವಿತ್ರ ಕುರ್‌ಆನ್ ಸ್ಪಷ್ಟಪಡಿಸುತ್ತದೆ. ಆತ ತನ್ನನ್ನು, ತನ್ನವರನ್ನು, ಎಲ್ಲವನ್ನು, ಎಲ್ಲರನ್ನೂ ಮರೆಯುತ್ತಾನೆ. ಅಂದರೆ ಆತ `ಡೆಮಿನ್ಶಿಯ’ ಎಂಬ ರೋಗಕ್ಕೆ ತುತ್ತಾಗಿದ್ದಾನೆ ಎಂದರ್ಥ.
    ಆಯುಷ್ಯ ಇದ್ದಲ್ಲಿ ವೃದ್ಧಾಪ್ಯವು ಮಾನವನ ಜೀವನದಲ್ಲಿ ತಪ್ಪಿಸಲಾಗದ ಸಹಜ ಹಂತ. ಶರೀರದ ಶಕ್ತಿ ಕ್ಷೀಣಿಸಿದರೂ, ಮನಸ್ಸು ಚುರುಕಾಗಿರಲು ಮತ್ತು ಆತ್ಮಬಲ ಹೆಚ್ಚಿಸಲು ಸಾಧ್ಯ. ವೃದ್ಧಾಪ್ಯವನ್ನು ಭಾರವೆಂದು ಭಾವಿಸುವ ಬದಲು, ಅದನ್ನು ಅನುಭವಗಳ ಸಂಪತ್ತಿನAತೆ ಆಗಲು ಯೌವ್ವನದಲ್ಲಿ ಪ್ರಯತ್ನಿಸುವುದು ಮುಖ್ಯ. ವೃದ್ಧಾಪ್ಯದಲ್ಲಿಯೂ ಮಾನವನಿಗೆ ತನ್ನದೇ ಆದ ಮಹತ್ವವಿದೆ. ಯಶಸ್ವೀ ಜೀವನ ಎಂದರೆ ಕೇವಲ ಯೌವ್ವನದಲ್ಲಿ ಮಾತ್ರ ಸಾಧನೆಗಳನ್ನು ಮಾಡುವುದಲ್ಲ, ವೃದ್ಧಾಪ್ಯದಲ್ಲಿಯೂ ಸಂತೋಷ, ಶಾಂತಿ ಮತ್ತು ಆಧ್ಯಾತ್ಮಿಕ ಸಮಾಧಾನವನ್ನು ಕಂಡುಕೊಳ್ಳುವುದು.

    ಪ್ರವಾದಿ ಮುಹಮ್ಮದ್(ಸ)ರು ಹೇಳುತ್ತಾರೆ, “ಅಂತಿಮವು ಒಳ್ಳೆಯದಾದರೆ ಎಲ್ಲವೂ ಒಳ್ಳೆಯದು”. ಅಂದರೆ ಮನುಷ್ಯನ ಜೀವನದ ಕೊನೆಯ ಹಂತವೇ ಅವನ ಜೀವನದ ನಿಜವಾದ ಮೌಲ್ಯವನ್ನು ನಿರ್ಧರಿಸುತ್ತದೆ.
    ಕೆಲವರು ಪ್ರಪಂಚದಲ್ಲಿ ತುಂಬಾ ಒಳ್ಳೆಯವರಂತೆ ಕಾಣಬಹುದು. ಜನರ ಕಣ್ಣಿಗೆ ಅವರು ಧಾರ್ಮಿಕರೂ, ಸಜ್ಜನರೂ, ಸಮಾಜದಲ್ಲಿ ನಿಷ್ಠಾವಂತರೂ ಆಗಿ ತೋರುತ್ತಾರೆ. ಆದರೆ ಅವರ ಅಂತರAಗ ಬೇರೆ ರೀತಿಯದ್ದಾಗಿರುತ್ತದೆ. ಅವರ ಕೊನೆಯ ವಾಸ ಸ್ಥಳ ನರಕವಾಗಬಹುದು. ಆ ಸಮಯದಲ್ಲಿ ಅವರ ಜೀವನದ ಬಾಹ್ಯ ಗೌರವ, ಹೆಸರು-ಮೆಚ್ಚುಗೆ ಎಲ್ಲವೂ ಅರ್ಥವಿಲ್ಲದಂತಾಗುತ್ತದೆ.

    ಇನ್ನು ಕೆಲವರು ಸಮಾಜದ ದೃಷ್ಟಿಯಲ್ಲಿ ಕೆಟ್ಟವರಾಗಿರಬಹುದು. ಜನರಿಂದ ತಪ್ಪಾಗಿ ಅರ್ಥೈಸಲ್ಪಟ್ಟವರಾಗಿರಬಹುದು. ಆದರೆ ಅವರ ಹೃದಯದಲ್ಲಿದ್ದ ಸತ್ಯತೆ, ಪಶ್ಚಾತ್ತಾಪ ಮತ್ತು ದಯೆಯ ಕಾರಣದಿಂದ ಅವರ ಅಂತಿಮ ಹಂತ ಶ್ರೇಷ್ಠವಾಗಬಹುದು. ಅಂತಹವರಿಗೆ ಸ್ವರ್ಗವೇ ಅಂತಿಮ ವಾಸ ಸ್ಥಳವಾಗಬಹುದು.

    ಒಂದು ವೇಳೆ ನಮ್ಮ ಜೀವನವು ಹಲವು ತಪ್ಪುಗಳು, ದೋಷಗಳು, ಕೆಟ್ಟ ಕೆಲಸಗಳಿಂದ ಕೂಡಿದ್ದರೂ, ನಿರಾಶರಾಗುವ ಅಗತ್ಯವಿಲ್ಲ. ಏಕೆಂದರೆ ಅಲ್ಲಾಹನು ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನಾಗಿದ್ದಾನೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನವನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು. “ಇಂದು” ಮಾಡಿದ ಸುಧಾರಣೆ ನಾಳೆಯ ಸುಂದರ ಅಂತ್ಯಕ್ಕೆ ದಾರಿ ತೆರೆದುಕೊಡುತ್ತದೆ.

    ಹಾಗಾದರೆ ನಮ್ಮ ವೃದ್ಧಾಪ್ಯ ಹೇಗಿರಬೇಕು? ಚೆನ್ನಾಗಿರಲು ಏನು ಮಾಡಬೇಕು? ಕೆಲವರ ವೃದ್ಧಾಪ್ಯ ದುಃಖಭರಿತವಾಗಿರುತ್ತದೆ. ಅವರ ಜೀವನದ ಕೊನೆಯ ಹಂತವು ವೃದ್ಧಾಶ್ರಮದಲ್ಲಿ ಕೊನೆಗೊಳ್ಳುತ್ತದೆ. ತಮ್ಮ ಮನೆ, ಕುಟುಂಬದಿAದ ದೂರವಾಗಿ ನೆನಪುಗಳೊಂದಿಗೆ ಏಕಾಂತದಲ್ಲಿ ದಿನ ಕಳೆಯುತ್ತಾರೆ.

    ಇನ್ನು ಕೆಲವರ ವೃದ್ಧಾಪ್ಯ ಉಲ್ಲಾಸದಿಂದ ಕೂಡಿರುತ್ತದೆ. ಅವರು ತಮ್ಮ ಮಕ್ಕಳ, ಮೊಮ್ಮಕ್ಕಳ ಜೊತೆಗಿದ್ದು ಪ್ರೀತಿ ಮತ್ತು ಗೌರವವನ್ನು ಅನುಭವಿಸುತ್ತಾರೆ. ಕುಟುಂಬ ಸಾನಿಧ್ಯವು ಅವರಿಗೆ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ.

    ಮುಸ್ಲಿಮ್ ಸಮುದಾಯದಲ್ಲಿ ಕೌಟುಂಬಿಕ ಜೀವನಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮ್ ಧರ್ಮವು ತಂದೆ-ತಾಯಿ ಮತ್ತು ಹಿರಿಯರ ಸೇವೆಗೆ ಬಹಳ ಮಹತ್ವವನ್ನು ಕೊಡುತ್ತದೆ. ಆದ್ದರಿಂದ ವೃದ್ಧರನ್ನು ಪ್ರೀತಿಯಿಂದ, ಗೌರವದಿಂದ ನೋಡಿಕೊಳ್ಳುತ್ತಾರೆ.

    ನಮ್ಮ ವೃದ್ಧಾಪ್ಯದ ಬಗ್ಗೆ ನಮಗೆ ಕಾಳಜಿ ಇರಬೇಕು. ಯೌವ್ವನದಲ್ಲಿಯೇ ದೂರದೃಷ್ಟಿಯೊಂದಿಗೆ ಬದುಕಿದರೆ ವೃದ್ಧಾಪ್ಯವನ್ನು ಸಂತೋಷಭರಿತವಾಗುವAತೆ ರೂಪಿಸಬಹುದು. ಸಕಾರಾತ್ಮಕ ಚಿಂತನೆ, ಆರೋಗ್ಯದ ಕಾಳಜಿ, ಅಧ್ಯಾತ್ಮಿಕತೆ ಮತ್ತು ಕುಟುಂಬದೊAದಿಗೆ ಒಗ್ಗಟ್ಟಿನಿಂದ ಬಾಳುವ ಜೀವನವೇ ವೃದ್ಧಾಪ್ಯದ ನೆಮ್ಮದಿ, ಗೌರವ ಮತ್ತು ಸಂತೋಷಕ್ಕೆ ದಾರಿ.

    ವೃದ್ಧಾಪ್ಯದಲ್ಲಿ ನಮ್ಮ ಬದುಕು ಇತರರಿಗೆ ಆದರ್ಶವಾಗುವಂತಿರಬೇಕು. ನಮ್ಮ ಮಾತು, ನಡೆ-ನುಡಿ, ಪ್ರಾಮಾಣಿಕತೆ ಮತ್ತು ಅನುಭವದಿಂದ ಮುಂದಿನ ಪೀಳಿಗೆಗೆ ದಾರಿ ತೋರಿಸಬೇಕು. ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾವು ಜ್ಞಾನ, ಮೌಲ್ಯಗಳು ಮತ್ತು ಧರ್ಮನಿಷ್ಠೆಯ ಮಾದರಿಯಾಗಿದ್ದರೆ ನಮ್ಮ ಜೀವನ ಉತ್ತಮವಾಗುತ್ತದೆ.
    ಮನೋ ವೈದ್ಯರು ಹೇಳುವಂತೆ, ವೃದ್ಧಾಪ್ಯವನ್ನು ಆರೋಗ್ಯಕರವಾಗಿಯೂ ಸುಂದರವಾಗಿಯೂ ನಡೆಸಲು ಮೂರು ಮುಖ್ಯ ಅಂಶಗಳನ್ನು ಅಳವಡಿಸಬೇಕು.

    1. ಶಾರೀರಿಕ ಆರೋಗ್ಯದ ಕಾಳಜಿ.
    ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ತಕ್ಕ ಮಟ್ಟದ ವಿಶ್ರಾಂತಿ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಪರೀಕ್ಷೆಗಳು ವೃದ್ಧಾಪ್ಯದಲ್ಲಿ ದೇಹವನ್ನು ಚುರುಕಾಗಿಡುತ್ತದೆ.
    ಆರೋಗ್ಯದ ವೃದ್ಧಾಪ್ಯಕ್ಕಾಗಿ ರೋಗಗಳು ಬಂದು ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅವುಗಳನ್ನು ಮುಂಚಿತವಾಗಿ ತಡೆಗಟ್ಟುವುದು ಅತ್ಯಂತ ಮುಖ್ಯ.

    ಜಾಗ್ರತೆ- ರೋಗಗಳು ಉಂಟಾಗುವ ದಾರಿಯನ್ನು ತಿಳಿದುಕೊಳ್ಳುವುದು. ಆಹಾರದಲ್ಲಿ ಅಸಮತೋಲನ, ವ್ಯಾಯಾಮದ ಕೊರತೆ, ಒತ್ತಡ, ಕೆಟ್ಟ ಅಭ್ಯಾಸಗಳು ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
    ಅದನ್ನು ತಡೆಗಟ್ಟಲು ಸರಿಯಾದ ಜೀವನ ಶೈಲಿ, ಶುದ್ಧ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಮಾನಸಿಕ ಶಾಂತಿ ಅತಿ ಮುಖ್ಯ. ರೋಗಗಳಿಗೆ ತುತ್ತಾಗದೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆ ಮತ್ತು ಉತ್ತಮ ಜೀವನ ಶೈಲಿ ಅತಿ ಮುಖ್ಯ.

    ವೃದ್ಧಾಪ್ಯದಲ್ಲಿ ಈ ಜಾಗ್ರತೆಗೆ ಹೆಚ್ಚಿನ ಗಮನ ಕೊಡಬೇಕು. ಏಕೆಂದರೆ ವಯಸ್ಸಿನೊಂದಿಗೆ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆಗೆ ಹೆಚ್ಚಿನ ಮಹತ್ವ ಕೊಡಬೇಕು.
    ಮಾನಸಿಕ ಆರೋಗ್ಯವು ಬಹಳ ಮಹತ್ವಪೂರ್ಣವಾಗಿದೆ. ಕೆಲವೊಮ್ಮೆ ವೃದ್ಧಾಪ್ಯದಲ್ಲಿ ಮಾನಸಿಕ ಒತ್ತಡ, ಡಿಪ್ರೇಶನ್, ಪಶ್ಚಾತ್ತಾಪ ಅಥವಾ ಅಪರಾಧ ಭಾವನೆಗಳು ಕಾಡುತ್ತದೆ. ಇಂತಹ ನಕಾರಾತ್ಮಕ ಭಾವನೆಗಳು ಮಾನವನನ್ನು ರೋಗಿಗಳನ್ನಾಗಿ ಮಾಡುತ್ತದೆ. ಮನಸ್ಸಿನ ಆಶಾಂತಿ ದೇಹದ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಈ ರೀತಿಯ ಜಾಗ್ರತೆಗಳಿಂದ ವೃದ್ಧಾಪ್ಯವನ್ನು ಆರೋಗ್ಯಕರ, ಸಂತೋಷಕರ ಮತ್ತು ಶಾಂತಿಯುತವಾಗಿಸಬಹುದು.

    2. ಯಶಸ್ವಿ ಅಥವಾ ಸುಂದರವಾದ ವೃದ್ಧಾಪ್ಯವನ್ನು ಪಡೆಯಬೇಕೆಂದರೆ, ಬದುಕಿನ ಎಲ್ಲಾ ವಿಷಯಗಳಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ. ಶರೀರವನ್ನು ಚುರುಕಾಗಿಡುವ ಶಿಸ್ತಿನ ಜೀವನ.

    ಮನಸ್ಸಿಗೆ ನೆಮ್ಮದಿ ನೀಡುವ ಸಕಾರಾತ್ಮಕ ಚಿಂತನೆ.

    ಸಮಾಜದೊAದಿಗೆ ಬೆಸೆದುಕೊಳ್ಳುವ ಒಡನಾಟ ಮತ್ತು ಆಧ್ಯಾತ್ಮಿಕತೆಯಿಂದ ಆತ್ಮಶಾಂತಿ ಪಡೆಯುವುದು. ಇವೆಲ್ಲವನ್ನು ಸಮಾನವಾಗಿ ಪಾಲಿಸಿದಾಗ ವೃದ್ಧಾಪ್ಯವು ನಿಜವಾಗಿಯೂ ಯಶಸ್ವಿ ಮತ್ತು ಸುಂದರವಾಗಲು ಸಾಧ್ಯ.

    ವೃದ್ಧಾಪ್ಯದಲ್ಲಿ ಅನೇಕರು ತಮ್ಮ ಉದ್ಯೋಗದಿಂದ ನಿವೃತ್ತಿಯಾಗುತ್ತಾರೆ. “ಆಫೀಸಿನಿಂದ ನಿವೃತ್ತಿಯಾದರೂ, ಜೀವನದಿಂದ ನಿವೃತ್ತಿಯಾಗಬಾರದು.” ಸಮಾಜಕ್ಕೆ ಸೇವೆ ಸಲ್ಲಿಸುವ ಅನೇಕ ಅವಕಾಶಗಳು ನಮ್ಮ ಸುತ್ತಲಿವೆ.

    ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ವೃದ್ಧಾಪ್ಯ ಚೈತನ್ಯದಿಂದ ಕೂಡಿರುತ್ತದೆ. ಧಾರ್ಮಿಕ ಕೇಂದ್ರಗಳು, ಶಾಲೆಗಳು, ಸ್ವಯಂ ಸೇವಾ ಸಂಘಟನೆಗಳು, ಕುಟುಂಬಸ್ಥರನ್ನು ಭೇಟಿ ಆಗುವುದು. ನೆರೆ ಹೊರೆಯ ಸಮಿತಿಗಳು ಎಲ್ಲೆಡೆ ಹಿರಿಯ ಮಾರ್ಗದರ್ಶನ ಮತ್ತು ಅನುಭವ ಅಗತ್ಯ. ನಿವೃತ್ತಿ ಹೊಂದಿದರೂ, ಇದು ಹೊಸ ರೀತಿಯ ಬದುಕಿನ ಆರಂಭ- ಯುವಕರಿಗೆ ದಾರಿದೀಪ ಆಗಬಹುದು. ತಮ್ಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಹೀಗೆ, ವೃದ್ಧಾಪ್ಯದಲ್ಲಿ “ನಾನು ನಿವೃತ್ತ” ಎಂಬ ಯೋಚನೆಯ ಬದಲು ನಾನು ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳುವುದು, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವುದರಿಂದ ಪ್ರಗತಿಶೀಲರಾಗಿರಲು ನೆರವಾಗುತ್ತದೆ.

    ಪೋಷಕರ ಸೇವೆ ಎಂಬುದು ಕೇವಲ ಅವರು ಬದುಕಿದ್ದಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ಅವರ ಮರಣಾ ನಂತರವೂ ಮಾಡಬಹುದು ಎಂದು ಇಸ್ಲಾಮಿನ ಈ ಶಿಕ್ಷಣದಿಂದ ಸ್ಪಷ್ಟವಾಗುತ್ತದೆ.

    ಇಂದಿನ ಸ್ವಾರ್ಥಪರ ಸಮಾಜದಲ್ಲಿ, ತಮಗೆ ಜೀವನವನ್ನು ನೀಡಿದ ತಂದೆ-ತಾಯಿಗಳಿಗೆ ಗೌರವ, ಕಾಳಜಿ ತೋರಿಸದೆ ಇರುವಾಗ, ತಮ್ಮ ಆಪ್ತ ಬಂಧುಗಳ ಬಗ್ಗೆ ಕಾಳಜಿ ವಹಿಸುವರೆ!

    ತಂದೆ-ತಾಯಿಗಾಗಿ ಖರ್ಚು ಮಾಡುವುದು ಮಕ್ಕಳ ಕರ್ತವ್ಯ. ಅವರಿಗೆ ಮಾಸಿಕವಾಗಿ ಹಣ ನೀಡುವುದು, ಅವರ ಅಗತ್ಯಗಳನ್ನು ಪೂರೈಸುವುದು ಮಕ್ಕಳ ಜವಾಬ್ದಾರಿಯಾಗಿದೆ. ಪೋಷಕರಿಗೆ ಪಿಂಚಣಿ ಸಿಗುತ್ತಿದ್ದರು, ಅದನ್ನು ಕಾರಣವನ್ನಾಗಿ ಮಾಡದೆ ಮಕ್ಕಳು ತಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಬೇಕು. ಅವರಿಗೆ ನೀಡಿದ ಪ್ರೀತಿ ಮತ್ತು ಕಾಳಜಿ ಯಾವತ್ತೂ ವ್ಯರ್ಥವಾಗುವುದಿಲ್ಲ.

    ವೃದ್ಧಾಪ್ಯದಲ್ಲಿ ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲರಾಗುವುದು ಸಹಜ. ಆದರೆ ದೈಹಿಕವಾಗಿಯೂ, ಮಾನಸಿಕವಾಗಿಯು ಬಲಿಷ್ಠರಾಗಿರುವುದು ಜೀವನ ನಿಜವಾದ ಶಕ್ತಿ ಮತ್ತು ಯಶಸ್ಸು. ಇದರ ಅತ್ಯುತ್ತಮ ಉದಾಹರಣೆ ಪ್ರವಾದಿ ಮುಹಮ್ಮದ್(ಸ)ರು.

    ಪ್ರವಾದಿ ಮುಹಮ್ಮದ್(ಸ)ರು ವೃದ್ಧಾಪ್ಯದಲ್ಲಿಯೂ ದೈಹಿಕವಾಗಿ ಚುರುಕಾಗಿದ್ದು, ಮಾನಸಿಕವಾಗಿ ದೃಢವಾಗಿದ್ದರು. ತಮ್ಮ ಜೀವನದ ಅಂತಿಮ ಹಂತದಲ್ಲಿಯೂ ಸಮಾಜವನ್ನು ಮುನ್ನಡೆಸುವ ಶಕ್ತಿ, ಧೈರ್ಯ ಮತ್ತು ತಾಳ್ಮೆ ಅವರಲ್ಲಿತ್ತು.

    ಇದರಿಂದ ಹುದೈಬಿಯಾ, ಖೈಬರ್ ಯುದ್ಧಗಳಲ್ಲಿ ಜಯಗೊಳಿಸಿದರು, ಹುನೈನ್ ಯುದ್ಧ ಆ ಕಾಲದ ಪ್ರಮುಖ ಯುದ್ಧಗಳಲ್ಲಿ ಒಂದು. ಇದನ್ನು ಜಯಗೊಳಿಸಿದ್ದು, ತನ್ನ ಜೀವನದ ಕೊನೆಯ ಐದು ವರ್ಷಗಳಲ್ಲಿ. ಇದೇ ಸಮಯದಲ್ಲಿ ತಾಯಿಫನ್ನು ವಶಪಡೆದು ಕೊಂಡರು. ಅದೇ ಸಮಯದಲ್ಲಿ “ಯುದ್ಧವಿಲ್ಲದೆಯೇ ಮಕ್ಕಾ ವಿಜಯವನ್ನು ಸಾಧಿಸಲಾಯಿತು.” ಹಜ್ಜ್ನ ಸಮಯ ವಿದಾಯ ಭಾಷಣದಲ್ಲಿ 1,40,000 ಸಂಗಾತಿಗಳೆದುರು ಭಾಷಣ ಮಾಡಿದರು. ಈ ಉದಾಹರಣೆಗಳನ್ನು ಮುಂದಿಟ್ಟು ನೋಡಿದಾಗ, ಪ್ರವಾದಿವರ್ಯರ(ಸ) ಜೀವನ ಯಾವಾಗಲೂ ಮೇಲೇರುತ್ತಾ ಹೋದದಲ್ಲದೆ, ಕೆಳಕ್ಕೆ ಇಳಿಯಲಿಲ್ಲ. ಅವರು ಯಶಸ್ಸು ಸಾಧಿಸುತ್ತಾ ಹೋದರು. ಅವರ(ಸ) ಜೀವನ ನಮಗೆ ಪಾಠದಾಯಕವಾಗಿದೆ.

    “ಹಿರಿಯರು ದೈಹಿಕ ಚಟುವಟಿಕೆಗಳನ್ನು ಸತತವಾಗಿ ಮಾಡಬೇಕು. ಸಮಾಜದಲ್ಲಿ ಸೇವೆಗೆ ಸಿದ್ಧ” ಎಂಬ ಮನೋಭಾವನೆ ಬೆಳೆಸಿಕೊಳ್ಳುವುದು ಯಶಸ್ವಿ ವೃದ್ಧಾಪ್ಯದ ಗುಟ್ಟು.

    3. ವೃದ್ಧಾಪ್ಯದಲ್ಲಿ ಹಿರಿಯರಿಗೆ ಭಾವನಾತ್ಮಕ ಬೆಂಬಲವೂ ಅತ್ಯಂತ ಮುಖ್ಯ.
    ಭಾವನಾತ್ಮಕ ಬೆಂಬಲದ ಕೊರತೆಯಿಂದ ವೃದ್ಧರು ಏಕಾಂತತೆ, ಒತ್ತಡ ಮತ್ತು ನಿರಾಶೆಗೆ ಒಳಗಾಗುತ್ತಾರೆ. ಆದರೆ ಮನೆಯವರ ಗೌರವ, ಪ್ರೀತಿ ದೊರೆತರೆ, ಮನೆಯವರು ಅವರನ್ನು ಗೌರವಿಸಿದರೆ, ಅವರೊಂದಿಗೆ ಸಮಯ ಕಳೆದರೆ, ಅವರ ಸೇವೆ ಮಾಡಿದರೆ ಅವರಿಗೆ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ.

    ವೃದ್ಧರು, ವೃದ್ಧಾಪ್ಯವನ್ನು ಆರೋಗ್ಯಕರವಾಗಿ ಕಳೆಯಲು ಅಧ್ಯಯನ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆಗಳನ್ನು ಓದುವುದು, ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಹೊಸ ವಿಷಯಗಳನ್ನು ಕಲಿಯುವುದು, ವಿಚಾರ ವಿನಿಮಯಗಳಂತಹ ಚಟುವಟಿಕೆಗಳನ್ನು ಮಾಡುತ್ತಿದ್ದರೆ, ಮಾನಸಿಕವಾಗಿ ಸಕ್ರಿಯರಾಗಿರುತ್ತಾರೆ. ಬುದ್ಧಿಹೀನತೆಗೆ ಒಳಗಾಗುವುದಿಲ್ಲ. ಅವರ ಸ್ಮರಣ ಶಕ್ತಿ ಕುಗ್ಗುವುದಿಲ್ಲ. ಮಾನಸಿಕ ದುರ್ಬಲತೆಗೆ ತುತ್ತಾಗುವುದಿಲ್ಲ.

    ಕೆಲವರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಉದ್ಯೋಗ ಮುಗಿದ ನಂತರ ಉದ್ಯಮ ಇಲ್ಲ. ಪಿಂಚಣಿ ಸಿಗುವುದಿಲ್ಲ. ಆದಾಯದ ಮೂಲವಿಲ್ಲ, ಇಂತಹ ಸ್ಥಿತಿಯಲ್ಲಿ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಕುಟುಂಬದವರು ಸಹ ವೃದ್ಧರನ್ನು ನಿರ್ಲಕ್ಷಿಸಿ ಮನೆಯಿಂದ ಹೊರಹಾಕುವ ಘಟನೆಗಳು ಸಂಭವಿಸುತ್ತವೆ. ಇಂತಹ ಸಂದರ್ಭದಲ್ಲಿ ವೃದ್ಧರು ಆಶ್ರಯವಿಲ್ಲದೆ ಫುಟ್‌ಪಾತ್‌ಗಳಲ್ಲಿ ವಾಸಿಸುವಂತಾಗುತ್ತದೆ. ನೀವು ನಗರಗಳಲ್ಲಿ ಭಿಕ್ಷೆ ಬೇಡುವ ವೃದ್ಧರನ್ನು ನೋಡಬಹುದು.

    ಪ್ರವಾದಿ ಶುಯೈಬ್(ಅ)ರು ವೃದ್ಧಾಪ್ಯದಲ್ಲಿ ದುಡಿಯಲು ಅಸಮರ್ಥರಾದಾಗ, ಅವರಿಬ್ಬರು ಪುತ್ರಿಯರು ತಂದೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ತಂದೆಗೆ ಆರ್ಥಿಕವಾಗಿ ಸಹಕರಿಸಲು ಮೇಕೆಗಳನ್ನು ಮೇಯಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡರು.

    ತAದೆ ವೃದ್ಧರಾದಾಗ ಮಕ್ಕಳು ಅವರನ್ನು ಆರ್ಥಿಕವಾಗಿ ಸಹಕರಿಸಬೇಕು. ಅವರ ಆವಶ್ಯಕತೆಗಳನ್ನು ಗಮನಿಸಿ ಪೂರೈಸುವುದು ಕೇವಲ ನೈತಿಕ ಕರ್ತವ್ಯವಷ್ಟೇ ಅಲ್ಲ ಇಸ್ಲಾಮಿನ ಬೋಧನೆಯೂ ಆಗಿದೆ.
    ಪ್ರವಾದಿ ಮುಹಮ್ಮದ್(ಸ)ರು ಹೇಳಿದ್ದಾರೆ- “ಮಾತಾಪಿತರು ಮರಣ ಹೊಂದಿದ ಬಳಿಕವೂ ಅವರ ಆಪ್ತ ಸಂಬAಧಿಕರ ಬಗ್ಗೆ ಕಾಳಜಿ ತೋರಿಸುವುದು, ಸಹಾಯ ಮಾಡುವುದು ಮತ್ತು ಅವರ ಸ್ನೇಹಿತರಿಗೆ ಗೌರವ ನೀಡುವುದು ಪೋಷಕರಿಗೆ ಮಾಡಿದ ಸೇವೆಯಂತೆಯೇ ಆಗುತ್ತದೆ.”

    ಸಕ್ರಿಯರಾಗಿರಿ. ಮಾನಸಿಕವಾಗಿ ನಿವೃತ್ತರಾಗಬೇಡಿ. 40 ವರ್ಷಗಳಿಂದ ಸೇವಿಸಿದ ಆಹಾರವನ್ನು ಬದಲಾಯಿಸಿ. ಆರೋಗ್ಯಕರ ಆಹಾರ, ನಿದ್ರೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ. ವಯಸ್ಸಿಗೆ ತಕ್ಕ ಆಹಾರ ಸೇವಿಸಿ. ಜೀವನಕ್ಕೆ ಒಂದು ಉದ್ದೇಶವನ್ನು ಇಟ್ಟುಕೊಳ್ಳಿ. ಸಾಮಾಜಿಕ ಜೀವನ, ಧಾರ್ಮಿಕತೆ, ಸಮಾಜದ ಹಿತಕ್ಕಾಗಿ ದುಡಿಯುವ ಉದ್ದೇಶಗಳನ್ನು ಮುಂದಿಟ್ಟಾಗ ವೃದ್ಧಾಪ್ಯವು ಉತ್ತಮವಾಗಬಹುದು ಮತ್ತು ಸಮಾಜದಲ್ಲಿ ಗೌರವಿಸಲ್ಪಡುವಿರಿ. ಸಂತೋಷ ನೆಮ್ಮದಿ ನಿಮ್ಮ ಜೀವನದ ಪಾಲಾಗುವುದು.

    ಸಜ್‌ರೂನ್

  • “ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: 
ಇದು ದಸರಾದ ಪರಿಕಲ್ಪನೆ

    “ಶಿಷ್ಟರ ರಕ್ಷೆ ಮತ್ತು ದುಷ್ಟರಿಗೆ ಶಿಕ್ಷೆ”: ಇದು ದಸರಾದ ಪರಿಕಲ್ಪನೆ

    [ಭಾರತ ಬಹುಸಂಸ್ಕೃತಿಯ ಆಚರಣೆಗಳ ದೇಶ. ಕರ್ನಾಟಕದಲ್ಲಿ ದಸರಾ’ವನ್ನು ನಾಡ ಹಬ್ಬವಾಗಿ ಆಚರಿಸಲಾಗುತ್ತದೆ. ನವರಾತ್ರಿಗಳ ಈ ಉತ್ಸವದ ಹಿನ್ನೆಲೆಯು ಹಿಂದೂ ಬಾಂಧವರಲ್ಲಿ ಶುಭ ದಿನಗಳಾಗಿವೆ. ದುಷ್ಟ ಶಕ್ತಿಯ ದಮನ, ಸಂಕಷ್ಟ ನಿವಾರಣೆಯ ನಂಬಿಕೆಯಲ್ಲಿ ಈ ಉತ್ಸವ ಆಚರಿಸುತ್ತಾರೆ. ಅಂತೆಯೇ ಇದೇ ತಿಂಗಳಲ್ಲಿ ದೀಪಾವಳಿ’ಯ ಬೆಳಕಿನ ಹಬ್ಬದ ಸಂಭ್ರಮವನ್ನೂ ದೇಶಬಾಂಧವರು ಸಂಭ್ರಮದಿಂದ ಆಚರಿಸುತ್ತಾರೆ. ನಾವು ಎಲ್ಲಾ ಧರ್ಮವನ್ನೂ ಗೌರವಿಸುವವರಾಗಬೇಕು. ಪರಸ್ಪರ ಧಾರ್ಮಿಕ ಅರಿವು’ ಉಳ್ಳವರಾಗಬೇಕು. ಹಬ್ಬಗಳು ಮನಸ್ಸನ್ನು ಬೆಸೆಯುವ, ಸೌಹಾರ್ದತೆಯನ್ನು ಹುಟ್ಟಿಸುವ ಆಚರಣೆಯಾಗುತ್ತದೆ. ದಸರಾ ಮತ್ತು ದೀಪಾವಳಿಯ ಹಿನ್ನಲೆಯ ಬಗ್ಗೆ ಲೇಖಕಿ ಸುಖಲಾಕ್ಷಿ ವೈ. ಸುವರ್ಣರವರು ಬರೆದಿರುವ ಈ ಲೇಖನವನ್ನು ಓದುಗರಿಗಾಗಿ ಇಲ್ಲಿ ಕೊಡುತ್ತಿದ್ದೇವೆ. ಅಂತೆಯೇ ದೇಶ ಬಾಂಧವರಿಗೆ ಶುಭಾಶಯಗಳನ್ನೂ ಕೋರುತ್ತೇವೆ.] -ಸಂಪಾದಕಿ.

    ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತಾರೆ. ಪ್ರಕೃತಿಯನ್ನು ವಿಕೃತಿಗೊಳಿಸುವ ದುಷ್ಟಶಕ್ತಿಗಳ ದಮನ ಮಾತೃಶಕ್ತಿಯಿಂದ ಮಾತ್ರ ಸಾಧ್ಯ. ಒಟ್ಟಿನಲ್ಲಿ ದುಷ್ಟರ ಶಿಕ್ಷೆ ಶಿಷ್ಟ ರಕ್ಷಣೆಗಾಗಿ ಒಂಭತ್ತು ಅವತಾರಗಳನ್ನೆತ್ತಿದ ದುರ್ಗಾಮಾತೆ ಸಕಲ ಸಂಕಷ್ಟ ನಿವಾರಕಳೆಂದು ಕರೆಯಲ್ಪಟ್ಟು ಆದಿಶಕ್ತಿಯ ರೂಪದಲ್ಲಿ ದೇಶದೆಲ್ಲೆಡೆ ಪೂಜಿಸಲ್ಪಡುತ್ತಿದ್ದಾಳೆ.

    ‘ದಸರಾ’ ಎಂದು ಕರೆಯಲ್ಪಡುವ ನವರಾತ್ರಿಯನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಒಂಬತ್ತು ರಾತ್ರಿಗಳ ದುರ್ಗೆಯ ಆರಾಧನೆಯ ಬಳಿಕ ಹತ್ತನೆಯ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ ವಿಜಯದಶಮಿಯನ್ನು ದಶಶಿರನಾದ ರಾವಣ ಸಂಹಾರ ಮಾಡಿದ ವಿಜಯದ ದ್ಯೋತಕವಾಗಿ ದಶಹರ/ದಸರಾ ಎಂದು ಕರೆಯುತ್ತಾರೆ. ಈ ದಿನವನ್ನು ಶ್ರೀರಾಮಚಂದ್ರ ರಾವಣ ಸಂಹಾರ ಮಾಡಿದ ದಿನವೆಂದು ನಂಬಲಾಗುತ್ತಿದ್ದು, ಉತ್ತರಭಾರತದಲ್ಲಿ ನವರಾತ್ರಿಯನ್ನು ‘ರಾಮ್ ಲೀಲಾ’ ಎಂದೇ ಪೂಜಿಸಲಾಗುತ್ತಿದೆ. ವಿಜಯ ದಶಮಿಯಂದು ರಾವಣ ಸಂಹಾರದ ದ್ಯೋತಕವಾಗಿ ಉದ್ದನೆಯ ಮರದ ತುಂಡಿಗೆ ರಾವಣನ ಆಕಾರ ನೀಡಿ ಅದಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಇದನ್ನು ‘ಲಂಕಾ ದಹನ’ ಎಂದು ಕರೆದು ಜನ ಸಂಭ್ರಮಿಸುತ್ತಾರೆ. ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ನಂಬಲಾಗುತ್ತದೆ. ಪಾಂಡವರು ವೇಷ ಬದಲಾಯಿಸಿ ವಿರಾಟ ನಗರಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ ಮರದೊಳಗೆ ಸಂರಕ್ಷಿಸಿಟ್ಟಿದ್ದು ಅವರ ವಿಜಯದ ಸಂಕೇತವಾಗಿ ವಿಜಯದಶಮಿಯಂದು ಆಯುಧ ಪೂಜೆ ಮತ್ತು ಶಮೀ ಮರವನ್ನು ಪೂಜಿಸಲಾಗುತ್ತದೆ.

    ಗುಜರಾತಿನಲ್ಲಿ ನವರಾತ್ರಿಯನ್ನು ಸಂಗೀತ-ನೃತ್ಯಗಳಿಂದ ಆರಾಧಿಸಲಾಗುತ್ತದೆ. ಗುಜರಾತಿಗಳು ಘಟಸ್ಥಾಪನೆಯ ದಿನದಿಂದ ಒಂಭತ್ತು ದಿನಗಳವರೆಗೆ ಉಪವಾಸವಿದ್ದು ದುರ್ಗೆಯ ಆರಾಧನೆ ಮಾಡುತ್ತಾರೆ. ಅಗತ್ಯವುಳ್ಳವರಿಗೆ ಉಚಿತ ಖಾದ್ಯ ವಿತರಣೆ ಮಾಡಿ ಸಹಾಯ ಮಾಡಲಾಗುತ್ತದೆ. ಒಂಭತ್ತು ರಾತ್ರಿಗಳಲ್ಲಿ ಸಾವಿರಾರು ಜನ ಸೇರಿ ವರ್ತುಲ ರೂಪಿಸಿ ಗಾರ್ಭ ನೃತ್ಯ ಸೇವೆ ನಡೆಯುತ್ತದೆ. ಹೆಣ್ಣುಮಕ್ಕಳು ಬಣ್ಣಬಣ್ಣದ ಛನಿಯಾ ಚೋಲಿ, ಗಾಗರಾ ಹಾಗೂ ಪುರುಷರು ಕುರ್ತಾ ಪ್ಶೆಜಾಮದಂತಹ ಸಾಂಪ್ರದಾಯಿಕ ಉಡುಪು ತೊಟ್ಟು ಆವೇಶದಿಂದ ಕುಣಿಯುತ್ತಾ ಗಾರ್ಭಾ ನೃತ್ಯದ ಮೂಲಕ ದುರ್ಗಾಮಾತೆಯನ್ನು ಆರಾಧಿಸುತ್ತಾರೆ.
    ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ದೊಡ್ಡಹಬ್ಬ. ಈ ದಿನಗಳಲ್ಲಿ ಕೋಲ್ಕತ್ತಾದ ಗಲ್ಲಿಗಲ್ಲಿಗಳಲ್ಲಿ ದುರ್ಗಾಮಾತೆಯ ಪೆಂಡಾಲ್‌ಗಳನ್ನು ಹಾಕಲಾಗುತ್ತದೆ. ದುರ್ಗಾಪೂಜೆಯ ಒಂಬತ್ತು ದಿನಗಳಲ್ಲಿಯೂ ಇಡೀ ಕೋಲ್ಕತ್ತಾ ನಗರ ಸಂಭ್ರಮದ ನಗರಿಯಾಗಿ ಬದಲಾಗುತ್ತದೆ. ಪಶ್ಚಿಮಬಂಗಾಳ ಸೇರಿದಂತೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ಅಶ್ವಯುಜ ಶುಕ್ಲ ಪಂಚಮಿಯಿAದ ತೊಡಗಿ ದಶಮಿಯವರೆಗಿನ ಆರು ದಿನಗಳ ತನಕ ದುರ್ಗಾಪೂಜೆ ನಡೆಯುತ್ತದೆ.

    ಕರ್ನಾಟಕದಲ್ಲಿ ನಾಡಹಬ್ಬ

    ಅಥವಾ ‘ದಸರಾ’ ಎಂದು ಕರೆಯಲ್ಪಡುತ್ತಿರುವ ನವರಾತ್ರಿ ಮಹೋತ್ಸವ ರಾಜ್ಯದ ಹೆಮ್ಮೆಯ ಮತ್ತು ಪ್ರಮುಖ ಹಬ್ಬವಾಗಿದೆ. ಮೈಸೂರು ದಸರಾ ಎಂದೇ ಖ್ಯಾತಿ ಹೊಂದಿರುವ ಮೈಸೂರಿನಲ್ಲಿ ವಿಜಯನಗರ ಕಾಲದಿಂದಲೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನವೆಂದು ವಿಜಯದಶಮಿಯನ್ನು ‘ಕೆಟ್ಟದರ ಮೇಲೆ ಒಳ್ಳೆಯವರ ವಿಜಯ’ ಎಂದು ಸಾಂಕೇತಿಸುವ ಹಬ್ಬವಾಗಿದೆ. ರಾಜ್ಯದ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕಾಗಿ ದಸರಾ ಮಹೋತ್ಸವವನ್ನು ‘ನಾಡ ಹಬ್ಬ’ವೆಂದು ಕರೆಯಲಾಗುತ್ತದೆ. ವಿಶ್ವ ವಿಖ್ಯಾತವಾದ ಮೈಸೂರು ದಸರಾ 10 ದಿನಗಳ ಕಾಲ ಸಂಭ್ರಮದಿAದ ಆಚರಿಸಲಾಗುತ್ತಿದ್ದು, ನಾಡಿನ ಎಲ್ಲಾ ದೇವಾಲಯಗಳಲ್ಲಿ ದುರ್ಗೆಯನ್ನು ನವರೂಪಗಳಲ್ಲಿ ಅಲಂಕರಿಸಿ ನವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಾಗುತ್ತದೆ.

    ತುಳುನಾಡಿನಲ್ಲಿ ನವರಾತ್ರಿಯನ್ನು ‘ಮಾರ್ನೆಮಿ’ ಎಂದು ಕರೆಯುತ್ತಾರೆ. ಒಂಭತ್ತು ರಾತ್ರಿಯ ಹಬ್ಬವಾದ ನವರಾತ್ರಿಯ ಒಂಭತ್ತನೆಯ ದಿನ ‘ಮಹಾನವಮಿ’ ತುಳುಭಾಷೆಯಲ್ಲಿ ‘ಮಾರ್ನೆಮಿ’ ಎಂದಾಗಿದೆ. ದುರ್ಗೆ ಹತ್ತು ರಾಕ್ಷಸರನ್ನು ಸಂಹರಿಸಿದ ರಾತ್ರಿಯೆಂದು ದಶಹರ/ದಸರಾ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. ತುಳುನಾಡಿನ ದೇವಾಲಯಗಳಲ್ಲಿ ಮಾರ್ನೆಮಿಯ ಪ್ರಥಮ ದಿನದಂದು ‘ಕೊಪ್ಪರಿಗೆ’ ಏರಿಸಲಾಗುತ್ತದೆ. ಕೊಪ್ಪರಿಗೆ ಅಂದ್ರೆ ‘ನಿಧಿ’ ಎಂದರ್ಥ. ಭತ್ತಬೇಸಾಯ ಸಂಸ್ಕçತಿಯ ತುಳುನಾಡಿನಲ್ಲಿ ನವರಾತ್ರಿಯ ಒಂಭತ್ತು ದಿನಗಳಲ್ಲಿಯೂ ಧಾರ್ಮಿಕ ಕೇಂದ್ರಗಳಲ್ಲಿ ‘ಅನ್ನಪ್ರಸಾದ’ ಸೇವೆ ನಡೆಯುತ್ತದೆ. ಅನ್ನದಾನ ಎಂಬುದು ಪುಣ್ಯದಾನವೆಂದು ನಂಬಲಾಗುತ್ತಿದ್ದು ‘ಅನ್ನಪ್ರಸಾದ’ದ ಸೇವೆಗೆ ದೊಡ್ಡ ‘ಕಟಾರ’ದ ಅವಶ್ಯಕತೆ ಇದ್ದು ತುಳುವಿನಲ್ಲಿ ‘ಕೊಪ್ಪರಿಗೆ ಏರಾವುನಿ’ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸಿ ಅನ್ನ ಬೇಯಿಸಲಾಗುತ್ತದೆ. ಮಾರ್ನೆಮಿಯ ಒಂಭತ್ತು ದಿನಗಳಲ್ಲಿಯೂ ವಿವಿಧ ವೇಷಗಳಿಂದ ವಿಶೇಷವಾಗಿ ಹುಲಿವೇಷ ಹಾಕಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿ ಉತ್ಸವಕ್ಕೆ ಮತ್ತು ಹುಲಿವೇಷಕ್ಕೆ ನೇರವಾದ ಸಂಬಂಧವಿದೆ. ಹುಲಿ ದುರ್ಗಾದೇವಿಯ ವಾಹನ. ದುರ್ಗಾಮಾತೆ ಹುಲಿಯ ಮೇಲೆ ಕುಳಿತುಕೊಂಡು ರಕ್ಕಸರನ್ನು ಸಂಹರಿಸಿದ ಸಂಕೇತವಾಗಿ ಹುಲಿವೇಷ ಹಾಕಿ ದೇವಿಯನ್ನು ಆರಾಧಿಸುತ್ತಾರೆ. ಇದು ದುಷ್ಟಶಕ್ತಿಗಳನ್ನು ನಿಗ್ರಹಿಸಿದ ಸಂಕೇತವೂ ಆಗಿದೆ.

    ತುಳುನಾಡಿನಲ್ಲಿ ಹುಲಿ ವೇಷದ ಹಿಂದೆ ಜನಪದ ಕತೆ ಇದ್ದು ಮಕ್ಕಳಲ್ಲಿ ಅಂಗವಿಕಲತೆ, ಆರೋಗ್ಯ ಸಮಸ್ಯೆ ಇದ್ದರೆ ಮಾರ್ನೆಮಿಯ ದಿನಗಳಲ್ಲಿ ಮಕ್ಕಳಿಗೆ ಹುಲಿ ವೇಷ ಹಾಕುವ ಹರಕೆ ಹೊತ್ತರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ತುಳುನಾಡಿನಲ್ಲಿ ನವರಾತ್ರಿಯನ್ನು ‘ಶಾರದಾ ಮಹೋತ್ಸವ’ ಎಂದೂ ಕರೆಯುತ್ತಾರೆ. ಐದನೇ ದಿನದ ಲಲಿತ ಪಂಚಮಿಯಂದು ವಿದ್ಯೆಯ ಅಧಿದೇವತೆಯಾದ ಶಾರದೆಯ ಪ್ರತಿಷ್ಠಾಪನೆ ಮಾಡಿ ಪುಟ್ಟ ಮಕ್ಕಳನ್ನು ಶಾರದೆಯ ಮುಂದೆ ಕೂರಿಸಿ ಅಕ್ಷರಾಭ್ಯಾಸದ ಆರಂಭ ಮಾಡಲಾಗುತ್ತದೆ. ವಿದ್ಯೆಯೇ ಬದುಕಿನ ಮೂಲಾಧಾರ. ಉತ್ತಮ ಶಿಕ್ಷಣದಲ್ಲಿಯೇ ಮಕ್ಕಳ ಉಜ್ವಲ ಭವಿಷ್ಯ ಅಡಗಿದೆ.

    ಪ್ರಸ್ತುತ ಪ್ರಪಂಚವು ಎದುರಿಸುತ್ತಿರುವ ಅತ್ಯಾಚಾರ, ದುರಾಚಾರ, ಪೈಶಾಚಿಕತ್ವ ಎಲ್ಲದರ ಪರಿಹಾರಕ್ಕೆ ದುರ್ಗಾರಾಧನೆ ಪರಿಣಾಮಕಾರಿ ಎಂದು ನಂಬಲಾಗುತ್ತದೆ. ಈ ಮುಖೇನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ, ರಾಕ್ಷಸತನದ ದಮನಕ್ಕೆ ‘ದುರ್ಗತಿಹಾರಿಣಿ ದುರ್ಗಾಮಾತೆಯ’ ಆರಾಧನೆ ಮಹತ್ವದ್ದಾಗಿದೆ. ಅಧರ್ಮದ ವಿರುದ್ಧದ ಯುದ್ಧದಲ್ಲಿ ಕೊನೆಗೆ ಧರ್ಮ ವಿಜಯದ ಸಂದೇಶವೇ ‘ದುರ್ಗಾರಾಧನೆ’
    ಸುಜ್ಞಾನದ ದೀಪ ಬೆಳಗುವ ಹಬ್ಬ ‘ದೀಪಾವಳಿ’. ರಾಷ್ಟ್ರೀಯ ಹಬ್ಬವೆಂದು ಖ್ಯಾತಿ ಪಡೆದ ‘ದೀಪಾವಳಿ’ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ದೀಪಾವಳಿ ಇತರ ಹಬ್ಬಗಳಂತೆ ಕೇವಲ ಆರಾಧನೆಯನ್ನು ಕೇಂದ್ರೀಕರಿಸುವ ಹಬ್ಬವಲ್ಲ. ಮನುಷ್ಯನ ಮನಸ್ಸಿನ ಕತ್ತಲೆಯನ್ನು ನೀಗಿಸಿ, ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಬೆಳಕಿನ ಹಣತೆ ಹಚ್ಚುವ ಮೂಲಕ ಮಾನವೀಯ ಸಂತಸಗಳನ್ನು ಸಂಭ್ರಮಿಸುವ ಹಬ್ಬ. ಜ್ಞಾನದ ಬೆಳಕೆಂದರೆ ಗುರುವಿದ್ದಂತೆ. ‘ಅರಿವೇ ಗುರು’. ಒಳ್ಳೆಯತನವನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಲೌಕಿಕ ಬದುಕಿನ ಬೆಳಕೇ ಬೆಳಕು… ಸೊಗಸೇ ಸೊಗಸು… ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿ, ದೀಪ ಮತ್ತು ಆವಳಿ ಎಂಬ ಎರಡು ಪದಗಳ ಸಂಯೋಜನೆಯಿಂದ ರೂಪುಗೊಂಡಿದೆ. ಆವಳಿ ಎಂದರೆ ಸಾಲು ಅಥವಾ ಗುಂಪು ಎಂದರ್ಥ.

    ದೀಪಾವಳಿಯೊಂದಿಗೆ ಹಲವು ಪೌರಾಣಿಕ ಕತೆಗಳು ಮಿಳಿತಗೊಂಡಿವೆ. ಶ್ರೀರಾಮಚಂದ್ರ ವಿಜಯದಶಮಿಯಂದು ರಾವಣ ಸಂಹಾರ ಮಾಡಿ ಸರಿಯಾಗಿ ಇಪ್ಪತ್ತು ದಿನಕ್ಕೆ ಲಂಕೆಯಿಂದ ಅಯೋಧ್ಯಾ ತಲುಪಿದ್ದಾನೆ ಎಂದೂ, 14 ವರ್ಷಗಳ ವನವಾಸದ ಬಳಿಕ ತಮ್ಮ ಪ್ರಭುವಿನ ಅಯೋಧ್ಯಾಗಮನದ ಸಂಭ್ರಮವಾಗಿ ಪ್ರಜೆಗಳು ಸುತ್ತಲೂ ದೀಪಗಳನ್ನು ಬೆಳಗಿ ಶ್ರೀರಾಮಚಂದ್ರನನ್ನು ಸ್ವಾಗತಿಸಿದರು ಎಂಬುದು ಪೌರಾಣಿಕ ಐತಿಹ್ಯ. ಉತ್ತರಭಾರತದ ಸುತ್ತಮುತ್ತಲಿನ ರಾಜ್ಯಗಳ ಜನರು ಇಂದಿಗೂ ಈ ನಂಬಿಕೆಯನ್ನು ಉಳಿಸಿಕೊಂಡು ಶ್ರದ್ಧಾಭಕ್ತಿಯಿಂದ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಭಾರತದ ಪೂರ್ವಭಾಗಗಳಲ್ಲಿ ಮುಖ್ಯವಾಗಿ ಪಶ್ಚಿಮಬಂಗಾಳ, ಒಡಿಶಾ, ಅಸ್ಸಾಂನಲ್ಲಿ ದೀಪಾವಳಿ ಅಮವಾಸ್ಯೆಯಂದು ಕಾಳಿದೇವಿಯನ್ನು ಆರಾಧಿಸಲಾಗುತ್ತಿದ್ದು ಈ ಪೂಜೆಯನ್ನು ‘ಶ್ಯಾಮ ಪೂಜೆ’ಯೆಂದು ಕರೆಯಲಾಗುತ್ತದೆ.

    ಮಹಾರಾಷ್ಟ್ರದಲ್ಲಿ ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲಿ ಈ ಹಬ್ಬವನ್ನು ‘ದಿವಾಳಿ’ ಎಂದು ಕರೆಯುತ್ತಾರೆ. ಮೊದಲನೇ ದಿನ ‘ಧನ್ ತೇರಸ್’ ನಂದು ಮನೆಗೆ ಬೇಕಾದ ಹೊಸವಸ್ತುಗಳನ್ನು ಖರೀದಿಸಲು ಶುಭದಿನವೆಂದು ನಂಬಲಾಗುತ್ತಿದೆ. ಮಾರನೇ ದಿನ ಬರುವ ನರಕ ಚತುರ್ದಶಿಯನ್ನು ‘ಛೋಟಿ ದಿವಾಲಿ’ ಎಂದು ಕರೆಯುತ್ತಾರೆ. ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿ ಅವನ ಬಂಧನದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ಬಂಧಮುಕ್ತಗೊಳಿಸಿದ ಸಂಭ್ರಮವನ್ನು ಲೋಕದ ಜನರು ಸೂರ್ಯೋದಯಕ್ಕೆ ಮೊದಲೇ ಎದ್ದು ಅಭ್ಯಂಜನ ಸ್ನಾನ ಮಾಡಿ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ, ಸಿಹಿ ಹಂಚುತ್ತಾರೆ. ಸಂಜೆ ಲಕ್ಷ್ಮೀ ಪೂಜೆ. ದೀಪಾವಳಿ ಅಮವಾಸ್ಯೆಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಶುಭದಾಯಕವೆಂದು ನಂಬಲಾಗುತ್ತದೆ. ದೇವಾಸುರರು ಅಮೃತ ಪ್ರಾಪ್ತಿಗಾಗಿ ಹಾಲ್ಗಡಲನ್ನು ಕಡೆವಾಗ ‘ಲಕ್ಷ್ಮೀ’ ಎಂಬ ಸಂಪತ್ತಿನ ದೇವತೆ ಉದ್ಭವವಾದ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಒಂದೊಂದು ಭಾಗದಲ್ಲಿ ಭಿನ್ನಭಿನ್ನವಾಗಿ ದೀಪಾವಳಿ ಆಚರಿಸಲಾಗುತ್ತದೆ. ಮೂರುದಿನಗಳ ದೀಪಾವಳಿ ಆಚರಣೆಯಲ್ಲಿ ನರಕ ಚತುರ್ದಶಿಯಂದು ಅಭ್ಯಂಜನ ಸ್ನಾನ, ಲಕ್ಷ್ಮೀ ಪೂಜೆಯಂದು ಗಣೇಶ ಮತ್ತು ಲಕ್ಷ್ಮೀ ಪೂಜೆ, ಮೂರನೇ ದಿನ ಬಲಿಪಾಡ್ಯಮಿಯಂದು ಬಲೀಂದ್ರ ಪೂಜೆ ಮಾಡಲಾಗುತ್ತದೆ. ಅಂದು ರೈತರು ತಮ್ಮ ಗದ್ದೆ ಸುತ್ತಲೂ ದೀಪವಿಟ್ಟು ಬಲಿಚಕ್ರವರ್ತಿಯನ್ನು ಸ್ಮರಿಸುತ್ತಾರೆ. ಅಂದು ಶಿವಪಾರ್ವತಿಯರು ಪಗಡೆಯಾಟವಾಡಿದ ಸಂಕೇತವಾಗಿ ಬಹಳಷ್ಟು ಮನೆಗಳಲ್ಲಿ ಪಗಡೆಯಾಡುವುದು ವಾಡಿಕೆ.

    ತುಳುನಾಡಿನಲ್ಲಿ ನಾಲ್ಕು ದಿನಗಳ ಕಾಲ ದೀಪಾವಳಿ ಆಚರಿಸಲಾಗುತ್ತದೆ. ಮನೆಗಳ ಸುತ್ತಲೂ ದೀಪಗಳನ್ನು ಬೆಳಗಿ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಲಾಗುತ್ತದೆ. ಮೊದಲ ದಿನ ಸಂಧ್ಯಾಕಾಲದಲ್ಲಿ ನೀರು ತುಂಬುವ ಹಬ್ಬ, ಮಾರನೇ ದಿನ ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮೊದಲೇ ಅಭ್ಯಂಜನ ಸ್ನಾನ, ಮೂರನೇ ದಿನ ಲಕ್ಷ್ಮೀ ಪೂಜೆಯಂದು ಮನೆಮನೆಗಳಲ್ಲಿ ಪೂಜಾ ಸಂಭ್ರಮ, ಅಂದು ವರ್ತಕರು ಲಕ್ಷ್ಮೀ ಪೂಜೆ ಮಾಡಿ ಹೊಸ ಲೆಕ್ಕಗಳನ್ನು ಪ್ರಾರಂಭಿಸುವ ಪರಿಪಾಠ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ನಾಲ್ಕನೆಯ ದಿನ ಗೋಪೂಜೆ ಮತ್ತು ಬಲೀಂದ್ರ ಪೂಜೆ. ಅಂದು ಹಸುಗಳನ್ನು ಮೀಯಿಸಿ ಅರತಿ ಬೆಳಗಿ ಸಿಹಿ ತಿನ್ನಿಸಲಾಗುತ್ತದೆ. ರೈತರು ಸಂಜೆ ಹೊತ್ತು ಗದ್ದೆತೋಟಗಳ ಅಂಚಿನಲ್ಲಿ ಸಾಲು ದೀಪಗಳನ್ನು ಬೆಳಗಿ ಬಲೀಂದ್ರನನ್ನು ಕರೆಯುತ್ತಾರೆ. ಈ ಪದ್ಧತಿ ಫಲವಂತಿಕೆಯನ್ನು ನೀಡುವ ಶಕ್ತಿಮಾತೆಯ ಆರಾಧನಾ ಕ್ರಮವಾಗಿದೆ.

    ಒಟ್ಟಿನಲ್ಲಿ ದೀಪಾವಳಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಮನೆಮಂದಿಗೆ ಹೊಸಬಟ್ಟೆ, ಹೊಸ ವಸ್ತುಗಳ ಖರೀದಿ, ಮಹಿಳೆಯರಿಗೆ ಬಗೆಬಗೆಯ ಸಿಹಿತಿನಿಸುಗಳ ತಯಾರಿಯ ಸಂಭ್ರಮ ಜೊತೆಗೆ ಬಣ್ಣಬಣ್ಣದ ಗೂಡುದೀಪಗಳ ತಯಾರಿ, ಮಕ್ಕಳಿಗೆ ಕಿವಿಗಡಚಿಕ್ಕುವ ಪಟಾಕಿ ಸುಡುವ ಸಂಭ್ರಮವೇ ಸಂಭ್ರಮ…. ವಿವಿಧ ಧರ್ಮಗಳ, ವೈವಿಧ್ಯಮಯ ಸಂಸ್ಕೃತಿಯ ಭಾರತದಲ್ಲಿ ದೀಪಾವಳಿ ಬರಿಯ ದೀಪಗಳ ಹಬ್ಬವಲ್ಲ. ನಂಬಿಕೆ-ಆಚರಣೆ, ಪುರಾಣ ಕಥನಗಳ ಮಿಳಿತದೊಂದಿಗೆ ಪ್ರಕೃತಿಯೊಂದಿಗಿನ ಅನುಸಂಧಾನದ ಪರ್ವ ದಿನವಾಗಿದೆ. ಮಾನವೀಯ ಸಂಬಂಧಗಳನ್ನು ಬೆಸೆದು ಚಿರನೂತನಗೊಳಿಸುವ ಸಂಭ್ರಮದ ಹಬ್ಬವಾಗಿದೆ.

    ಸುಖಲಾಕ್ಷಿ ವೈ. ಸುವರ್ಣ

  • ‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

    ‘ಬೂಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ರಿಂದ ದಸರಾ ಮಹೋತ್ಸವಕ್ಕೆ ಚಾಲನೆ

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಸ್ತಾಕ್ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

    ನಗರದ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ರಾಜ್ಯದಲ್ಲಿ ಕೋಮು ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಭಾಷಾ ಸಾಮರಸ್ಯದ ಅಗತ್ಯವನ್ನು ಮತ್ತೊಮ್ಮೆ ಸಾರಿ ಹೇಳಿತು. ‘ಜೈ ಹಿಂದ್ ,‌ ‘ಜೈ ಕರ್ನಾಟಕ’ ದ ಜೊತೆಗೆ ‘ಜೈ ಸಂವಿಧಾನ’ ಎಂಬ ಘೋಷಣೆಯೂ ಮೊಳಗಿತು.
    ಕುವೆಂಪು‌ ಅವರ ನಾಡಗೀತೆಯ ‘ಸರ್ವ ಜನಾಂಗದ ಶಾಂತಿಯ ತೋಟ’ ನುಡಿ ಸಾಲು ಕಾರ್ಯಕ್ರಮದ ಆರಂಭದಿಂದ ಕೊನೆವರೆಗೂ ಅನುರಣಿಸಿತು. ದಸರಾ ಎಲ್ಲ‌ ಜಾತಿ,‌ ಧರ್ಮಗಳ‌ ಜನರ‌ ಹಬ್ಬ ಎಂಬ ಸಂದೇಶವನ್ನೂ ಕೊಟ್ಟಿತು.

    ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಳಿಕ ದಸರಾ ಉದ್ಘಾಟಿಸಲು ಆಯ್ಕೆಯಾದ ದಿನದಿಂದಲೂ ನಾಡಿನಾದ್ಯಂತ ಗಮನ ಸೆಳೆದು, ವಿರೋಧಿಗಳಿಗೆ ಸಂವಿಧಾನದ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ ನೆನಪಿಸುವ ಸನ್ನಿವೇಶಕ್ಕೂ ಕಾರಣವಾಗಿದ್ದ ಲೇಖಕಿ ಬಾನು ಮುಷ್ತಾಕ್‌, ಉತ್ಸವಕ್ಕೆ ಚಾಲನೆ ನೀಡಿದರು.

    ನವರಾತ್ರಿ ಆಚರಣೆಯ ಮೊದಲ‌ ದಿನದ ಬಣ್ಣವಾದ ಹಳದಿ ಸೀರೆಯನ್ನು ಉಟ್ಟಿದ್ದ ಅವರು ತಮ್ಮ ಪ್ರತಿ ಮಾತಿನಲ್ಲೂ ಸಾಮರಸ್ಯದ ಕುರಿತು ಒತ್ತಿ ಹೇಳಿದರು. ಮುಖ್ಯಮಂತ್ರಿ‌ ಸಿದ್ದರಾಮಯ್ಯ ಆದಿಯಾಗಿ ಮಾತನಾಡಿದ ಎಲ್ಲರೂ ಸೌಹಾರ್ದವನ್ನೇ ಪ್ರತಿಪಾದಿಸಿದರು.

    ಮಾತು ಆರಂಭಿಸಿದ‌ ಬಾನು ಮುಷ್ತಾಕ್, “ಸರ್ವ ಜನಾಂಗದ ತೋಟವಾದ ನಾಡಿನಲ್ಲಿ ಪ್ರತಿ ಹೂ ತನ್ನ‌ ಬಣ್ಣದಲ್ಲೆ ಅರಳಲಿ, ತನ್ನ ಸುವಾಸನೆಯನ್ನೇ ಬೀರಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಎಲ್ಲವೂ ಒಟ್ಟಾದಾಗ ಸೌಹಾರ್ದದ ಹಾಡಾಗಲಿ” ಎಂದು ಆಶಿಸಿದರು.

    “ನಾವೆಲ್ಲರೂ ಒಂದೇ ಗಗನದ ಅಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿಯು ಯಾರನ್ನೂ ಹೊರತಳ್ಳುವುದಿಲ್ಲ. ಆದರೆ ಮನುಷ್ಯರು ಮಾತ್ರ ಗಡಿಗಳನ್ನು ಸೃಷ್ಟಿಸುತ್ತಾರೆ” ಎಂದು‌ ವಿಷಾದಿಸಿದ ಅವರು, ಸೌಹಾರ್ದ, ಸಮಾನತೆಗಾಗಿ ಶ್ರಮಿಸಿದ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ ಗಮನ ಸೆಳೆದರು.

    “ದಸರೆ ಎಂದರೆ ಹಬ್ಬವಷ್ಟೇ ಅಲ್ಲ. ನಾಡಿನ ನಾಡಿ ಮಿಡಿತ, ಸಂಸ್ಕೃತಿಯ ಉತ್ಸವ. ಇದು ಎಲ್ಲರನ್ನೂ ಒಳಗೊಳ್ಳುವ ಘಳಿಗೆ.‌ ಸಮನ್ವಯ ಮೇಳ. ವಿವಿಧತೆಯಲ್ಲಿ ಏಕತೆ ಇರುವ ಸುಗಂಧ” ಎಂದು‌ ಬಣ್ಣಿಸಿದರು.
    “ನವರಾತ್ರಿಯಲ್ಲಿ ಉರ್ದು ಭಾಷಿಕರು ತಮ್ಮ ಗುರುತನ್ನು ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದಲ್ಲಿ ವಾಸವಿದ್ದ ನನ್ನ ಆಪ್ತ ಸಂಬಂಧಿ ಮೊಹಮದ್ ಗೌಸ್ ಎಂಬುವವರು ಮೈಸೂರು ಮಹಾರಾಜರ ಅಂಗರಕ್ಷಕ‌ ಪಡೆಯ ಸೈನಿಕರಾಗಿದ್ದರು. ಅಂಥ ಹಲವರು ಅಂಗರಕ್ಷಕ ಪಡೆಯಲ್ಲಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿ ಅಂಗರಕ್ಷಕ ಪಡೆಗೆ ನೇಮಿಸಿಕೊಂಡಿದ್ದರು. ಇದು‌ ಅವಿಸ್ಮರಣೀಯವಾದ ಹೆಮ್ಮೆ” ಎಂದು ಸ್ಮರಿಸಿದರು.
    “ನಮ್ಮ ಸಂಸ್ಕೃತಿಯು ಹೃದಯಗಳನ್ನು ಒಂದುಗೂಡಿಸುವಂಥದ್ದು, ದ್ವೇಷಗಳನ್ನು ಬೆಳೆಸುವಂಥದ್ದಲ್ಲ, ಪ್ರೀತಿಯನ್ನು ಹರಡುವಂಥದ್ದು” ಎಂದು‌ ಪ್ರತಿಪಾದಿಸಿದರು.
    “ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಲ್ಲ.‌ ಅದೊಂದು ಮೌಲ್ಯ. ಅದನ್ನು ಗೌರವಿಸೋಣ. ಈ ನೆಲದಲ್ಲಿ ಸೌಹಾರ್ದದ ಕುರುಹುಗಳಿವೆ. ಇಲ್ಲಿನ‌ ಬಿಸಿಲು ಕೂಡ ಮಾನವೀಯತೆಯ ಪ್ರತೀಕವಾಗಿದೆ. ‌ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಯನ್ನು ನಾಶ ಮಾಡಲಿ” ಎಂದು ಆಶಿಸಿದರು.
    “ದಸರಾ ಮೈಸೂರು ನಗರ, ನಾಡು ಹಾಗೂ ದೇಶಕ್ಕಷ್ಟೇ ಸೀಮಿತವಾಗದೆ, ಇಡೀ ಜಗತ್ತಿನಾದ್ಯಂತ ಶಾಂತಿ, ಸೌಹಾರ್ದ, ಪ್ರೀತಿಯ ದೀಪವಾಗಿ ನೆಲೆ ಕಂಡುಕೊಳ್ಳಲಿ” ಎಂದರು.
    “ನನ್ನ ಬದುಕು ನನಗೆ ಹಲವು ಪಾಠಗಳನ್ನು ಕಲಿಸಿದೆ. ವ್ಯಷ್ಟಿಯಿಂದ ಸಮಷ್ಟಿಯತ್ತ ಸಾಗುವುದೇ ನಿಜವಾದ ದಾರಿ ಎಂಬುದು ಅದರಲ್ಲೊಂದು. ನನ್ನ ಧಾರ್ಮಿಕ ನಂಬಿಕೆ, ಜೀವನ‌ದರ್ಶನ ಜೀವಪರವಾಗಿದೆ.‌ ಅದು ಮರದ‌ ನೆರಳಂತೆ, ತಂಪಾದ ನದಿಯಂತೆ. ಅಸ್ತ್ರದ ಬದಲು ಅಕ್ಷರದಿಂದ, ಹಗೆಯ ಬದಲು ಪ್ರೀತಿಯಿಂದ ಗೆಲ್ಲುವಂಥದ್ದು” ಎಂದು ಪ್ರತಿಪಾದಿಸಿದರು.

    ಹತ್ತು‌ ವರ್ಷದ ಹಿಂದೆ ಬರೆದ ‘ಬಾಗಿನ’ ಕವಿತೆಯನ್ನು ಭಾಷಣದ ಕೊನೆಗೆ ಓದಿದ ಅವರು,‌ ಬಾಗಿನ ಪಡೆದ ಮುಸ್ಲಿಂ‌ ಮಹಿಳೆಯಲ್ಲಿ ಮೂಡುವ ಭಾವನೆಗಳನ್ನು ಬಣ್ಣಿಸಿದರು.

    ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ‌ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದವರ ಅರ್ಜಿಯನ್ನು ವಜಾಗೊಳಿಸುವ ವೇಳೆಯಲ್ಲಿ, ಸುಪ್ರೀಂ ಕೋರ್ಟ್ ಸಂವಿಧಾನದ ಪ್ರಸ್ತಾವನೆಯನ್ನು ಓದುವಂತೆ ಅರ್ಜಿದಾರರಿಗೆ ಹೇಳಿದ್ದನ್ನು ಉಲ್ಲೇಖಿಸಿದರು. “ರಾಜ್ಯ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಸಂವಿಧಾನದ ಪರವಾಗಿಯೇ ಇದೆ. ಎಲ್ಲರೂ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಗಳು ಎಂದು ಪ್ರತಿಪಾದಿಸಿದರು. ಶಾಸಕ ಜಿ.ಟಿ.ದೇವೇಗೌಡ ಅವರೂ ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು.

    ‘ಓಲೈಕೆ ರಾಜಕಾರಣ ಬೇಡ; ಸಿದ್ದರಾಮಯ್ಯ
    “ಯಾರನ್ನೋ ಓಲೈಸಿ, ರಾಜಕಾರಣ ಮಾಡಲು ನಾಡಹಬ್ಬವನ್ನು ವಿರೋಧಿಸುವುದು ಸಂವಿಧಾನಕ್ಕೆ, ದೇಶಕ್ಕೆ ಮಾಡುವ ಅಪಚಾರ, ಅಕ್ಷಮ್ಯ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

    ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಮಾತನಾಡಿ ಸಭಿಕರನ್ನು ಹಿಡಿದಿಟ್ಟ ಅವರು, “ರಾಜಕಾರಣ ಮಾಡಲು ಬೇರೆ ಸ್ಥಳ,‌ ಸಂದರ್ಭಗಳಿವೆ.‌ ಗೋಡಾ ಹೈ,‌ ಮೈದಾನ್ ಹೈ. ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕೇ ಹೊರತು, ದಸರೆಯಂಥ ಉತ್ಸವದಲ್ಲಿ ಅಲ್ಲ” ಎಂದರು.
    “ಬಾನು ಮುಷ್ತಾಕ್‌ ಅವರು ದಸರೆ ಉದ್ಘಾಟಿಸಿದ್ದು ಸರಿಯಾಗಿಯೇ ಇದೆ” ಮತ್ತೊಮ್ಮೆ ಸಮರ್ಥಿಸಿಕೊಂಡರು. ಬಾನು ಅವರ ಕತೆಗಳ ಅನುವಾದಕಿ ದೀಪಾ ಭಾಸ್ತಿಯವರನ್ನೂ ಉಲ್ಲೇಖಿಸಿದರು.

    ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

    ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಕುರಿತು ಬಿಜೆಪಿ ಹಾಗೂ ಹಿಂದುತ್ವದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಸಮಯದಲ್ಲಿ ‘ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂಬ ಹೇಳಿಕೆ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬೆಟ್ಟಕ್ಕೆ ಹೆಚ್ಚುವರಿ ಭದ್ರತೆ ಒದಗಿಸಿದೆ. ಕ್ಷಿಪ್ರ ಕಾರ್ಯಾಚರಣಾ ಪಡೆಯನ್ನೂ ನಿಯೋಜಿಸಲಾಗಿದೆ.

  • ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಪೀಲೆ ಖ್ಯಾತಿಯ ಫೆಲೆಸ್ತೀನಿಯನ್ ಫುಟ್ಬಾಲ್ ಆಟಗಾರ ಸುಲೈಮಾನ್ ಹ*ತ್ಯೆ

    ಸುಲೈಮಾನ್ ಅಲ್-ಉಬೈದ್ – ಪ್ಯಾಲೆಸ್ಟೀನಿಯನ್ ಪೀಲೆ ಎಂಬ ಪ್ರಸಿದ್ಧಿ ಪಡೆದ ಹೆಮ್ಮೆಯ ಆಟಗಾರ. ಗಾಝಾ ಸಮುದ್ರ ಕಿನಾರೆಯ ಮರಳಿನ ಮೇಲೆ ಚೆಂಡನ್ನು ಒದೆಯಲು ಪ್ರಾರಂಭಿಸಿ, ನಂತರ ಬೀಚ್ ಸರ್ವೀಸಸ್ ಕ್ಲಬ್‌ನಲ್ಲಿ ಗಾಝಾ ಸ್ಪೋರ್ಟ್ಸ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ರಾಷ್ಟಿçÃಯ ತಂಡಕ್ಕಾಗಿ ನೂರಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಸುಲೈಮಾನ್, 2010ರ ಪಶ್ಚಿಮ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಯೆಮೆನ್ ವಿರುದ್ಧದ ತನ್ನ ಕತ್ತರಿ ಕಿಕ್ ಗೋಲಿನೊಂದಿಗೆ ಮತ್ತೆ ಸೆಲೆಬ್ರಿಟಿಯಾದರು. ಅವರು ಸ್ಥಳೀಯ ಮಕ್ಕಳಿಗೆ ತರಬೇತುದಾರರಾಗಿದ್ದಾರಲ್ಲದೆ 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ಯಾಲೆಸ್ಟೀನಿಯನ್ ಧ್ವಜವನ್ನು ಹೊತ್ತಿದ್ದರು.

    ಇಷ್ಟೆಲ್ಲಾ ಇದ್ದು ಕೊನೆಗೆ ಏನಾಯಿತು? ಅವರು ಹುಟ್ಟಿದ ಸ್ಥಳ ಗಾಝಾ ಆಗಿಹೋಯಿತು. ಕಲೆ/ಕ್ರೀಡೆಗಳ ಮೇಲಿನ ಪ್ರೀತಿಯು ಮಾನವೀಯತೆ ಹೊಂದಿರುವವರಿಗೆ ಮಾತ್ರ ಇರುವ ಗುಣಗಳಾಗಿವೆ. ಹಸಿವಿನ ಬೆಂಕಿಯ ವಿರುದ್ಧ ಹೋರಾಡುತ್ತಿರುವ ಗಾಝಾದ ಮಕ್ಕಳನ್ನು ಜನಾಂಗೀಯ ಬಾಣಲೆಯಲ್ಲಿ ಉರಿಯುವ ಪೈಶಾಚಿಕ ವೀರರಿಗೆ ಫುಟ್‌ಬಾಲ್ ಆದರೇನು? ಅದರ ಆಟಗಾರ ಆದರೇನು ಮುಗ್ಧ ಮಕ್ಕಳಾದರೇನು ಎಲ್ಲವೂ ಒಂದೇ, ಸುಲೈಮಾನ್ ಅಲ್-ಉಬೈದ್ ಅವರ ದೃಷ್ಟಿಯಲ್ಲಿ ಕೇವಲ ಮರಣ ಕೂಪಕ್ಕೆ ಒದೆಯಲ್ಪಡಬೇಕಾದ ಓರ್ವ ಗಾಝಾದ ವ್ಯಕ್ತಿ ಮಾತ್ರ. ಇತ್ತೀಚೆಗೆ ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸಿದ ಶೆಲ್ ದಾಳಿಯಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದ ವಿಶ್ವವಿಖ್ಯಾತ ಆಟಗಾರ ಕೊಲ್ಲಲ್ಪಟ್ಟರು. ಫೆಲಸ್ತೀನ್‌ನಲ್ಲಿ ಕೊಲ್ಲಲ್ಪಟ್ಟ 61400 ಮನುಷ್ಯರ ಪೈಕಿ ಒಂದು ಅಂಕೆ ಆದರು.

    ಫೆಲೆಸ್ತೀನ್‌ನಲ್ಲಿ ಹುತಾತ್ಮರಾದ ಸಾವಿರಾರು ಫೆಲೆಸ್ತೀನಿಯನ್ನರಂತೆ, ಸುಲೇಮಾನ್ ಸುಂದರ ಜೀವನದ ಕನಸು ಕಂಡಿದ್ದರು. ಫುಟ್‌ಬಾಲ್ ಅವರ ಸರ್ವಸ್ವವಾಗಿತ್ತು. ಗಾಝಾ ಯುದ್ಧಭೂಮಿಯಲ್ಲಿ ಇಸ್ರೇಲಿ ಬೆಂಕಿಯ ಮಳೆ ಸುರಿಯುತ್ತಿದ್ದಾಗ ಫುಟ್‌ಬಾಲ್ ಆಡುತ್ತಿದ್ದ ಸುಲೇಮಾನ್‌ಗೆ, ಅವನ ಹೆಂಡತಿ ದುವಾ ಮತ್ತು ಐದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಜವಾಬ್ದಾರಿ ಇತ್ತು ಐವತ್ತು ವರ್ಷದವರೆಗೆ ಫುಟ್‌ಬಾಲ್ ಆಡುವುದು, ತನ್ನ ಮಕ್ಕಳನ್ನು ರಾಷ್ಟ್ರ ಹೆಮ್ಮೆಪಡುವಂತಹ ವ್ಯಕ್ತಿತ್ವಗಳಾಗಿ ಬೆಳೆಸುವುದು – ಇವು ನಲವತ್ತೊಂದು ವರ್ಷದ ಸುಲೇಮಾನ್ ಕನಸಾಗಿತ್ತು. ಕಲಾವಿದರು, ಕ್ರೀಡಾಪಟುಗಳು, ವಿವಿಧ ತಜ್ಞರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದಂತೆ ಫೆಲೆಸ್ತೀನಿಯನ್ನರು ಸಾವು ಬರುವವರೆಗೂ ಇಂತಹ ಸುಂದರ ಕನಸಿನೊಂದಿಗೆ ಬದುಕುತ್ತಿರುತ್ತಾರೆ.

    ಕುಟುಂಬದ ಹಸಿವು ತಣಿಸಲು ಸುಲೇಮಾನ್ ನಿರಾಶ್ರಿತರ ಶಿಬಿರದ ಬಳಿಯ ಆಹಾರ ವಿತರಣಾ ಕೇಂದ್ರದಲ್ಲಿ ಸರದಿಯಲ್ಲಿ ಕಾಯುತ್ತಿದ್ದರು. ಆಹಾರಕ್ಕಾಗಿ ಸರದಿ ಸಾಲಿನಲ್ಲಿ ನಿಂತವರ ಮೇಲೆ ಪ್ರಪಂಚದ ಮೌನ ಬೆಂಬಲದೊಂದಿಗೆ ಜಿಯೋನಿಸ್ಟ್ ಸೈನ್ಯವು ಕ್ಷಿಪಣಿಗಳ ಮಳೆ ಸುರಿಸಿದಾಗ ಕೊಲ್ಲಲ್ಪಟ್ಟ 1,500 ಜನರಲ್ಲಿ ಸುಲೇಮಾನ್ ಅಲ್-ಒಬೈದ್ ಒಬ್ಬರು. ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (UEFA) ಕಾಟಾಚಾರಕ್ಕೆ ಎರಡು ಗೆರೆಯ ಸಂತಾಪ ಸೂಚಿಸಿತು. “ಫೆಲಸ್ತೀನ್ ಪೀಲೆ ಸುಲೇಮಾನ್ ಅಲ್-ಒಬೈದ್‌ಗೆ ಭಾವಪೂರ್ಣ ವಿದಾಯ ಅವರು ಕತ್ತಲೆಯ ಕಾಲದಲ್ಲೂ ಅಸಂಖ್ಯಾತ ಮಕ್ಕಳಿಗೆ ಭರವಸೆಯ ಕಿರಣ ಮೂಡಿಸಿದ ಪ್ರತಿಭಾವಂತ” ಎಂದು UEFAಯ Xನಲ್ಲಿ ಬರೆಯಿತು. ಈ ಸಂದೇಶವು ಸುಲೇಮಾನ್, ಗಾಝಾವನ್ನು ಪ್ರೀತಿಸುವ ಮತ್ತು ಮಾನವೀಯತೆಯನ್ನು ಪ್ರೀತಿಸುವವರಿಗೆ ಅರಗಿಸಿಕೊಳ್ಳಲಾಗಲಿಲ್ಲ.

    ಸುಲೇಮಾನ್ ನಿವೃತ್ತರಾದದ್ದಲ್ಲ, ಅವರು ವೃದ್ಧಾಪ್ಯದಿಂದ ಸಾಯಲಿಲ್ಲ, ಅವರು ಮೈದಾನದಲ್ಲಿ ಆಘಾತದಿಂದ ಸತ್ತದ್ದಲ್ಲ. ಅವರನ್ನು ಇಸ್ರೇಲ್ ಎಂಬ ಕ್ರೂರ ಸೈನ್ಯವು ಕೊಂದು ಹಾಕಿದ್ದು ಎಂಬುದು ಹಾಡು ಹಗಲಿನಂತೆ ಸ್ಪಷ್ಟವಾಗಿದ್ದರೂ ಕೊಂದ ಹಂತಕರ ಹೆಸರನ್ನು ಉಲ್ಲೇಖಿಸಲು ಹಿಂಜರಿಕೆ ಏಕೆ ಎಂಬುದೇ ಎಲ್ಲರ ಪ್ರತಿಕ್ರಿಯೆಯಾಗಿತ್ತು. ಫೆಲೆಸ್ತೀನ್‌ನ ಎಲ್ಲಾ ಕಹಿ ಮತ್ತು ನೋವನ್ನು ತನ್ನ ಎದೆಗೆ ಹಾಕಿಕೊಂಡಿರುವ ಲಿವರ್‌ಪೂಲ್‌ನ ಈಜಿಪ್ಟ್ ತಾರೆ ಮೊಹಮ್ಮದ್ ಸಲಾಹ್, UEFA ಅಥವಾ ಅವರಂತೆಯೇ ನಿದ್ರಿಸುತ್ತಿರುವ ಇಡೀ ಜಗತ್ತನ್ನು ಕೇಳುತ್ತಿದ್ದಾರೆ, “ಅವರು ಎಲ್ಲಿ, ಹೇಗೆ ಮತ್ತು ಏಕೆ ಸತ್ತರು ಎಂದು ನೀವು ನಮಗೆ ಹೇಳಬಲ್ಲಿರಾ?” ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದ ಸಂದೇಶವಾಗಿತ್ತದು, ಇಸ್ರೇಲಿಗೆ ಮಾಮೂಲಿಯಾಗಿದ್ದ ಒಂದು ಹತ್ಯೆಯನ್ನು ಜಗತ್ತನ್ನು ನಡುಗಿಸುವ ಪ್ರಶ್ನೆಯನ್ನಾಗಿ ಪರಿವರ್ತಿಸಲು ಇದಕ್ಕೆ ಸಾಧ್ಯವಾಯಿತು.

    ಜಿಯೋನಿಸ್ಟ್ ಭಯೋತ್ಪಾದನೆಯ ವಿರುದ್ಧ ಮೊದಲ ದಿನದಿಂದಲೂ ಸಲಾಹ್ ಫೆಲಸ್ತೀನಿಯನ್ನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

    ಮುಗ್ಧ ಜೀವಗಳು ಸೇರಿದಂತೆ 62,000ಕ್ಕೂ ಹೆಚ್ಚು ಮಾನವ ಜೀವಗಳ ಸಾಮೂಹಿಕ ಹತ್ಯೆಯ ಹೊರತಾಗಿಯೂ ರಕ್ತಪಿಪಾಸು ಆಗಿಯೇ ತನ್ನ ಆಕ್ರಮಣವನ್ನು ಮುಂದುವರಿಸುತ್ತಿರುವ ಇಸ್ರೇಲ್ ಅನ್ನು ತಹಬಂದಿಗೆ ತರಲು ಜಗತ್ತಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಅವರ ಪ್ರಶ್ನೆ.

    ಅತ್ಯಂತ ಸಣ್ಣ ಪ್ರದೇಶದಲ್ಲಿ. ಯುದ್ಧ ಭೀತಿಯ ನಡುವೆ, ನಿರಂತರ ದಿಗ್ಬಂಧನದ ನಡುವೆಯೂ ಅದನ್ನು ಲೆಕ್ಕಿಸದೆ ತಾವು ಇಷ್ಟಪಟ್ಟ ರಂಗಗಳಲ್ಲಿ ಗಾಝಾದ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅತ್ಯುತ್ತಮ ವೈದ್ಯಕೀಯ ತಜ್ಞರು, ಪ್ರಸಿದ್ಧ ಶಿಕ್ಷಣ ತಜ್ಞರು, ಅಂತರಾಷ್ಟಿçÃಯವಾಗಿ ಗುರುತಿಸಲ್ಪಟ್ಟ ಕಲಾವಿದರು ಮತ್ತು ಪತ್ರಕರ್ತರು ಮರಣ ಭೀತಿಯ ನಡುವೆಯು ಫುಟ್ಬಾಲ್ ಮತ್ತು ಅಥ್ಲೆಟಿಕ್ಸ್ಗೆ ತಮ್ಮನ್ನು ಅರ್ಪಿಸಿಕೊಂಡ ಯುವಕರು… ಹೀಗೆ ಗಾಝಾದ ಜನತೆಯು ವಿಶ್ವದ ಅಸಾಧಾರಣ ಹಾಗೂ ಅದ್ಭುತವಾದ ಮಾನವ ಸಂಪನ್ಮೂಲವಾಗಿದೆ.

    ಇಸ್ರೇಲ್, ಕ್ಷಿಪಣಿಗಳು ಮತ್ತು ಹಸಿವಿನಿಂದ ಅವರನ್ನು ನಾಶಪಡಿಸುತ್ತಿದೆ ಅವರು ಇಲ್ಲಿಯವರೆಗೆ ಗಾಝಾದಲ್ಲಿ 103 ಮಕ್ಕಳು ಸೇರಿದಂತೆ 421 ಫುಟ್ಬಾಲ್ ಆಟಗಾರರನ್ನು ಕೊಂದಿದ್ದಾರೆ. ದೊಡ್ಡ ಕ್ರೀಡಾಂಗಣಗಳು ಮತ್ತು ಸಣ್ಣವುಗಳು ಸೇರಿದಂತೆ 268 ಕ್ರೀಡಾಂಗಣಗಳನ್ನು ಕೆಡವಿದ್ದಾರೆ. ಝಿಯೋನಿಸ್ಟ್ ನರಮೇಧವು ಗಾಝಾದಲ್ಲಿ ಹತ್ತಾರು ಸಾವಿರ ಮುಗ್ಧ ಜನರನ್ನು ಕೊಲ್ಲುತ್ತಿದೆ. ಹಸಿವು ಹಾಗೂ ಬಾಂಬುಗಳ ಭೀತಿಯ ನಡುವೆ ಅವರು ನಿರ್ಮಿಸಿರುವ ಮಹಾನ್ ಮಾನವ ನಾಗರಿಕತೆಯನ್ನು ಸಹ ನಾಶಪಡಿಸುತ್ತಿದೆ. ಮೊಹಮ್ಮದ್ ಸಲಾಹ್ ಅವರು ಎತ್ತಿರುವ ಪ್ರಶ್ನೆಯು ಒಂದು ಸಣ್ಣ ಬೆರಳನ್ನು ಎತ್ತಲೂ ಕೂಡ ಸಾಧ್ಯವಾಗದೇ ಲೋಕದಲ್ಲಿ ಮೆರೆದಾಡುತ್ತಿರುವ ಅಧಿಕಾರ ಶಾಹಿ ಜಗತ್ತಿನ ಮುಂದೆ, ಅದರ ಕಪಟತೆಯ ವಿರುದ್ಧ ಬೀಸಿದ ಚಾಟಿಯೇಟು ಆಗಿದೆ.
    ಮುರ್ಶಿದ್ ಅಲಿ

  • “ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” 
ರಾಹುಲ್ ಗಾಂಧಿ Press Meet

    “ಪ್ರಜಾತಂತ್ರವನ್ನು ಸಾಂವಿಧಾನಿಕ ಸಂಸ್ಥೆಗಳು ರಕ್ಷಿಸದ್ದರಿಂದ ನಾನು ಮುಂದೆ ಬಂದಿದ್ದೇನೆ” ರಾಹುಲ್ ಗಾಂಧಿ Press Meet

    ‘ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದ್ದು, ಮತಗಳ್ಳರು ಮತ್ತು ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

    ಇಂದಿರಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಚುನಾವಣಾ ಆಯೋಗವು ಇದನ್ನು ಮೊದಲು ನಿಲ್ಲಿಸಬೇಕು. ಮತದಾರರ ಹೆಸರು ಅಳಿಸಿಹಾಕಿದ್ದರ ಕುರಿತು ಕರ್ನಾಟಕ ಸಿಐಡಿ ಕೇಳಿರುವ ಮಾಹಿತಿಯನ್ನು ಚುನಾವಣಾ ಆಯೋಗವು ತಕ್ಷಣ ಒದಗಿಸಬೇಕು’ ಎಂದು ಆಗ್ರಹಿಸಿದರು.

    ‘ದೇಶದಲ್ಲಿ ಹೇಗೆ ಚುನಾವಣಾ ಅಕ್ರಮಗಳು ನಡೆಯುತ್ತವೆ ಎಂಬುದನ್ನು ಅರಿಯಲು ಇಂದಿನ ಯುವ ಸಮುದಾಯಕ್ಕೆ ಇದೊಂದು ಮಹತ್ವದ ಉದಾಹರಣೆಯಾಗಿದೆ. ನಾನು ಈ ಹಿಂದೆ ಭರವಸೆ ನೀಡಿದ ‘ಹೈಡ್ರೊಜೆನ್ ಬಾಂಬ್’ ಇದಲ್ಲ. ಅದು ಅತಿ ಶೀಘ್ರದಲ್ಲಿ ಬರಲಿದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ‘ಕರ್ನಾಟಕದ ಅಳಂದದಲ್ಲಿ 2023ರ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಅಳಿಸಿಹಾಕುವ ಯತ್ನ ನಡೆದಿದೆ. ಮತ್ತೊಂದೆಡೆ ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ ಸ್ವಯಂಚಾಲಿತ ತಂತ್ರಾಂಶ ಬಳಸಿ ಕುತಂತ್ರದಿಂದ ಮತಗಳನ್ನು ಸೇರಿಸುವ ಪ್ರಯತ್ನ ನಡೆದಿದೆ. ಈ ಎಲ್ಲಾ ಕೃತ್ಯಗಳಿಗೂ ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಾನು ಗಂಭೀರ ಆರೋಪ ಮಾಡುತ್ತಿದ್ದೇನೆ. ಇದನ್ನು ಹಗುರವಾಗಿ ಪರಿಗಣಿಸಬೇಡಿ. ಚುನಾವಣಾ ಆಯೋಗವು ಮತಗಳ್ಳರನ್ನು ರಕ್ಷಿಸುತ್ತಿದೆ. ಈ ಕಳ್ಳರೇ ಭಾರತದ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

    ಸಿಐಡಿ 18 ಬಾರಿ ಕೇಳಿದ ಐಪಿ ವಿಳಾಸ, ಒಟಿಪಿ ಏಕೆ ನೀಡಿಲ್ಲ…?: ರಾಹುಲ್‘

    ಭಾರತದಲ್ಲಿ ಲಕ್ಷಾಂತರ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಲು ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕನಾಗಿರುವ ನಾನು ಶೇ 100ರಷ್ಟು ಪುರಾವೆಗಳಿಲ್ಲದೆ ಏನನ್ನೂ ಹೇಳುವುದಿಲ್ಲ. ಅಳಂದದಲ್ಲಿ 6,018 ಮತಗಳನ್ನು ಅಳಿಸಿಹಾಕಲು ಯಾರೋ ಪ್ರಯತ್ನಿಸಿದ್ದರು. ಆದರೆ ಕಾಕತಾಳೀಯ ಎಂಬಂತೆ ಸಿಕ್ಕಿಬಿದ್ದರು. ತಮ್ಮ ಚಿಕ್ಕಪ್ಪನ ಹೆಸರೇ ಪಟ್ಟಿಯಲ್ಲಿ ಇಲ್ಲದಿರುವುದನ್ನು ಬೂತ್ ಮಟ್ಟದ ಅಧಿಕಾರಿ ಗಮನಿಸಿದ್ದಾರೆ. ಆದರೆ ಇದರ ಹಿಂದೆ ಬೇರೆ ಯಾವುದೋ ‘ಶಕ್ತಿ’ ಇದೆ’ ಎಂದಿದ್ದಾರೆ.

    ‘ಮತದಾರರಂತೆ ನಟಿಸಿ 6,018 ಅರ್ಜಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕಕ್ಕೆ ಸೇರದ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಈ ಅರ್ಜಿಗಳು ಸ್ವಯಂಚಾಲಿತ ತಂತ್ರಾಂಶದ ಮೂಲಕ ದಾಖಲಿಸಿಕೊಳ್ಳಲಾಗಿದೆ’ ಎಂದ ರಾಹುಲ್ ಗಾಂಧಿ, ಮತಪಟ್ಟಿಯಿಂದ ಹೆಸರು ಕೈಬಿಟ್ಟವರನ್ನು ವೇದಿಕೆಗೆ ಕರೆದರು.

    ‘ಕಳೆದ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ ಸಿಐಡಿಯು 18 ಪತ್ರಗಳನ್ನು ಕಳುಹಿಸಿದೆ. ಯಾವ ಪ್ರದೇಶದಿಂದ ಈ ಮತದಾರರ ಹೆಸರು ನೋಂದಣಿಯಾಗಿದೆ ಎಂಬುದಕ್ಕೆ ಪೂರಕವಾದ ಐಪಿ ವಿಳಾಸ ಹಾಗೂ ಅದಕ್ಕೆ ಬಳಸಿದ ಒಟಿಪಿ ಮಾಹಿತಿ ನೀಡುವಂತೆ ಸಿಐಡಿ ಆಯೋಗವನ್ನು ಕೇಳಿದೆ. ಆದರೆ ಆಯೋಗವು ಅದನ್ನು ಏಕೆ ನೀಡುತ್ತಿಲ್ಲ. ಏಕೆಂದರೆ ಒಂದೊಮ್ಮೆ ಆಯೋಗ ಅದನ್ನು ನೀಡಿದರೆ, ಈ ಕೃತ್ಯದ ಹಿಂದಿರುವ ವ್ಯಕ್ತಿಯ ಮನೆಬಾಗಿಲಿಗೆ ಪೊಲೀಸರನ್ನು ಕರೆದೊಯ್ದು ನಿಲ್ಲಿಸುತ್ತದೆ ಎಂಬುದು ಅವರಿಗೂ ಗೊತ್ತು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ‘ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಅಳಿಸುವುದು ಹಾಗೂ ಸೇರಿಸುವುದನ್ನು ಯಾರು ಮಾಡುತ್ತಿದ್ದಾರೆ ಎಂದು ಆಯೋಗಕ್ಕೆ ಗೊತ್ತಿದೆ. ಭಾರತದ ಪ್ರತಿಯೊಬ್ಬ ಯುವಕರೂ ಇದನ್ನು ತಿಳಿಯಬೇಕು ಎಂದು ನಾನು ಬಯಸುತ್ತೇನೆ. ಕೇಳಿದ ಮಾಹಿತಿಯನ್ನು ಅವರು ನೀಡುತ್ತಿಲ್ಲವೆಂದರೆ ಅವರು ಪ್ರಜಾಪ್ರಭುತ್ವದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ ಎಂದೇ ಅರ್ಥ’ ಎಂದು ಆರೋಪಿಸಿದ್ದಾರೆ.

  • ಗಾಝದ ಕರಾಳ ಬದುಕಿನಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ) ಜೀವನ ಸಂದೇಶವರೆಗೆ…

    ಗಾಝದ ಕರಾಳ ಬದುಕಿನಿಂದ ಹಿಡಿದು ಪ್ರವಾದಿ ಮುಹಮ್ಮದ್(ಸ) ಜೀವನ ಸಂದೇಶವರೆಗೆ…

    ಇಂದು ನಮ್ಮನ್ನು ಹೆಚ್ಚು ದುಃಖಿತರನ್ನಾಗಿಸುವ ಸುದ್ಧಿಯೆಂದರೆ ಗಾಝಾ(ಫೆಲೆಸ್ತೀನ್) ಜನರ ಬದುಕಿನ ಕರಾಳ ದೃಶ್ಯ. ಶೈತಾನ್ ನೇತ್ಯಾನಾಹುವಿನ ರಕ್ತದಾಹ ಮಿತಿಮೀರುತ್ತಿದೆ. ಒಂದು ಸಮುದಾಯದ ವಂಶವನ್ನೇ ಭೂಮಿಯಿಂದ ಇಲ್ಲವಾಗಿಸುವ ಅವನ ಪ್ರಯತ್ನಕ್ಕೆ ವಿಶ್ವದಲ್ಲಿ ವಿರೋಧದ ಧ್ವನಿಯೂ ಹೆಚ್ಚುತ್ತಿದೆ. ಇಸ್ರೇಲಿನ ಯಹೂದಿಯರೇ ಯುದ್ಧ ನಿಲ್ಲಿಸಲು ಪ್ರತಿಭಟನೆಗೆ ಇಳಿದಿದ್ದಾರೆ. ಆದ್ರೆ… ಈ ರಾಕ್ಷಸ ಮತ್ತು ಆತನ ಝಿಯೋನಿಸ್ಟ್ ಸಮೂಹಕ್ಕೆ ಗಾಝವನ್ನು ಸ್ಮಶಾನ ಮಾಡುವ ಹುಚ್ಚು ಆವೇಶ ಮೈ ಮೇಲೆ ಉಕ್ಕಿದೆ. ಹಸಿವಿನಿಂದ ಬಳಲುತ್ತಿರುವ ಮಕ್ಕಳು, ಹಿರಿಯರು ಅಲ್ಲಿ ಸಾಯುತ್ತಿದ್ದಾರೆ. ನಮ್ಮ ಪ್ರತೀ ಪ್ರಾರ್ಥನೆಯಲ್ಲೂ ಅವರಿಗಾಗಿ ಪ್ರಾರ್ಥಿಸುತ್ತೇವೆ.

    ಮನುಷ್ಯತ್ವವೇ ಸತ್ತಿದೆ ಇಂದು. ಹಣ, ಅಧಿಕಾರವೇ ಗೆಲ್ಲುತ್ತಿದೆ. ನ್ಯಾಯ, ನೀತಿ ಸೋಲುತ್ತಿದೆ. ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಕಣ್ಮರೆಯ ವಿಷಯ ಎದೆಯನ್ನು ನಡುಗಿಸುವುದಿಲ್ಲ! ಪ್ರತಿಷ್ಠೆಯ ವ್ಯಕ್ತಿ ತನ್ನ ಹಣ ಬಲದಿಂದ ನಿರಪರಾಧಿ’ ಅನಿಸಿಕೊಳ್ಳುತ್ತಿದ್ದಾನೆ. ನ್ಯಾಯಧೀಶರು, ಪೊಲೀಸರು, ನ್ಯಾಯಾಲಯ, ಸುದ್ಧಿ ಮಾಧ್ಯಮಗಳು ಇಂದು ಹಣಕ್ಕೆ ತಲೆಬಾಗುತ್ತಿದೆ. ಮಾರಾಟಕ್ಕೆ ತಮ್ಮ ಆತ್ಮಸಾಕ್ಷಿಯನ್ನೂ ಅಡವಿಡುತ್ತಿದಾರೆ. ಪ್ರಾಮಾಣಿಕವಾಗಿ ನ್ಯಾಯದ ಪರ ಕೆಲಸ ಮಾಡಲು ಬಂದ ಸಜ್ಜನರನ್ನೂ ಈ ಅಧಿಕಾರದ ಭ್ರಷ್ಟಾಚಾರಿಗಳು ಬೆದರಿಸುತ್ತದೆ. ಅಭಿಸಾರ್ ಶರ್ಮಾ, ರವೀಶ್‌ರಂತಹ ಯೂಟ್ಯೂಬ್ ಪತ್ರಕರ್ತರಿಗೂ ಹಣದ ಆಮಿಷ ಹಾಗೂ ಬೆದರಿಕೆಯನ್ನು ನೀಡಲಾಗಿತ್ತು. ಆದ್ರೆ… ಪತ್ರಿಕಾಧರ್ಮ ಪಾಲಕರಾದ ಪ್ರಾಮಾಣಿಕತೆಯ ಈ ಸುದ್ಧಿ ನಿರ್ವಾಹಕರು ಬೆದರಿಕೆ, ಆಮಿಶಕ್ಕೆ ತಲೆಬಾಗಲಿಲ್ಲ. ಸುಳ್ಳು ಇಂದು ವಿಜಯಿಯಾಗಿತ್ತಿದೆ.

    ಈ ನಡುವೆ ರಾಹುಲ್‌ಗಾಂಧಿ ಎಂಬ ನಾಯಕನೂ ಚಕ್ರವ್ಯೂಹದ ಒಳಗೆ ನುಗ್ಗಿದ ಅಭಿಮನ್ಯುವಿನಂತೇ ಒಂಟಿಯಾಗಿ ತನ್ನ ವಿರೋಧಿಗಳೊಂದಿಗೆ ಕಾದಾಡುತ್ತಿದ್ದಾರೆ. ಚುನಾವಣಾ ಆಯೋಗವೂ ಇಂದು ಕುತಂತ್ರದಲ್ಲಿ ಭಾಗಿಯಾಗಿದೆ ಎಂಬ ಧ್ವನಿ ಎದ್ದಿದೆ. ಎಲ್ಲದರಲ್ಲೂ ಭ್ರಷ್ಟಾಚಾರವೇ ತುಂಬಿದೆ. ಆದರಿಂದಲೇ ಈ ದೇಶ ಉದ್ಧಾರ ಆಗಲಾರದು.

    ಶ್ರೀಮಂತರು ಶ್ರೀಮಂತರಾಗುತ್ತಾ ಹೋಗುತ್ತಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಅತ್ಯಾಚಾರಿ, ಕೊಲೆಗಾರರು ಜೈಲಿನಲ್ಲಿಯೂ ಮಸ್ತ್ ಮಜಾದಲ್ಲಿದ್ದಾರೆ. ಬುದ್ಧಿ ಮಾಂದ್ಯ, ಮಾತು ಬಾರದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಎಲ್ಲಾಡ್ರಗ್ಸ್’ನ ಮಹಿಮೆ. ಅಪರಾಧಿಗಳು ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಕೊಲೆ ಮಾಡಿ ಮೆರೆದಾಡುವಂತಹ ಸ್ವಾತಂತ್ಯ್ರ ಈ ದೇಶದಲ್ಲಿದೆ. ರಾಜಕೀಯ ಪಕ್ಷದ ನಾಯಕರು ಪರಸ್ಪರ ಕಚ್ಚಾಡುವುದರಲ್ಲೇ ಕಾಲ ಕಳೆಯುತ್ತಾರೆ. ಜನರ ಸಮಸ್ಯೆ, ಪರಿಹಾರ, ಕಷ್ಟ ಈ ರಾಜಕಾರಿಣಿಗಳ ಮೆದುಳಿಗೇ ಹೋಗುವುದಿಲ್ಲ. ಜನರಿಗಾಗಿ ಈ ನಾಯಕರು ಇರುವುದಲ್ಲ, ಅವರ ಅಂತಸ್ತು, ಸ್ಥಾನ ಗಟ್ಟಿ ಮಾಡಲೆಂದೇ ಧರ್ಮ ವಿರೋಧಿ ಹೇಳಿಕೆ ಕೊಡುತ್ತಾರೆ.

    ಇಂದು ಧರ್ಮದ್ವೇಷದ ಹೇಳೀಕೆಯಲ್ಲಿ ಬಿಜೆಪಿಯ ಶಾಸಕ ಯತ್ನಾಳ್ ಸ್ವಲ್ಪ ಹೆಚ್ಚೇ ಮುಂದೆ ಹೋಗಿದ್ದಾರೆ. ಮುಸ್ಲಿಮ್ ಮಹಿಳೆಯರನ್ನು ಹಿಂದೂ ಪುರುಷರು ಮದ್ವೆ ಆಗಬೇಕೆಂದು ಹೇಳಿಕೆ ನೀಡಿದ್ದಾರೆ. ಯಾರನ್ನು ಯಾರು ಬೇಕಾದರೂ ಮದ್ವೆ ಆಗುವ ಹಕ್ಕು ಈ ದೇಶದ ಸಂವಿಧಾನವೇ ನೀಡಿದೆ. ಮೊದಲು ಈ ಯತ್ನಾಳ್‌ರವರು ದಲಿತ ಹೆಣ್ಣು ಮಕ್ಕಳನ್ನು ತಮ್ಮ ಸೊಸೆ ಆಗಿ ಮನೆ ತುಂಬಿಕೊಳ್ಳಲಿ. ಮುಸ್ಲಿಮ್ ಹುಡುಗಿಯರಿಗೆ ತಮ್ಮ ಸಮುದಾಯದಲ್ಲಿ ವರ’ಗಳ ಕೊರತೆ ಇಲ್ಲ. ಇಸ್ಲಾಮಿನಲ್ಲಿ ವರದಕ್ಷಿಣೆ ಇಲ್ಲ, ಅಸ್ಪೃಶ್ಯತೆನೂ ಇಲ್ಲ.

    ಈ ತಿಂಗಳಲ್ಲಿ ಶಿಕ್ಷಕರ ದಿನಾಚಣೆಯೂ ಬರುತ್ತಿದೆ. ಒಡಿಶಾದ ವಿದ್ಯಾರ್ಥಿನಿಯೋವಳಿಗೆ ಶಿಕ್ಷಕರೋರ್ವರು ನೀಡಿದ ಲೈಂಗಿಕ ಹಿಂಸೆಯ ವಿರುದ್ಧ ದೂರ ನೀಡಿದ್ದರೂ ಆಕೆಗೆ ನ್ಯಾಯ ಸಿಗದೇ ಆಕೆಯ ಮೇಲೆ ದಬ್ಬಾಳಿಕೆ, ಬೆದರಿಕೆ ಹಾಕಿದಾಗ ಅವಳು ಆತ್ಮಹತ್ಯೆ ಮಾಡುತ್ತಾಳೆ. ಅವಳು ಬಿಜೆಪಿಯ ಎಲ್ಲಾ ಸಂಸದ, ಮುಖ್ಯಮಂತ್ರಿಯವರೆಗೂ ನ್ಯಾಯ’ ಬೇಡಿದ್ದಳು. ಆದ್ರೆ… ಆಕೆಯ ಮೊರೆ ಯಾರಿಗೂ ಕೇಳಿಸಲಿಲ್ಲ. ನಮ್ಮ ದ. ಕರಾವಳಿಯ ಕಾಲೇಜೊಂದರಲ್ಲಿ ಇಬ್ಬರು ಕಾಲೇಜ್ ಶಿಕ್ಷಕರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದರು. ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಿಸುವ ಶಿಲ್ಪಿಗಳು ಎಂಬ ಗೌರವ, ಇಂದು ಉಳಿದಿದೆಯೇ?! ಗುರುವೇ ಶಿಷ್ಯರ ಪಾಲಿಗೆ `ಅಪಾಯಕಾರಿ’ ಆಗುತ್ತಿದ್ದಾರೆ. ಕೋಮುದ್ವೇಷವನ್ನು ಹೆಚ್ಚು ಪ್ರಚಾರ ಮಾಡುವಲ್ಲಿಯೂ ಶಿಕ್ಷಕರ ಪಾಲು ಇದೆ. ಅಮಾಯಕ ಮಕ್ಕಳ ಮನಸ್ಸಿಗೆ ಧರ್ಮದ್ವೇಷಿ ಪಾಠ ಮಾಡುವವರ ವರ್ಗ ಹೆಚ್ಚುತ್ತಿದೆ. ಸೌಹಾರ್ದತೆ ಮತ್ತು ಮಾನವೀಯತೆಯನ್ನು ಬೋಧಿಸಬೇಕಾದ ಶಿಕ್ಷಕರು ಇಂದು ಆರ್‌ಎಸ್‌ಎಸ್‌ನ ಮುಖವಾಣಿಯಂತೇ ವರ್ತಿಸುತ್ತಿದ್ದಾರೆ. ಇಂತಹವರಿಂದ ಉತ್ತಮ ಸಮಾಜ ನಿರ್ಮಾಣ ಹೇಗೆ ಸಾಧ್ಯ?

    ಶಿಸ್ತು, ಗೌರವ, ಸೇವೆ, ಮಾನವೀಯತೆಗೆ ಮಾದರೀಯಾಗಿ ನಾನು ಸದಾ ಕ್ರೈಸ್ತರನ್ನು ಅಭಿನಂದಿಸುತ್ತೇನೆ. ಕಾನ್ವೆಂಟ್ ಶಾಲೆಯಲ್ಲಿ ನಾನಂದು ಕಲಿತ ಪಾಠವನ್ನು ಜೀವನದಲ್ಲಿ ಇಂದೂ ಪಾಲಿಸುತ್ತಿದ್ದೇನೆ.

    ಇದು ಮಿಲಾದುನ್ನಬೀ ಪವಿತ್ರ ದಿನದ ತಿಂಗಳು. ನಾವು ಪ್ರವಾದಿಯವರನ್ನು(ಸ) ನಿಜವಾಗಿಯೂ ಪ್ರೀತಿಸುವುದಾದರೆ, ಗೌರವಿಸುವುದಾದರೆ ಅವರ ಜೀವನದ ಆದರ್ಶಗಳನ್ನು ಪಾಲಿಸುವಂತಾಗಬೇಕು. ಇತರ ಧರ್ಮೀಯರನ್ನು ಪ್ರೀತಿಸುವ, ಗೌರವಿಸುವ ವರ್ಗವಾಗಬೇಕು. ಅಶ್ಲೀಲ ಮಾತು, ಪದಗಳು ಉದುರಬಾರದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರಾಗಬೇಕು, ವ್ಯಭಿಚಾರ, ಮೋಸ, ಸುಳ್ಳಿನಿಂದ ಮುಕ್ತವಾಗಿರಬೇಕು.

    ಪ್ರವಾದಿಯವರು(ಸ) ಹೇಳಿದರು, “ವಿಧವೆಯ ಮುಂದೆ ನಿಮ್ಮ ಪತ್ನಿಯೊಂದಿಗೆ ಸರಸವಾಡಬೇಡಿ, ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಮುದ್ದಿಸ ಬೇಡಿರಿ, ಪರನಿಂದೆಯಿಂದ ದೂರವಿರಿ,” ಇಂತಹ ಮಾಣಿಕ್ಯದಂತಹ ಬೋಧನೆಯನ್ನು ಜನರು ಪಾಲಿಸಿದರೆ ಖಂಡಿತಾ ಒಳ್ಳೆಯವರಾಗಿ ಬದುಕಲು ಸಾಧ್ಯ. ಫೇಸ್‌ಬುಕ್, ವಾಟ್ಸ್ಅಪ್‌ಗಳಲ್ಲಿ ಅಶ್ಲೀಲ ಪದ, ಬೈದು ಕಮೆಂಟ್ ಹಾಕುವ ಯುವಕರಿಗೆ ಪ್ರವಾದಿವರ್ಯರ(ಸ) ಹೆಸರು ಹೇಳುವ ಯೋಗ್ಯತೆ ಕೂಡಾ ಇಲ್ಲ. ಸಮುದಾಯಕ್ಕೆ ಕಳಂಕ ತರುವ ವರ್ತನೆಗಳು ಸಲ್ಲದು. “ಯಾರದೇ ಧರ್ಮ, ಆಚರಣೆಯನ್ನು ಅಪಹಾಸ್ಯ ಮಾಡದಿರಿ” ಎಂದು ಪ್ರವಾದಿವರ್ಯರು(ಸ) ಹೇಳಿರುವುದನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು.

  • ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? 
ಇಲ್ಲಿದೆ ಪರಿಹಾರ ಸೂತ್ರಗಳು

    ಮಕ್ಕಳನ್ನು TV, Mobileನಿಂದ ದೂರವಿರಿಸುವುದು ಹೇಗೆ? ಇಲ್ಲಿದೆ ಪರಿಹಾರ ಸೂತ್ರಗಳು

    ಮಾವಿನ ತೋಪಿನಲ್ಲಿ ಮಕ್ಕಳು ಓಡಾಡುತ್ತಾ ಆಟವಾಡುತ್ತಿದ್ದ ಹಳೆಯ ದಿನಗಳು ಕೇವಲ ನೆನಪು. ಆ ಉತ್ಸಾಹದ ಬದಲಿಗೆ, ಇಂದು ಮನೆಗಳ ನಾಲ್ಕು ಗೋಡೆಗಳ ಒಳಗೆ ಬಂಧಿಯಾಗಿರುವ ಹೊಸ ಪೀಳಿಗೆಯೊಂದು, ರೀಲ್‌ಗಳು ಮತ್ತು ಶಾರ್ಟ್ಗಳ ಅಂತ್ಯವಿಲ್ಲದ ಹರಿವನ್ನು ನೋಡುವುದನ್ನು ನಾವು ನೋಡುತ್ತಿದ್ದೇವೆ.

    ಪ್ರತಿಯೊಂದು ಯುಗದಲ್ಲೂ, ವಿಭಿನ್ನ ವ್ಯಸನಗಳು ಮನುಷ್ಯನನ್ನು ವಶಪಡಿಸಿಕೊಳ್ಳಲು ಬಂದಿವೆ. ಅಫೀಮು ಮತ್ತು ಮದ್ಯದಿಂದ ಕೂಡಿದ ವ್ಯಸನ ಅನೇಕ ಜೀವಗಳನ್ನು ನಾಶಮಾಡಿವೆ. ಇಂದು, ಡಿಜಿಟಲ್ ಹೆರಾಯಿನ್ ಎಂಬ ಸುಂದರ ಹೆಸರಿನ ಮೊಬೈಲ್ ಫೋನ್‌ಗಳು ಅವುಗಳ ಸ್ಥಾನವನ್ನು ಪಡೆದುಕೊಂಡಿವೆ.

    ಮೆದುಳನ್ನು ಹೆಪ್ಪುಗಟ್ಟಿಸುವ ಮಾಂತ್ರಿಕ ದೃಶ್ಯಗಳನ್ನು ಗಂಟೆಗಟ್ಟಲೆ ರೀಲ್‌ಗಳು ಮತ್ತು ಶಾರ್ಟ್ಗಳ ಮೂಲಕ ವೀಕ್ಷಿಸುತ್ತಿರುವ ಮಗುವಿನ ಮೆದುಳಿನಲ್ಲಿ ಏನಾಗುತ್ತದೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಪ್ರತಿ ಸೆಕೆಂಡಿಗೆ ಬದಲಾಗುವ ದೃಶ್ಯಗಳಿಗೆ ಅನುಗುಣವಾಗಿ ಅವರ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕದ ಮಟ್ಟವು ವೇಗವಾಗಿ ಏರುತ್ತದೆ ಮತ್ತು ಇಳಿಯುತ್ತದೆ. ಅದು ಒದಗಿಸುವ ತಾತ್ಕಾಲಿಕ ಆನಂದವನ್ನು ಮತ್ತೆ ಮತ್ತೆ ಪಡೆಯಲು ಅವರ ಮನಸ್ಸುಗಳು ಹಂಬಲಿಸುತ್ತವೆ. ಪುಸ್ತಕ ಓದುವ ಶಾಂತ ಆನಂದವನ್ನು ಅಥವಾ ನಂತರ ಸ್ನೇಹಿತರೊಂದಿಗೆ ಆಟವಾಡುವಾಗ ಸಿಗುವ ಸಾಮಾಜಿಕ ಮೋಜನ್ನು ಅವರು ಅನುಭವಿಸಲು ಸಾಧ್ಯವಾಗುವುದಿಲ್ಲ. ಏಕಾಗ್ರತೆ ಕಳೆದುಹೋಗುತ್ತದೆ, ಸ್ಮರಣಶಕ್ತಿ ಕಡಿಮೆಯಾಗುತ್ತದೆ ಮತ್ತು ಆಲೋಚನಾ ಸಾಮರ್ಥ್ಯವು ಪಾರ್ಶ್ವವಾಯುವಿಗೆ ಒಳಗಾಗುತ್ತದೆ.

    ಅಜ್ಜ-ಅಜ್ಜಿ ಹೇಳುವ ಕಥೆಗಳು ಮತ್ತು ಬಾಲ್ಯದಲ್ಲಿ ಪೋಷಕರು ತೋರಿಸುವ ಪ್ರಕೃತಿಯ ಅದ್ಭುತಗಳ ಮೂಲಕ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತಿತ್ತು. ಆದರೆ, ಇಂದು, ಕಾರ್ಟೂನ್ ಮತ್ತು ಗೇಮ್‌ಗಳ ಕೃತಕ ಜಗತ್ತಿನಲ್ಲಿ ಅಲೆದಾಡುವ ಮಕ್ಕಳು ತಮ್ಮ ವಿಶಿಷ್ಟ ಕಲ್ಪನೆಗಳನ್ನು ಕಳೆದುಕೊಳ್ಳುತ್ತಾರೆ. ಅವರು ತಾವು ನೋಡುವ ಪಾತ್ರಗಳಂತೆ ಮಾತನಾಡಲು ಮತ್ತು ವರ್ತಿಸಲು ಪ್ರಾರಂಭಿಸುತ್ತಾರೆ. ವಾಸ್ತವ ಮತ್ತು ಭ್ರಮೆಯನ್ನು ಪ್ರತ್ಯೇಕಿಸಲು ಸಾಧ್ಯವಾಗದ ಒಂದು ರೀತಿಯ ಕನಸಿನ ಸ್ಥಿತಿಗೆ ಅವರು ಜಾರುತ್ತಾರೆ.

    ಆರೋಗ್ಯ ಸಮಸ್ಯೆಗಳು
    ಮಾನಸಿಕ ಪರಿಣಾಮಗಳ ಜೊತೆಗೆ, ದೈಹಿಕ ಸವಾಲುಗಳು ಸಹ ಸಣ್ಣದಲ್ಲ. ಫೋನ್ ನೋಡುತ್ತಾ ಗಂಟೆಗಟ್ಟಲೆ ಸುಮ್ಮನೆ ಕುಳಿತುಕೊಳ್ಳುವುದು ಮಕ್ಕಳ ಕಣ್ಣುಗಳ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. `ಕಂಪ್ಯೂಟರ್ ವಿಷನ್ ಸಿಂಡ್ರೋಮ್’ ಎಂದು ಕರೆಯಲ್ಪಡುವ ರೋಗ ಇಂದಿನ ಮಕ್ಕಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದೆ. ಕುತ್ತಿಗೆ ನೋವು, ಬೆನ್ನು ನೋವು ಮತ್ತು ಬೊಜ್ಜು ಕೂಡ ಉಳಿದ ಲಕ್ಷಣಗಳಾಗಿವೆ. ಓಡುತ್ತಾ ಆಟವಾಡಬೇಕಾದ ವಯಸ್ಸಿನಲ್ಲಿ, ಆಟದ ಮೈದಾನಗಳಿಂದ ವಂಚಿತರಾದ ಮಕ್ಕಳು ರೋಗಗಳ ಕತ್ತಲಕೋಣೆಯಲ್ಲಿ ಬಂಧಿ ಯಾಗುತ್ತಿದ್ದಾರೆ.

    ಮೊಬೈಲ್ ಫೋನ್‌ಗಳಿಂದ ಬರುವ ನೀಲಿ ಬೆಳಕು ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಇದು ಮಕ್ಕಳಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತದೆ. ಸರಿಯಾದ ನಿದ್ರೆ ಸಿಗದ ಮಗು ಅಧ್ಯಯನದತ್ತ ಗಮನಹರಿಸಲು ಮತ್ತು ಆರೋಗ್ಯವಾಗಿರಲು ಹೇಗೆ ಸಾಧ್ಯವಾಗುತ್ತದೆ?

    ನೈತಿಕತೆಯ ಕುಸಿತ
    ಇಂಟರ್‌ನೆಟ್‌ನ ವಿಶಾಲ ಜಗತ್ತು ಮಕ್ಕಳಿಗೆ ತೆರೆದುಕೊಂಡಾಗ, ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ಅವರು ವಯಸ್ಸಿಗೆ ಸೂಕ್ತವಲ್ಲದ ವಿಷಯ ಮತ್ತು ಅಪಾಯಕಾರಿ ಆನ್‌ಲೈನ್ ಬಲೆಗಳಿಗೆ ಸುಲಭವಾಗಿ ಆಕರ್ಷಿತರಾಗಬಹುದು. ಹಿಂಸೆ ಮತ್ತು ಅಶ್ಲೀಲತೆಯಿಂದ ತುಂಬಿರುವ ಆಟಗಳು ಮತ್ತು ವೀಡಿಯೊಗಳು ಅವರ ಯುವ ಮನಸ್ಸನ್ನು ವಿಷಪೂರಿತಗೊಳಿಸುತ್ತವೆ. ಅವರು ಸಹಾನುಭೂತಿ, ಪ್ರೀತಿ ಮತ್ತು ಕರುಣೆಯನ್ನು ಕಲಿಯಬೇಕಾದ ವಯಸ್ಸಿನಲ್ಲಿ, ಕೃತಕ ಪ್ರಪಂಚದ ಕ್ರೌರ್ಯವನ್ನು ಕಂಡು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತಾರೆ.

    ತಮ್ಮ ಮಕ್ಕಳಿಗೆ ಫೋನ್‌ಗಳನ್ನು ನೀಡುವ ಮೂಲಕ ತಮ್ಮ ಕೆಲಸವನ್ನು ಸುಲಭಗೊಳಿಸುವ ಪೋಷಕರು, ನೆನಪಿಡಿ, ನೀವು ಮಾಡುತ್ತಿರುವ ಕೆಲಸಗಳ ದೂರಗಾಮಿ ಪರಿಣಾಮಗಳನ್ನು ನಿಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗದಿರಬಹುದು.

    ನಾವು ಏನು ಮಾಡಬಹುದು?
    ನಮ್ಮ ಕಣ್ಣ ಮುಂದೆ ಒಂದು ಪೀಳಿಗೆ ದಾರಿ ತಪ್ಪುತ್ತಿರುವಾಗ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಅದಕ್ಕೆ ಖಂಡಿತಾ ಪರಿಹಾರಬೇಕು.

    ಮಾದರಿಯಾಗಿ:
    ಮಕ್ಕಳಿಗೆ ಫೋನ್ ಬಳಸಬೇಡಿ ಎಂದು ಹೇಳುವ ಮೊದಲು, ನಾವೇ ಅದರ ಬಳಕೆಯನ್ನು ನಿಯಂತ್ರಿಸಬೇಕು. ಕುಟುಂಬದೊAದಿಗೆ ಕಳೆಯುವ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ದೂರವಿಡಿ.

    ಸಮಯ ಮಿತಿಯನ್ನು ನಿಗದಿಪಡಿಸಿ:
    ಮಕ್ಕಳ Screen ನೋಡುವ ಸಮಯಕ್ಕೆ ಸ್ಪಷ್ಟ ಮಿತಿಯನ್ನು ನಿಗದಿಪಡಿಸಿ. ಆ ಸಮಯದ ಕಳೆದ ಬಳಿಕ ರಾಜಿ ಮಾಡಿಕೊಳ್ಳಲು ಸಿದ್ದರಾಗಬಾರದು.

    ಮುಕ್ತವಾಗಿ ಮಾತನಾಡಿ:
    ಆನ್‌ಲೈನ್ ಪ್ರಪಂಚದ ಅಪಾಯಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಅವರಿಗೆ ಕಲಿಸಿ.

    ಹೊಸ ಲೋಕಗಳನ್ನು ತೆರೆಯಿರಿ:
    ಅವರನ್ನು ಕೈ ಹಿಡಿದು ಪುಸ್ತಕಗಳು, ಆಟಗಳು ಮತ್ತು ಪ್ರಕೃತಿಯ ಜಗತ್ತಿಗೆ ತಲುಪಿಸಿ. ಪ್ರವಾಸಗಳಿಗೆ ಕರೆದುಕೊಂಡು ಹೋಗಿ, ಅವರಿಗೆ ಹೊಸ ಅನುಭವಗಳನ್ನು ನೀಡಿ.

    ಕಾಮನಬಿಲ್ಲನ್ನು ನೋಡಲು ಆಕಾಶದತ್ತ ನೋಡಿ, ಚಿಟ್ಟೆಯನ್ನು ನೋಡಲು ತೋಟಕ್ಕೆ ಹೋಗಿ, ಮತ್ತು ಅವರ ಸ್ನೇಹಿತರ ಪ್ರೀತಿಯನ್ನು ಅನುಭವಿಸಲು ಅವರೊಂದಿಗೆ ಆಟವಾಡುವ ಅವಕಾಶ ಕೊಡಿ. ಆಕಾಶ ಮತ್ತು ಭೂಮಿಯ ಸಂಪರ್ಕವನ್ನು ಕಳೆದುಕೊಂಡು ಆರು ಇಂಚಿನ ಪರದೆಗೆ ಕುಗ್ಗುವ ಪೀಳಿಗೆ ನಮಗೆ ಅಗತ್ಯವಿಲ್ಲ.

    “ಉಜ್ವಲ ಬಾಲ್ಯ” ಎಂಬುದು ಪ್ರತಿ ಮಗುವಿನ ಹಕ್ಕು. ಆ ಹಕ್ಕನ್ನು ಅವರಿಗೆ ನಿರಾಕರಿಸುವ ಹಕ್ಕು ನಮಗಿಲ್ಲ. ನೆನಪಿಡಿ, ಇಂದು ನಾವು ಅವರಿಗೆ ನೀಡುವ ಗಮನ ಮತ್ತು ಪ್ರೀತಿ ನಾಳಿನ ಸಮಾಜದ ಶಕ್ತಿ. ಅದಕ್ಕಾಗಿ, ಅವರಿಗೆ ಪ್ರೀತಿ, ಜ್ಞಾನ ಮತ್ತು ಅನುಭವಗಳ ಹೊಸ ಬಾಗಿಲುಗಳನ್ನು ತೆರೆಯೋಣ. ಆ ಮೂಲಕ, ಅವರ ಬೆಳವಣಿಗೆ ಮತ್ತು ಆ ಮೂಲಕ ನಮ್ಮ ದೇಶದ ಭವಿಷ್ಯ ಉಜ್ವಲ ವಾಗಲಿ.

    ಸಮಿಯುಲ್ಲಾ

  • ಗೆಳೆಯನ ಪತ್ನಿಗೆ ರಕ್ತ ನೀಡಲು ಅರ್ಷದ್ ನೊಂದಿಗೆ ಗಲಭೆ ಪೀಡಿತ ಊರಿಗೆ ಹೊರಟ ಲೋಹಿತ್: ಮುಂದೇನಾಯ್ತು?

    ಗೆಳೆಯನ ಪತ್ನಿಗೆ ರಕ್ತ ನೀಡಲು ಅರ್ಷದ್ ನೊಂದಿಗೆ ಗಲಭೆ ಪೀಡಿತ ಊರಿಗೆ ಹೊರಟ ಲೋಹಿತ್: ಮುಂದೇನಾಯ್ತು?

    ಲೋಹಿತ ಅಮೆರಿಕದಿಂದ ಬಂದು ಎರಡು ದಿನಗಳಾಗಿದ್ದವು, ಅವನು ಅಮೆರಿಕದಿಂದ ಹೊರಡುವ ಸಮಯದಲ್ಲೇ ಅವನ ಗೆಳೆಯ ರವೀಂದ್ರ ಫೋನ್ ಮಾಡಿ ತನ್ನ ಹೆಂಡತಿಗೆ ತೀರ ಅರೋಗ್ಯ ಸರಿಯಿಲ್ಲದೆ ಆಸ್ಪತ್ರೆಗೆ ಸೇರಿಸಲಾಗಿದೆಯೆಂಬ ವಿಚಾರ ತಿಳಿಸಿದಾಗ “ನಾ ಊರಿಗೆ ಹೊರಡುತ್ತಿದ್ದೇನೆ ಅಲ್ಲಿ ಒಂದು ವಾರ ಇರುತ್ತೇನೆ, ಈ ಮಧ್ಯೆ ಬಿಡುವು ಮಾಡಿಕೊಂಡು ನಿಮ್ಮಲ್ಲಿ ಬರುತ್ತೇನೆ, ಧೈರ್ಯದಿಂದಿರು ಏನು ಆಗುವುದಿಲ್ಲ” ಎಂದು ಸಮಾಧಾನ ಹೇಳಿದ.

    ಸಮಯದ ಎಷ್ಟೇ ಅಭಾವವಿದ್ದರೂ ಅಮೆರಿಕಕ್ಕೆ ಹಿಂತಿರುಗುವುದಕ್ಕೆ ಮುನ್ನ ಅವಕಾಶ ಮಾಡಿಕೊಂಡು ಗೆಳೆಯನನ್ನು ಭೇಟಿ ಮಾಡಲೇ ಬೇಕೆಂದು ತೀರ್ಮಾನಿಸಿದ ಲೋಹಿತ ಅವನು ಸಹ ವೈದ್ಯನಾಗಿರುವುದರಿಂದ ಗೆಳೆಯನ ಮಡದಿಯ ಖಾಯಿಲೆ ಬಗ್ಗೆ ಅಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಏನಾದರೂ ಸಲಹೆ ಕೊಡಬಹುದೆಂದು ಅವನ ಆಲೋಚನೆಯಾಗಿತ್ತು.

    ಅವನ ಊರಿಂದ ರವೀಂದ್ರ ಇರುವ ಶಹರಕ್ಕೆ ಹೆಚ್ಚೆಂದರೆ ಮೂರು ತಾಸಿನ ಹಾದಿ.
    ಅಮೆರಿಕದಿಂದ ಬಂದ ಎರಡು ದಿನ ಬಳಿಕ ಅದೊಂದು ದಿನ ಲೋಹಿತ ಅರ್ಷದ್‌ಗೆ ಫೋನ್ ಮಾಡಿ ನಾಳೆ ಬೆಳೆಗ್ಗೆ ಬರುವುದಕ್ಕಾಗುತ್ತೇನೆಂದು ವಿಚಾರಿಸಿದ ಅವನು ಬರುತ್ತೇನೆಯೆಂದು ಒಪ್ಪಿಕೊಂಡ. ಆ ಮೇಲೆ ಲೋಹಿತ, ರವೀಂದ್ರನಿಗೆ ಫೋನ್ ಮಾಡಿ ನಾಳೆ ಬರುತ್ತಿದ್ದೇನೆ ಎಂಬ ಸಮಾಚಾರ ಮುಟ್ಟಿಸಿದ.

    ಅರ್ಷದ್ ಟ್ಯಾಕ್ಸಿ ಚಾಲಕ, ಲೋಹಿತ ಅಮೆರಿಕದಿಂದ ಬಂದು ಇಲ್ಲಿ ಎಲ್ಲಾದರೂ ಹೋಗುದಿದ್ದರೆ ಅರ್ಷದ್‌ಗೆ ಫೋನ್ ಮಾಡುತ್ತಿದ್ದ, ಅವನು ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಹಿಂದೆ ಹಾಕಿ ಬಂದು ಲೋಹಿತನ ಕಾರು ಓಡಿಸುತ್ತಿದ್ದ.
    ಎರಡು ತಿಂಗಳ ಹಿಂದಷ್ಟೇ ರವೀಂದ್ರನ ಮಗ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದ ಈ ಸಮಾಚಾರವನ್ನು ಅಳುತ್ತ ಹೇಳಿದಾಗ ಆಗ ಲೋಹಿತ ಅಮೆರಿಕದಲ್ಲಿದ್ದ ಮತ್ತು ಆಸ್ಪತ್ರೆಯಿಂದ ಮನೆಗೆ ಹೊರಡುವ ಸಿದ್ದತೆ ಮಾಡುತ್ತಿದ್ದ. ಅಂದು ಲೋಹಿತ ಸರಿಯಾಗಿ ನಿದ್ದೆ ಮಾಡಲಿಲ್ಲ. ಹತ್ತಾರು ಬಾರಿ ಗೆಳೆಯನಿಗೆ ಫೋನ್ ಮಾಡಿ ಸಮಾಧಾನ ಹೇಳಿದ್ದ.

    ಲೋಹಿತ ಮತ್ತು ರವೀಂದ್ರ ಅನೇಕ ವರ್ಷದವರೆಗೆ ಸಹಪಾಠಿಗಳಾಗಿದ್ದರು.
    ಕೊಟ್ಟ ಮಾತಿನಂತೆ ಅರ್ಷದ್ ಬೆಳಗ್ಗೆಯೇ ಬಂದ ಬಿಟ್ಟ, ಉಪಹಾರದ ಬಳಿಕ ಇಬ್ಬರು ಹೊರಟರು.
    ಮಧ್ಯದಾರಿಯಲ್ಲಿ ಲೋಹಿತನಿಗೆ ಟೀ ಕುಡಿಯಬೇಕೆಂದೆನಿಸಿ ಎಲ್ಲಾದರೊಂದು ಕಡೆ ಕಾರು ನಿಲ್ಲಿಸಲು ಸೂಚಿಸಿದ.
    ಮುಂದೊAದು ಊರಿತ್ತು. ರಸ್ತೆ ಪಕ್ಕದಲ್ಲಿರುವ ದರ್ಶಿನಿ ಮುಂದೆ ನಿಲ್ಲಿಸಿದ ಅರ್ಷದ್ ಅವರಿಬ್ಬರು ಇಳಿದು ಟೀ ಸೇವಿಸಿ ಹಿಂತಿರುಗಿದಾಗ ಕಾರು ಬಳಿ ನಡು ವಯಸ್ಸಿನ ಹಳ್ಳಿ ಮಹಿಳೆಯೊಬ್ಬಳು ಆರೇಳು ವರ್ಷದ ಮಗುವನ್ನು ಎತ್ತಿಕೊಂಡು ನಿಂತಿದ್ದಳು. ಲೋಹಿತ ಕಾರು ಹತ್ತಲು ಹೋದಾಗ ಮಹಿಳೆ ಬಂದು, ಬಸ್ಸುಗಳಲ್ಲಿ ತುಂಬ ರಷ್ ಇದೆ, ಹತ್ತಲು ಸಹ ಸಾಧ್ಯವಿಲ್ಲ, ತಬ್ಬಲಿ ಕೂಸಿಗೆ ಜ್ವರ ಇಲ್ಲಿ ಔಷಧಿಗೆ ಬಂದಿದ್ದೆ. ಮುಂದಿನ ಊರಿನವರೆಗೆ ಕರೆದುಕೊಂಡು ಹೋಗಿ ಎಂದು ವಿನಂತಿಸಿಕೊAಡಳು. “ಪುಣ್ಯ ಬರುತ್ತೆಯಪ್ಪ ಇಲ್ಲ ಎನ್ನ ಬೇಡಿ” ಕೊನೆಯಲ್ಲಿ ಈ ವಾಕ್ಯ ಹೇಳಿದಳು.

    ಹಿಂದಿನ ಆಸನವಂತು ಖಾಲಿಯಿದೆ ಕೂರಿಸಿಕೊಂಡು ಹೋದರಾಯಿತು ಎಂದು ಹಿಂದಿನ ಬಾಗಿಲನ್ನು ತೆರೆದಾಗ ಮಹಿಳೆ ಮೊದಲು ಮಗುವನ್ನು ಜೋಪಾನವಾಗಿ ಕೂರಿಸಿ ಆ ಮೇಲೆ ಅವಳು ಹತ್ತಿಕೊಂಡಳು.

    ಕಾರು ಮುಂದೆ ಹೊರಟಾಗ ಲೋಹಿತ ಹಿಂತಿರುಗಿ ಮಹಿಳೆಯನ್ನು ನೋಡುತ್ತ ಆ ಮಗುವಿನ ತಂದೆ ತಾಯಿ ಎಲ್ಲಿ ಎಂದು ಹೀಗೆ ಸಹಜವಾಗಿ ವಿಚಾರಿಸಿದ, ಮಗುವಿನ ಹಿಂದೆ ಒಂದು ನೋವಿನ ಕಥೆಯೇ ಇತ್ತು.

    ಸುಮಾರು ನಾಲ್ಕು ವರ್ಷದ ಕೆಳಗೆ ಅದೆಲ್ಲಿಂದಲೂ ಮುಸ್ಲಿಂ ದಂಪತಿ ತಮ್ಮ ಪುಟ್ಟ ಮಗುವಿನೊಂದಿಗೆ ಮುಸ್ಲಿಂರ ಒಂದು ಕುಟುಂಬ ಸಹ ಇಲ್ಲದ ಆ ಹಳ್ಳಿಗೆ ಬಂದರು, ಬರಿಕೈಯಲ್ಲಿ ಬಂದ ಅವರು ಆಲೆಮನೆಗಳಲ್ಲಿ ಕೆಲಸ ಮಾಡುತ್ತ ಅಲ್ಲೆ ಬಾಡಿಗೆಗೊಂದು ಕೋಣೆ ಹಿಡಿದು ಜೀವನ ಮಾಡ ತೊಡಗಿದರು, ಯಾರ ತಂಟೆಗೆ ಹೋಗದೆ ತಮ್ಮ ಪಾಡಿಗೆ ತಾವಿದ್ದರು, ಊರಿನ ಹತ್ತಿರವೇ ಹರಿಯುವ ನದಿಗೆ ಅವರು ಮಾಮೂಲಿನಂತೆ ಒಂದು ದಿನ ಹೋದರು. ಮಗುವನ್ನು ಅಂಗನವಾಡಿಯಲ್ಲಿ ಬಿಟ್ಟು ಹೋದಾಗ ನದಿ ತುಂಬಿ ಹರಿಯುತ್ತಿತ್ತು.

    ಬಟ್ಟೆ ತೊಳೆಯುತ್ತಿರುವಾಗ ಆಕಸ್ಮಿಕವಾಗಿ ಹೆಂಡತಿ ನದಿಯಲ್ಲಿ ಜಾರಿಕೊಂಡಳು. ಅವಳನ್ನು ಕಾಪಾಡಲು ಗಂಡ ನದಿಗೆ ದುಮುಕಿದ, ನೀರಿನ ಹರಿತ ಜಾಸ್ತಿಯಿತ್ತು, ಹರಿಯುವ ನದಿಯಲ್ಲಿ ಇಬ್ಬರೂ ಕೊಚ್ಚಿಕೊಂಡರು ಆಮೇಲೆ ಊರಿನವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು, ಅವರಿಬ್ಬರ ಹೆಣಗಳು ದೊರೆತವು, ಆಮೇಲೆ ಊರಿನವರು ಸ್ವಲ್ಪ ದೂರದ ಹಳ್ಳಿಯಲ್ಲಿರುವ ಮುಸ್ಲಿಂರನ್ನು ಕರೆಸಿ ಅವರ ಧರ್ಮ ಪದ್ಧತಿಯಂತೆ ಅವರನ್ನು ದಫನ್ ಮಾಡಿಸಿದರು. ಇದಾದ ಬಳಿಕ ಮಗುವನ್ನು ಯಾರು ನೋಡಿ ಕೊಳ್ಳುತ್ತಾರೆಂದು ಪ್ರಶ್ನೆ ಮುಂದೆ ಬಂದಾಗ ಆ ಹಿಂದು ಮಹಿಳೆ ಮುಂದೆ ಬಂದು ಇದರ ಜವಾಬ್ದಾರಿ ನನ್ನ ಮೇಲಿರಲಿ ನನ್ನ ಎರಡು ಮಕ್ಕಳಂತೆ ಇದನ್ನು ಸಹ ಸಾಕುತ್ತೇನೆ ಎಂದು ಊರಿನವರ ಮುಂದೆ ಒಪ್ಪಿಕೊಂಡು ಅಂದಿನಿAದ ಅವಳೇ ಆ ಮಗುವನ್ನು ನೋಡುಕೊಳ್ಳುತ್ತಿದ್ದಳು. ಆ ಮಗುವಿನ ಅಪ್ಪ ಅಮ್ಮ ಏನು ಹೆಸರನ್ನು ಇಟ್ಟಿದ್ದರೂ ಅದನ್ನು ಬದಲಾಯಿಸಲಿಲ್ಲ.

    ಇಷ್ಟ್ಟೆಲ್ಲ ಕಥೆ ಹೇಳಿದ ಬಳಿಕ ಮಹಿಳೆ ಮೌನ ಧರಿಸಿಕೊಂಡು ರಸ್ತೆಯ ಕಡೆಯೇ ಗಮನವಿಟ್ಟು ನೋಡುತ್ತಿದ್ದಳು. ಅವಳು ಇಳಿಯುವ ಸ್ಥಳ ಬಂದ ಕೂಡಲೇ “ಇಲ್ಲೇ ನಿಲ್ಲಿಸಿ” ಎಂದಳು.
    ಅವಸರ ಬೇಡ ಮಹಿಳೆ ನೆಮ್ಮದಿಯಿಂದ ಇಳಿಯಲಿ ಎಂದು ಅರ್ಷದ್ ಇಂಜೀನ್ ಆಫ್ ಮಾಡಿದ.
    ಮಹಿಳೆ ಮೊದಲು ತಾನಿಳಿದು ಆಮೇಲೆ ಮಗುವನ್ನು ಜೋಪಾನವಾಗಿ ಇಳಿಸಿಕೊಂಡಳು.
    “ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ಹಾರೈಸಿದಳು.
    ಇವಳ ಹಾರೈಕೆ ಖಂಡಿತ ದೇವರು ಒಪ್ಪುತ್ತಾನೆ ಎಂದು ಯೋಚಿಸಿದ ಲೋಹಿತ.

    ಕಾರು ಒಡಿಸುತ್ತಿದ್ದರೂ ತನ್ನ ಇಡೀ ಗಮನವೆಲ್ಲ ಮಹಿಳೆಯ ಕಡೆಯಲಿಟ್ಟಿದ್ದ ಅರ್ಷದ್, ಮಹಿಳೆ ಇಳಿದ ಬಳಿಕ ಅರ್ಷದ್ “ದೇವರು ಯಾವ ಯಾವ ರೂಪದಲ್ಲಿರುತ್ತಾನೆ ಎಂದು ಹೇಳುವುದಕ್ಕಾಗುವುದಿಲ್ಲ.”

    ಲೋಹಿತ ಏನನ್ನು ಹೇಳಲಿಲ್ಲ ಅವನಿಗಂತು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದಂತಾಯಿತು. ಅರ್ಷದ್ ಕಾರು ಸ್ಟಾರ್ಟ್ ಮಾಡುತ್ತಿರುವಾಗ ಲೋಹಿತ ಹೇಳಿದ, “ಅರ್ಷದ್ ಈ ಊರು ನೆನಪಿಡಿ. ಬರುವಾಗ ಆ ಮಹಿಳೆಯನ್ನು ಮತ್ತೆ ಭೇಟಿ ಮಾಡೋಣವಂತೆ ಅವಳಿಗೆ ಏನಾದರೂ ಸಹಾಯ ಮಾಡೋಣ ಎನಿಸುತ್ತಿದೆ.”
    “ಆಯಿತು” ಎಂದ ಅರ್ಷದ್.
    ಕಾರು ಚಲಿಸುತ್ತಿರುವಾಗ ಲೋಹಿತ ನಾಲ್ಕಾರು ಬಾರಿ ಹಿಂತಿರುಗಿ ಮಹಿಳೆ ಕಡೆ ನೋಡಿದ.

    ಅಲ್ಲಿಂದ ಅವರು ಒಂದಿಷ್ಟು ದೂರ ಹೋಗಿರಬೇಕು. ಅಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಅವರ ಶಹರದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿದೆ. ಶಹರದ ಒಂದೆಡೆ ಹಿಂದು ಮುಸ್ಲಿಂ ದಂಗೆಯಾಗಿದೆ ಎಂದ. ಆಮೇಲೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ, ಶಹರದ ಯಾವುದೂ ಒಂದು ಮೂಲೆಯಲ್ಲಿ ಗಲಾಟಿಯಾಗಿರುವುದು ವಾಹನಗಳು ಓಡಾಡುತ್ತಿವೆ, ಜನ ಸಹ ತಿರುಗಾಡುತ್ತಿದ್ದಾರೆ ಎಂದಾಗ ಲೋಹಿತನಿಗೆ ಸ್ವಲ್ಪ ಧೈರ್ಯ ಬಂತು.
    ಅವನು ಯೋಚನೆ ಮಾಡುತ್ತಿರುವುದನ್ನು ಕಂಡು ಅರ್ಷದ್ ಕಾರಣ ಕೇಳಿದ.
    “ಅಲ್ಲಿ ರಾತ್ರಿ ಹಿಂದು ಮುಸ್ಲಿಂ ದಂಗೆಯಾಗಿದೆಯಲ್ಲ”

    “ಇತ್ತೀಚೆಗೆ ಅಲ್ಲಿ ದಿನನಿತ್ಯ ದಂಗೆಯಾಗುತ್ತಲೆಯಿವೆ. ಎರಡು ಕಡೆಯವರು ಬೇರೆಲ್ಲ ವ್ಯವಹಾರ ಬಿಟ್ಟು ಗಲಾಟೆ ಮಾಡುವುದಕ್ಕೆ ನಿಂತು ಬಿಟ್ಟಿದ್ದಾರೆ. ಮೊನ್ನೆ ನಾನು ಅಲ್ಲಿ ಹೋಗಿದ್ದೆ, ಬಾಡಿಗೆ ಸಿಕ್ಕಿತ್ತು, ರಸ್ತೆಯಲ್ಲಿ ಜನ ಹೆದರಿಸಿದರು, ಆದರೆ ಅಲ್ಲಿ ಹೋದಾಗ ಎಲ್ಲಾ ಸಹಜವಾಗಿತ್ತು. ಯಾವುದೋ ಒಂದು ಏರಿಯದಲ್ಲಿ ಸ್ವಲ್ಪ ಬಿಗುವಿನ ವಾತಾವರಣವಿರುತ್ತೆ ಆ ಕಡೆ ಹೋಗಬಾರದು, ಅರ್ಷದ್ ಹೇಳಿದ ಧೈರ್ಯದಿಂದ.

    ರಸ್ತೆಯಲ್ಲಿ ಭೇಟಿಯಾದ ಆ ಹಿಂದು ಮಹಿಳೆಯ ಬಗ್ಗೆ ಯೋಚಿಸಿದ ಲೋಹಿತ, ಮುಸ್ಲಿಂರ ಮಗುವನ್ನು ಪೋಷಿಸುತ್ತಿರುವ ಆ ಅವಿದ್ಯಾವಂತೆ ಮಹಿಳೆಯಲ್ಲಿರುವ ಮಾನವೀಯತೆ ವಿದ್ಯಾವಂತರಲಿಲ್ಲ.
    ಅರ್ಷದ್ ಹೇಳಿದ ಮಾತಿನಿಂದ ಅವನಿಗೆ ಸ್ವಲ್ಪ ಸಮಾಧಾನವಾಯಿತು. ಯಾವ ಅನಾಹುತವಿಲ್ಲದೆ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿದರೆ ಸಾಕೆಂದು ಮನದಲ್ಲಂದುಕೊAಡ.

    ಇನ್ನೇನು ಅರ್ಧ ಗಂಟೆಯಲ್ಲಿ ಅವರ ಕಾರು ಶಹರದ ಗಡಿ ದಾಟಬೇಕೆಂದುವಷ್ಟರಲ್ಲೇ ರವೀಂದ್ರ ಫೋನ್ ಮಾಡಿ ಶಹರದ ಎಲ್ಲಾ ಕಡೆ ದಂಗೆ ಎದ್ದಿದೆ, ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿಲ್ಲ, ಅಂಗಡಿ ಮುಂಗಟ್ಟು ಮುಚ್ಚಲಾಗಿವೆ, ರಸ್ತೆಗಳಲ್ಲಿ ವಾಹನಗಳ, ಜನಗಳ ಸಂಚಾರವಿಲ್ಲ, ಹಲವಾರು ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
    “ಏನಂತೆ ಸಾರ್” ಅರ್ಷದ್ ಕೇಳಿದ.
    “ಏನಿಲ್ಲ ನೀವಂತು ಎಚ್ಚರದಿಂದಿರಿ”

    “ನೀವು ಭಯ ಪಡಬೇಡಿ” ಎಂದು ಅರ್ಷದ್ ಹೇಳುತ್ತಿರುವಾಗಲೇ ಎದುರಿಂದ ಒಂದು ಕಾರು ಬಂತು. ಅದರ ಗಾಜು ಹೊಡೆದು ಹೋಗಿದ್ದವು, ಬಾನೇಟ್ ಮೇಲೆ ನಾಲ್ಕಾರು ಕಡೆ ರಕ್ತದ ಕಲೆಗಳಿದ್ದವು, ಕಾರಿನಲ್ಲಿರುವವರು ತುಂಬ ಭಯಭೀತಿಕ್ಕೊಳಗಾಗಿದ್ದರು.

    ಲೋಹಿತನ ಕಾರು ಹೊರವಲಯಲ್ಲಿತ್ತು. ಇನ್ನೇನು ಶಹರದೊಳಗೆ ಪ್ರವೇಶಿಸಬೇಕು ಅಷ್ಟರಲ್ಲಿ ಕಾರನ್ನು ಪೋಲಿಸರು ನಿಲ್ಲಿಸಿದರು. ಪೋಲಿಸರು ಯಾವ ವಾಹನವು ಒಳಗೆ ಹೋಗದಂತೆ ತಡೆಯುತ್ತಿದ್ದರು. ಶಹರದೊಳಗಿನಿಂದ ಬರುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು.

    ಅರ್ಷದ್ ಒಂದೆಡೆ ಕಾರು ನಿಲ್ಲಿಸಿಬಿಟ್ಟ, ಇನ್ನು ಶಹರದೊಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದೆನಿಸುತ್ತಿರುವಾಗಲೇ ರವೀಂದ್ರ ಫೋನ್ ಮಾಡಿ ಅವನ ಮಡದಿಗೆ ಕೂಡಲೇ ರಕ್ತ ಬೇಕಾಗಿದೆ. ರಕ್ತದ ಗ್ರೂಪ್ ಎಬಿ ನೆಗೆಟಿವ್, ಇಲ್ಲಿ ಆಸ್ಪತ್ರೆಯಲ್ಲಿ ಆ ಗ್ರೂಪ್‌ನ ರಕ್ತವಿಲ್ಲ. ಈ ಸಮಯದಲ್ಲಿ ಹೊರಗಿನಿಂದ ತರಿಸಲು ಸಹ ಸಾಧ್ಯವಿಲ್ಲ ಎಂದು ನಿರಾಸೆಯಿಂದ ತಿಳಿಸಿದ. ಆ ಗ್ರೂಪ್‌ನ ರಕ್ತ ಸಿಗಬೇಕಾದರೆ ಸ್ವಲ್ಪ ಕಷ್ಟವೇ. ಲೋಹಿತ ಯೋಚಿಸಿದ.

    ಆದಷ್ಟು ಬೇಗ ಬಿಗುವಿನ ವಾತಾವರಣ ಕಡಿಮೆಯಾಗಿ ಆಸ್ಪತ್ರೆಗೆ ತಲುಪಿದರೆ ಸಾಕೆಂದು ಯೋಚಿಸಿದ. ಎಂಥ ಪರೀಕ್ಷೆಯ ಸಮಯ ಎದುರಾಗಿದೆ. ಒಬ್ಬರ ಜೀವ ರಕ್ಷಣೆ ಮಾಡುವ ಅವಕಾಶ ಸಿಕ್ಕಿಯೂ ಸ್ವಲ್ಪದರಲ್ಲಿ ತಪ್ಪಿ ಹೋಗುತ್ತಿದೆಯಲ್ಲ. ಹೀಗೆಲ್ಲ ಯೋಚಿಸಲು ಮುಖ್ಯಕಾರಣವೇನೆಂದರೆ ಲೋಹಿತನ ರಕ್ತದ ಗ್ರೂಪ್ ಸಹ ಎಬಿ ನೆಗೆಟಿವ್ ಆಗಿತ್ತು.

    ತನ್ನ ರಕ್ತದ ಗ್ರೂಪ್ ಯಾವುದೆಂದು ಅವನು ಗೆಳೆಯನಿಗೆ ಹೇಳದೆ ನೇರವಾಗಿ ಹೋಗಿ ಕೊಟ್ಟೆ ಬಿಡೋಣ ಎಂದು ಅವನ ಲೆಕ್ಕಾಚಾರವಾಗಿತ್ತು.

    ಸ್ವಲ್ಪ ಸಮಯದ ಬಳಿಕ ಸುರೇಂದ್ರ ಫೋನ್ ಮಾಡಿ ಅವರೆಲ್ಲಿದ್ದಾರೆಂದು ವಿಚಾರಿಸಿದ, ಶಹರದ ಹೊರವಲಯದಲ್ಲಿದ್ದೇನೆ ಶಹರದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ವಿವರಿಸಿದಾಗ, ಹಿಂತಿರುಗಿ ಹೊರಟು ಹೋಗಿ ಜೀವದ ಹಂಗು ಬಿಟ್ಟು ಒಳ ಬರಬೇಡಿ, ಆಸ್ಪತ್ರೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಾಗಿದ್ದಾರೆ ಖಂಡಿತವಾಗಿ ಬರಬೇಡಿ ಬೇಡಿಕೊಂಡ ಸುರೇಂದ್ರ.

    ಬೇರೆ ಸಂದರ್ಭವಾಗಿದ್ದರೆ ಅವನು ಹಿಂತಿರುಗಿ ಹೋಗುತ್ತಿದ್ದ. ಆದರೆ ಗೆಳೆಯನ ಮಡದಿಗೆ ರಕ್ತದ ಅವಶ್ಯಕತೆ ಇರುವುದನ್ನು ತಿಳಿದು ಹಿಂತಿರುಗಿ ಹೋಗುವುದು ಸರಿಯಿಲ್ಲ. ಇಲ್ಲೇ ಇದ್ದು ಶಹರದ ಸ್ಥಿತಿ ಸುಧಾರಣೆಯಾಗುವ ವರೆಗೆ ಕಾಯಬೇಕು. ಕಾರು ಶಹರದೊಳಗೆ ಪ್ರವೇಶಿಸಲು ಅವಕಾಶ ಕೊಟ್ಟರೆ ಸಾಕೆಂದು ಯೋಚಿಸಿದ.

    ಶಹರದೊಳಗೆ ಯಾವ ವಾಹನವೂ ಹೋಗದಂತೆ ತಡೆದಿರುವುದರಿಂದ ಅವನ ಕಾರಿನ ಹಿಂದೆ ಮುಂದೆ ಅನೇಕ ವಾಹನಗಳು ನಿಂತುಕೊಳ್ಳಲು ಆರಂಭಿಸಿದವು. ನೋಡುನೋಡುತ್ತಿದ್ದಂತೆ ವಾಹನಗಳ ಸಾಲ ಹೆಚ್ಚಾಗತೊಡಗಿತ್ತು.
    ವಾಹನದೊಳಗೆ ಕುಳುತಿರುವವರು ಪೈಕಿ ಯಾರೊಬ್ಬರು ಹೊರ ಬಾರದೆ ಒಳಒಳಗೆಯೇ ಭಯ ಭೀತಿಕ್ಕೊಳಗಾಗಿ ಮೌನ ಧರಿಸಿಕೊಂಡಿದ್ದರು. ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆದಾಗ ಸಾಲಾಗಿ ನಿಂತಿರುವ ವಾಹನಗಳು ಹಾರನ್‌ಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೇ ಯಾರೊಬ್ಬರು ಇಂಜಿನ್‌ಗಳನ್ನು ಆಫ್ ಮಾಡುವುದಿಲ್ಲ. ಆದರೆ ಈಗ ಇಲ್ಲಿ ಬೇರೆಯೇ ಸನ್ನವೇಶವಿತ್ತು” ನಿಜ ಸಂಗತಿ ಏನೆಂದು ಅರಿತು ಎಲ್ಲರೂ ಇಂಜಿನ್‌ಗಳನ್ನು ಆಫ್ ಮಾಡಿದ್ದರು. ಮೌನವಾಗಿ ಹೋಗಿದ್ದರು ಮತ್ತು ಒಬ್ಬರನೊಬ್ಬರನ್ನು ಸಂದೇಹದಿAದ ನೋಡುತ್ತಿದ್ದರು.

    ರಕ್ತ ಸಿಕ್ಕಿದಿಯೋ ಇಲ್ಲವೋ ಅವನು ಎಷ್ಟೊಂದು ಸಂಕಷ್ಟದಲ್ಲಿದ್ದಾನೆಯೋ ಅವನಿಗೆ ಫೋನ್ ಮಾಡಿದಾಗ ಅವನ ಮೊಬೈಲ್ ಬೇರೆ ಸ್ವಿಚ್ ಆಫ್ ಆಗಿತ್ತು. ಲೋಹಿತ ಯಾಕಿಷ್ಟು ಬೇಚೈನಾಗಿದ್ದಾನೆಂದು ಅರ್ಷದ್‌ಗೆ ತಿಳಿಯಲಿಲ್ಲ.
    “ಮನೆಯಿಂದ ಸ್ವಲ್ಪ ಮುಂಚಿತವಾಗಿ ಹೊರಟ್ಟಿದ್ದರೆ ಅಥವಾ ಶಹರದೊಳಗೆ ಪ್ರವೇಶಿಸಲು ಅವಕಾಶ ಸಿಕ್ಕಿದ್ದರೆ ಕಾರು ಅತಿವೇಗದಿಂದ ಚಲಾಯಿಸುತ್ತ ಆಸ್ಪತ್ರೆಗೆ ತಲುಪಿಸಿ ಬಿಡುತ್ತಿದ್ದೆ” ಅರ್ಷದ್ ಹೇಳಿದ.
    ಆದರೆ ಲೋಹಿತ ತನ್ನದೇ ವಿವಾರದಲ್ಲಿ ಮುಳುಗಿದ್ದ.

    ನಾನು ಎಲ್ಲಾ ವಿಷಯದ ಬಗ್ಗೆ ಪಾಸಿಟೀವ್ ಆಗಿ ಯೋಚಿಸುತ್ತೇನೆ. ನನ್ನ ರಕ್ತದ ಗ್ರೂಪ್ ಯಾಕೆ ನೆಗೆಟಿವ್, ಈಗಿನ ಕಾಲದಲ್ಲಿ ಒಳ್ಳೆ ಯೋಚನೆ ಮಾಡುವ ಜನರೇ ಇಲ್ಲವೇನು? ಮನುಷ್ಯ ಯಾಕೆ ಇಷ್ಟೊಂದು ಕ್ರೂರಿಯಾಗಿ ಧರ್ಮದ ಹೆಸರಿನಲ್ಲಿ ಯಾಕೆ ರಕ್ತ ಹರಿಸುತ್ತಿದ್ದಾನೆ. ವಿಜ್ಞಾನಿಗಳು ಆಕಾಶದಿಂದ ಬಾಂಬ್‌ಗಳನ್ನು ಬೀಳುಸುವುದರ ಬದಲು ಆಕಾಶದಿಂದ ಹೂಮಳೆ ಹೊಮ್ಮಿಸುವುದರ ಬಗ್ಗೆ ಯಾಕೆ ಯೋಚಿಸುತ್ತಿಲ್ಲ?

    ಲೋಕೇಶ ಏನೇನೋ ಯೋಚಿಸುತ್ತ ಕ್ಷಣದಿಂದ ಕ್ಷಣಕ್ಕೆ ಕಂಗಾಲಾಗಿ ಹೋಗುತ್ತಿರುವಾಗಲೇ ಫೋನ್ ಮೊಳಗಿತ್ತು. ಸುರೇಂದ್ರನ ಫೋನ್ ಇರುವುದರಿಂದ ಲೋಹಿತ ತನ್ನ ಹೃದಯದ ಬಡಿತದ ಮೇಲೆ ನಿಯಂತ್ರಣ ಪಡೆಯುತ್ತ ಮೊಬೈಲ್ ಆನ್ ಮಾಡಿದ.

    ಬಂತು ಗೆಳೆಯನ ಮಡದಿಗೆ ಸಕಾಲದಲ್ಲಿ ರಕ್ತ ಸಿಕ್ಕಿದೆ ಎಂಬ ಸಂತೋಷದ ಸುದ್ದಿ ದಂಗೆಯಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡಿರುವ ಗಾಯಾಳನೊಬ್ಬ ಜತೆಯಲ್ಲಿ ಬಂದಿದ್ದ ಮುಸ್ಲಿಂ ಯುವಕನೊಬ್ಬನ ರಕ್ತದ ಗ್ರೂಪ್ ಎಬಿ ನೆಗೆಟಿವ್ ಆಗಿದ್ದು, ವೈದ್ಯರು ಅವನಿಗೆ ಒಬ್ಬ ರೋಗಿಗೆ ರಕ್ತದ ಅವಶ್ಯಕತೆಯಿದೆ ಎಂದಾಗ ಅವನು ಯಾರಿಗೆ ಏನೇಂತು ಬಗ್ಗೆ ವಿಚಾರಿಸಿದೆ ರಕ್ತದಾನ ಮಾಡಿದ.

    ಲೋಹಿತ ಇದೆಲ್ಲವನ್ನು ಕೇಳಿದ ಬಳಿಕ ಮೌನ ಧರಿಸಿಕೊಂಡ, ರಸ್ತೆಯಲ್ಲಿ ಸಿಕ್ಕಿದ ಮುಸ್ಲಿಮ್ ಮಗುವನ್ನು ಸಲಹುತ್ತಿರುವ ಮಹಿಳೆ ಮತ್ತು ಇಂಥ ದಂಗೆಯ ಸಮಯದಲ್ಲಿ ಹಿಂದು ಮಹಿಳೆಗೆ ರಕ್ತ ನೀಡಿದ ಮುಸ್ಲಿಂ ಯುವಕ, ಇವರಿಬ್ಬರೂ ಅವನ ಮನಸ್ಸಿನಲ್ಲಿ ತುಂಬಿಕೊAಡಿದ್ದರು.

    ಈಗಿನ ಸ್ಥಿತಿಯಲ್ಲಿ ಇಂಥವರೇ ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಕತ್ತಲೆ ಹರಡಿಕೊಂಡಿರುವ ಈ ಸಮಯದಲ್ಲಿ ಇವರೇ ಮಿನುಗುವ ನಕ್ಷತ್ರಗಳು.

    ಲೋಹಿತನ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿರುವ ಕಣ್ಣೀರನ್ನು ಕಂಡು “ಯಾಕೆ ಸಾರ್ ಕಣ್ಣೀರು ಹಾಕುತ್ತಿದ್ದೀರಾ?”
    ಅರ್ಷದ್ ಕೇಳಿದ.

    ಅದೀಬ್ ಅಖ್ತರ್, ಮೈಸೂರು

  • ಅಡುಗೆ ಮನೆಯೆಂಬ ಔಷಧಾಲಯ: 
ಯಾವ ಮಸಾಲೆ-ತರಕಾರಿ ಯಾವುದಕ್ಕೆ ಪ್ರಯೋಜನಕಾರಿ?

    ಅಡುಗೆ ಮನೆಯೆಂಬ ಔಷಧಾಲಯ: ಯಾವ ಮಸಾಲೆ-ತರಕಾರಿ ಯಾವುದಕ್ಕೆ ಪ್ರಯೋಜನಕಾರಿ?

    ಆಹಾರವು ನಮ್ಮ ಜೀವನಶೈಲಿಯ ಬಹುಮುಖ್ಯ ಪಾತ್ರವಾಗಿದೆ. ಸಾಮಾನ್ಯವಾಗಿ ಅಡುಗೆ ಮನೆ ಎಂದರೆ ಅಮ್ಮ ಹಾಗೂ ರುಚಿಕರ ಅಡುಗೆಗಳು ಅಷ್ಟೆ ನಮಗೆ ನೆನಪಾಗುತವೆ. ಆದರೆ ಅಡುಗೆಯಲ್ಲಿ ಬಳಸುವ ಗಿಡಮೂಲಿಕೆಗಳು, ಹಣ್ಣುಗಳು, ತರಕಾರಿಗಳು ಮಸಾಲೆಗಳು ಪ್ರಥಮ ಚಿಕಿತ್ಸೆಗಾಗಿ ಮತ್ತು ನಿರ್ದಿಷ್ಟ ರೋಗಗಳನ್ನು ಪರಿಹರಿಸಲು ಬಳಸಬಹುದಾದ ಪ್ರಾಯೋಗಿಕ ವರ್ಗವಾಗಿದೆ.

    ನಿಮಗಿದು ಗೊತ್ತೇ?

    ಈ ಕಾಲದಲ್ಲಿ ಕಾಣುತ್ತಿರುವ ರೋಗಗಳಿಗೆ ನಮ್ಮ ಆಹಾರ ಪದ್ಧತಿಯ ಬದಲಾವಣೆಯು ಒಂದು ಕಾರಣವಾಗಿದೆ. ಅದೇಷ್ಟೋ ಕಾಯಿಲೆಗಳಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಔಷದಿ ಅಡಗಿದ. ನಮ್ಮ ಆಹಾರದ ಪೌಷಕಾಂಶವನ್ನು ತಿಳಿದು ಅದನ್ನು ನಮ್ಮ ದಿನನಿತ್ಯದಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸಿದರೆ ನಮ್ಮ ಆರೋಗ್ಯದ ಸಮಸ್ಯೆಯನ್ನು ನಾವು ಸುಧಾರಿಸಬಹುದು.

    ಏನಿದು ಅಡುಗೆ ಮನೆಯ ಔಷದಿಗಳು:

    ನವಧಾನ್ಯ: ಧಾನ್ಯಗಳಲ್ಲಿ ನಾರಿನಾಂಶ ಎಂದರೆ (ಫೈಬರ್) ಅಧಿಕವಾಗಿರುವುದರಿಂದ ನಮ್ಮ ಜೀರ್ಣ ಶಕ್ತಿಯನ್ನು ನಿಧಾನಗೊಳಿಸಿ ನಮ್ಮ ಹಸಿವನ್ನು ಕಡಿಮೆಗೊಳಿಸುತ್ತದೆ. ಪ್ರೋಟೀನ್, ಫೈಬರ್ ಪಮುಖ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

    ತರಕಾರಿಗಳು ನಮ್ಮ ದಿನ ನಿತ್ಯದಲ್ಲಿ ಸುಲಭವಾಗಿ ಸಿಗುವ ಆರೋಗ್ಯಕರವಾದದ್ದು ಈ ತರಕಾರಿಗಳು, ತರಾಕಾರಿಗಳು ಸಾಕಷ್ಟು ಆಹಾರದ ಫೈಬರ್ ಅನ್ನು ಒದಗಿಸುವ ಮೂಲಕ ನಮ್ಮ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಯಾವ ತರಕಾರಿಗಳಲ್ಲಿ ಲಾಭವೇನಿದೆ ಎಂದು ನೋಡಿದರೆ,

    ಹಾಗಲಕಾಯಿ: ಇದು ರುಚಿಯಲ್ಲಿ ಕಹಿಯಿದ್ದರೂ, ಹೊಟ್ಟೆಯಲ್ಲಿರುವ ಜಂತುಹುಳಗಳನ್ನು ನಾಶಮಾಡುತ್ತವೆ. ಸಕ್ಕರೆಕಾಯಿಲೆಗೂ ಒಳ್ಳೆಯ ಔಷಧಿ.

    ಕ್ಯಾರೆಟ್: ಕ್ಯಾರೆಟ್ ವಿಟಮಿನ್ ಎ ಇದರ ಉತ್ತಮ ಮೂಲವಾಗಿದ್ದು ಕಣ್ಣಿನ ಆರೋಗ್ಯವನ್ನು ಸುಧಾರಿಸಿತ್ತದೆ. ಇದರ ವೈಶಿಷ್ಟ್ಯತೆಯೆಂದರೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಜೊತೆಗೆ ಬೀಟಾ- ಕ್ಯಾರೋಟಿನ್ ಸೇರಿದಂತೆ ಆಂಟಿ ಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿದೆ. ಕ್ಯಾರೆಟ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕ್ಯಾರೆಟ್‌ನಲ್ಲಿ ಇರುವ ಖನಿಜ, ಪೊಟ್ಯಾಸಿಯಮ್, ಸೋಡಿಯಂ ಶ್ರೇಣಿಗಳನ್ನು ಸಮತೋಲನಗೊಳಿಸಲು ಮತ್ತು ದೇಹದಿಂದ ಹೊರಹಾಕಲು ಅನುವು ಮಾಡಿಕೊಡುತ್ತದೆ.

    ಬೀಟ್ರೋಟ್: ಬೀಟ್ರೋಟ್ ಸಹ ಕಡಿಮೆ ಕ್ಯಾಲರಿಗಳನ್ನು ಹೊಂದಿದ್ದು ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೌಷ್ಠಿಕ ಸತ್ವಗಳು ಹೇರಳವಾಗಿ ಹೊಂದಿದೆ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಮ್ಯಾಂಗನೀಸ್, ಪೋಟಾಸಿಯಂ ಹೆಚ್ಚಾಗಿ ಹೊಂದಿದೆ. ಬೀಟ್ರೋಟ್ ನಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಹೀಗೆ ಇನ್ನು ಹಲವಾರು ತರಕಾರಿಗಳು ತನ್ನದೇ ಆದ ವೈಪುಲ್ಯತೆಯನ್ನು ಹೊಂದಿದೆ. ಆದರೆ ಈಗಿನ ಜೀವನಶೈಲಿಯಲ್ಲಿ ಯಾವುದು ಆರ್ಗ್ಯಾನಿಕ್ ಇಲ್ಲದಿರುವ ಕಾರಣದಿಂದಾಗಿ ನಾವು ತರಕಾರಿಗಳನ್ನು ಇಪ್ಪತ್ತು ನಿಮಿಷಗಳ ಕಾಲ ಉಪ್ಪಿನ ನೀರಿನಲ್ಲಿ ನೆನಸುವುದರಿಂದ ಅದರ ವಿಷಯಕಾರಿ ರಾಸಾಯನಿಕಗಳ ಪರಿಣಾಮ ವನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನೀರಿನ ಆವಿಯಲ್ಲಿ ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ಅದರ ಪೌಷ್ಟಿಕಾಂಶತೆಯನ್ನು ಹೆಚ್ಚಾಗಿ ಪಡೆಯಬಹುದು.

    ಮಸಾಲೆಗಳು:

    ಮಸಾಲೆಗಳು ರೋಗ ನೀರೊಧಕ ಶಕ್ತಿಯನ್ನು ಹೊಂದಿದ್ದು, ಜೀವಕೋಶಹಾನಿಯಿಂದ ತಡೆಯುತ್ತದೆ. ಅರಿಶಿನ, ದಾಲ್ಚಿನ್ನಿ, ಲವಂಗ, ಮೆಣಸು ಇತ್ಯಾದಿ. ಅರಿಶಿಣದಲ್ಲಿ ಆಂಟಿ ಕ್ಯಾನ್ಸರ್ ಎಂದರೆ ಕ್ಯಾನ್ಸರ್ ತಡೆಗಟ್ಟುವ ಗುಣಲಕ್ಷಣಗಳಿವೆ ಎಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ. ಲವಂಗ ಎಣ್ಣೆಯು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು, ಬ್ಯಾಕ್ಟಿರಿಯಾದ ಸೋಂಕನ್ನು ಎದುರಿಸಲು ಮತ್ತು ಮೊಡವೆಗಳನ್ನು ಪರಿಹರಿಸಲು ಪ್ರಯೋಜನಕಾರಿಯಾಗಿದೆ.

    ನಮ್ಮ ಮನೆಗಳಲ್ಲಿ ಸಹಜವಾಗಿ ಕೆಮ್ಮು, ನೆಗಡಿ, ಅರ್ಜಿಣವಾದಾಗ ಮಸಾಲೆಗಳಿಂದ ಮಾಡಿದ ಕಷಾಯ ಉಪಯೋಗಿಸುತ್ತೇವೆ. ಅದರಲ್ಲಿ ಬೆಳುಳ್ಳಿಗೆ ವಿಶೇಷವಾದ ಸ್ಥಾನವಿದೆ. ಮೊದಲ ಶತಮಾನದಿಂದಲೂ ಆಯುರ್ವೇದ ಔಷಧದಲ್ಲಿ ಬೆಳ್ಳುಳ್ಳಿ ರಕ್ತದ ದ್ರವತೆಗಳನ್ನು ಕಾಪಾಡಿಕೊಳ್ಳುವ ಮೂಲಕ ಹೃದಯದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕವಾಗಿ ಬೆಳ್ಳುಳ್ಳಿಯ ಸೇವನೆಯಿಂದ ಹೃದಯ ಸಂಬAಧಿತ ಕಾಯಿಲೆಗಳನ್ನು ತಡಗಟ್ಟಬಹುದೆಂದು ತಿಳಿಸಿವೆ. ಬೆಳ್ಳುಳಿ ನಮ್ಮ ರಕ್ತದ ಒಳ್ಳೆಯ ಕೊಬ್ಬಿನಾಂಶ (HDL) ವನ್ನು ಹೆಚ್ಚಿಸಿ, ಕೆಟ್ಟ ಕೊಬ್ಬಿನಾಂಶವನ್ನು (LDL) ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಬೆಳುಳ್ಳಿಯ ಸ್ನೇಹಿತನಾದ ಶುಂಠಿಯು ಸಹ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿವೆ. ಶುಂಠಿಯಲ್ಲಿನ ಘಟಕಾಂಶವಾದ ಜಿಂಜರಾಲ್ ಎಂಬ ಅಂಶವು ಇದು ರಕ್ತನಾಳಗಳಲ್ಲಿ ರಕ್ತದ ಸಂಚಲನವನ್ನು ಉತ್ತೇಜಿಸುತ್ತಾ ಅದರಿಂದಾಗಿ ರಕ್ತದ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ ಶುಂಠಿಯಲ್ಲಿ ನೋವು ನಿವಾರಕ ಶಕ್ತಿಯಿದೆಯೆಂದು ಕೆಲವೊಂದು ಅಧ್ಯಯನಗಳು ತಿಳಿಸಿವೆ.

    ಹೀಗೆ ದಿನನಿತ್ಯದಲ್ಲಿ ಉಪಯೋಗಿಸುವ ಹಲವಾರು ಅಡುಗೆ ಪದಾರ್ಥಗಳ ವೈಶಿಷ್ಟ್ಯತೆಯನ್ನು ತಿಳಿದು ನಮ್ಮ ಊಟದ ಬಳಕೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಅಳವಡಿಸುವುದರಿಂದ ಕೆಲವೊಂದು ರೋಗಗಳು ಸುಧಾರಣೆಯನ್ನು ಕಾಣಬಹುದು.

    ಅದರಲ್ಲಿಯು ಹಸಿರು ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ, ವಿಟಮಿನ್ ಎ, ಬಿ, ಸಿ, ಖನಿಜಾಂಶಗಳೂ ವಿಪುಲವಾಗಿವೆ.