Tag: #womens problem

  • “ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” 
ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

    “ಹೆಣ್ಮಕ್ಕಳ ಸಂವೇದನೆಗೆ ಧ್ವನಿಯಾದ ಅನುಪಮ” ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಶ್ಲಾಘನೆ

    ವಿರಾಜಪೇಟೆ: “ಒಂದು ಪತ್ರಿಕೆಯು ತನ್ನ ಒಳಗಿನ ಗುಣಮಟ್ಟದ ಹೂರಣದಿಂದ ಮಾತ್ರ ಸಮಾಜಕ್ಕೆ ಅಗಾಧವಾದ ಸತ್ವವನ್ನು ನೀಡಲು ಸಾಧ್ಯ. ಕಳೆದ 25 ವರ್ಷಗಳಿಂದ ‘ಅನುಪಮ’ ಪತ್ರಿಕೆಯು ಹೆಣ್ಣುಮಕ್ಕಳ ಸೂಕ್ಷ್ಮ ಸಂವೇದನೆಗಳಿಗೆ ರೆಕ್ಕೆ ಕಟ್ಟಿ, ಸಮಾಜದಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಹತ್ತರ ಕಾರ್ಯ ಮಾಡುತ್ತಿದೆ” ಎಂದು ಅರಮೇರಿ ಶ್ರೀ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

    ವಿರಾಜಪೇಟೆಯ ಬ್ರೈಟ್ ಪಬ್ಲಿಕ್ ಸ್ಕೂಲ್‌ನಲ್ಲಿ ದಿನಾಂಕ 11-02-2026ರ ಬುಧವಾರದಂದು ಜರುಗಿದ ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿಹಬ್ಬದ ಸಂಭ್ರಮ ಮತ್ತು ಓದುಗರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಅವರು, “ಸಮಾಜವನ್ನು ಮುನ್ನಡೆಸುವ ಅಪ್ರತಿಮ ಶಕ್ತಿ ತಾಯಂದಿರಿಗಿದೆ; ಈ ಮಣ್ಣಿನ ತಾಯಂದಿರು ಸಾತ್ವಿಕವಾದ ಆಲೋಚನೆ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮೃದ್ಧವಾದ ಸಮಾಜ ನಿರ್ಮಾಣ ಸಾಧ್ಯ” ಎಂದು ತಿಳಿಸಿದರು.

    “ಇಂದಿನ ರೀಲ್ಸ್ ಹಾಗೂ ಇಂಟರ್ನೆಟ್ ಲೋಕದಲ್ಲಿ ಮನೋವಿಕಾರಗಳೇ ಹೆಚ್ಚಾಗುತ್ತಿದ್ದು, ಇವುಗಳ ನಡುವೆ ಮಕ್ಕಳ ಮಾನಸಿಕತೆಯನ್ನು ಅರಿತು ಓದುಗರಲ್ಲಿ ಸಾತ್ವಿಕ ಭಾವನೆ ಮೂಡಿಸುವ ಕೆಲಸಕ್ಕೆ ನಿರಂತರ ಅಧ್ಯಯನಶೀಲತೆ ಅಗತ್ಯ” ಎಂದು ಸ್ವಾಮೀಜಿಯವರು ಮಾರ್ಗದರ್ಶನ ನೀಡಿದರು. “ಬದುಕಿನಲ್ಲಿ ‘ಕೇವಲ ಹಣ ಗಳಿಕೆಯೊಂದೇ ಮುಖ್ಯವಲ್ಲ, ಉತ್ತಮ ಆಲೋಚನೆಗಳು ಮುಖ್ಯ’ ಎಂಬ ಸಂದೇಶವನ್ನು ನೀಡುತ್ತಿರುವ ಅನುಪಮ ಪತ್ರಿಕೆಯು ಕೇವಲ ಓದಿನ ವಸ್ತುವಾಗದೆ ಪ್ರತಿಯೊಬ್ಬರ ಜೀವನದ ಹೃದಯದಲ್ಲಿ ಸ್ಥಾನ ಪಡೆಯಬೇಕು” ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕಿ ಹೆಚ್.ಜಿ. ಸಾವಿತ್ರಿ ಅವರು ಮಾತನಾಡಿ, “ಒಂದು ಮಹಿಳಾ ಪತ್ರಿಕೆಯನ್ನು ಯಾವುದೇ ಅಡೆತಡೆಗಳಿಗೆ ಬಗ್ಗದೆ ಇಷ್ಟು ವರ್ಷಗಳ ಕಾಲ ನಿರಂತರವಾಗಿ ನಡೆಸುವುದು ಒಂದು ಸಂಕಲ್ಪದ ಸುದೀರ್ಘ ಪಯಣ” ಎಂದು ಶ್ಲಾಘಿಸಿದರು.

    ವಕೀಲರಾದ ಸಿಂಧೂರ ಎನ್. ಸ್ವಾಮಿ ಅವರು ಮಾತನಾಡಿ, “ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಪತ್ರಿಕೆಯಲ್ಲಿ ‘ಕಾನೂನು ಅರಿವು’ ಮೂಡಿಸುವ ಲೇಖನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಇದು ಶೋಷಣೆ ಮುಕ್ತ ಬದುಕಿಗೆ ದಾರಿಯಾಗಬೇಕು” ಎಂದು ಸಲಹೆ ನೀಡಿದರು.

    ಪತ್ರಿಕೆಯ ಪ್ರಧಾನ ಸಂಪಾದಕಿ ಶಹನಾಝ್ ಎಂ. ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಅನುಪಮ ಪತ್ರಿಕೆಯು ಕಳೆದ 25 ವರ್ಷಗಳಿಂದ ನಡೆದು ಬಂದ ಸುದೀರ್ಘ ಹಾದಿಯನ್ನು ಸ್ಮರಿಸಿದರು. “ಒಂದು ಪತ್ರಿಕೆಗೆ ಓದುಗರೇ ನಿಜವಾದ ಬಂಡವಾಳ, ನಿಮ್ಮ ಬೆಂಬಲವೇ ನಮ್ಮ ಯಶಸ್ಸು” ಎಂದು ಅವರು ಕೃತಜ್ಞತೆ ಸಲ್ಲಿಸಿದರು.

    ವಿಶೇಷವಾಗಿ ನಾಲ್ವರು ಓದುಗರಾದ ಶ್ರೀಮತಿ ಜಯಶ್ರೀ ಶ್ರೀಮತಿ ಪುಷ್ಪ, ಶಿವರಾಂ ಮತ್ತು ಗುಲ್ನಾರ್ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು

    ಕಾರ್ಯಕ್ರಮವು ರಹಮತ್ ಟಿ.ಪಿ. ಅವರ ಕುರಾನ್ ಪಠಣದೊಂದಿಗೆ ಆರಂಭವಾಯಿತು. ನಂತರ ಮುಹೀನಾ ಮುಹಮ್ಮದ್ ಅವರು ಎಲ್ಲರನ್ನೂ ಸ್ವಾಗತಿಸಿದರು. ಸಮಾರಂಭದ ವೇದಿಕೆಯಲ್ಲಿ ಲೇಖಕಿ ಸಾಜಿದಾ ಮೂಮಿನ್ ಉಪಸ್ಥಿತರಿದ್ದರು. ಪತ್ರಿಕೆಯ ಉಪಸಂಪಾದಕಿ ಸಮೀನಾ ಯು. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮೀರಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಅಬ್ದುಲ್ ರಹಮಾನ್ ಅವರು ಧನ್ಯವಾದ ಸಮರ್ಪಿಸಿದರು.

  • ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

    ಧಾರವಾಡದಲ್ಲಿ ಅನುಪಮ 25ನೇ ರಜತ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ

    ಧಾರವಾಡ: ಅನುಪಮ ಮಹಿಳಾ ಮಾಸಿಕಕ್ಕೆ 25 ವರ್ಷ ಪೂರ್ಣಗೊಂಡ ಈ ಸುಸಂದರ್ಭದಲ್ಲಿ ಅನುಪಮ ಓದುಗರಿಂದ ಧಾರವಾಡದಲ್ಲಿ 25ನೇ ರಜತ ಮಹೋತ್ಸವ ಆಚರಣೆ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಾಡಲಾಯಿತು.

    ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ ರಂಗಾಯಣದಲ್ಲಿ ಫೆಬ್ರವರಿ 7ಕ್ಕೆ ಕಾರ್ಯಕ್ರಮ ನಡೆಯಿತು.

    ಮುಖ್ಯ ಅತಿಥಿಗಳು:

    ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಶಂಕರ ಹಲಗತ್ತಿ, ಸ್ನೇಹ ಶಿಕ್ಷಣ & ಅಭಿವೃದ್ಧಿ ಸಂಸ್ಥೆಯ ಯೋಜನಾ ಸಂಯೋಜಕಿ ಶ್ರೀಮತಿ ನಾಗರತ್ನ ಎಸ್. ಜಡೇದ, ಪರಿಸರ ರಕ್ಷಣೆ ಮತ್ತು ಸಾಮಾಜಿಕ ಕಾರ್ಯಕರ್ತೆ ಡಾ| ಪೂರ್ಣಿಮಾ ಗೌರೋಜಿ ಹಾಗೂ ಶಿಕ್ಷಕಿ ಶ್ರೀಮತಿ ಶೋಭಾ ಶಿರಿಯಣ್ಣವ‌ರ್ ಭಾಗವಹಿಸಿದ್ದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಪಮ ಉಪಸಂಪಾದಕಿ ಶ್ರೀಮತಿ ಕುಲ್ಸೂಮ್ ಅಬೂಬಕ್ಕರ್ ವಹಿಸಿದ್ದರು.

    ವಿಶೇಷ ಸಂಚಿಕೆ ಬಿಡುಗಡೆ:

    ಕಾರ್ಯಕ್ರಮದ ಪ್ರಾರಂಭದಲ್ಲಿ ರಜತ ಮಹೋತ್ಸವದ ನೆನಪಿಗಾಗಿ ಸಿದ್ಧಪಡಿಸಲಾದ ಅನುಪಮ 25ನೇ ವರ್ಷದ ವಿಶೇಷ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು

    ಮುಖ್ಯ ಅತಿಥಿಗಳ ನಲ್ನುಡಿಗಳು :

    ಮುಖ್ಯ ಅತಿಥಿ ​ಶ್ರೀ ಶಂಕರ ಹಲಗತ್ತಿ ಮಾತನಾಡಿ “ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ಭಾಷೆಯು ಒಂದು ಪ್ರಬಲ ಮಾಧ್ಯಮ” ಎಂದು ಅಭಿಪ್ರಾಯಪಟ್ಟರು.

    ​ಶ್ರೀಮತಿ ನಾಗರತ್ನ ಎಸ್. ಜಡೇದ: “ಹೆಣ್ಣಿನ ಸಬಲೀಕರಣಕ್ಕೆ ಶಿಕ್ಷಣವೇ ಮೂಲಾಧಾರ. ಹೆಣ್ಣಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ” ಎಂದು ಸ್ತ್ರೀಶಕ್ತಿಯ ಮಹತ್ವವನ್ನು ಸಾರಿದರು.

    ಶ್ರೀಮತಿ ಶೋಭಾ ಶಿರಯಣ್ಣನವರ್ ಅನುಪಮ ಪತ್ರಿಕೆಯ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, “ಇದು ಕೇವಲ ಬರವಣಿಗೆಯಲ್ಲ, ಜೀವನದ ಹಾದಿಯನ್ನು ಸುಗಮಗೊಳಿಸುವ ಮಾರ್ಗದರ್ಶಿ” ಎಂದು ಶ್ಲಾಘಿಸಿದರು.

    ಶ್ರೀಮತಿ ಪೂರ್ಣಿಮಾ ಗೌರೋಜಿ, ಪತ್ರಿಕೆಯ ಸಾಧನೆಯನ್ನು ಪ್ರಶಂಸಿಸಿ, “ಮುಂದಿನ ದಿನಗಳಲ್ಲಿ ಪತ್ರಿಕೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು.

    ಇನ್ಸ್‌ಪೆಕ್ಟ‌ರ್ ಎಂ.ಎಂ. ತಹಶೀಲ್ದಾರ್ ಅವರು ಮಾತನಾಡಿ, “ಪ್ರತಿಯೊಂದು ಕಾರ್ಯದಲ್ಲೂ ಶ್ರದ್ಧೆ ಇದ್ದಾಗ ಅದು ಪೂಜನೀಯವಾಗುತ್ತದೆ” ಎಂದರು.

    ಅಧ್ಯಕ್ಷೀಯ ನುಡಿ:

    ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಕುಲ್ಸೂಮ್ ಅಬೂಬಕರ್ ಅವರು ಮಾತನಾಡಿ, “ಓದುವ ಹವ್ಯಾಸವು ಮನೆಯಿಂದಲೇ ಆರಂಭವಾಗಬೇಕು. ಪಾಲಕರು ಓದಿದರೆ ಮಕ್ಕಳು ಅದನ್ನು ಅನುಕರಿಸಿ ಬೆಳೆಸಿಕೊಳ್ಳುತ್ತಾರೆ. ಭಗವಂತ ನೀಡಿದ ಈ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು” ಎಂದು ಕರೆ ನೀಡಿದರು.

    ಸಾಧನೆಗೈದ ಗಣ್ಯರಿಗೆ ಸನ್ಮಾನ:

    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.

    UNO Awardee ಶ್ರೀಮತಿ ಬೀಬಿಜಾನ್ ಮೌಲಾಸಾಬ ಹಳೆಮನಿ

    Human Right Activist & Educationist ಮಿಸ್ ಲಿನ್ನೆಟ್ ಡಿಸಿಲ್ವಾ,

    ರಾಷ್ಟ್ರಪತಿ ಪದಕ ಪಡೆದ ವಿದ್ಯಾಗಿರಿ ಪೊಲೀಸ್ ಸ್ಟೇಷನ್ ಇನ್ಸ್‌ಪೆಕ್ಟ‌ರ್ ಶ್ರೀ ಎಂ.ಎಂ. ತಹಶೀಲ್ದಾರ

    ವಕೀಲರು ಹಾಗೂ ಮಹಿಳಾ ಹೋರಾಟಗಾರರಾದ ಶ್ರೀಮತಿ ಪ್ರಭಾವತಿ ದೇಸಾಯಿ

    ಸನ್ಮಾನಿತರಾದ ಗಣ್ಯರು:

    ಕಾರ್ಯಕ್ರಮ ಸಂಚಾಲಕತ್ವವನ್ನು ಜಮಾಅತೆ ಇಸ್ಲಾಮೀ ಹಿಂದ್ ಧಾರವಾಡ ಶಾಖೆ ಅಧ್ಯಕ್ಷರಾದ ಜನಾಬ್ ಮುಸ್ತಾಕ್ ಅಹ್ಮದ್ ವಹಿಸಿದ್ದರು.

    ಧಾರವಾಡದ ನೂರಾರು ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಈ ಕಾರ್ಯಕ್ರಮವು ಲಘು ಉಪಹಾರದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

  • ಮುಟ್ಟಿನ ಆರೈಕೆ ಸಾಂವಿಧಾನಿಕ ಹಕ್ಕು: 
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

    ಮುಟ್ಟಿನ ಆರೈಕೆ ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು

    ನವದೆಹಲಿ: ಮಹಿಳೆಯರ ಆರೋಗ್ಯ ಮತ್ತು ಘನತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಒಂದು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪನ್ನು ನೀಡಿದೆ. ಋತುಚಕ್ರದ ಆರೋಗ್ಯ ಮತ್ತು ನೈರ್ಮಲ್ಯವು ಕೇವಲ ವೈಯಕ್ತಿಕ ವಿಷಯವಲ್ಲ, ಅದು ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬ ಮಹಿಳೆಯ “ಅಂತಸ್ಸಿನಿಂದ ಬದುಕುವ ಮೂಲಭೂತ ಹಕ್ಕು” ಎಂದು ನ್ಯಾಯಾಲಯ ಘೋಷಿಸಿದೆ.

    ಜಸ್ಟಿಸ್ ಜೆ.ಬಿ. ಪಾರ್ದಿವಾಲಾ ಮತ್ತು ಜಸ್ಟಿಸ್ ಆರ್. ಮಹದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

    ತೀರ್ಪಿನ ಪ್ರಮುಖ ಮುಖ್ಯಾಂಶಗಳು:

    ರಾಷ್ಟ್ರೀಯ ನೀತಿಯ ಅಗತ್ಯ: ದೇಶಾದ್ಯಂತ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲು ಮತ್ತು ಶಾಲೆಗಳಲ್ಲಿ ನೈರ್ಮಲ್ಯ ಕಾಪಾಡಲು ಸಮಗ್ರ ‘ರಾಷ್ಟ್ರೀಯ ಮಾದರಿ ನೀತಿ’ಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

    ಪ್ರತ್ಯೇಕ ಶೌಚಾಲಯ ವ್ಯವಸ್ಥೆ: ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಮತ್ತು ಸುರಕ್ಷಿತ ಶೌಚಾಲಯಗಳ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠವು ನಿರ್ದೇಶಿಸಿದೆ.

    ಶಿಕ್ಷಣದ ಹಕ್ಕು: ಋತುಚಕ್ರದ ಸಮಯದಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ಅನೇಕ ಹೆಣ್ಣುಮಕ್ಕಳು ಶಾಲೆಗೆ ಗೈರುಹಾಜರಾಗುತ್ತಿದ್ದಾರೆ ಅಥವಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ. ಇದು ಅವರ ಶಿಕ್ಷಣದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

    ಅರಿವು ಮೂಡಿಸುವಿಕೆ: ಋತುಚಕ್ರದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ.: “ಋತುಚಕ್ರದ ನೈರ್ಮಲ್ಯವು ಕೇವಲ ವೈದ್ಯಕೀಯ ಅಗತ್ಯವಲ್ಲ, ಅದು ಮಹಿಳೆಯರ ಘನತೆಮತ್ತು ಸ್ವಾತಂತ್ರ್ಯದ ಪ್ರಶ್ನೆಯಾಗಿದೆ.”ಎಂದು ಅದು ತಿಳಿಸಿದೆ

    ಮಹಿಳಾ ಸಬಲೀಕರಣದ ಹಾದಿಯಲ್ಲಿ ಈ ತೀರ್ಪು ಒಂದು ಮೈಲಿಗಲ್ಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಆಶಿಸಲಾಗಿದೆ.

  • ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ

    ಮೂವರಿಗೆ ದತ್ತಿ ಪ್ರಶಸ್ತಿ ಘೋಷಿಸಿದ ಕರಾವಳಿ ಲೇಖಕಿ- ವಾಚಕಿಯರ ಸಂಘ

    ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡು ಕಾರ್ಯಾಚರಿಸುತ್ತಿರುವ ಕರಾವಳಿ ಲೇಖಕಿ -ವಾಚಕಿಯರ ಸಂಘದ ಮುರ್ತುಜಾ ಬೇಗಂ, ಸುಖಲಾಕ್ಷಿ ಸುವರ್ಣ ಹಾಗೂ ಕ್ಯಾಥರಿನ್ ರಾಡ್ರಿಗಸ್ ರಿಗೆ 2025-26ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

    ಡಾ। ಸುನೀತಾ ಶೆಟ್ಟಿ ಮುಂಬಯಿ ಪ್ರಾಯೋಜಿಸುವ ‘ತೌಳವ ಸಿರಿ’ ಪ್ರಶಸ್ತಿಗೆ ತುಳು ಮತ್ತು ಕನ್ನಡ ಭಾಷೆಯ ಹಿರಿಯ ಲೇಖಕಿ ಕ್ಯಾಥರಿನ್ ರಾಡ್ರಿಗಸ್ ಆಯ್ಕೆಯಾಗಿದ್ದಾರೆ.

    ಕರಾವಳಿಯ ಮೊದಲ ತಲೆಮಾರಿನ ಲೇಖಕಿ ಚಂದ್ರಭಾಗಿ ರೈ ಅವರ ಹೆಸರಿನ ದತ್ತಿನಿಧಿ ಪುಸ್ತಕ ಬಹುಮಾನಕ್ಕೆ ಬಾಗಲಕೋಟೆಯ ಮುರ್ತುಜಾ ಬೇಗಂ ಅವರ ‘ಹಣತೆ ಹಚ್ಚಿ ಬಿಡಿ ಹೆಜ್ಜೆ ಹೆಜ್ಜೆಗೂ’ ಕೃತಿ ಬಹುಮಾನ ಪಡೆದಿದೆ. ಡಾ| ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಗೆ ಲೇಖಕಿ, ಸಂಘಟಕಿ ಸುಖಲಾಕ್ಷಿ ವೈ. ಸುವರ್ಣ ಅವರ ‘ಮುಂಬಯಿ ಮತ್ತು ಮಹಿಳೆ’ ಸಂಶೋಧನಾತ್ಮಕ ಕೃತಿ ಆಯ್ಕೆಯಾಗಿದೆ.

    ಫೆ. 7ರಂದು ಅಪಾರಹ್ನ 2.30ಕ್ಕೆ ಉರ್ವಸ್ಟೋರ್‌ನಲ್ಲಿರುವ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ನಡೆಯುವ ಸಮಾರಂಭದಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಡಾ| ಎ. ಸುಬ್ಬಣ್ಣ ರೈ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

  • ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

    ಚರ್ಮ ಹೊಳೆಯಲು ಸೆಲೆಬ್ರಿಟಿ ರುಜುತಾ ದಿವೇಕರ್ ರ ಈ ಸೂತ್ರ ಅನುಸರಿಸಿ…

    ಹೊಳೆಯುವ ಚರ್ಮಕ್ಕೆ ದುಬಾರಿ ಕ್ರೀಮ್‌ಗಳು ಅಗತ್ಯವಿಲ್ಲ. ಸೆಲೆಬ್ರಿಟಿ ಪೌಷ್ಟಿಕತಜ್ಞೆ ರಹಸ್ಯವನ್ನು ಬಹಿರಂಗಪಡಿಸುತ್ತಾರೆ.

    ರುಜುತಾ ದಿವೇಕರ್ ನಾಲ್ಕು ಸರಳ ಚರ್ಮದ ಆರೈಕೆ ದಿನಚರಿಗಳನ್ನು ಹಂಚಿಕೊಂಡಿದ್ದಾರೆ. ಇಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಮದ ಆರೈಕೆ ವೀಡಿಯೊಗಳು ಹೆಚ್ಚು ವೀಕ್ಷಿಸಲ್ಪಡುವ ವೀಡಿಯೊಗಳಾಗಿವೆ. ನೀವು Instagram ಅನ್ನು ತೆರೆದರೆ, ಬೆಳಿಗ್ಗೆ ಮತ್ತು ರಾತ್ರಿ ಹಚ್ಚಬೇಕಾದ ಕ್ರೀಮ್‌ಗಳು, ಅವುಗಳ ಬಳಕೆಯ ಕ್ರಮ ಮತ್ತು ಪ್ರತಿಯೊಂದು ಚರ್ಮದ ಪ್ರಕಾರಕ್ಕೆ ಸೂಕ್ತವಾದ ಚರ್ಮದ ಆರೈಕೆ ಉತ್ಪನ್ನಗಳ ವಿವರಗಳನ್ನು ಒಳಗೊಂಡಿರುವ ಅನೇಕ ವೀಡಿಯೊಗಳನ್ನು ನೀವು ನೋಡುತ್ತೀರಿ. ಆದರೆ ಇವುಗಳ ಬೆಲೆ ನಿಜಕ್ಕೂ ಆಘಾತಕಾರಿಯಾಗಿದೆ. ಬಹಳ ಕಡಿಮೆ ಪ್ರಮಾಣದ ಉತ್ಪನ್ನಗಳಿಗೆ ಸಾವಿರಾರು ವೆಚ್ಚವಾಗಬಹುದು.ಆದರೆ ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಹೇಳುವಂತೆ ಹೊಳೆಯುವ ಚರ್ಮಕ್ಕೆ ದುಬಾರಿ ಉತ್ಪನ್ನಗಳು ಅಗತ್ಯವಿಲ್ಲ.

    ಬಾಲಿವುಡ್ ತಾರೆಯರೊಂದಿಗೆ ಕೆಲಸ ಮಾಡಿರುವ ರುಜುತಾ, ಹೊಳೆಯುವ ಚರ್ಮವನ್ನು ಪಡೆಯಲು ದುಬಾರಿ ಕ್ರೀಮ್‌ಗಳು ಅಥವಾ ಸೀರಮ್‌ಗಳು ಅಗತ್ಯವಿಲ್ಲ ಎಂದು ಹೇಳುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ರುಜುತಾ ನೀವು ಮನೆಯಲ್ಲಿಯೇ ಮಾಡಬಹುದಾದ ನಾಲ್ಕು ಸರಳ ಚರ್ಮದ ಆರೈಕೆ ದಿನಚರಿಗಳನ್ನು ಹಂಚಿಕೊಂಡಿದ್ದಾರೆ.

    ಸಾಕಷ್ಟು ನೀರು ಕುಡಿಯಿರಿ

    ಮೊದಲ ಹೆಜ್ಜೆ ನಿಮ್ಮ ದೇಹವನ್ನು ಹೈಡ್ರೀಕರಿಸುವುದು. ಇದನ್ನು ಮಾಡಲು, ಸಾಕಷ್ಟು ನೀರು ಕುಡಿಯಿರಿ. ನೀವು ಬಾಯಾರಿದಾಗ ಮಾತ್ರ ನೀರು ಕುಡಿಯಬೇಕು ಎಂದು ಭಾವಿಸಬೇಡಿ. ಯಾವಾಗಲೂ ನೀರಿನ ಬಾಟಲಿಯನ್ನು ಕಣ್ಣ ಮುಂದೆ ಇಟ್ಟುಕೊಳ್ಳಿ. ಅದನ್ನು ಹೊರಗೆ ತೆಗೆದುಕೊಂಡು ಸಾಂದರ್ಭಿಕವಾಗಿ ಕುಡಿಯಿರಿ.

    ಬೇಗನೆ ಮಲಗಿ

    ಹೊಳೆಯುವ ಚರ್ಮಕ್ಕೆ ವಿಶ್ರಾಂತಿ ಅತ್ಯಗತ್ಯ. ಚರ್ಮದ ಆರೈಕೆಯಲ್ಲಿ ದುಬಾರಿ ಸೀರಮ್‌ಗಳು ಮತ್ತು ಕ್ರೀಮ್‌ಗಳಿಗಿಂತ ಬೇಗ ಮಲಗುವುದು ಹೆಚ್ಚು ಮುಖ್ಯ. ದೇಹದ ಜೀವಕೋಶಗಳ ಆರೋಗ್ಯಕ್ಕೆ, ಕಾಲಜನ್ ಹೆಚ್ಚಿಸಲು ಮತ್ತು ಮುಖದ ಮೇಲಿನ ಕಪ್ಪು ಕಲೆಗಳು ಮತ್ತು ಕಣ್ಣುಗಳ ಕೆಳಗೆ ಊತವನ್ನು ಕಡಿಮೆ ಮಾಡಲು ನಿದ್ರೆ ಅತ್ಯಗತ್ಯ.

    ನಿಯಮಿತ ವ್ಯಾಯಾಮ

    ನಿಮ್ಮ ಚರ್ಮವನ್ನು ಹೊಳೆಯುವಂತೆ ಮತ್ತು ಆರೋಗ್ಯವಾಗಿಡಲು ಉತ್ತಮ ಮಾರ್ಗವೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುವುದು. ನಿಯಮಿತ ವ್ಯಾಯಾಮವು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಚರ್ಮದ ಜಲಸಂಚಯನವನ್ನು ಸುಧಾರಿಸುತ್ತದೆ. ವ್ಯಾಯಾಮವನ್ನು ನಿಮ್ಮ ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಳ್ಳಿ. ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ.

    ಚರ್ಮದ ಆರೈಕೆ ವೀಡಿಯೊಗಳನ್ನು ನೋಡುವುದನ್ನು ನಿಲ್ಲಿಸಿ

    ಕೊನೆಯ ಹಂತವೆಂದರೆ ಚರ್ಮದ ಆರೈಕೆ ಮಾಡುವುದನ್ನು ತೋರಿಸುವ ವೀಡಿಯೊಗಳನ್ನು ನೋಡುವುದನ್ನು ನಿಲ್ಲಿಸುವುದು. ಅನೇಕ ವೀಡಿಯೊಗಳು ನಿಮ್ಮನ್ನು ದಾರಿ ತಪ್ಪಿಸಬಹುದು.

    ಅತಿಯಾಗಿ ಜಾಹೀರಾತು ಮಾಡಲಾದ ಉತ್ಪನ್ನಗಳಿಗೆ ಬಲಿಯಾಗಬೇಡಿ. ಅಗತ್ಯವಿದ್ದರೆ ಚರ್ಮರೋಗ ವೈದ್ಯರ ಸಹಾಯವನ್ನು ಪಡೆಯಿರಿ. ಚರ್ಮದ ಆರೈಕೆಯ ದಿನಚರಿಯ ಬಗ್ಗೆ ಹೇಳುವ ಯಾವುದೇ ವೀಡಿಯೊಗಳನ್ನು ತಾನು ನೋಡುವುದಿಲ್ಲ ಎಂದು ರುಜುತಾ ಹೇಳುತ್ತಾರೆ. ನೀವು ವಯಸ್ಸಾದಂತೆ ನಿಮ್ಮ ಚರ್ಮವೂ ಬದಲಾಗುತ್ತದೆ. ಆದರೆ ಆರೋಗ್ಯಕರ ಚರ್ಮವನ್ನು ಕಾಪಾಡಿಕೊಳ್ಳುವುದು ಎಲ್ಲರೂ ಮಾಡಬೇಕಾದ ಕೆಲಸ. ಇದು ದುಬಾರಿ ಕ್ರೀಮ್‌ಗಳನ್ನು ಹಚ್ಚುವುದು ಅಥವಾ ಚರ್ಮದ ಆರೈಕೆಗಾಗಿ ಹಣ ಖರ್ಚು ಮಾಡುವ ಮೂಲಕ ಅಲ್ಲ, ನಿಮ್ಮ ನೋಟ ಮತ್ತು ಸೌಂದರ್ಯವನ್ನು ರೂಪಿಸುವುದು ನಿಮ್ಮ ಜೀವನಶೈಲಿಯ ಆಯ್ಕೆಗಳು.

  • “ಇಂತಹ ಪದಗಳನ್ನು ಅನುಪಮದಲ್ಲಿ ಪ್ರಕಟಿಸಬಾರದಿತ್ತು” ಎಂದು ಸ್ವಾಮೀಜಿಯೋರ್ವರು ನನ್ನೊಂದಿಗೆ  ಹೇಳಿದ್ದರು…

    “ಇಂತಹ ಪದಗಳನ್ನು ಅನುಪಮದಲ್ಲಿ ಪ್ರಕಟಿಸಬಾರದಿತ್ತು” ಎಂದು ಸ್ವಾಮೀಜಿಯೋರ್ವರು ನನ್ನೊಂದಿಗೆ ಹೇಳಿದ್ದರು…

    ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವು ನಡೆದಿದೆ. ಈ ಕಾರ್ಯಕ್ರಮದಲ್ಲಿ ಅನುಪಮ ಪ್ರಧಾನ ಸಂಪಾದಕಿ ಶಹನಾಝ್ ಎಂ. ಓದುಗರನ್ನು ಉದ್ದೇಶಿಸಿ ಮಾತನಾಡಿದರು…

    “25 ವರ್ಷಗಳ ಹಾದಿಯನ್ನು ವಿವರಿಸಿದ, ಪತ್ರಿಕೆ ಒಂದು ಭಾರತವಾಗಿ ಬೆಳೆದಿದೆ. ಇದರಲ್ಲಿ ಎಲ್ಲಾ ವರ್ಗದ ಓದುಗರು, ಲೇಖಕರು ಮತ್ತು ಪ್ರೋತ್ಸಾಹಕರನ್ನು ಹೊಂದಿದೆ. ಪತ್ರಿಕೆಯ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತವರನ್ನು ನೆನಪಿಸುತ್ತಾ, ನಾವು ನಮ್ಮ ನೈತಿಕತೆಯನ್ನು ಬಿಟ್ಟು ಜಾಹಿರಾತಿಗೆ ಕೈ ಒಡ್ಡಿಲ್ಲ ಎಂದರು. ಅನುಪಮ ಮಾಸಿಕ ಡಿಜಿಟಲ್ ರೂಪದಲ್ಲಿ ಯೂ ಬರಲಿದೆ” ಎಂದರು.

  • ಯೂಟ್ಯೂಬ್ ನೋಡಿ ತೂಕ ಇಳಿಸುವ ಮದ್ದು ಸೇವಿಸಿ, ಕಾಲೇಜು ವಿದ್ಯಾರ್ಥಿನಿ ಸಾವು:

    ಯೂಟ್ಯೂಬ್ ನೋಡಿ ತೂಕ ಇಳಿಸುವ ಮದ್ದು ಸೇವಿಸಿ, ಕಾಲೇಜು ವಿದ್ಯಾರ್ಥಿನಿ ಸಾವು:


    ​ಇಂದಿನ ಯುವ ಜನಾಂಗದಲ್ಲಿ ಸೌಂದರ್ಯದ ಪ್ರಜ್ಞೆ ಹೆಚ್ಚಾಗುತ್ತಿದ್ದು, ಅತಿ ವೇಗವಾಗಿ ಶರೀರದ ತೂಕ ಇಳಿಸಿಕೊಳ್ಳಬೇಕು ಎನ್ನುವ ಹಂಬಲಕ್ಕೆ ಬಿದ್ದು ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ತಮಿಳುನಾಡಿನ ಮಧುರೈನಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಕಲೈಯರಸಿ ಎಂಬ ಯುವತಿ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ತೂಕ ಇಳಿಸುವ ಮದ್ದು ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕಲೈಯರಸಿ ಯೂಟ್ಯೂಬ್‌ನಲ್ಲಿ ‘ವೆಂಗಾರಂ’ ಅಥವಾ ಬೊರಾಕ್ಸ್ ಎಂಬ ಪುಡಿಯನ್ನು ಬಳಸುವುದರಿಂದ ಬೇಗನೆ ತೂಕ ಇಳಿಸಬಹುದು ಎಂಬ ಮಾಹಿತಿಯನ್ನು ನಂಬಿ, ಮದ್ದಿನ ಅಂಗಡಿಯಿಂದ ಅದನ್ನು ಖರೀದಿಸಿ ಸೇವಿಸಿದ್ದರು. ಮದ್ದು ಸೇವಿಸಿದ ಕೆಲವೇ ಕ್ಷಣಗಳಲ್ಲಿ ತೀವ್ರವಾದ ವಾಂತಿ ಮತ್ತು ಭೇದಿಯಿಂದ ಬಳಲಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ​ಈ ದುರಂತ ಘಟನೆಯು ಇಂದಿನ ಯುವತಿಯರಿಗೆ ಒಂದು ದೊಡ್ಡ ಎಚ್ಚರಿಕೆಯಾಗಿದೆ. ತೂಕ ಇಳಿಸಿಕೊಳ್ಳುವ ಆಸೆ ಇರುವವರು ಯಾವುದೇ ಕಾರಣಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಮಾಹಿತಿಯನ್ನು ಕುರುಡಾಗಿ ನಂಬಬಾರದು. ಶರೀರಕ್ಕೆ ಸಂಬಂಧಿಸಿದ ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ನುರಿತ ವೈದ್ಯರ ಅಥವಾ ಪ್ರಮಾಣೀಕೃತ ತಜ್ಞರ ಸಲಹೆಯನ್ನು ಪಡೆದೇ ಮುಂದಡಿ ಇಡಬೇಕು. ವೈಜ್ಞಾನಿಕ ಆಧಾರವಿಲ್ಲದ ಇಂತಹ ಮದ್ದುಗಳು ಆಂತರಿಕ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿ ಜೀವಕ್ಕೇ ಕುತ್ತು ತರುತ್ತವೆ. ಸೌಂದರ್ಯಕ್ಕಿಂತ ಜೀವ ಮುಖ್ಯ ಎಂಬ ಅರಿವು ಪ್ರತಿಯೊಬ್ಬ ಯುವತಿಯಲ್ಲಿ ಇರಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

    ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇಡುವುದು ಅವಶ್ಯಕವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ನೆಟ್‌ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಿದ್ದಾರೆ ಮತ್ತು ಆನ್‌ಲೈನ್ ಮೂಲಕ ಅಥವಾ ಅಂಗಡಿಗಳಿಂದ ಯಾವ ರೀತಿಯ ಔಷಧಿ ಹಾಗೂ ಪುಡಿಗಳನ್ನು ತರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪೋಷಕರು ಗಮನಿಸಬೇಕು. ಮಕ್ಕಳೊಂದಿಗೆ ಮುಕ್ತವಾಗಿ ಸಂವಹನ ನಡೆಸಿ, ಅವರಿಗೆ ಇಂತಹ ಅಪಾಯಕಾರಿ ಸೋಷಿಯಲ್ ಮೀಡಿಯಾ ಪ್ರವೃತ್ತಿಗಳ ಬಗ್ಗೆ ತಿಳುವಳಿಕೆ ನೀಡಬೇಕು. ಪೋಷಕರ ಜಾಗೃತಿ ಮತ್ತು ತಜ್ಞರ ಮಾರ್ಗದರ್ಶನ ಮಾತ್ರ ಇಂತಹ ಅನಗತ್ಯ ಸಾವುಗಳನ್ನು ತಡೆಯಲು ಸಾಧ್ಯ.

  • “ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಕಿರುಕುಳವೂ ಮಹಿಳೆಯರನ್ನು ಸಮಾಜದಲ್ಲಿ ಬೆಳೆಯದಂತೆ ಮಾಡುತ್ತದೆ…” 
ಇನ್ಸ್ ಪೆಕ್ಟರ್ ಬಾಲಕೃಷ್ಣ (ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣೆ)

    “ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಕಿರುಕುಳವೂ ಮಹಿಳೆಯರನ್ನು ಸಮಾಜದಲ್ಲಿ ಬೆಳೆಯದಂತೆ ಮಾಡುತ್ತದೆ…” ಇನ್ಸ್ ಪೆಕ್ಟರ್ ಬಾಲಕೃಷ್ಣ (ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣೆ)

    ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವು ನಡೆದಿದೆ.

    ಈ ಕಾರ್ಯಕ್ರಮಕ್ಕೆ ಅಥಿತಿಥಿಗಳಾಗಿ ಬಂದ, ಮಂಗಳೂರು ದಕ್ಷಿಣ ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣ, ಅನುಪಮ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡುತ್ತಾ “ಮಹಿಳೆ ಒಂದು ಶಕ್ತಿ. ಮಹಿಳೆಯರಿಗೆ ಇಂದು ಮನೆಯಲ್ಲಿ ಬಹಳಷ್ಟು ಮಾನಸಿಕ ಕಿರುಕುಳ, ಆರ್ಥಿಕ ಒತ್ತಡ, ನಿರ್ಬಂಧನೆ ಕಾಡುತ್ತಿದೆ. ಅವೆಲ್ಲವನ್ನು ಮೀರಿ ಮಹಿಳೆ ಎದ್ದು ನಿಲ್ಲಬೇಕಾಗಿದೆ. ದೈಹಿಕ ಹಿಂಸೆ ಮಾತ್ರವಲ್ಲ, ಮಾನಸಿಕ ಕಿರುಕುಳವೂ ಮಹಿಳೆಯರನ್ನು ಸಮಾಜದಲ್ಲಿ ಬೆಳೆಯದಂತೆ ಮಾಡುತ್ತದೆ. ಮನೆಯಲ್ಲಿ ತಂದೆ-ತಾಯಿ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಮನೆಯಲ್ಲಿ ಮಕ್ಕಳೆದುರು ಗಂಡ-ಹೆಂಡತಿ ಜಗಳ ನಿಲ್ಲಿಸಬೇಕು” ಎಂದು ಕಿವಿಮಾತು ಹೇಳಿದರು.

  • ಖ್ಯಾತ ಸಾಹಿತಿ ಡಾ। ಕೆ. ಶರೀಫಾ, ಅನುಪಮ “ಬೆಳ್ಳಿ ಹಬ್ಬ ಸಮಾವೇಶ” ಉದ್ಘಾಟಿಸಿ ಮಾತನಾಡುತ್ತಿರುವುದು…

    ಖ್ಯಾತ ಸಾಹಿತಿ ಡಾ। ಕೆ. ಶರೀಫಾ, ಅನುಪಮ “ಬೆಳ್ಳಿ ಹಬ್ಬ ಸಮಾವೇಶ” ಉದ್ಘಾಟಿಸಿ ಮಾತನಾಡುತ್ತಿರುವುದು…

    ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು.

    “ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ ಸಾವಿತ್ರಿ ಬಾಯಿ ಪುಲೆ ಅವರ ಜೊತೆ ಫಾತಿಮ ಶೇಕ್ ಕೂಡಾ ಭಾಗಿಯಾಗಿದ್ದರು. ಮನೆಯೊಳಗೆ ಕುಳಿತ ಮಹಿಳೆಗೆ ತನ್ನ ನೋವು ನಲಿವು ಹಂಚಿ ಕೊಳ್ಳಲು ಪತ್ರಿಕೆ ಶುರು ಮಾಡಿರುವುದು ಇಂದು ಹೆಮ್ಮರವಾಗಿ ಬೆಳೆದಿದೆ” ಎಂದರು.

    “ಪತ್ರಿಕೆಗೆ ಜಾಹಿರಾತು ಮುಖ್ಯ. ಆದರೆ ತಂಬಾಕು, ಮಾದಕ ವಸ್ತು ಮೊದಲಾದ ಆಗೋಗ್ಯಕ್ಕೆ ಹಾನಿಕರವಾದ ಜಾಹಿರಾತು ತೆಗೆದುಕೊಳ್ಳದೇ ಇರುವುದು ನೈತಿಕತೆಗೆ ಸಾಕ್ಷಿ” ಎಂದರು. “ಸ್ವಾತಂತ್ರ ಬಂದ ಕಾಲದಲ್ಲಿ ಮಹಿಳೆಯರು ಶಾಲೆಗೆ ಹೋಗುವುದೇ ಕಷ್ಟವಿತ್ತು, ಆದರೆ ವಿದ್ಯಾಭ್ಯಾಸ ಮಾಡಿ, ಪತ್ರಿಕೆ ನಡೆಸಿದ್ದೀರಿ. ಕೊರೊನ ಸಮಯದಲ್ಲಿ ಯೇ ಪತ್ರಿಕೆ ಮುಚ್ಚಿಲ್ಲ, ಹಾಗಾಗಿ ಕೊನೆ ತನಕ ಮುಂದುವರಿಯಲಿ. ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಅನುಪಮ, ಸ್ವರ್ಣ ಮಹೋತ್ಸವವನ್ನು ಪೂರೈಸಲಿ”ಎಂದು ಹಾರೈಸಿದರು.

  • ಅನುಪಮ ಮಾಸಿಕ 25 ವರುಷ ನಡೆದು ಬಂದ ಹಾದಿ ಕಿರುಚಿತ್ರ 
(Anupama 25th Documentry)

    ಅನುಪಮ ಮಾಸಿಕ 25 ವರುಷ ನಡೆದು ಬಂದ ಹಾದಿ ಕಿರುಚಿತ್ರ (Anupama 25th Documentry)

    ಅನುಪಮ ಮಹಿಳಾ ಮಾಸಿಕವು ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಪ್ರಕಟವಾಗುತ್ತಿದ್ದು, ಕಳೆದ 25 ವರ್ಷಗಳಿಂದ ಕರ್ನಾಟಕದ ಮೂಲೆ ಮೂಲೆಗೆ ತಲುಪುತ್ತಿದೆ.

    ಅನುಪಮವು ತಾನು ಸವೆಸಿದ ಈ ಹಾದಿಯನ್ನು ಕರ್ನಾಟಕ ಜನತೆಯ ಮುಂದೆ ಇಡಲು ಬಯಸುತ್ತದೆ. ಅದಕ್ಕಾಗಿ ಈ ಕಿರು ಚಿತ್ರವನ್ನು (Anupama Documentry) ರಚಿಸಲಾಗಿದೆ.